ಆರೋಗ್ಯಕ್ಕೆ ಒಳ್ಳೇದು ಅಂತಾ ಹೆಚ್ಚು ಮೊಟ್ಟೆ ತಿಂದ್ರೆ ಡೇಂಜರ್ – ದಿನಕ್ಕೆ 2ಕ್ಕಿಂತ ಹೆಚ್ಚು Egg ತಿಂದ್ರೆ ಏನಾಗುತ್ತೆ..?

ಆರೋಗ್ಯಕ್ಕೆ ಒಳ್ಳೇದು ಅಂತಾ ಹೆಚ್ಚು ಮೊಟ್ಟೆ ತಿಂದ್ರೆ ಡೇಂಜರ್ – ದಿನಕ್ಕೆ 2ಕ್ಕಿಂತ ಹೆಚ್ಚು Egg ತಿಂದ್ರೆ ಏನಾಗುತ್ತೆ..?

ಮೊಟ್ಟೆ ಅಂದ್ರೆ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಎಲ್ರಿಗೂ ಇಷ್ಟ. ಆದ್ರೆ ಆರೋಗ್ಯಕ್ಕೆ ಒಳ್ಳೇದು ಅಂತಾ ಹೆಚ್ಚಾಗಿ ತಿಂದ್ರೆ ಸಮಸ್ಯೆ ಕೂಡ ಇದೆ. ಕೋಳಿಮೊಟ್ಟೆಯಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಇರುತ್ತೆ. ದಿನಕ್ಕೆ ಒಂದು ಅಥವಾ ಎರಡು ಮೊಟ್ಟೆಯನ್ನ ತಿಂದ್ರೆ ಒಳ್ಳೆಯದು ಅಂತಾ ತಜ್ಞರೇ ಹೇಳ್ತಾರೆ.

ಇದನ್ನೂ ಓದಿ : ಅಮೆರಿಕದಲ್ಲಿ ಭಕ್ತಿಯ ಪರ್ವಕಾಲ! – 6 ವರ್ಷಗಳಲ್ಲಿ 500 ದೇಗುಲಗಳ ನಿರ್ಮಾಣ!

ವರ್ಕೌಟ್ ಮಾಡುವವರು ಜಾಸ್ತಿ ಪ್ರಮಾಣದಲ್ಲಿ ಎಗ್ ತಿಂತಾರೆ. ಇದರಿಂದ ಅವರ ದೇಹದ ಮಾಂಸ ಖಂಡಗಳು ಸ್ಟ್ರಾಂಗ್ ಆಗುತ್ತೆ. ಆದ್ರೆ ಇಷ್ಟ ಅಂತಾ ಅತಿಯಾಗಿ ಮೊಟ್ಟೆ ಸೇವಿಸೋದು ಒಳ್ಳೇದಲ್ಲ.. ಯಾಕಂದ್ರೆ ಮೊಟ್ಟೆಯಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲೋರಿ ಮತ್ತು ಕೊಲೆಸ್ಟ್ರಾಲ್ ಇರೋದ್ರಿಂದ ದೇಹದ ತೂಕ ಜಾಸ್ತಿಯಾಗುತ್ತೆ. ಇದು ಹೃದಯದ ಸಮಸ್ಯೆಗೆ ಕಾರಣವಾಗುತ್ತೆ. ಹೀಗಾಗಿ ಬೊಜ್ಜು ಇರೋವ್ರು ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ಸೇವಿಸಿದ್ರೆ ಒಳ್ಳೆಯದು. ಹಾಗೇ ದಿನಕ್ಕೆ ಎರಡಕ್ಕಿಂತ ಹೆಚ್ಚು ಮೊಟ್ಟೆ ತಿಂದ್ರೆ ಜೀರ್ಣ ಕ್ರಿಯೆ ಮೇಲೆ ಪರಿಣಾಮ ಬೀರುತ್ತೆ. ಪ್ರೋಟೀನ್ ಅಂಶ ಜಾಸ್ತಿ ಇರೋದ್ರಿಂದ ಜೀರ್ಣವಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ, ಕರುಳು ಸಂಬಂಧ ಸಮಸ್ಯೆ ಇರುವವರು ವೈದ್ಯರ ಸಲಹೆ ಪಡೆದು ಮೊಟ್ಟೆ ಸೇವಿಸಿದ್ರೆ ಒಳ್ಳೆಯದು.

 

Shantha Kumari