ವಾಕಿಂಗ್ ಮಾಡದೆಯೇ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು – ಮೆಟ್ಟಿಲು ಹತ್ತಿದರೆ ಏನೆಲ್ಲಾ ಪ್ರಯೋಜನ?

ವಾಕಿಂಗ್ ಮಾಡದೆಯೇ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು – ಮೆಟ್ಟಿಲು ಹತ್ತಿದರೆ ಏನೆಲ್ಲಾ ಪ್ರಯೋಜನ?

ಪ್ರತಿದಿನ ವಾಕಿಂಗ್ ಮಾಡಿದ್ರೆ ಆರೋಗ್ಯಕ್ಕೆ ಒಳ್ಳೆಯದು ಅಂತಾ ವೈದ್ಯರೇ ಹೇಳ್ತಾರೆ. ಆದ್ರೆ ಒತ್ತಡದ ಜೀವನ ಶೈಲಿಯಲ್ಲಿ ವರ್ಕೌಟ್ ಮಾಡೋಕೆ ಟೈಮೇ ಸಿಗಲ್ಲ. ಹೀಗಿದ್ರೂ ಮೆಟ್ಟಿಲು ಹತ್ತಿ ಹೃದಯವನ್ನ ಕಾಪಾಡಿಕೊಳ್ಳಬಹುದಂತೆ.

ಪ್ರತಿದಿನ ವಾಕಿಂಗ್ ಮಾಡೋದು ಆರೋಗ್ಯಕರ ಜೀವನ ಶೈಲಿಯ ಒಂದು ಭಾಗವಾಗಿದೆ. ಆದರೆ ವಾಕಿಂಗ್ ಮಾಡೋದಿಕ್ಕೆ ಅಂತಾನೇ ಸಮಯ ಕೊಡೋದು ನಗರದಲ್ಲಿ ಜೀವನ ನಡೆಸುವವರಿಗೆ ಇರೋ ಒಂದು ದೊಡ್ಡ ಟಾಸ್ಕ್ ಆಗಿರುತ್ತದೆ. ಹಾಗಿದ್ದರೂ ನಾವು ವಾಕಿಂಗ್ ಗೆ ಅಂತ ಸಮಯವನ್ನ ಕೊಡದೇ ಯಾವ ರೀತಿಯಲ್ಲಿ ನಮ್ಮ ದೇಹವನ್ನು ಚುರುಕಾಗಿ ಇಟ್ಟುಕೊಳ್ಳಬಹುದು ಅನ್ನೋದನ್ನ ಮರೆತು ಬಿಡುತ್ತೇವೆ. ಆಫೀಸ್ ನಲ್ಲಿ ಮೆಟ್ಟಿಲು ಗಳನ್ನ ಬಳಸದೆ ಪಕ್ಕದಲ್ಲಿ ಇರೋ ಲಿಫ್ಟ್ ಬಳಸುತ್ತೇವೆ. ಆದರೆ ಇನ್ನು ಮುಂದೆ ಲಿಫ್ಟ್ ಉಪಯೋಗಿಸುವ ಮೊದಲು ಈ ಒಂದು ಸಂಶೋಧನಾ ಸಲಹೆಯನ್ನ ನೆನಪಿಟ್ಟುಕೊಳ್ಳಿ. ಪ್ರತಿ ದಿನ ನಾವು 50 ಮೆಟ್ಟಿಲುಗಳನ್ನ ಏರಿದರೆ ವೈದ್ಯರಿಂದ ದೂರವಿರಲು ಇದೂ ಸಹಾಯ ಮಾಡುತ್ತದೆ ಎಂದು ಹೊಸ ಅಧ್ಯಯನವೊಂದು ಹೇಳುತ್ತಿದೆ.

ಇದನ್ನೂ ಓದಿ : ಅತಿಯಾದ ಸ್ಮಾರ್ಟ್ ಫೋನ್ ಬಳಕೆಯಿಂದ ಹೃದಯ ಮತ್ತು ಮೆದುಳಿಗೆ ಎಫೆಕ್ಟ್ – ತಜ್ಞರು ಕೊಟ್ಟ ಎಚ್ಚರಿಕೆ ಏನು?

ಬ್ಯುಸಿ ಲೈಫ್ ನಲ್ಲಿ ವಾಕಿಂಗ್ ಮಾಡೋಕೆ ಸಮಯ ಸಿಗಲ್ಲ. ಅಂಥವರು ಮೆಟ್ಟಿಲುಗಳನ್ನ ಹತ್ತುವ ಮೂಲಕ ತಮ್ಮ ಹೃದಯವನ್ನ ಕಾಪಾಡಿಕೊಳ್ಳಬಹುದು. ಆಫೀಸ್, ಮೆಟ್ರೋ, ಮಾಲ್, ಮನೆ ಹೀಗೆ ತಾವು ಇರೋ ಕಡೆ ಲಿಫ್ಟ್ ಗಳನ್ನ ಬಳಸದೆ ಮೆಟ್ಟಿಲುಗಳನ್ನ ಉಪಯೋಗಿಸಬೇಕು. ಪ್ರತಿ ದಿನ 50 ಮೆಟ್ಟಿಲುಗಳನ್ನ ಏರಿದರೆ ವೈದ್ಯರಿಂದ ದೂರವಿರಬಹುದು. ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಶೇಕಡಾ 20 ರಷ್ಟು ಕಡಿಮೆ ಮಾಡಬಹುದು. ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಪ್ರತಿದಿನ ಐವತ್ತಕ್ಕಿಂತ ಹೆಚ್ಚು ಮೆಟ್ಟಿಲುಗಳನ್ನು ಏರುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಶೇಕಡಾ 20 ರಷ್ಟು ಕಡಿಮೆ ಮಾಡಬಹುದು. ಹೃದಯ ಉಸಿರಾಟದ ಫಿಟ್‌ನೆಸ್ ಅನ್ನು ಆರೋಗ್ಯವಾಗಿರಿಸಲು ಹೆಚ್ಚಿನ-ತೀವ್ರತೆಯ ಮೆಟ್ಟಿಲು ಹತ್ತುವುದು ಸಮರ್ಥ ಮಾರ್ಗವಾಗಿದೆ. ಮೆಟ್ಟಿಲು ಹತ್ತುವ ಅನುಕೂಲಗಳನ್ನ ತಿಳಿದುಕೊಳ್ಳಲು ಸಂಶೋಧನಾ ತಂಡವು ಸುಮಾರು ನಾಲ್ಕೂವರೆ ಲಕ್ಷ ವಯಸ್ಕರಿಂದ ಅವರ ಜೀವನಶೈಲಿಯ ವಿವರಗಳನ್ನ ಸಂಗ್ರಹಿಸಿಲಾಗಿತ್ತು. ಸುಮಾರು 12.5 ವರುಷಗಳವರೆಗೆ ಈ ಅಧ್ಯಯನ ನಡೆಸಲಾಗಿತ್ತು. ಹೆಚ್ಚಿನ ನಗರ ಪ್ರದೇಶಗಳಲ್ಲಿ ಮೆಟ್ಟಿಲುಗಳು ಸುಲಭವಾಗಿ ಲಭ್ಯವಿರುವುದರಿಂದ, ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಮೆಟ್ಟಿಲು ಹತ್ತುವುದು ವೆಚ್ಚ ಪರಿಣಾಮಕಾರಿ ಮತ್ತು ಸುಲಭವಾಗಿ ಮಾಡುವಂತಹ ಚಟುವಟಿಕೆಯಾಗಿದೆ.

ಸಮತಟ್ಟಾದ ಮೇಲ್ಮೈಯಲ್ಲಿ ನಡೆಯುವುದಕ್ಕಿಂತ ಮೆಟ್ಟಿಲುಗಳನ್ನು ಹತ್ತುವುದು ಉತ್ತಮ!

ತಜ್ಞರ ಪ್ರಕಾರ, ದೈಹಿಕ ವ್ಯಾಯಾಮಕ್ಕೆ ಸಂಬಂಧಿಸಿದಂತೆ ಸಮತಟ್ಟಾದ ಮೇಲ್ಮೈಯಲ್ಲಿ ನಡೆಯುವುದಕ್ಕಿಂತ ಮೆಟ್ಟಿಲುಗಳನ್ನು ಹತ್ತುವುದು ಉತ್ತಮವಾಗಿದೆ. ಮೆಟ್ಟಿಲುಗಳನ್ನ ಹತ್ತುವ ಸಂದರ್ಭದಲ್ಲಿ ಹೆಚ್ಚು ಸ್ನಾಯುಗಳ ಬಳಕೆ ಮತ್ತು ಕೆಲವು ಸಮತೋಲನಗಳ ಅಗತ್ಯವಿದೆ ಎಂದು ಹೇಳುತ್ತಾರೆ. ಈ ಸಣ್ಣ ಚಟುವಟಿಕೆಗಳು ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುವ ವಿಷಯದಲ್ಲಿ ದೊಡ್ಡ ಪ್ರಯೋಜನಗಳನ್ನು ಹೊಂದಿವೆ. ಅದೂ ನಮ್ಮ ಹೃದಯ ಬಡಿತ ಮತ್ತು ಆಮ್ಲಜನಕದ ಹೀರಿಕೊಳ್ಳುವಿಕೆಯನ್ನು ಗಮನಾರ್ಹವಾಗಿ ಹೆಚ್ಚಿಸಬಹುದು ಮತ್ತು ದೇಹದಲ್ಲಿ ಧನಾತ್ಮಕ ಬದಲಾವಣೆಯನ್ನ ಉಂಟುಮಾಡಬಹುದು ಎಂದೂ ತಜ್ಞರು ಹೇಳುತ್ತಾರೆ.

Shantha Kumari