SRH V/s MI ಮುರಿದ ದಾಖಲೆಗಳೆಷ್ಟು? – ಹಾರ್ದಿಕ್ ಪಾಂಡ್ಯಾಗೆ ಇದಕ್ಕಿಂತ ಶಿಕ್ಷೆ ಬೇಕಾ?

ಐಪಿಎಲ್ನಲ್ಲಿ ಪ್ರತಿನಿತ್ಯ ಮ್ಯಾಚ್ ನಡೆದ್ರೆ ಬುಧವಾರ ಮಾತ್ರ ಹೈಲೈಟ್ಸ್ ನಡೆದಿತ್ತು.. ಸಾಮಾನ್ಯವಾಗಿ ಮ್ಯಾಚ್ನ ಹೈಲೈಟ್ಸ್ ಒಂದು ಅರ್ಧ ಗಂಟೆಯಲ್ಲಿ ಮುಗಿದ್ರೆ, ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯದ ಹೈಲೈಟ್ಸ್ ಭರ್ಜರಿ 40 ಓವರ್ಗಳವರೆಗೆ ನಡೆದಿತ್ತು.. ಸಿಕ್ಸರ್-ಬೌಂಡರಿಗಳೇ ಇಲ್ಲದ ಓವರ್ಗಳೇ ಇರಲಿಲ್ಲ.
ಇದನ್ನೂ ಓದಿ: ಶಿವಂ ದುಬೆ, ರಚಿನ್ ರವೀಂದ್ರ ಬೊಂಬಾಟ್ ಬ್ಯಾಟಿಂಗ್ – ಧೋನಿ ತಂತ್ರಗಾರಿಕೆ ವರ್ಕೌಟ್ ಆಗಿದ್ದು ಹೇಗೆ?
ಸಂಪೂರ್ಣವಾಗಿ ಸತ್ತು ಹೋದ ಪಿಚ್ನಲ್ಲಿ ಒಂದು ಪಂದ್ಯ ನಡೆದ್ರೆ ಅದು ಬೌಲರ್ಗಳ ಪಾಲಿಗೆ ಮರಣಶಾಸನವಾದರೆ, ಬ್ಯಾಟ್ಸ್ಮನ್ಗಳಿಗೆ ನಾನೇ ಸೂಪರ್ಸ್ಟಾರ್ ಎಂದು ಕರೆಸಿಕೊಳ್ಳುವ ಸುವರ್ಣಾವಕಾಶವನ್ನು ಕಲ್ಪಿಸುತ್ತದೆ.. ಹಾಗೆಯೇ ನಡೆದಿತ್ತು ಸನ್ರೈಸರ್ಸ್ ಹೈದ್ರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ.. ಈ ಪಂದ್ಯದಲ್ಲಿ ಕನಿಷ್ಠ ಹತ್ತು ಹೊಸ ದಾಖಲೆಗಳು ನಿರ್ಮಾಣವಾಗಿವೆ.. ಒಂದೇ ಪಂದ್ಯದಲ್ಲಿ ಇಷ್ಟು ದಾಖಲೆಗಳು ನಿರ್ಮಾಣವಾಗಿರುವ ದಾಖಲೆಯೂ ಬಹುಷಃ ಎಸ್ಆರ್ಹೆಚ್ ವರ್ಸಸ್ ಎಂಐ ನಡುವಿನ ಪಂದ್ಯದ ಪಾಲಾಗಿರಬಹುದು.. ಯಾಕಂದ್ರೆ ಹೈದ್ರಾಬಾದ್ನ ಉಪ್ಪಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಯಾರು ಹೇಗೆ ಆಡಿದ್ರು ಅನ್ನೋದಕ್ಕಿಂತ ಇಂತಾ ಪಂದ್ಯದಲ್ಲೂ ಯಾವ ಬ್ಯಾಟ್ಸ್ಮನ್ ಎಡವಿದ್ರು ಅಂತ ಒಂದೇ ವಾಕ್ಯದಲ್ಲಿ ಉತ್ತರಿಸಿಬಿಡಬಹುದು.. ಹಾಗಿತ್ತು ಎಸ್ಆರ್ಹೆಚ್ ಮತ್ತು ಎಂಐ ನಡುವಿನ ಪಂದ್ಯ.. ಎರಡೂ ಇನ್ನಿಂಗ್ಸ್ಗಳಲ್ಲಿ ಎರಡೂ ತಂಡಗಳ ಬ್ಯಾಟ್ಸ್ಮನ್ಗಳಲ್ಲಿ ರನ್ಗಿಂತ ಬಾಲ್ ಹೆಚ್ಚು ತಿಂದ ಏಕೈಕ ಬ್ಯಾಟ್ಸ್ಮನ್ ಅಂದ್ರೆ ಅದು ಮಯಾಂಕ್ ಅಗರ್ವಾಲ್ ಮಾತ್ರ.. 13 ಎಸೆತಗಳಲ್ಲಿ ಮಯಾಕ್ 11 ರನ್ ಗಳಿಸಿದ್ರು.. ಬಹುಷಃ ರೆಕಾರ್ಡ್ಸ್ ಚೆಕ್ ಮಾಡಿದ್ರೆ ಇದೂ ಕೂಡ ಒಂದು ವಿಚಿತ್ರ ರೆಕಾರ್ಡ್ ಆಗಿ ನಿಲ್ಲಬಹುದೇನೋ.. ಅಲ್ಲದೆ ಎರಡೂ ಇನ್ನಿಂಗ್ಸ್ಗಳಲ್ಲಿ ಸಿಕ್ಸ್ ಹೊಡೆಯದ ಏಕೈಕ ಬ್ಯಾಟ್ಸ್ಮನ್ ಅಂದ್ರೆ ಅದು ಕೂಡ ಮಯಾಂಕ್ ಅಗರ್ವಾಲ್ ಮಾತ್ರ..
ಹೈದ್ರಾಬಾದ್ ಮತ್ತು ಮಂಬೈ ತಂಡಗಳ ನಡುವಿನ ಪಂದ್ಯದಲಿ ನಿರ್ಮಾಣವಾಗಿರುವ 10 ರೆಕಾರ್ಡ್ಗಳ ಬಗ್ಗೆ ಹೇಳ್ತೇನೆ..
ರೆಕಾರ್ಡ್ ನಂ. 1
IPLನಲ್ಲಿ 277/3 ಅತಿ ಹೆಚ್ಚು ರನ್ ಗಳಿಸಿದ ರೆಕಾರ್ಡ್
ಅಂತಾರಾಷ್ಟ್ರೀಯ T20ಯಲ್ಲಿ ನಾಲ್ಕನೇ ಅತಿದೊಡ್ಡ ಸ್ಕೋರ್
ರೆಕಾರ್ಡ್ ನಂ. 2
ಎರಡು ತಂಡಗಳು ಸೇರಿ 523 ರನ್ ಗಳಿಕೆ
T20ಯ ಎರಡೂ ಇನ್ನಿಂಗ್ಸ್ ಸೇರಿದರೆ ಅತಿಹೆಚ್ಚು ಸ್ಕೋರ್
ರೆಕಾರ್ಡ್ ನಂ.3
ಮುಂಬೈ ಇಂಡಿಯನ್ಸ್ IPL ಇನ್ನಿಂಗ್ಸ್ ನಲ್ಲಿ 246/5 ಅತಿ ಹೆಚ್ಚು ಸ್ಕೋರ್
ರೆಕಾರ್ಡ್ ನಂ.4
2ನೇ ಇನ್ನಿಂಗ್ಸ್ ನಲ್ಲಿ ಅತಿಹೆಚ್ಚು ರನ್ ಗಳಿಸಿದ ದಾಖಲೆ MI ಪಾಲು
ರೆಕಾರ್ಡ್ ನಂ.5
IPL ಮತ್ತು T-20 ಮ್ಯಾಚ್ ಗಳಲ್ಲಿ ಅತಿಹೆಚ್ಚು ಸಿಕ್ಸರ್ -38 ಸಿಕ್ಸ್
ರೆಕಾರ್ಡ್ ನಂ.6
IPLನ ಒಂದು ಪಂದ್ಯದಲ್ಲಿ ಅತಿಹೆಚ್ಚು ಬೌಂಡರಿ- 69 ಬೌಂಡರಿ
ರೆಕಾರ್ಡ್ ನಂ.7
SRH ಪರ ಅತಿವೇಗದ (16 ಎಸೆತ) ಅರ್ಧಶತಕ ಗಳಿಸಿದ ಅಭಿಶೇಕ್ ಶರ್ಮಾ
ರೆಕಾರ್ಡ್ ನಂ.8
ಒಂದು ಇನ್ನಿಂಗ್ಸ್ ನಲ್ಲಿ SRH ಅತಿಹೆಚ್ಚು ಸಿಕ್ಸ್ ದಾಖಲು- 18 ಸಿಕ್ಸ್
ರೆಕಾರ್ಡ್ ನಂ.9
ಒಂದು ಇನ್ನಿಂಗ್ಸ್ ನಲ್ಲಿ MI ಪರ ಅತಿಹೆಚ್ಚು ಸಿಕ್ಸ್ ದಾಖಲು -20 ಸಿಕ್ಸ್
ರೆಕಾರ್ಡ್ ನಂ.10
ಕ್ವೆನಾ ಮಫಾಕ ಚೊಚ್ಚಲ ಪಂದ್ಯದಲ್ಲಿ ಅತಿಹೆಚ್ಚು ರನ್ ನೀಡಿದ ದಾಖಲೆ 66/0-4 ಓವರ್
ರೆಕಾರ್ಡ್ ನಂ. 1.. IPL ಇತಿಹಾಸದಲ್ಲಿ 3 ವಿಕೆಟ್ ನಷ್ಟಕ್ಕೆ 277 ರನ್ ಗಳಿಸುವ ಮೂಲಕ ಒಂದು ಇನ್ನಿಂಗ್ಸ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಹೈದ್ರಾಬಾದ್ ಪಾಲಾಗಿದೆ.. ಇದು ಅಂತಾರಾಷ್ಟ್ರೀಯ T20ಯಲ್ಲಿ ನಾಲ್ಕನೇ ಅತಿದೊಡ್ಡ ಸ್ಕೋರ್ ಎನ್ನುವುದು ಮತ್ತೊಂದು ದಾಖಲೆ.. ಇನ್ನು ರೆಕಾರ್ಡ್ ನಂ. 2.. ಹೈದರಾಬಾದ್ ಮತ್ತು ಮುಂಬೈ – ಈ ಎರಡು ತಂಡಗಳು ಸೇರಿ ಗಳಿಸಿದ್ದು ಒಟ್ಟು 523 ರನ್ಗಳು..ಇದು T20ಯ ಒಂದೇ ಪಂದ್ಯದಲ್ಲಿ ದಾಖಲಾದ ಅತಿಹೆಚ್ಚು ಸ್ಕೋರ್ ಎಂಬ ದಾಖಲೆಗೂ ಪಾತ್ರವಾಗಿದೆ.. ರೆಕಾರ್ಡ್ ನಂ.3.. ಮುಂಬೈ ಇಂಡಿಯನ್ಸ್ ನಿನ್ನೆ ಚೇಸ್ ಮಾಡುತ್ತಾ ಗಳಿಸಿದ 5 ವಿಕೆಟ್ ನಷ್ಟಕ್ಕೆ 246 ರನ್ ಗಳಿಸಿದ್ದು ಕೂಡ ಮುಂಬೈನ ಐಪಿಎಲ್ನಲ್ಲಿ ಇದುವರೆಗೆ ಗಳಿಸಿದ ಅತಿ ಹೆಚ್ಚು ಸ್ಕೋರ್ ಆಗಿದೆ.. ರೆಕಾರ್ಡ್ ನಂ.4.. ಮುಂಬೈ ಗಳಿಸಿದ 246 ರನ್ಗಳು ಐಪಿಎಲ್ನಲ್ಲಿ ಯಾವುದೇ ತಂಡಗಳು 2ನೇ ಇನ್ನಿಂಗ್ಸ್ನಲ್ಲಿ ಗಳಿಸಿದ ಅತಿಹೆಚ್ಚು ರನ್ಗಳು ಎಂಬ ದಾಖಲೆ ಸೃಷ್ಟಿಸಿದೆ..
ರೆಕಾರ್ಡ್ ನಂ.5.. ಇನ್ನು IPL ಮತ್ತು T-20 ಮ್ಯಾಚ್ಗಳಲ್ಲಿ 38 ಸಿಕ್ಸ್ ಬಾರಿಸುವ ಮೂಲಕ ಅತಿಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ಪಂದ್ಯ ಇದಾಗಿದೆ.. ಜೊತೆಗೆ ರೆಕಾರ್ಡ್ ನಂ.6.. IPLನ ಒಂದು ಪಂದ್ಯದಲ್ಲಿ 69 ಬೌಂಡರಿಗಳನ್ನು ಗಳಿಸುವ ಮೂಲಕ ಅತಿಹೆಚ್ಚು ಬೌಂಡರಿ ದಾಖಲಾದ ಪಂದ್ಯ ಎಂಬ ರೆಕಾರ್ಡ್ ಕೂಡ ಈ ಪಂದ್ಯದ ಪಾಲಾಗಿದೆ.. ಇನ್ನು ರೆಕಾರ್ಡ್ ನಂ.7.. SRH ಪರ ಅತಿವೇಗದಲ್ಲಿ ಅಂದರೆ16 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಅಭಿಶೇಕ್ ಶರ್ಮಾ ಇದೇ ಇನ್ನಿಂಗ್ಸ್ನಲ್ಲಿ 18 ಎಸೆತೆಗಳಲ್ಲಿ ಅರ್ಧಶತಕ ಗಳಿಸಿದ ಟ್ರಾವಿಸ್ ಹೆಡ್ ಬರೆದ ದಾಖಲೆಯನ್ನು ಕೆಲವೇ ನಿಮಿಷಗಳ ಅಂತರದಲ್ಲಿ ಅಳಿಸಿ ಹಾಕಿದ್ದು ಮತ್ತೊಂದು ವಿಶೇಷ ರೆಕಾರ್ಡ್.. ಇನ್ನು ರೆಕಾರ್ಡ್ ನಂ.8.. ಒಂದು ಇನ್ನಿಂಗ್ಸ್ನಲ್ಲಿ SRH ಇದುವರೆಗೆ ಅತಿಹೆಚ್ಚು ಸಿಕ್ಸ್ ದಾಖಲಿಸಿದ ಪಂದ್ಯವೂ ಇದಾಗಿದ್ದು ಒಟ್ಟು 18 ಸಿಕ್ಸ್ ಗಳಿಸಿತ್ತು.. ಹಾಗೆಯೇ ರೆಕಾರ್ಡ್ ನಂ.9.. ಒಂದು ಇನ್ನಿಂಗ್ಸ್ನಲ್ಲಿ MI ಪರ ಅತಿಹೆಚ್ಚು ಸಿಕ್ಸ್ ಅಂದರೆ 20 ಸಿಕ್ಸ್ ದಾಖಲಾದ ಪಂದ್ಯ ಇದಾಗಿದೆ.. ಇನ್ನು ರೆಕಾರ್ಡ್ ನಂ.10 ಅನ್ನು ಗುರುತಿಸುವುದಾದರೆ, 4 ಓವರ್ಗಳಲ್ಲಿ 66 ರನ್ ನೀಡಿದ ಕ್ವೆನಾ ಮಫಾಕ ಐಪಿಎಲ್ನ ಚೊಚ್ಚಲ ಪಂದ್ಯದಲ್ಲಿ ಅತಿಹೆಚ್ಚು ರನ್ ನೀಡಿದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ..
ಹೀಗೆ ದಾಖಲೆಗಳ ಮೇಲೆ ದಾಖಲೆಗಳ ನಿರ್ಮಾಣವಾಗಿವೆ.. ಎರಡೂ ಇನ್ನಿಂಗ್ಸ್ಗಳಲ್ಲಿ 107 ಬಾರಿ ಬಾಲ್ ಬೌಂಡರಿ ಗೆರೆ ದಾಟಿದೆ ಅಂದ್ರೆ ಇದು ಮ್ಯಾಚೋ.. ಮ್ಯಾಚ್ ಹೈಲೈಟೋ ಎಂಬ ರೀತಿಯಲ್ಲಿತ್ತು ಎನ್ನುವುದಕ್ಕೆ ಸಾಕ್ಷಿ.. ಹೈದ್ರಾಬಾದ್ ಮತ್ತು ಮುಂಬೈ ತಂಡಗಳ ಅಭಿಮಾನಿಗಳ ಪಾಲಿಗಂತೂ ಕಳೆದ ರಾತ್ರಿ ಹಬ್ಬವೇ ಆಗಿತ್ತು.. ಆದ್ರೆ ಮುಂಬೈನ ಹೊಸ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯಾ ಮತ್ತು ಬಲವಂತದ ನಗುವಿನ ಮೂಲಕ ಬಿದ್ದ ಹೊಡೆತವನ್ನು ಮರೆ ಮಾಚುತ್ತಿದ್ದರು.. ಅದರಲ್ಲೂ ಅತ್ತ ಎಸ್ಆರ್ಹೆಚ್ ಬ್ಯಾಟ್ಸಮನ್ಗಳು ಮುಂಬೈ ಇಂಡಿಯನ್ಸ್ ಬೌಲರ್ಗಳನ್ನ ಮೈದಾನದ ಮೂಲೆ ಮೂಲೆಗೂ ಓಡಾಡುವಂತೆ ಮಾಡ್ತಾ ಇದ್ರೆ, ಇತ್ತ ಎಂಐ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಹ್ಯಾಪ್ ಮೋರೆ ಹಾಕ್ಕೊಂಡು ನಗ್ತಾ ನಗ್ತಾ ಓಡಾಡ್ತಿದ್ರು. ಅದರಲ್ಲೂ ದಕ್ಷಿಣ ಆಫ್ರಿಕಾದ 17ರ ಹರೆಯದ ಆಟಗಾರ ಕ್ವೆನಾ ಮಪಾಕಾ ಧಾರಾಳ ರನ್ ನೀಡುತ್ತಿದ್ರು, ಬಂದು ಬಂದು ಬೆನ್ನು ತಟ್ಟಿ ಸಪೋರ್ಟ್ ಮಾಡ್ತಿದ್ರು. ಅಷ್ಟೊಂದು ಧಾರಾಳವಾಗಿ ರನ್ ಮಳೆ ಹರಿಯುತ್ತಿದ್ದರೂ ಕೂಡಾ ಹಾರ್ದಿಕ್ ಪಾಂಡ್ಯಾ ಸಖತ್ ಕೂಲ್ ಆಗಿದ್ದೀನಿ ಅನ್ನೋ ಥರ ತೋರಿಸಿಕೊಳ್ಳಲು ಟ್ರೈ ಮಾಡ್ತಿದ್ರು. ರೋಹಿತ್ ಶರ್ಮಾಗೆ ಕ್ಯಾಪ್ಟನ್ ತಪ್ಪಿಸಿ, ಹಾರ್ದಿಕ್ಗೆ ನಾಯಕ ಪಟ್ಟಕಟ್ಟಿದ ಮುಂಬೈ ಇಂಡಿಯನ್ಸ್ಗೆ ಸರಿಯಾಗಿಯೇ ಹೊಡೆತ ಬಿದ್ದಿದೆ.. ಓಪನಿಂಗ್ ಬೌಲಿಂಗ್ ಯಾರಿಂದ ಮಾಡಿಸೋದು ಅಂತಲೇ ಗೊಂದಲದಲ್ಲಿರುವ ಹಾರ್ದಿಕ್ ಪಾಂಡ್ಯಾ ಹೊಡೆತ ಮೇಲೆ ಹೊಡೆತ ತಿನ್ನುತ್ತಿದ್ದಾರೆ.. ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾರನ್ನು ನಡೆಸಿಕೊಂಡ ರೀತಿಗೆ ಫ್ಯಾನ್ಸ್ ಬಾಯಿಂದ ಸಿಕ್ಕಾಪಟ್ಟೆ ಉಗಿಸಿಕೊಂಡ ಹಾರ್ದಿಕ್ ಪಾಂಡ್ಯಾಗೆ ಇದಕ್ಕಿಂತ ದೊಡ್ಡ ಶಿಕ್ಷೆ ಬಹುಷಃ ಬೇರೆ ಸಿಗಲಾರದು.. ಅಂತೂ ಹಾರ್ದಿಕ್ಗೆ ಇದು ಕೆಟ್ಟ ಐಪಿಎಲ್ ಸೀಸನ್ ಆಗುವ ಮುನ್ಸೂಚನೆ ಮೊದಲೆರಡು ಪಂದ್ಯಗಳಿಂದಲೇ ಸಿಕ್ಕಿದ್ದು, ಪಾಂಡ್ಯಾ ಹೇಗೆ ಸುಧಾರಿಸಿಕೊಳ್ಳುತ್ತಾರೆಂದು ನೋಡಬೇಕಿದೆ..