ಗುವಾಹಟಿ ಸ್ಟೇಡಿಯಂನ ಪಿಚ್ ಹೇಗಿದೆ? – ಟಾಸ್ ಗೆದ್ದವರು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದು ಸೂಕ್ತವೇ?

ಗುವಾಹಟಿ ಸ್ಟೇಡಿಯಂನ ಪಿಚ್ ಹೇಗಿದೆ? – ಟಾಸ್ ಗೆದ್ದವರು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದು ಸೂಕ್ತವೇ?

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ 2-0 ಮುನ್ನಡೆ ಸಾಧಿಸಿರುವ ಟೀಮ್ ಇಂಡಿಯಾ ಇದೀಗ ಮೂರನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ನವೆಂಬರ್ 28 ರಂದು ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೂರನೇ ಟಿ20 ಆಯೋಜಿಸಲಾಗಿದೆ. ಹಾಗಿದ್ರೆ 3ನೇ ಟಿ-20 ಮ್ಯಾಚ್​ ನಡೀತಿರೋ ಗುವಾಹಟಿ ಸ್ಟೇಡಿಯಂನ ಪಿಚ್ ಹೇಗಿದೆ? ಎಂಬ ಬಗ್ಗೆ ವಿವರ ಇಲ್ಲಿದೆ.

ಇದನ್ನೂ ಓದಿ: ಹಣಕ್ಕಿಂತ ನಿಯತ್ತು ಮುಖ್ಯ ಎಂದ ವಿರಾಟ್ ಕೊಹ್ಲಿ ಆರ್‌ಸಿಬಿ ತೊರೆಯಲು ಮುಂದಾಗಿದ್ದು ಏಕೆ?

ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೂರನೇ ಟಿ20 ಪಂದ್ಯ ನಡೆಯಲಿದೆ. ವೆದರ್ ಚಾನೆಲ್‌ನ ಇತ್ತೀಚಿನ ಅಪ್‌ಡೇಟ್ ಪ್ರಕಾರ, ನವೆಂಬರ್ 28 ರಂದು ಗುವಾಹಟಿಯಲ್ಲಿ ಯಾವುದೇ ಮಳೆ ಸೂಚನೆ ಇಲ್ಲ. ಪಂದ್ಯವು 7 ಗಂಟೆಗೆ ಪ್ರಾರಂಭವಾಗುತ್ತಿದ್ದಂತೆ, ಗರಿಷ್ಠ ತಾಪಮಾನವು 21 ಡಿಗ್ರಿ ಸೆಲ್ಸಿಯಸ್ ತಲುಪುವ ನಿರೀಕ್ಷೆಯಿದೆ. ಕ್ರಮೇಣ ಪಂದ್ಯ ಅಂತ್ಯದ ವೇಳೆಗೆ 19 ಡಿಗ್ರಿ C ಗೆ ಇಳಿಯುತ್ತದೆ. ಇನ್ನು ಪಿಚ್​ ರಿಪೋರ್ಟ್ ಬಗ್ಗೆ ಹೇಳುವುದಾದರೆ, ಗುವಾಹಟಿ ಗ್ರೌಂಡ್​ನದ್ದು ತುಂಬಾ ಸ್ಲೋ ನೇಚರ್ ಪಿಚ್. ಆದ್ರೆ ಇದು ಬ್ಯಾಟ್ಸ್​​ಮನ್​ಗಳಿಗೆ ಹೆಚ್ಚು ಫೇವರ್ ಆಗಿದೆ. ಯಾಕೆಂದರೆ, ಗುವಾಹಟಿಯಲ್ಲಿ ನಡೆದ ಲಾಸ್ಟ್ ಟಿ-20 ಇಂಟರ್​ನ್ಯಾಷನಲ್​ ಮ್ಯಾಚ್​​ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡೂ ಟೀಂಗಳು 200ಕ್ಕೂ ಹೆಚ್ಚು ರನ್​ಗಳನ್ನ ಹೊಡೆದಿದ್ದವು. ಆ ಒಂದೇ ಮ್ಯಾಚ್​ನಲ್ಲೀ ಒಟ್ಟು 400ಕ್ಕೂ ಅಧಿಕ ಸ್ಕೋರ್ ಬಂದಿತ್ತು. ಇನ್ನು ಲೋವೆಸ್ಟ್ ಸ್ಕೋರ್ ಅಂದ್ರೆ 2017ರಲ್ಲಿ ಆಸ್ಟ್ರೇಲಿಯಾ ಇದೇ ಪಿಚ್​ನಲ್ಲಿ ಕೇವಲ 118 ರನ್ ಗಳಿಸಿತ್ತು.

ಈ ಗ್ರೌಂಡ್​ನಲ್ಲಿ ಇದುವರೆಗೆ 6 ಅಂತಾರಾಷ್ಟ್ರೀಯ ಟಿ-20 ಮ್ಯಾಚ್​ಗಳಾಗಿವೆ. ಈ ಪೈಕಿ 3 ಮ್ಯಾಚ್​ನ್ನ ಫಸ್ಟ್ ಬ್ಯಾಟಿಂಗ್ ಮಾಡಿದ ಟೀಂ ಗೆದ್ದುಕೊಂಡಿದೆ. ಇನ್ನು 2 ಮ್ಯಾಚ್​​ಗಳನ್ನ ಚೇಸಿಂಗ್ ಮಾಡಿದ ತಂಡ ಗೆದ್ದುಕೊಂಡಿದೆ. ಹೀಗಾಗಿ ಟಾಸ್​ ಹೇಳಿಕೊಳ್ಳುವಷ್ಟೇನೂ ಮ್ಯಾಟರ್ ಆಗೋದಿಲ್ಲ. ಆದರೂ, ಮೊದಲು ಬ್ಯಾಟಿಂಗ್ ಮಾಡುವ ಮತ್ತು ಚೇಸಿಂಗ್ ಮಾಡುವ ತಂಡಗಳ ಗೆಲುವು-ಸೋಲಿನ ದಾಖಲೆಯು 1-1 ರಲ್ಲಿ ಸಮಬಲವಿದೆ. ಆಟ ಶುರುವಾದ ನಂತರ ಇಬ್ಬನಿಯ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೀಗಾಗಿ ಈ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದು ಉತ್ತಮ ಆಯ್ಕೆ.

 

Sulekha