ಅಬ್ಬಾ.. ದಿನಕ್ಕೆ ಬಾರತದಲ್ಲಿ ಇಷ್ಟೊಂದು ಮಕ್ಕಳು ಹುಟ್ಟುತ್ತಾರಾ!?
ಪ್ರಪಂಚದ ಹುಟ್ಟು, ಸಾವಿನ ಲೆಕ್ಕ
ಪ್ರಪಂಚದಲ್ಲಿ ಅತೀ ಹೆಚ್ಚು ಜನ ಸಂಖ್ಯೆಯನ್ನ ಹೊಂದಿರೋ ದೇಶ ಅಂದ್ರೆ ಅದು ಭಾರತ. ಭಾರತದಲ್ಲಿ ಸಾಯುವರಿಗಿಂತ ಹುಟ್ಟುವರೇ ಹೆಚ್ಚು ಹಾಗಿದ್ರೆ ನಾವು ಮೊದಲು ಪ್ರಪಂಚದಲ್ಲಿ ಒಂದು ದಿನಕ್ಕೆ ಎಷ್ಟು ಜನ ಹುಟ್ಟುತ್ತಾರೆ.. ಎಷ್ಟು ಜನ ಸಾಯ್ತಾರೆ ಅನ್ನೋದನ್ನ ನೋಡೋಣ..
ಪ್ರಪಂಚದ ಹುಟ್ಟಿನ ಲೆಕ್ಕ
ಒಂದು ದಿನಕ್ಕೆ ಹುಟ್ಟುವರ ಸಂಖ್ಯೆ – 3,62,453
ಒಂದು ಗಂಟೆಗೆ ಹುಟ್ಟುವರ ಸಂಖ್ಯೆ -15, 102
ಒಂದು ನಿಮಿಷಕ್ಕೆ ಹುಟ್ಟುವರ ಸಂಖ್ಯೆ – 252
ಒಂದು ಸೆಕೆಂಡ್‌ಗೆ ಹುಟ್ಟುವರ ಸಂಖ್ಯೆ -4.20
ಈಗ ನಾವು ಎಷ್ಟು ಜನ ಒಂದು ದಿನಕ್ಕೆ ಅನ್ನೋದನ್ನ ನೋಡಿದ್ದೇವೆ ಹಾಗೇ ಜನ ಮರಣ ಹೊಂದುತ್ತಾರೆ ಅನ್ನೋದ್ರ ಅಂಕಿಅಂಶ ನೋಡೋದಾದ್ರೆ..
ಪ್ರಪಂಚದ ಸಾಯುವರ ಸಂಖ್ಯೆ
ಒಂದು ದಿನಕ್ಕೆ ಸಾಯುವರ ಸಂಖ್ಯೆ – 1,70, 790
ಒಂದು ಗಂಟೆಗೆ ಸಾಯುವರ ಸಂಖ್ಯೆ -7, 116
ಒಂದು ನಿಮಿಷಕ್ಕೆ ಸಾಯುವರ ಸಂಖ್ಯೆ – 119
ಒಂದು ಸೆಕೆಂಡ್‌ಗೆ ಸಾಯುವರ ಸಂಖ್ಯೆ – 2
ಇಲ್ಲಿ ನೋಡಿ ಒಂದು ದಿನಕ್ಕೆ 1,71,000 ಜನ ಸತ್ತರೆ , ಅದಕ್ಕಿಂತ ಡಬಲ್ ಜನ ಹುಟ್ಟುತ್ತಾರೆ. ನಿಮ್ಗೆ ಅರ್ಥ ಆಗೋ ಹಾಗೇ ಹೇಳಬೇಕು ಅಂದ್ರೆ ಒಬ್ಬ ವ್ಯಕ್ತಿ ಸತ್ರೆ ಅವನ ಬಲಿಗೆ ಇಬ್ಬರು ಮಕ್ಕಳು ಹುಟ್ಟುತ್ತಾರೆ.. ಹುಟ್ಟುವರರ ಸಂಖ್ಯೆಯೇ ಹೆಚ್ಚು ಹೀಗಾಗಿ ಪ್ರಪಂಚದಲ್ಲಿ ಜನ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ಈಗ ನಾವು ಇಡೀ ಪ್ರಪಂಚದ ಹುಟ್ಟು ಸಾವಿನ ಒಟ್ಟು ಲೆಕ್ಕವನ್ನನೋಡಿದ್ದೇವೆ.. ಈಗ ನಾವು ಟಾಪ್ 10 ದೇಶದಲ್ಲಿ ಎಷ್ಟುಜನ ಹುಟ್ಟುತ್ತಾರೆ ಎಷ್ಟು ಜನ ಸಾಯುತ್ತಾರೆ ಒಂದು ದಿನಕ್ಕೆ ಅನ್ನೋದನ್ನ ನೋಡೋಣ.
ಹೆಚ್ಚು ಮಕ್ಕಳು ಹುಟ್ಟುವ ಟಾಪ್ 10 ದೇಶಗಳು
ದೇಶ ದಿನಕ್ಕೆ ಹುಟ್ಟುವರ ಸಂಖ್ಯೆ ದಿನಕ್ಕೆ ಸಾಯುವರ ಸಂಖ್ಯೆ ಒಟ್ಟು ಜನಸಂಖ್ಯೆ
ಭಾರತ 63,483 26,166 145,09,40,000
ಚೀನಾ 24,153 31,973 141,93,20,000
ನೈಜೀರಿಯಾ 20,699 7,416 23,26,79,000
ಪಾಕಿಸ್ತಾನ 18,858 4,434 25,12,69,000
ಇಂಡೋನೇಷ್ಯಾ 12,234 5,917 28,34,88,000
DR ಕಾಂಗೋ 12,232 2,520 10,92,76000
ಇಥಿಯೋಪಿಯಾ 11,378 2,126 13,20,60,000
ಅಮೆರಿಕ 10,005 8,341 34,54,27,000
ಬಾಂಗ್ಲಾದೇಶ 9498 2,426 17,35,62,000
ಬ್ರೆಜಿಲ್ 7,042 2,400 21,19,99,000
ನೋಡಿದ್ರಿ ಅಲ್ವಾ ಹುಟ್ಟು ಸಾವಿನ ಲೆಕ್ಕ ನಮ್ಮ ದೇಶದಲ್ಲಿ ಒಬ್ಬ ಸತ್ತು ಹೋದ್ರೆ ಅವನ ಬದಲಿಗೆ 3 ಜನ ಹುಟ್ಟುತ್ತಾರೆ.. ಆದ್ರೆ ಚೀನಾದಲ್ಲಿ ಹುಟ್ಟುವರ ಸಂಖ್ಯೆಗಿಂತ ಸಾಯುವರ ಸಂಖ್ಯೆಯೇ ಹೆಚ್ಚು . ಹೀಗಾಗಿ ಭಾರತದಲ್ಲಿ ಜನ ಸಂಖ್ಯೆ ಹೆಚ್ಚಾಗಿದೆ.. ಚೀನಾದಲ್ಲಿ ಯುವಕರ ಸಂಖ್ಯೆ ಬಳಹ ಕಡಿಮೆಯಿದೆ, ಅಲ್ಲಿ ವಯಸ್ಸು ಆದವರು ಹೆಚ್ಚು ಜನ.. ಭಾರತದಲ್ಲಿ ಯುವಕರು ಈಗ ಹೆಚ್ಚಾಗಿದ್ದಾರೆ, ವಯಸ್ಸು ಆದವರು ತುಂಬಾ ಕಡಿಮೆ.. ಇನ್ನೂ 30-40 ವರ್ಷದಲ್ಲಿ ಇದು ಚೇಂಜ್ ಆಗುತ್ತೆ.. ಭಾರತದಲ್ಲಿ ಸಾಯುವರ ಸಂಖ್ಯೆ ಹೆಚ್ಚಾಗಿ, ಹುಟ್ಟವರ ಸಂಖ್ಯೆ ಕಡಿಮೆ ಆಗುತ್ತೆ..