ಎರಡನೇ ಟಿ20 ಪಂದ್ಯಕ್ಕೆ ಟೀಮ್ ಇಂಡಿಯಾ ರೆಡಿ – ತಿರುವನಂತಪುರಂನಲ್ಲಿ ಭಾರತದ ದಾಖಲೆ ಹೇಗಿದೆ?

ಭಾರತ vs ಆಸ್ಟ್ರೇಲಿಯಾ.. ಫಸ್ಟ್ ಟಿ-20 ಮ್ಯಾಚ್ಲ್ಲಿ ಗೆಲುವು ಕಂಡಿದ್ದಾಯ್ತು. ಸೂರ್ಯಕುಮಾರ್ ಯಾದವ್ ಮತ್ತು ರಿಂಕು ಸಿಂಗ್ ಥ್ರಿಲ್ಲಿಂಗ್ ಬ್ಯಾಟಿಂಗ್ನಿಂದಾಗಿ ಟೀಂ ಇಂಡಿಯಾ ಪಂದ್ಯವನ್ನ ಗೆದ್ದಿತ್ತು. ಇದೀಗ ಸೆಕೆಂಡ್ ಮ್ಯಾಚ್.. ಕೇರಳದ ತಿರುವನಂತಪುರಂನಲ್ಲಿ ಮತ್ತೊಮ್ಮೆ ಭಾರತ-ಆಸ್ಟ್ರೇಲಿಯಾ ಮುಖಾಮುಖಿಯಾಗ್ತಿವೆ. ಸೆಕೆಂಡ್ ಟಿ-20 ಪಂದ್ಯ ನಡೆಯುವುದು ಎಲ್ಲಿ. ಪಿಚ್ ಹೇಗಿದೆ? ಎಂಬ ಬಗ್ಗೆ ವಿವರ ಇಲ್ಲಿದೆ.
ಇದನ್ನೂ ಓದಿ: ವಿಶ್ವಕಪ್ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಟೌಟ್..! – ವೈರಲ್ ಫೋಟೋ ಹಿಂದಿರುವ ಅಸಲಿಯತ್ತೇನು?
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯ ಎರಡನೇ ಪಂದ್ಯ ತಿರುವನಂತಪುರಂನಲ್ಲಿ ನಡೆಯಲಿದೆ. ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. ಆದರೆ, ಎರಡನೇ ಪಂದ್ಯದಲ್ಲಿ ಕೆಲವೊಂದು ರೋಚಕತೆ ಇರಲಿದೆ. ಆಸ್ಟ್ರೇಲಿಯಾದ ಇಬ್ಬರು ಘಟಾನುಘಟಿಗಳು 2ನೇ ಪಂದ್ಯದಲ್ಲಿ ಅಖಾಡಕ್ಕಿಳಿಯುವ ಸಾಧ್ಯತೆ ಇದೆ. ಟ್ರಾವಿಸ್ ಹೆಡ್ ಮತ್ತು ಗ್ಲೇನ್ ಮ್ಯಾಕ್ಸ್ವೆಲ್ ಅಖಾಡಕ್ಕಿಳಿಯಲಿದ್ದಾರೆ. ಆಸ್ಟ್ರೇಲಿಯಾದ ಬ್ಯಾಟಿಂಗ್ ಲೈನ್ಅಪ್ ತುಂಬಾ ಸ್ಟ್ರಾಂಗ್ ಆಗಿದೆ.
ಇನ್ನು ಪಿಚ್ ರಿಪೋರ್ಟ್ಗೆ ಬರೋದಾದ್ರೆ.. ತಿರುವನಂತಪುರಂನ ಗ್ರೀನ್ಫೀಲ್ಡ್ ಸ್ಟೇಡಿಯಂನ ಗ್ರೌಂಡ್ ಹೆಸರಿಗೆ ತಕ್ಕಂತೆ ಅತ್ಯಂತ ಹಸಿರಾಗಿದೆ. ಸಾಮಾನ್ಯವಾಗಿ ಇಂಡಿಯನ್ ಗ್ರೌಂಡ್ಗಳಲ್ಲಿ ಹುಲ್ಲು ಇಷ್ಟೊಂದು ಹಸಿರಾಗಿರೋದಿಲ್ಲ. ಆದ್ರೆ, ಗ್ರೀನ್ಲ್ಯಾಂಡ್ ಗ್ರೌಂಡ್ನ್ನ ನೋಡೋವಾಗ ಇಂಗ್ಲೆಂಡ್, ನ್ಯೂಜಿಲ್ಯಾಂಡ್ನ ಗ್ರೌಂಡ್ಗಳಂತೆ ಕಾಣ್ಸುತ್ತೆ. ಇದೇನು ಹೈಸ್ಕೋರಿಂಗ್ ಗ್ರೌಂಡ್ ಆಗಿಲ್ಲ. ಇದುವರೆಗೆ ಇಲ್ಲಿ ನಾಲ್ಕು ಇಂಟರ್ನ್ಯಾಷನಲ್ ಮ್ಯಾಚ್ಗಳಾಗಿದ್ದು, ಎಲ್ಲವೂ ಲೋ ಸ್ಕೋರ್ ಮ್ಯಾಚ್ಗಳೇ. ತಿರುವನಂತಪುರಂನಲ್ಲಿ ಒಟ್ಟು ಮೂರು ಅಂತಾರಾಷ್ಟ್ರೀಯ ಟಿ-20 ಮ್ಯಾಚ್ಗಳಾಗಿವೆ. ಎವ್ರೇಜ್ ಸ್ಕೋರ್ ಅಂದ್ರೆ 114 ರನ್. ಇಲ್ಲಿ ಬೌಲರ್ಸ್ಗಳಿಗೆ ಹೆಚ್ಚು ಅಡ್ವಾಂಟೇಜ್ ಇದೆ. ಎಸ್ಪೆಷಲಿ ಸೀಮರ್ಸ್ ಮತ್ತು ಸ್ಪಿನ್ನರ್ಸ್ಗಳಿಗೆ. ಬಾಲ್ ಮೂವ್ಮೆಂಟ್ ಹೆಚ್ಚಿರುತ್ತೆ. ಸ್ವಿಂಗ್.. ಸ್ಪಿನ್ ಚೆನ್ನಾಗಿ ಆಗುತ್ತೆ. ಚೇಸಿಂಗ್ ಮಾಡಿದ ತಂಡ ಎರಡು ಬಾರಿ ಗೆದ್ದಿದೆ. ಹೀಗಾಗಿ ಇಲ್ಲೂ ಟಾಸ್ ವಿನ್ ಆದ್ರೆ ಫಸ್ಟ್ ಬೌಲಿಂಗ್ ಮಾಡುವ ಸಾಧ್ಯತೆ ಹೆಚ್ಚಿದೆ. ಬ್ಯಾಟಿಂಗ್ ಚೂಸ್ ಮಾಡಿದ ಮಾತ್ರಕ್ಕೆ ಗೆಲ್ಲೋಕೆ ಸಾಧ್ಯವಿಲ್ಲ ಅಂತೇನಲ್ಲ. ಇಲ್ಲಿ ಆಗಿರೋದು ಮೂರು ಇಂಟರ್ನ್ಯಾಷಲ್ ಟಿ-20 ಮ್ಯಾಚ್ಗಳು. ಹೀಗಾಗಿ ಅಟ್ದಿ ಮೂಮೆಂಟ್ ಹೆಚ್ಚೇನೂ ಹೇಳೋಕೆ ಆಗಲ್ಲ. ಇನ್ನೊಂದು ಸಂಗತಿ ಏನಂದ್ರೆ ನೈಟ್ ಮ್ಯಾಚ್ ನಡೆಯೋದು. ಒಂದು ವೇಳೆ ಡೇ & ನೈಟ್ ವಂಡೇ ಮ್ಯಾಚ್ ಆಗ್ತಿದ್ರೆ. ಸೆಕೆಂಡ್ ಇನ್ನಿಂಗ್ಸ್ನಲ್ಲಿ ಬೌಲಿಂಗ್ ಮಾಡೋ ತಂಡಕ್ಕೆ ಡ್ಯೂ ಪ್ರಾಬ್ಲಂ ಆಗಬಹುದು ಅಂತಾ ಹೇಳ್ಬಹುದು. ಆದ್ರೆ, ಇದು ನೈಟ್ ಮ್ಯಾಚ್ ಆಗಿರೋದ್ರಿಂದ ಎರಡೂ ಟೀಂಗಳು ಡ್ಯೂವನ್ನ ಎದುರಿಸಬೇಕಾಗುತ್ತೆ. ಹೀಗಾಗಿ ಫಸ್ಟ್ ಬ್ಯಾಟಿಂಗ್ OR ಬೌಲಿಂಗ್..ಯಾರು ಬೇಕಾದ್ರೂ ಗೆಲ್ಲಬಹುದು.
ಇನ್ನು ಟೀಂ ಇಂಡಿಯಾದ ಪ್ಲೇಯಿಂಗ್-11 ಹೇಗಿರಬಹುದು? ಸಂಭಾವ್ಯ ತಂಡದಲ್ಲಿ ಯಾರೆಲ್ಲಾ ಇರಬಹುದು ಅಂತಾ ನೋಡೋದಾದರೆ,
ಟೀಂ ಇಂಡಿಯಾ PLAYING-11?
- ಯಶಸ್ವಿ ಜೈಸ್ವಾಲ್
- ರುತುರಾಜ್ ಗಾಯಕ್ವಾಡ್
- ಇಶಾನ್ ಕಿಶನ್
- ಸೂರ್ಯಕುಮಾರ್ ಯಾದವ್
- ತಿಲಕ್ ವರ್ಮಾ
- ರಿಂಕು ಸಿಂಗ್
- ವಾಷಿಂಗ್ಟನ್ ಸುಂದರ್
- ಅಕ್ಸರ್ ಪಟೇಲ್
- ರವಿ ಬಿಷ್ಣೋಯಿ
- ಅರ್ಶ್ದೀಪ್ ಸಿಂಗ್
- ಪ್ರಸಿಧ್ ಕೃಷ್ಣ
ಇದು ಆಸ್ಟ್ರೇಲಿಯಾ ವಿರುದ್ಧದ ಸೆಕೆಂಡ್ ಮ್ಯಾಚ್ಗೆ ಟೀಂ ಇಂಡಿಯಾದ ಸಂಭಾವ್ಯ ತಂಡ. ಸೂರ್ಯಕುಮಾರ್ ಕ್ಯಾಪ್ಟನ್ಸಿಯಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಈ ಸೀರಿಸ್ನ್ನ ಆಡ್ತಾ ಇದೆ. ಫಸ್ಟ್ ಮ್ಯಾಚ್ನಲ್ಲಿ ಮೂವರು ಬ್ಯಾಟ್ಸ್ಮನ್ಗಳು ಟೀಂಗೆ ನೆರವಾಗಿದ್ರು. ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಮತ್ತು ರಿಂಕು ಸಿಂಗ್. ಆದ್ರೆ ಈ ಮ್ಯಾಚ್ನಲ್ಲಿ ಉಳಿದವರ ಬ್ಯಾಟ್ನಿಂದಲೂ ರನ್ ಬರಬೇಕಾದ ಅವಶ್ಯಕತೆ ಇದೆ. ಅಫ್ಕೋಸ್ ಮತ್ತೊಮ್ಮೆ ಸೆಂಟರ್ ಆಫ್ ಅಟ್ರಾಕ್ಷನ್ ಆಗಿರೋದು ರಿಂಕು ಸಿಂಗ್. ಈ ಬಾರಿ ಫಸ್ಟ್ ಬ್ಯಾಟಿಂಗ್ ಮೂಲಕ ಫಿನಿಶ್ ಮಾಡ್ತಾರಾ? ಇಲ್ಲಾ ಚೇಸಿಂಗ್ನಲ್ಲಿ ಫಿನಿಷ್ ಮಾಡ್ತಾರಾ ನೋಡ್ಬೇಕು.