ಭಾರತ – ಪಾಕ್ ರೋಚಕ ಕದನಕ್ಕೆ ಕೌಂಟ್‌ಡೌನ್ – ಅಹ್ಮದಾಬಾದ್‌ನ ಪಿಚ್ ಹೇಗಿದೆ? ಇಲ್ಲಿದೆ ಡಿಟೇಲ್ಸ್

ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 1 ಲಕ್ಷ 32,000 ಜನರ ಮುಂದೆ ಬದ್ಧ ವೈರಿಗಳ ಮಧ್ಯೆ ಜಿದ್ದಾಜಿದ್ದಿನ ಪಂದ್ಯ ನಡೆಯಲಿದೆ. ಕೇವಲ ಭಾರತ ಮಾತ್ರವಲ್ಲ ಇಡೀ ಜಗತ್ತೇ ಈ ಮ್ಯಾಚ್ನ್ನ ನೋಡಲು ಕಾಯುತ್ತಿದೆ. ಹಾಗಿದ್ದರೆ, ಅಹ್ಮದಾಬಾದ್‌ನ ಪಿಚ್ ಹೇಗಿದೆ? ಯಾರಿಗೆ ಫೇವರ್ ಆಗಿದೆ? ಟೀಂ ಇಂಡಿಯಾದ ಪ್ಲೇಯಿಂಗ್-11 ಹೇಗಿರಬಹುದು? ಎಂಬ ವಿವರ ಇಲ್ಲಿದೆ.
ಇದನ್ನೂ ಓದಿ: ಪಾಕ್ ವಿರುದ್ಧ ಕಣಕ್ಕಿಳಿಯಲು ಶುಭ್‌ಮನ್ ಗಿಲ್ ಪ್ರ್ಯಾಕ್ಟೀಸ್ – ಇಶಾನ್ ಕಿಶನ್ ಮತ್ತು ಗಿಲ್ ನಡುವೆ ಆಡೋದ್ಯಾರು?
ಭಾರತ-ಪಾಕ್ ಮ್ಯಾಚ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಬಾರಿಯ ವರ್ಲ್ಡ್ಕಪ್ನಲ್ಲಿ ಇದುವರೆಗೆ ನಡೆದ ಬಹುತೇಕ ಪಂದ್ಯಗಳಲ್ಲಿ ಬ್ಯಾಟ್ಸ್ಮನ್ಗಳೇ ಡಾಮಿನೇಟ್ ಮಾಡಿದ್ದರು. ಆದರೆ, ನರೇಂದ್ರ ಮೋದಿ ಸ್ಟೇಡಿಯಂ ಫುಲ್ ಬ್ಯಾಲೆನ್ಸ್ಟ್ ಪಿಚ್ ಆಗಿದೆ. ಇಲ್ಲಿ ಬ್ಯಾಟ್ಸ್ಮನ್ ಮತ್ತು ಬೌಲರ್ಗಳಿಗೆ ಕೂಡ ಅಡ್ವಾಂಟೇಜ್ ಇದೆ. ಆರಂಭದಲ್ಲಿ ಪೇಸ್ ಬೌಲರ್ಗಳಿಗೆ ಎಕ್ಸ್ಟ್ರಾ ಸ್ವಿಂಗ್ ಮತ್ತು ಬೌನ್ಸ್ ಸಿಗಬಹುದು. ಮಿಡ್ಲ್ ಓವರ್ಗಳಲ್ಲಿ ಸ್ಪಿನ್ನರ್ಗಳ ಪಾತ್ರ ಕೂಡ ತುಂಬಾ ಮಹತ್ವದ್ದಾಗಿದೆ. ಕೇವಲ ಬೌಲರ್ಸ್ಗಳಿಗಷ್ಟೇ ಅಲ್ಲ, ಬ್ಯಾಟ್ಸ್ಮನ್ಗಳಿಗೂ ಈ ಪಿಚ್ ಸಹಕಾರಿಯಾಗಲಿದೆ. ಇದು ಪರ್ಫೆಕ್ಟ್ ಬ್ಯಾಲೆನ್ಸ್ಟ್ ಪಿಚ್ ಆಗಿದ್ದು. ಬ್ಯಾಟ್ಸ್ಮನ್ಗಳು ಮತ್ತು ಬೌಲರ್ಗಳ ಮಧ್ಯೆ 50-50 ಕ್ಲ್ಯಾಶ್ನ್ನ ನಿರೀಕ್ಷಿಸಬಹುದು.
ಇನ್ನು ಭಾರತ-ಪಾಕ್ ಮ್ಯಾಚ್ನಲ್ಲೂ ಕೂಡ ಟಾಸ್ ಕೂಡಾ ನಿರ್ಣಾಯಕವಾಗಲಿದೆ. ಟಾಸ್ ವಿನ್ ಆದ ಟೀಂ ಮೊದಲು ಬೌಲಿಂಗ್ ಮಾಡುವ ಸಾಧ್ಯತೆ ಹೆಚ್ಚಿದೆ. ಸೆಕೆಂಡ್ ಇನ್ನಿಂಗ್ಸ್ ವೇಳೆ ಹನಿ ಬೀಳೋದ್ರಿಂದ ಡ್ಯೂ ಫ್ಯಾಕ್ಟರ್ ಒಂದಷ್ಟು ಸಮಸ್ಯೆಯಾಗುತ್ತೆ. ಬೌಲರ್ಸ್ಗಳಿಗೆ ಬಾಲ್ನ್ನ ಗ್ರಿಪ್ ಮಾಡಿಕೊಳ್ಳೋದು, ಸ್ವಿಂಗ್, ಸ್ಪಿನ್ ಮಾಡೋದು ದೊಡ್ಡ ಚಾಲೆಂಜ್ ಆಗಬಹುದು. ಹೀಗಾಗಿ ಟಾಸ್ ಗೆದ್ದ ಟೀಂ ಚೇಸಿಂಗ್ ಆಯ್ಕೆ ಮಾಡಿಕೊಳ್ಳಬಹುದು. ಅಕ್ಟೋಬರ್ 5ರಂದು ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ಮಧ್ಯೆ ನರೇಂದ್ರ ಮೋದಿ ಸ್ಟೇಡಿಯಂನಲ್ಲೇ ವರ್ಲ್ಡ್ಕಪ್ನ ಓಪನಿಂಗ್ ಮ್ಯಾಚ್ ನಡೆದಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 282/9 ರನ್ ಗಳಿಸಿತ್ತು. ಆದ್ರೆ ನ್ಯೂಜಿಲ್ಯಾಂಡ್ ಚೇಸ್ ಮಾಡಿ ಆ ಪಂದ್ಯವನ್ನ ಗೆದ್ದುಕೊಂಡಿತ್ತು. ಹೀಗಾಗಿ ಟಾಸ್ ಗೆದ್ದವರು ಮೊದಲು ಬೌಲಿಂಗ್ ಮಾಡುವ ಸಾಧ್ಯತೆ ಹೆಚ್ಚಿದೆ. ಇನ್ನು ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ತಂಡದ ಜೊತೆಗೆ ಅಹ್ಮದಾಬಾದ್ಗೆ ಬಂದಿಳಿಯುತ್ತಲೇ ನೇರವಾಗಿ ಸ್ಟೇಡಿಯಂಗೆ ತೆರಳಿ ಪಿಚ್ ಪರಿಶೀಲನೆ ನಡೆಸಿದ್ದಾರೆ. ಕ್ಯುರೇಟರ್ ಜೊತೆಗೆ ಮಾತುಕತೆ ನಡೆಸಿ ಪಿಚ್ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.