ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಟಿ20 3ನೇ ಪಂದ್ಯ – ಜೊಹಾನ್ಸ್‌ಬರ್ಗ್ ಪಿಚ್ ಹೇಗಿದೆ?

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಟಿ20 3ನೇ ಪಂದ್ಯ – ಜೊಹಾನ್ಸ್‌ಬರ್ಗ್ ಪಿಚ್ ಹೇಗಿದೆ?

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಟಿ20 ಪಂದ್ಯಗಳ ಸರಣಿಯ ಮೂರನೇ ಮತ್ತು ನಿರ್ಣಾಯಕ ಪಂದ್ಯ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಕ್ರೀಡಾಂಗಣದಲ್ಲಿ ಇಂದು ನಡೆಯಲಿದೆ. ಜೊಹಾನ್ಸ್​ಬರ್ಗ್ ಪಿಚ್ ಹೇಗಿದೆ? ಯಾರಿಗೆ ಫೇವರ್ ಆಗಿದೆ? ಇಲ್ಲೂ ಮಳೆಯಾಗುವ ಸಾಧ್ಯತೆ ಇದೆಯಾ? ಎಂಬ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ನಾಲ್ಕು ಆಟಗಾರರು.. ಒಂದೇ ಫ್ರಾಂಚೈಸಿ – ಇವರನ್ನು ತಂಡ ಬಿಟ್ಟು ಕೊಟ್ಟಿಲ್ಲ ಯಾಕೆ ಅನ್ನೋದು ನಿಮಗೆ ಗೊತ್ತಾ?

ಜೊಹಾನ್ಸ್​​ಬರ್ಗ್​ ಬ್ಯಾಟಿಂಗ್ ಮಾಡುವವರಿಗೆ ಹೇಳಿ ಮಾಡಿಸಿದ  ಪಿಚ್. ಆಲ್​ಮೋಸ್ಟ್ ಎಲ್ಲಾ ಮ್ಯಾಚ್​ನಲ್ಲೂ ಇಲ್ಲಿ ರನ್ ಸುರಿಮಳೆಯೇ ಆಗುತ್ತೆ. ಟಿ-20 ಆಗಿರಲಿ, ಏಕದಿನ ಸರಣಿಯೇ ಆಗಿರಲಿ, ಬ್ಯಾಟ್ಸ್​​ಮನ್​ಗಳಿಗೆ ಹೇಳಿ ಮಾಡಿಸಿದಂಥಾ ಪಿಚ್. ಇಲ್ಲಿ ಟಿ-20ಯಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದಾಗ ಎವರೇಜ್ ಸ್ಕೋರ್ ಅಂದ್ರೆ 173. ಇದು ಎವರೇಜ್ ಸ್ಕೋರ್. ಹೀಗಾಗಿ 200 ಪ್ಲಸ್ ಸ್ಕೋರ್ ಬರೋದು ಗ್ಯಾರಂಟಿ. ಫಸ್ಟ್ ಮಾಡಿದ ಟೀಂ ಮ್ಯಾಚ್​ ಗೆಲ್ಲಬೇಕು ಅನ್ನೋದಾದ್ರೆ 200 ಪ್ಲಸ್ ಸ್ಕೋರ್ ಮಾಡಲೇಬೇಕಾಗುತ್ತೆ. ಯಾಕಂದ್ರೆ 200 ಪ್ಲಸ್ ಸ್ಕೋರ್​ ಇದ್ರೂ ಈ ಪಿಚ್​ನಲ್ಲಿ ಸುಲಭವಾಗಿ ಚೇಸಿಂಗ್ ಮಾಡಿ ವಿನ್ ಆಗಬಹುದು. ಇದುವರೆಗೆ ಇಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ ಟೀಮ್ 15 ಮ್ಯಾಚ್​ಗಳನ್ನ ಗೆದ್ದಿದೆ. ಚೇಸಿಂಗ್ ಮಾಡಿದ ತಂಡ 17 ಮ್ಯಾಚ್​ಗಳನ್ನ ಗೆದ್ದಿದೆ. ಸೋ ಫಸ್ಟ್ ಬ್ಯಾಟಿಂಗ್ ಮಾಡಿದ ಟೀಮ್ ಎಷ್ಟು ಸಾಧ್ಯವಾಗುತ್ತೋ ಅಷ್ಟು ದೊಡ್ಡ ಮೊತ್ತದ ಸ್ಕೋರ್​ ಗಳಿಸಲೇಬೇಕಾಗುತ್ತೆ. ಸ್ಕೋರ್​ ಬೋರ್ಡ್​​ನಲ್ಲಿ 210-220 ರನ್​ ಮಾಡಿದ್ರೂ ಕೂಡ ಇಲ್ಲಿ ಚೇಸ್ ಮಾಡಬಹುದು. ಹೀಗಾಗಿ ಬ್ಯಾಟ್ಸ್​​ಮನ್​ಗಳು ಮತ್ತು ಬೌಲರ್ಸ್​​ಗಳ ಮೇಲೆ ಸೇಮ್ ಅಮೌಂಟ್ ಆಫ್ ರೆಸ್ಪಾನ್ಸಿಬಿಲಿಟಿ ಇದೆ. ಪ್ರೆಷರ್ ಕೂಡ ಇದೆ. ಇನ್ನು  ಟಾಸ್​ ಗೆದ್ರೆ ಮೊದಲು ಬೌಲಿಂಗ್ ಚೂಸ್ ಮಾಡುವ ಸಾಧ್ಯತೆ ಹೆಚ್ಚಿದೆ.

ಇನ್ನು ಸೌತ್​​ ಆಫ್ರಿಕಾ ಸೀರಿಸ್​​ನಲ್ಲಿ ಪಿಚ್ ರಿಪೋರ್ಟ್​​ನಷ್ಟೇ ವೆದರ್ ರಿಪೋರ್ಟ್ ಕೂಡ ಇಂಪಾರ್ಟೆಂಟ್ ಆಗಿದೆ. ಮೊದಲು ಎರಡೂ ಮ್ಯಾಚ್​​ ವೇಳೆಯೂ ಮಳೆಯಾಗಿತ್ತು. 2ನೇ ಮ್ಯಾಚ್​​ನಲ್ಲಿ ಡಕ್​ವರ್ತ್ ಲೂಯಿಸ್ ರೂಲ್ಸ್​​ನಿಂದ ಟೀಂ ಇಂಡಿಯಾಗೆ ಹೊಡೆತ ಕೂಡ ಬಿದ್ದಿದೆ. ಸದ್ಯ ಜೊಹಾನ್ಸ್​​ಬರ್ಗ್ ವೆದರ್ ರಿಪೋರ್ಟ್ ಪ್ರಕಾರ, ಮಳೆಯಾಗುವ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ಫುಲ್​ 40 ಓವರ್ಸ್​ ಮ್ಯಾಚ್​​ ನಡೀಬಹುದೋ ಏನೊ.

Sulekha