10 ಟೀಮ್‌ಗಳ ಗಳ ಪೇಸ್ ಬೌಲಿಂಗ್ ಯುನಿಟ್ ಹೇಗಿದೆ? – ಎಷ್ಟು ಮಂದಿ ಫಾಸ್ಟ್ ಬೌಲರ್ಸ್‌ಗಳಿದ್ದಾರೆ?
ಈ ಬಾರಿಯ ಐಪಿಎಲ್‌ನಲ್ಲಿ 10 ಟೀಮ್‌ಗಳ ಗಳ ಪೇಸ್ ಬೌಲಿಂಗ್ ಯುನಿಟ್ ಹೇಗೆ? ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದಂತೆ ಯಾವ್ಯಾವ ಟೀಮ್ನಲ್ಲಿ ಎಷ್ಟು ಮಂದಿ ಫಾಸ್ಟ್ ಬೌಲರ್ಸ್‌ಗಳಿದ್ದಾರೆ? ಯಾರೆಲ್ಲಾ ಇದ್ದಾರೆ ಎಂಬ ಕುತೂಹಲ ಇದೆಯಾ?. ಇಲ್ಲಿದೆ ಫುಲ್ ಡಿಟೇಲ್ಸ್.
ಇದನ್ನೂ ಓದಿ: 10 ಟೀಮ್‌ಗಳ ಪೈಕಿ ಅತ್ಯಂತ ಸ್ಟ್ರಾಂಗ್ ಯಾವುದು? – ಐಪಿಎಲ್‌ನಲ್ಲಿ ಹೆಚ್ಚು all-rounders ಇರೋ ಟೀಮ್ ಯಾವುದು?
ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಸ್ಪಿನ್ ಜೊತೆ ಫಾಸ್ಟ್ ಬೌಲಿಂಗ್ಗೂ ಅಡ್ವಾಂಟೇಜ್ ಸಿಗುವಂಥಾ ಪಿಚ್ಗಳಿಗೂ ಹೆಚ್ಚು ಪ್ರಿಫರೆನ್ಸ್ ನೀಡಲಾಗ್ತಾ ಇದೆ. ವಾಂಖೆಡೆ, ಧರ್ಮಶಾಲಾ, ಹೈದರಾಬಾದ್, ಕೊಲ್ಕತ್ತಾದ ಪಿಚ್ಗಳಲ್ಲಿ ಕೇವಲ ಸ್ಪಿನ್ನರ್ಸ್ಗಳಿಗೆ ಮಾತ್ರವಲ್ಲ ಪೇಸ್ ಬೌಲರ್ಸ್ಗೂ ಅಸಿಸ್ಟೆಂಟ್ ಸಿಗುತ್ತೆ. ಇತ್ತೀಚಿನ ವರ್ಷಗಳಲ್ಲಿ ಇಂಡಿಯನ್ ಕ್ರಿಕೆಟ್ನಲ್ಲಿ ಫಾಸ್ಟ್ ಬೌಲರ್ಸ್ಗೂ ಹೆಚ್ಚಿನ ಪ್ರಿಫರೆನ್ಸ್ ನೀಡಲಾಗ್ತಿದೆ. ಯಾಕಂದ್ರೆ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್, ಸೌತ್ ಆಫ್ರಿಕಾದಂತಾ ದೇಶಗಳಿಗೆ ಹೋದ್ರೆ ಅಲ್ಲಮಥೂ ಸ್ಪಿನ್ ಪಿಚ್ಗಳಿರೋದಿಲ್ಲ. ಬರೀ ಪೇಸ್ ಬೌಲರ್ಸ್ಗಳಿಗೆ ಫೇವರ್ ಆಗಿರುವಂಥಾ ಪಿಚ್ಗಳನ್ನ ರೆಡಿ ಮಾಡಿರ್ತಾರೆ. ಹೀಗಾಗಿ ಭಾರತದಲ್ಲೂ ಈಗ ಫಾಸ್ಟ್ ಬೌಲರ್ಸ್ಗಳಿಗೆ ಮತ್ತು ಪೇಸ್ ಬೌಲಿಂಗ್ಗೂ ಹೆಲ್ಪ್ ಆಗುವಂಥಾ ಪಿಚ್ಗಳನ್ನ ರೆಡಿ ಮಾಡಲಾಗ್ತಿದೆ. ಅದ್ರಲ್ಲೂ ಟಿ20 ಫಾರ್ಮೆಟ್ಗೆ ಬಂದಾಗ ಟೀಮ್ ಸಕ್ಸಸ್ನಲ್ಲಿ ಫಾಸ್ಟ್ ಬೌಲರ್ಸ್ಗಳ ರೋಲ್ ತುಂಬಾನೆ ಇಂಪಾರ್ಟೆಂಟ್ ಆಗಿರುತ್ತೆ. ಮ್ಯಾಚ್ನ್ನ ಯಾವುದೇ ಹಂತದಲ್ಲಿ ಟರ್ನ್ ಮಾಡಿ ಬಿಡ್ತಾರೆ. ಡೆತ್ ಓವರ್ಗಳಲ್ಲಂತೂ ಎಲ್ಲಾ ಟೀಮ್ಗಳು ಡಿಪೆಂಡ್ ಆಗೋದು ಫಾಸ್ಟ್ ಬೌಲರ್ಸ್ಗಳನ್ನೇ. ಹೀಗಾಗಿಯೇ ಐಪಿಎಲ್‌ನಲ್ಲಿ ವರ್ಲ್ಡ್ಕ್ಲಾಸ್ ಪೇಸ್ ಬೌಲರ್ಸ್ಗಳಿಗೆ ಇನ್ನಿಲ್ಲದ ಡಿಮ್ಯಾಂಡ್ ಇರೋದು. ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್ ಅಂತೂ ದಾಖಲೆಯ ಹಣಕ್ಕೆ ಸೇಲ್ ಆಗಿರೋದೆ ಇದಕ್ಕೆ ಸಾಕ್ಷಿ. ಈ ಬಾರಿಯ ಐಪಿಎಲ್‌ನಲ್ಲಿ ಎಲ್ಲಾ 10 ಟೀಮ್ಗಳು ಕೂಡ 4-5 ಮಂದಿ ಸಾಲಿಡ್ ಪೇಸ್ ಬೌಲರ್ಸ್ಗಳನ್ನ ಹೊಂದಿವೆ.
ಕೊಲ್ಕತ್ತಾ ನೈಟ್ ರೈಡರ್ಸ್ ಪೇಸ್ ಬೌಲರ್ಸ್!
ಮೊದಲಿಗೆ ಕೆಕೆಆರ್ ಫಾಸ್ಟ್ ಬೌಲಿಂಗ್ ಯುನಿಟ್ ಹೇಗಿದೆ ಅನ್ನೋದನ್ನ ನೋಡೋಣ. ಕೊಲ್ಕತ್ತಾ ನೈಟ್ ರೈಡರ್ಸ್ನಲ್ಲಿ ಒಟ್ಟು ಏಳು ಮಂದಿ ಪೇಸ್ ಬೌಲರ್ಸ್‌ಗಳಿದ್ದಾರೆ.
KKR ಫಾಸ್ಟ್ ಬೌಲರ್ಸ್
ಮಿಚೆಲ್ ಸ್ಟಾರ್ಕ್, ಗಸ್ ಅಟ್ಕಿನ್ಸನ್, ಹರ್ಷಿತ್ ರಾಣಾ, ವೈಭವ್ ಅರೋರ, ಚೇತನ್ ಸಕಾರಿಯಾ, ಸಾಕಿಬ್ ಹುಸೇನ್
ಈ ಪೈಕಿ ಮೂವರು ಪೇಸ್ ಬೌಲರ್ಸ್ಗಳನ್ನ ಕೊಲ್ಕತ್ತಾ ನೈಟ್ ರೈಡರ್ಸ್ ತನ್ನ ಪ್ಲೇಯಿಂಗ್-11ನಲ್ಲಿ ಆಡಿಸ್ಬಹುದು. ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ ಮತ್ತು ವೈಭವ್ ಅರೋರರನ್ನ ಕಣಕ್ಕಿಳಸಬಹುದು. ಈ ಪೈಕಿ ಮಿಚೆಲ್ ಸ್ಟಾರ್ಕ್ ಮೇಲೆಯಂತೂ ತುಂಬಾನೆ ಪ್ರೆಷರ್ ಇದೆ. ಯಾಕಂದ್ರೆ ಮಿಚೆಲ್ ಸ್ಟಾರ್ಕ್ರನ್ನ 24.75 ಕೋಟಿ ರೂಪಾಯಿ ಕೊಟ್ಟು ಕೆಕೆಆರ್ ಖರೀದಿಸಿದೆ. ಹೀಗಾಗಿ ಪ್ರತಿ ಮ್ಯಾಚ್ನಲ್ಲಿ ಮಿಚೆಲ್ ಸ್ಟಾರ್ಕ್ರನ್ನ ಆಡಿಸಿಯೇ ಆಡಿಸ್ತಾರೆ. ಹಾಗೆಯೇ ಸ್ಟಾರ್ಕ್ ಮೇಲೆಯೂ ವಿಕೆಟ್ ತೆಗಿಲೇಬೇಕಾದಂಥಾ ಒತ್ತಡ ಇರುತ್ತೆ. ಮಿಚೆಲ್ ಸ್ಟಾರ್ಕ್ರನ್ನ ಬಿಟ್ರೆ ಕೆಕೆಆರ್ನಲ್ಲಿರೋ ಉಳಿದೆಲ್ಲಾ ಪೇಸ್ ಬೌಲರ್ಸ್ಗಳು ಕೂಡ ಯಂಗ್ಸ್ಟರ್ಸ್ಗಳೇ. ಹೀಗಾಗಿ ಬೌಲಿಂಗ್ ವಿಚಾರಕ್ಕೆ ಬಂದಾಗ ಸ್ಟಾರ್ಕ್ ಮೇಲೆಯೇ ಟೀಮ್ ಹೆಚ್ಚು ಡಿಪೆಂಡ್ ಆಗಿದೆ.
ಹೈದರಾಬಾದ್ ಸನ್ರೈಸರ್ಸ್ ಪೇಸ್ ಬೌಲರ್ಸ್!
ಇನ್ನು ಹೈದರಾಬಾದ್ನ ಫಾಸ್ಟ್ ಬೌಲಿಂಗ್ ಯುನಿಟ್ ನೋಡೋದಾದ್ರೆ ಎಸ್ಆರ್ಹೆಚ್ನಲ್ಲೂ ಒಟ್ಟು ಏಳು ಮಂದಿ ಪೇಸ್ ಬೌಲರ್ಸ್‌ಗಳಿದ್ದಾರೆ.
SRH ಫಾಸ್ಟ್ ಬೌಲರ್ಸ್
ಪ್ಯಾಟ್ ಕಮಿನ್ಸ್, ಭುವನೇಶ್ವರ್ ಕುಮಾರ್, ಫಜಲಖ್ ಫಾರೂಖಿ, ಟಿ.ನಟರಾಜನ್, ಉಮ್ರಾನ್ ಮಲಿಕ್, ಜಯ್ದೇವ್ ಉನದ್ಕತ್, ಆಕಾಶ್ ಸಿಂಗ್
ಈ ಪೈಕಿ ನಾಲ್ವರು ಬೌಲರ್ಸ್ಗಳು ಹೆಚ್ಚು ಹೈಲೈಟ್ ಆಗ್ತಾರೆ. ಪ್ಯಾಟ್ ಕಮಿನ್ಸ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್ ಮತ್ತು ಟಿ ನಟರಾಜನ್. ಈ ನಾಲ್ವರಿಂದಾಗಿ ಸನ್ ರೈಸರ್ಸ್ ಹೈದರಾಬಾದ್ನ ಪೇಸ್ ಬೌಲಿಂಗ್ ಯುನಿಟ್ ತುಂಬಾನೆ ಸ್ಟ್ರಾಂಗ್ ಆಗಿ ಕಾಣಿಸ್ತಿದೆ. ಇನ್ನು ಭುವನೇಶ್ವರ್ ಕುಮಾರ್ಗಂತೂ ಇದೊಂದು ಒಳ್ಳೆಯ ಅಪಾರ್ಚ್ಯುನಿಟಿ. ಸದ್ಯ ಭುವಿ ಟೀಂ ಇಂಡಿಯಾದ ಪರ ಆಡ್ತಿಲ್ಲ. ಈಗ ಐಪಿಎಲ್ ಮೂಲಕ ಕಮ್ಬ್ಯಾಕ್ ಮಾಡೋಕೆ ಭುವನೇಶ್ವರ್ಗೆ ಒಳ್ಳೆಯ ಅಪಾರ್ಚ್ಯುನಿಟಿ ಇದೆ. ಪ್ಯಾಟ್ ಕಮಿನ್ಸ್ ನ್ಯೂ ಬಾಲ್ನಲ್ಲಿ ಬೌಲಿಂಗ್ ಮಾಡಿದ್ರೆ, ಡೆತ್ ಓವರ್ನಲ್ಲಿ ಭುವನೆಶ್ವರ್ ಅಥವಾ ನಟರಾಜ್ ಕೈಗೆ ಬಾಲ್ ನೀಡಬಹುದು. ಅಂತೂ ಹೈದರಾಬಾದ್ನದ್ದು ಬೆಸ್ಟ್ ಬೌಲಿಂಗ್ ಯುನಿಟ್ ಅಂತಾನೆ ಹೇಳಬಹುದು. ಯಾಕಂದ್ರೆ ಲೈನ್ & ಲೆಂತ್ನಲ್ಲಿ ಬೌಲ್ ಮಾಡೋಕೆ ಪ್ಯಾಟ್ ಕಮಿನ್ಸ್ ಇದ್ದಾರೆ. ಸ್ವಿಂಗ್ ಬೌಲರ್ ಆಗಿ ಭುವನೇಶ್ವರ್ ಕುಮಾರ್ ಇದ್ದಾರೆ. ಫುಲ್ ಪೇಸ್ ಬೌಲಿಂಗ್ಗೆ ಉಮ್ರಾನ್ ಮಲಿಕ್ ಇದ್ದಾರೆ. ಸೋ ಗುಡ್ ಬೌಲಿಂಗ್ ಯುನಿಟ್.
CSK ಫಾಸ್ಟ್ ಬೌಲರ್ಸ್
ದೀಪಕ್ ಚಹರ್, ಶಾರ್ದುಲ್ ಠಾಕುರ್, ಸಿಮರ್ಜೀತ್ ಸಿಂಗ್, ತುಷಾರ್ ದೇಶಪಾಂಡೆ, ಮತೀಶ ಪತಿರಾಣ, ಮುಕೇಶ್ ಚೌಧರಿ, ರಾಜ್ಯವರ್ಧನ್ ಹಂಗರ್ಗೇಕರ್, ಮುಸ್ತಫಿಜುರ್ ರೆಹ್ಮಾನ್
ಈ ಪೈಕಿ ದೀಪಕ್ ಚಹಾರ್, ಶಾರ್ದುಲ್ ಠಾಕೂರ್, ಟಿ.ದೇಶಪಾಂಡೆ ಮತ್ತು ಪತಿರಾಣರ ಮೇನ್ ಬೌಲರ್ಸ್. ಇವರಲ್ಲಿ ಮೂವರನ್ನ ಧೋನಿ ಪ್ಲೇಯಿಂಗ್ಗೆ ಪಿಕ್ ಮಾಡಬಹುದು. ಆದ್ರೆ ಸಿಎಸ್ಕೆ ಫಾಸ್ಟ್ ಬೌಲಿಂಗ್ ಲೈನ್ಅಪ್ನಲ್ಲಿ ಎಕ್ಸ್ಪೀರಿಯನ್ಸ್ ಬೌಲರ್ಸ್ಗಳ ಕೊರತೆ ಎದ್ದು ಕಾಣುತ್ತೆ. ಅಂಥಾ ಸೂಪರ್ ಸ್ಟಾರ್ ಬೌಲರ್ ಅಂತಾ ಯಾರಿಲ್ಲ. ಆದ್ರೆ ಇಲ್ಲಿ ಒಂದು ವಿಚಾರವನ್ನ ನೋಟ್ ಮಾಡಿಕೊಳ್ಳಲೇಬೇಕು. 2023ರ ಟೂರ್ನಿ ವೇಳೆಯೂ ಅಷ್ಟೇ, ಸಿಎಸ್ಕೆ ಬೌಲಿಂಗ್ ಡಿಪಾರ್ಟ್ಮೆಂಟ್ ಅಷ್ಟೊಂದು ಸ್ಟ್ರಾಂಗ್ ಆಗಿರಲಿಲ್ಲ. ಕೆಲ ಮೇನ್ ಬೌಲರ್ಸ್ಗಳೇ ಇಂಜ್ಯೂರಿಗೊಳಗಾಗಿದ್ರು. ಆದ್ರೂ ಟ್ರೋಫಿ ಗೆದ್ದಿದ್ದು ಅವರೇ. ಯಂಗ್ ಬೌಲರ್ಸ್ಗಳನ್ನ ಹೇಗೆ ಆಡಿಸಬೇಕು ಅನ್ನೋದು ಧೋನಿಗೆ ಚೆನ್ನಾಗಿಯೇ ಗೊತ್ತಿದೆ ಬಿಡಿ.
ಮುಂಬೈ ಇಂಡಿಯನ್ಸ್ ಪೇಸ್ ಬೌಲರ್ಸ್!
ರೋಹಿತ್ ಶರ್ಮಾ ನೇತೃತ್ವದ ಅಲ್ಲ.. ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ಸಿಯ ಮುಂಬೈ ಇಂಡಿಯನ್ಸ್ನಲ್ಲಿ ಒಟ್ಟು ಏಳು ಮಂದಿ ಫಾಸ್ಟ್ ಬೌಲರ್ಸ್‌ಗಳಿದ್ದಾರೆ. ಮುಂಬೈ ಸ್ಟ್ಯಾಂಡರ್ಡ್ ಬೌಲಿಂಗ್ ಲೈನ್ಅಪ್ನ್ನೇ ಹೊಂದಿದೆ.
MI ಫಾಸ್ಟ್ ಬೌಲರ್ಸ್
ಜಸ್ಪ್ರಿತ್ ಬುಮ್ರಾ, ಜೇಸನ್ ಬ್ಯಾರೆಂಡಾಫ್, ಅರ್ಜುನ್ ತೆಂಡೂಲ್ಕರ್, ಆಕಾಶ್ ಮಧ್ವಾಲ್, ಜೆರಾಲ್ಡ್ ಕೊಯೆಡ್ಜಿ, ದಿಲ್ಷಾನ್ ಮಧುಶಂಕಾ, ನುವಾನ್ ತುಷಾರ
ಈ ಪೈಕಿ ಜಸ್ಪ್ರಿತ್ ಬುಮ್ರಾ, ಜೆರಾಲ್ಡ್ ಕೊಯೆಡ್ಜಿ ಮತ್ತು ನುವಾನ್ ತುಷಾರ ಈ ಮೂವರು ಬೌಲರ್ಸ್ ಪ್ಲೇಯಿಂಗ್-11ನಲ್ಲಿರಬಹುದು. ಓವರ್ ಆಲ್ ಆಗಿ ಮುಂಬೈನ ಫಾಸ್ಟ್ ಬೌಲಿಂಗ್ ಯುನಿಟ್ ಕೂಡ ಸ್ಟ್ರಾಂಗ್ ಆಗಿದೆ. ಅದ್ರಲ್ಲೂ ಬುಮ್ರಾ ಅಂತೂ ಮುಂಬೈ ಇಂಡಿಯನ್ಸ್ನ ಮೇನ್ ಪಿಲ್ಲರ್. ಮ್ಯಾಚ್ ಟರ್ನ್ ಮಾಡೋಕೆ ಜಸ್ಪ್ರಿತ್ ಬುಮ್ರಾ ಎಸೆಯೋ ನಾಲ್ಕು ಓವರ್ಗಳೇ ಸಾಕು.
ಇನ್ನು ರಾಜಸ್ಥಾನ್ ರಾಯಲ್ಸ್ನಲ್ಲಿ ಒಟ್ಟು ಏಳು ಮಂದಿ ಪಾಸ್ಟ್ ಬೌಲರ್ಸ್‌ಗಳಿದ್ದಾರೆ. ಈ ಏಳೂ ಮಂದಿಯೂ ಕ್ವಾಲಿಟಿ ಬೌಲರ್ಸ್ಗಳೇ.
RR ಫಾಸ್ಟ್ ಬೌಲರ್ಸ್
ಅವೇಶ್ ಖಾನ್, ಪ್ರಸಿಧ್ ಕೃಷ್ಣ, ಕುಲ್ದೀಪ್ ಸೇನ್, ನವ್ದೀಪ್ ಸೈನಿ, ಸಂದೀಪ್ ಶರ್ಮಾ, ಟ್ರೆಂಟ್ ಬೋಲ್ಟ್, ನಾಂಡ್ರೆ ಬರ್ಗರ್
ರಾಜಸ್ಥಾನ್ ರಾಯಲ್ಸ್ನಲ್ಲಿ ಇಂಡಿಯನ್ ಪೇಸ್ ಬೌಲರ್ಸ್ಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದ್ರೆ ಪ್ಲೇಯಿಂಗ್-11ನಲ್ಲಿ ಟ್ರೆಂಟ್ ಬೋಲ್ಟ್, ಅವೇಶ್ ಖಾನ್ ಮತ್ತು ಸಂದೀಪ್ ಶರ್ಮಾರನ್ನ ಆಡಿಸ್ಬಹುದು. ಜೊತೆಗೆ ಸಾಕಷ್ಟು ಬ್ಯಾಕ್ಅಪ್ ಬೌಲರ್ಸ್ಗಳು ಕೂಡ ರಾಜಸ್ಥಾನ್ ರಾಯಲ್ಸ್ ಬಳಿ ಇದೆ.
ನೆಕ್ಸ್ಟ್ ದೆಹಲಿ ಕ್ಯಾಪಿಟಲ್ಸ್ ಫಾಸ್ಟ್ ಬೌಲಿಂಗ್ ಲೈನ್ಅಪ್ ವಿಚಾರಕ್ಕೆ ಬರೋದಾದ್ರೆ, ದೆಹಲಿ ಕ್ಯಾಪಿಟಲ್ಸ್ನಲ್ಲೂ ಒಟ್ಟು ಏಳು ಮಂದಿ ಪೇಸ್ ಬೌಲರ್ಸ್ ಇದ್ದಾರೆ.
DC ಫಾಸ್ಟ್ ಬೌಲರ್ಸ್
ಲುಂಗಿ ಎಂಗಿಡಿ, ಖಲೀಲ್ ಅಹ್ಮದ್, ಇಶಾಂತ್ ಶರ್ಮಾ, ಮುಕೇಶ್ ಕುಮಾರ್, ಅನ್ರಿಚ್ ನೋಟ್ಜೆ, ರಸೀಕ್ ಸಲಾಂ, ಜಾಯ್ ರಿಚರ್ಡ್ಸನ್
ಈ ಪೈಕಿ ಅನ್ರಿಚ್ ನೋಟ್ಜೆ ಮತ್ತು ಜಾಯ್ ರಿಚರ್ಡ್ಸನ್ ಈ ಬಾರಿಯ ಐಪಿಎಲ್‌ನಲ್ಲಿ ಆಡಿಯೇ ಆಡ್ತಾರೆ ಅನ್ನೋದು ಗ್ಯಾರಂಟಿ ಇಲ್ಲ. ಯಾಕಂದ್ರೆ ಇಬ್ಬರೂ ಇಂಜ್ಯೂರಿಗೊಳಗಾಗಿದ್ದಾರೆ. ಒಂದು ವೇಳೆ ಅನ್ರಿಚ್ ನೋಟ್ಜೆ ಆಡೋದಿಲ್ಲ ಅನ್ನೋದಾದ್ರೆ ದೆಹಲಿ ಕ್ಯಾಪಿಟಲ್ಸ್ ದೊಡ್ಡ ಹೊಡೆತ ಬೀಳೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಓವರ್ ಆಲ್ ಆಗಿ ಮುಂಬೈ, ರಾಜಸ್ಥಾನ್, ಸನ್ರೈಸರ್ಸ್ ಹೈದರಾಬಾದ್ಗೆ ಕಂಪೇರ್ ಮಾಡಿದ್ರೆ ದೆಹಲಿ ಕ್ಯಾಪಿಟಲ್ಸ್ನ ಬೌಲಿಂಗ್ ಲೈನ್ಅಪ್ ಡಲ್ ಆಗಿದೆ.
ಪಂಜಾಬ್ ಫಾಸ್ಟ್ ಬೌಲರ್ಸ್
ಕಗಿಸೋ ರಬಾಡ, ನ್ಯಾಥನ್ ಎಲ್ಲಿಸ್, ಅರ್ಶ್ದೀಪ್ ಸಿಂಗ್, ವಿದ್ವತ್ ಕಾವೇರಪ್ಪ, ಹರ್ಷಲ್ ಪಟೇಲ್
ಈ ಪೈಕಿ ಕಗಿಸೋ ರಬಾಡ, ಹರ್ಷಲ್ ಪಟೇಲ್ ಮತ್ತು ಅರ್ಶ್ದೀಪ್ ಸಿಂಗ್ ಪ್ಲೇಯಿಂಗ್-11ನಲ್ಲಿ ಆಡಬಹುದು. ಈ ಮೂವರು ಕೂಡ ಟಾಪ್ ಬೌಲರ್ಸ್ಗಳೇ ಬಿಡಿ. ಆದ್ರೆ ಪಂಜಾಬ್ನಲ್ಲಿ ಬ್ಯಾಕ್ಅಪ್ ಬೌಲರ್ಸ್ಗಳ ಸಂಖ್ಯೆ ಮಾತ್ರ ಕಡಿಮೆ ಇದೆ.
GT ಫಾಸ್ಟ್ ಬೌಲರ್ಸ್
ಮೋಹಿತ್ ಶರ್ಮಾ, ದರ್ಶನ್ ನಲ್ಕಂಡೆ, ಉಮೇಶ್ ಯಾದವ್, ಸುಶಾಂತ್ ಮಿಶ್ರಾ, ಕಾರ್ತಿಕ್ ತ್ಯಾಗಿ, ಜೋಶ್ ಲಿಟ್ಲ್, ಸ್ಪೆನ್ಸರ್ ಜಾನ್ಸನ್
ಇಲ್ಲಿ ಮೈನಸ್ ಆಗಿರೋದು ಯಾರು ಹೇಳಿ..ಮೊಹಮ್ಮದ್ ಶಮಿ. ಕಾಲಿನ ಸರ್ಜರಿ ಆಗಿರೋ ಕಾರಣ ಶಮಿ ಈ ಬಾರಿಯ ಐಪಿಎಲ್‌ನಲ್ಲಿ ಆಡ್ತಾ ಇಲ್ಲ. ಇದು ನಿಜಕ್ಕೂ ಗುಜರಾತ್ ಟೈಟಾನ್ಸ್ಗೆ ಬಿಗ್ ಡ್ಯಾಮೇಜ್.
ಇನ್ನು ಕೆಎಲ್ ರಾಹುಲ್ ಕ್ಯಾಪ್ಟನ್ಸಿಯ ಲಕ್ನೋ ಸೂಪರ್ ಜಯಾಂಟ್ಸ್ನಲ್ಲಿ ಒಟ್ಟು ಎಂಟು ಮಂದಿ ಫಾಸ್ಟ್ ಬೌಲರ್ಸ್ ಇದ್ದಾರೆ.
LSG ಫಾಸ್ಟ್ ಬೌಲರ್ಸ್
ಮೋಸಿನ್ ಖಾನ್, ಮಾರ್ಕ್ ವುಡ್, ಯಶ್ ಠಾಕೂರ್, ನವೀನ್-ಉಲ್-ಹಕ್, ಮಯಾಂಕ್ ಯಾದವ್, ಯುದುವೀರ್ ಸಿಂಗ್, ಶಿವಮ್ ಮಾವಿ, ಅರ್ಶದ್ ಖಾನ್
ಈ ಪೈಕಿ ಮಾರ್ಕ್ ವುಡ್, ಮೋಸಿನ್ ಖಾನ್ ಮತ್ತು ಶಿವಮ್ ಮಾವಿ ಪ್ಲೇಯಿಂಗ್-11 ನಲ್ಲಿರಬಹುದು.
ರಾಯಲ್ ಚಾಲೆಂಜರ್ಸ್ ಬೆಂಗಳೂರು.. ನಮ್ಮ ಆರ್ಸಿಬಿಯಲ್ಲೂ ಒಟ್ಟು ಎಂಟು ಮಂದಿ ಫಾಸ್ಟ್ ಬೌಲರ್ಸ್‌ಗಳಿದ್ದಾರೆ.
RCB ಫಾಸ್ಟ್ ಬೌಲರ್ಸ್
ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ರೀಸೆ ಟೋಪ್ಲಿ, ವ್ಯಾಶಕ್ ವಿಜಯ್ಕುಮಾರ್, ರಾಜನ್ ಕುಮಾರ್, ಅಲ್ಜಾರಿ ಜೋಸೆಫ್, ಲಾಕಿ ಫರ್ಗ್ಯೂಸನ್, ಯಶ್ ದಯಾಳ್
ಈ ಪೈಕಿ ಆಕಾಶ್ ದೀಪ್ ಮತ್ತು ಯಶ್ ದಯಾಳ್ ಸದ್ಯ ನಡೆದಿರೋ ಡೊಮೆಸ್ಟಿಕ್ ಕ್ರಿಕೆಟ್ ಟೂರ್ನಿಗಳಲ್ಲಿ ತುಂಬಾ ಚೆನ್ನಾಗಿ ಪರ್ಫಾಮ್ ಮಾಡಿದ್ದಾರೆ. ಅದ್ರಲ್ಲೂ ಆಕಾಶ್ ದೀಪ್ ಅಂತೂ ಇಂಗ್ಲೆಂಡ್ ವಿರುದ್ಧದ ಸೀರಿಸ್ನಲ್ಲಿ ಟೀಂ ಇಂಡಿಯಾಗೆ ಡೆಬ್ಯೂ ಮಾಡಿದ್ದಾರೆ. ಫಸ್ಟ್ ಇನ್ನಿಂಗ್ಸ್ನಲ್ಲೇ ಮೂರು ವಿಕೆಟ್ ಪಡೆದಿದ್ರು. ಟಾಪ್ ಕ್ಲಾಸ್ ಬೌಲಿಂಗ್ ಮಾಡಿದ್ರು. ಆರ್ಸಿಬಿ ಪಾಲಿಗೆ ಆಕಾಶ್ ದೀಪ್ ದೊಡ್ಡ ಸ್ಟ್ರೆಂತ್ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಇನ್ನು ಆರ್ಸಿಇಬಿ ಪ್ಲೇಯಿಂಗ್-11ನಲ್ಲಿ ಆರಂಭದಲ್ಲಿ ಮೊಹಮ್ಮದ್ ಸಿರಾಜ್, ಅಲ್ಜಾರಿ ಜೋಸೆಫ್ ಮತ್ತು ಆಕಾಶ್ ದೀಪ್ ಮೂಲಕ ಅಟ್ಯಾಕ್ ಮಾಡಬಹುದು. ಇಲ್ಲಿ ಓವರ್ ಆಲ್ ಆಗಿ ಉಳಿದ ಒಂಭತ್ತು ಟೀಮ್ಗಳನ್ನ ಕೂಡ ನೋಡುವಾಗ ಆರ್ಸಿಬಿ ಬೌಲಿಂಗ್ ಲೈನ್ಅಪ್, ಎಸ್ಪೆಷಲಿ ಪೇಸ್ ಬೌಲಿಂಗ್ ಅಷ್ಟೊಂದು ವೀಕ್ ಅಂತಾ ಅನ್ನಿಸೋದಿಲ್ಲ. ಆಕಾಶ್ ದೀಪ್ ಮತ್ತು ಯಶ್ ದಯಾಳ್ ಒಳ್ಳೆಯ ಫಾರ್ಮ್ನಲ್ಲಿರೋದ್ರಿಂದ ಅದು ಆರ್ಸಿಬಿಗೆ ಪ್ಲಸ್ ಪಾಯಿಂಟ್ ಆಗಬಹುದು.
ಓವರ್ಆಲ್ ಆಗಿ 10 ಟೀಮ್ಗಳನ್ನ ತಗೊಂಡು ಹೇಳೋದಾದ್ರೆ, ಸ್ಟ್ರಾಂಗೆಸ್ಟ್ ಫಾಸ್ಟ್ ಬೌಲಿಂಗ್ ಯುನಿಟ್ ಮುಂಬೈ ಇಂಡಿಯನ್ಸ್, ಗುಜರಾತ್ ಟೈಟಾನ್ಸ್, ಹೈರಾಬಾದ್ ಸನ್ರೈಸರ್ಸ್ ಹಾಗೆಯೇ ಆರ್ಸಿಬಿಯನ್ನ ಕೂಡ ಇನ್ಕ್ಲೂಡ್ ಮಾಡಬಹುದು.