ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವಧಿ ಎಲ್ಲಿವರೆಗೆ? – ಬಿಸಿಸಿಐ ತೀರ್ಮಾನ ಏನು?
ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವಧಿಯನ್ನು ವಿಸ್ತರಿಸಲಾಗಿದ್ದು, ಹೊಸ ಅವಧಿ ಎಷ್ಟು ಸಮಯದವರೆಗೆ ಇರಲಿದೆ ಎಂಬುದರ ಬಗ್ಗೆ ಒಪ್ಪಂದ ಅಂತಿಮಗೊಳಿಸಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ತಿಳಿಸಿದ್ದಾರೆ. ಏಕದಿನ ವಿಶ್ವಕಪ್ ಟೂರ್ನಿ ಹಾಗೂ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ನೂತನ ಕೋಚ್ ನೇಮಕಾತಿಗೆ ಸಮಯದ ಅಭಾವವಿದ್ದು, ದ್ರಾವಿಡ್ ಅವರೊಂದಿಗೆ ಸಭೆ ನಡೆಸಿ ಪರಸ್ಪರ ಒಪ್ಪಿಗೆ ಪಡೆದ ಬಳಿಕ ಕೋಚ್ ಹಾಗೂ ತರಬೇತಿ ಬಳಗದ ಅವಧಿಯನ್ನು ವಿಸ್ತರಿಸಲಾಗಿದೆ.
ಇದನ್ನೂ ಓದಿ: ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿ ಮರು ಆಯ್ಕೆ ಮಾಡಲು ಕಾರಣಗಳೇನು? – ಎಷ್ಟು ವರ್ಷ ಟೀಮ್ ಇಂಡಿಯಾದಲ್ಲೇ ಇರ್ತಾರೆ ದ್ರಾವಿಡ್?
ರಾಹುಲ್ ದ್ರಾವಿಡ್ ಕೋಚಿಂಗ್ ಅವಧಿ ಕುರಿತಾಗಿಯೂ ಒಂದು ಮೇಜರ್ ಅಪ್ಡೇಟ್ ಆಗಿದೆ. ಸದ್ಯ ರಾಹುಲ್ ದ್ರಾವಿಡ್ ಸೇರಿದಂತೆ ಇಡೀ ಕೋಚಿಂಗ್ ಸ್ಟಾಫ್ ಜೊತೆಗಿನ ಒಪ್ಪಂದವನ್ನ ಬಿಸಿಸಿಐ ರಿನೀವಲ್ ಮಾಡಿದೆ. ವಂಡೇ ವರ್ಲ್ಡ್ಕಪ್ ಬಳಿಕವೂ ದ್ರಾವಿಡ್ ಅವರೇ ಹೆಡ್ ಕೋಚ್ ಆಗಿ ಕಂಟಿನ್ಯೂ ಆಗಿದ್ದಾರೆ. ಆದ್ರೆ, ಇನ್ನೆಷ್ಟು ಸಮಯ ದ್ರಾವಿಡ್ ಕೋಚ್ ಆಗಿರ್ತಾರೆ ಅನ್ನೋದನ್ನ ಬಿಸಿಸಿಐ ಸ್ಪಷ್ಟಪಡಿಸಿರಲಿಲ್ಲ. ಈಗ ಈ ಬಗ್ಗೆಯೂ ಬಿಸಿಸಿಐ ಒಂದು ಮಾಹಿತಿಯನ್ನ ಬಯಲು ಮಾಡಿದೆ.
ಈಗ ದ್ರಾವಿಡ್ ಕೋಚಿಂಗ್ನಡಿಯಲ್ಲೇ ಸೌತ್ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಒಟ್ಟು ಮೂರು ಸೀರಿಸ್ಗಳನ್ನ ಆಡ್ತಿದೆ. 3 ಟಿ-20, 3 ವಂಡೇ ಮತ್ತು 2 ಟೆಸ್ಟ್ ಮ್ಯಾಚ್ಗಳನ್ನ ಟೀಂ ಇಂಡಿಯಾ ಆಡ್ತಿದೆ. ಈ ಸೀರಿಸ್ ದ್ರಾವಿಡ್ ಪಾಲಿಗೆ ತುಂಬಾನೆ ಇಂಪಾರ್ಟೆಂಟ್. ಸೌತ್ ಆಫ್ರಿಕಾ ಸೀರಿಸ್ ಬಳಿಕ ಬಿಸಿಸಿಐ ರಾಹುಲ್ ದ್ರಾವಿಡ್ರ ಕೋಚಿಂಗ್ ಅವಧಿ ಬಗ್ಗೆ ಫೈನಲ್ ಡಿಸೀಶನ್ ತೆಗೆದುಕೊಳ್ಳಲಿದೆ. ಇದುವರೆಗೂ ದ್ರಾವಿಡ್ ಜೊತೆಗಿನ ಕಾಂಟ್ರ್ಯಾಕ್ಟ್ ಎಷ್ಟು ಟೈಮ್ನವರೆಗೆ ಅನ್ನೋದನ್ನ ಬಿಸಿಸಿಐ ಫೈನಲ್ ಮಾಡಿರಲಿಲ್ಲ. ಆದ್ರೆ ದಕ್ಷಿಣ ಆಫ್ರಿಕಾ ವಿರುದ್ಧದ ಸೀರಿಸ್ ಮುಗಿದ ಬಳಿಕ ಬಿಸಿಸಿಐ ಮತ್ತೊಮ್ಮೆ ದ್ರಾವಿಡ್ ಜೊತೆಗೆ ಮಾತುಕತೆ ನಡೆಸಲಿದೆ. ಈ ವೇಳೆ ದ್ರಾವಿಡ್ ಎಲ್ಲಿಯವರೆಗೆ ಕೋಚ್ ಆಗಿರ್ತಾರೆ ಅನ್ನೋದು ಡಿಸೈಡ್ ಆಗುತ್ತೆ. ಮೋಸ್ಟ್ ಪ್ರಾಬಬ್ಲಿ ಮುಂದಿನ ಟಿ-20 ವರ್ಲ್ಡ್ಕಪ್ವರೆಗಂತೂ ದ್ರಾವಿಡ್ ಟೀಂ ಇಂಡಿಯಾದ ಹೆಡ್ ಕೋಚ್ ಆಗಿರೋದಂತೂ ಗ್ಯಾರಂಟಿ. ಹೆಚ್ಚಂದ್ರೆ 2025ರಲ್ಲಿ ನಡೆಯೋ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ವರೆಗೆ ಕೋಚ್ ಆಗಿರಬಹುದು.
ಅಂತೂ ಸೌತ್ ಆಫ್ರಿಕಾ ಜೊತೆಗಿನ ಸೀರಿಸ್ ವಿವಿಧ ಆ್ಯಂಗಲ್ನಲ್ಲಿ ಟೀಂ ಇಂಡಿಯಾಗೆ ಡಿಸೈಂಡಿಂಗ್ ಫ್ಯಾಕ್ಟರ್ ಆಗಲಿದೆ. ಟಿ20 ವರ್ಲ್ಡ್ಕಪ್ಗೆ ಇನ್ನು ಕೆಲ ತಿಂಗಳುಗಳಷ್ಟೇ ಬಾಕಿ ಉಳಿದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಟೀಂ ಇಂಡಿಯಾದ ವಿಚಾರವಾಗಿ ಸಾಕಷ್ಟು ಡೆವಲಪ್ಮೆಂಟ್ಗಳಾಗೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಅದ್ರಲ್ಲೂ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರಾಹುಲ್ ದ್ರಾವಿಡ್ ಈ ಮೂವರ ಭವಿಷ್ಯ ನಿರ್ಧಾರವಾಗಲಿದೆ.