ದಿನಕ್ಕೆ ಎಷ್ಟು ಬಾರಿ ಫೋನ್ ಪರಿಶೀಲಿಸುತ್ತೀರಿ? – ಅಧ್ಯಯನದಲ್ಲಿ ಬಯಲಾಯ್ತು ಮೊಬೈಲ್ ಬಳಕೆ ರಹಸ್ಯ

ದಿನಕ್ಕೆ ಎಷ್ಟು ಬಾರಿ ಫೋನ್ ಪರಿಶೀಲಿಸುತ್ತೀರಿ? – ಅಧ್ಯಯನದಲ್ಲಿ ಬಯಲಾಯ್ತು ಮೊಬೈಲ್ ಬಳಕೆ ರಹಸ್ಯ

ಈಗೇನಿದ್ರೂ ಮೊಬೈಲ್ ಜಮಾನ. ಮನರಂಜನೆಯಿಂದ ಹಿಡಿದು ಕೆಲಸದವರೆಗೆ, ಆನ್ಲೈನ್ ಶಾಪಿಂಗ್​ನಿಂದ ಗೇಮ್​ವರೆಗೆ ಎಲ್ಲವೂ ಮೊಬೈಲ್​ನಲ್ಲೇ ಆಗುತ್ತೆ. ಮೇಲ್ ಚೆಕ್, WhatsApp, Facebook, X, Instagram ನಂತಹ ಆ್ಯಪ್‌​ಗಳಲ್ಲಿ ಜನ ಬ್ಯುಸಿ ಆಗಿರ್ತಾರೆ. ಡಿಜಿಟಲ್ ಪೇಮೆಂಟ್ ಕೂಡ ಆಗಿರೋದ್ರಿಂದ ಮನೆ ಒಳಗೂ, ಹೊರಗೂ ಮೊಬೈಲ್ ಬೇಕೇಬೇಕು. ಹಾಗಾದ್ರೆ ಒಬ್ಬ ವ್ಯಕ್ತಿ ದಿನವೊಂದಕ್ಕೆ ಎಷ್ಟು ಬಾರಿ ಫೋನ್ ಪರಿಶೀಲಿಸ್ತಾರೆ ಎಂದು ಯೋಚಿಸಿದ್ದೀರಾ. ಈ ಕುರಿತ ಮಾಹಿತಿ ಇಲ್ಲಿದೆ.

ಇದನ್ನೂ ಓದಿ : ಪೋಷಕರೇ ಮಕ್ಕಳ ಬಗ್ಗೆ ಇರಲಿ ಎಚ್ಚರ.. -ನಿಂಬೆಹಣ್ಣು ಗಂಟಲಿನಲ್ಲಿ ಸಿಲುಕಿ 9 ತಿಂಗಳ ಕಂದಮ್ಮ ಸಾವು!

ಹಳ್ಳಿಯಿಂದ ದಿಲ್ಲಿವರೆಗೂ ಈಗ ಎಲ್ಲರ ಕೈಯಲ್ಲೂ ಫೋನ್​ಗಳು ಇದ್ದೇ ಇರುತ್ತವೆ. ಕೆಲವೊಮ್ಮೆ ಕೆಲಸ ಇದ್ರೂ ಬಿಟ್ಟು ಮೊಬೈಲ್ ಹಿಡ್ಕೊಂಡು ಕೂರ್ತಾರೆ. ಅದೆಷ್ಟರ ಮಟ್ಟಿಗೆ ಅಂದ್ರೆ ಊಟ ಮಾಡುವಾಗ್ಲೂ ಫೋನ್ ಬೇಕು. ವಾಶ್​ರೂಮ್​ಗೆ ಹೋದ್ರೂ ಕೈಯಲ್ಲಿ ಫೋನ್ ಇರ್ಬೇಕು. ಇದೇ ಕಾರಣಕ್ಕೆ ಕೆಲ ವರ್ಷಗಳಿಂದ  ಜಗತ್ತಿನಾದ್ಯಂತ ಮೊಬೈಲ್ ಫೋನ್‌ಗಳ ಬೇಡಿಕೆ ಮಿತಿ ಮೀರಿ ಹೋಗಿದೆ. ಹೀಗಿರುವಾಗ ಒಬ್ಬ ವ್ಯಕ್ತಿ ಪ್ರತಿದಿನ ತಮ್ಮ ಮೊಬೈಲ್ ಫೋನ್ ಅನ್ನು ಸರಾಸರಿ ಎಷ್ಟು ಬಾರಿ ಪರಿಶೀಲಿಸುತ್ತಾನೆ ಅನ್ನೋದು ಗೊತ್ತಿದ್ಯಾ. ದಿನಕ್ಕೆ ಏನಿಲ್ಲ ಅಂದ್ರೂ 58 ಬಾರಿ ಪರಿಶೀಲಿಸುತ್ತಾರಂತೆ. ಜನರು ಹೊರಗಿರುವ ಸಮಯಕ್ಕಿಂತ ಮನೆಯಲ್ಲಿದ್ದಾಗ ಆ್ಯಪ್‌ಗಳನ್ನು ಬಳಸಿಕೊಂಡು ಮೊಬೈಲ್‌ನಲ್ಲೇ ಹೆಚ್ಚು ಸಮಯವನ್ನು ಕಳೆಯುತ್ತಾರೆ ಎಂದು ಅಧ್ಯಯನಗಳು ತಿಳಿಸಿವೆ.

AppAny 2022 ರ ಸಮೀಕ್ಷೆಯ ಪ್ರಕಾರ ಭಾರತೀಯರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಪ್ರತಿದಿನ ಸರಾಸರಿ 4 ಗಂಟೆ 9 ನಿಮಿಷಗಳನ್ನ ಕಳೆಯುತ್ತಾರೆ. ಈ ಪಟ್ಟಿಯಲ್ಲಿ ಭಾರತ ವಿಶ್ವದಲ್ಲಿ ಎಂಟನೇ ಸ್ಥಾನದಲ್ಲಿದೆ. ಅಮೆರಿಕನ್ನರು ಸಾಕಷ್ಟು ಸಮಯವನ್ನು ಫೋನ್​ ಬಳಕೆಯಲ್ಲೇ ಕಳೆಯುತ್ತಿದ್ದು ಮೊದಲ ಸ್ಥಾನದಲ್ಲಿದ್ದಾರೆ. ಚೀನಾ ಮತ್ತು ಇಂಡೋನೇಷ್ಯಾ ನಂತರದ ಸ್ಥಾನಗಳಲ್ಲಿವೆ.

ತಂತ್ರಜ್ಞಾನ ಪರಿಹಾರಗಳ ಕಂಪನಿಯಾದ Asurion ನಡೆಸಿದ ಅಧ್ಯಯನದ ಪ್ರಕಾರ, ಒಬ್ಬ ಸರಾಸರಿ ವ್ಯಕ್ತಿ ದಿನಕ್ಕೆ 96 ಬಾರಿ ತನ್ನ ಫೋನ್ ಅನ್ನು ಪರಿಶೀಲಿಸುತ್ತಾನೆ. ಜನರು ತಮ್ಮ ಫೋನ್‌ಗಳನ್ನು ದಿನಕ್ಕೆ ಸರಾಸರಿ 47 ಬಾರಿ ಪರಿಶೀಲಿಸುತ್ತಾರೆ ಎಂದು ಮತ್ತೊಂದು ಅಧ್ಯಯನವು ಕಂಡುಹಿಡಿದಿದೆ. ಈ ಸಂಖ್ಯೆಯು ವೃತ್ತಿಯನ್ನು ಅವಲಂಬಿಸಿ ಬದಲಾಗುತ್ತದೆ ಎಂಬುದು ಇಲ್ಲಿ ಉಲ್ಲೇಖನೀಯ.

Shwetha M