ಭಾರತದ ಮೊದಲ ಅಂಡರ್ ವಾಟರ್ ಮೆಟ್ರೋ ಮಾರ್ಗ ಹೇಗಿದೆ? – ಇದರಲ್ಲಿ ಪ್ರಯಾಣ ಮಾಡೊದು ಎಷ್ಟು ಸೇಫ್?

ಭಾರತದ ಮೊದಲ ಅಂಡರ್ ವಾಟರ್ ಮೆಟ್ರೋ ಮಾರ್ಗ ಹೇಗಿದೆ? – ಇದರಲ್ಲಿ ಪ್ರಯಾಣ ಮಾಡೊದು ಎಷ್ಟು ಸೇಫ್?

ಇದುವರೆಗೂ ನಾವೆಲ್ಲಾ ಅಮೆರಿಕ, ಜಪಾನ್​ನಂಥಾ ರಾಷ್ಟ್ರಗಳಲ್ಲಿ ನೀರಿನ ಒಳಗೆ, ಸಮುದ್ರದ ಅಡಿಯಲ್ಲೂ ರೈಲುಗಳು ಸಂಚಾರ ಮಾಡೋದನ್ನ ನೋಡಿದ್ವಿ. ಆದ್ರೀಗ ಅದೇ ಅಂಡರ್ ವಾಟರ್ ರೈಲ್ವೆ ಸಿಸ್ಟಮ್ ಭಾರತದಲ್ಲೂ ನಿರ್ಮಾಣಗೊಂಡಿದೆ. ಪ್ರಧಾನಿ ಮೋದಿ ಭಾರತದ ಫಸ್ಟ್ ಅಂಡರ್​ ವಾಟರ್ ಮೆಟ್ರೋ ಮಾರ್ಗವನ್ನ ಕೊಲ್ಕತ್ತಾದಲ್ಲಿ ಉದ್ಘಾಟನೆ ಮಾಡಿದ್ದಾರೆ. ಅಷ್ಟಕ್ಕೂ ಅಂಡರ್​ ವಾಟರ್ ಮೆಟ್ರೋ ಮಾರ್ಗ ಹೇಗಿದೆ? ಇದನ್ನ ನಿರ್ಮಾಣ ಮಾಡಿರೋದು ಹೇಗೆ? ನೀರಿನಾಳದಲ್ಲಿ ಎಷ್ಟು ದೂರ ಈ ಮಾರ್ಗವಿದೆ? ಇದ್ರ ನಿರ್ಮಾಣ ಮಾಡೋವಾಗ ಎದುರಾದ ಚಾಲೆಂಜ್​​ಗಳು ಎಂಥಾದ್ದು? ಹಾಗೆಯೇ ಈ ಅಂಡರ್​ವಾಟರ್ ಟನಲ್​ಗಳಲ್ಲಿ ಪ್ರಯಾಣ ಮಾಡೊದು ಎಷ್ಟು ಸೇಫ್? ಇವೆಲ್ಲದರ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಭಾರತದ ಮೊದಲ ನೀರೊಳಗಿನ ಮೆಟ್ರೋವನ್ನು ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

ಪಶ್ಚಿಮ ಬಂಗಾಳ ರಾಜಧಾನಿ ಕೊಲ್ಕತ್ತಾದ ಬಳಿ ಹೌರಾ ಅನ್ನೋ ಇನ್ನೊಂದು ನಗರ ಇದೆ. ಆದ್ರೆ ಕೊಲ್ಕತ್ತಾದಲ್ಲಿರೋ ಅದೆಷ್ಟೋ ಮಂದಿ ಉದ್ಯೋಗಕ್ಕೆ ಅಂತಾ ನಿತ್ಯವೂ ಹೌರಾಗೆ ಪ್ರಯಾಣಿಸ್ತಾರೆ. ಹೌರಾದಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ಜನರು ಕೊಲ್ಕತ್ತಾಗೆ ಬರ್ತಾರೆ. ಆದ್ರೆ ಕೊಲ್ಕತ್ತಾ ಮತ್ತು ಹೌರಾದ ಮಧ್ಯೆ ಒಂದು ನದಿ ಹರಿಯುತ್ತೆ. ಹೂಗ್ಲಿ ಹೆಸರಿನ ಈ ನದಿ ಎರಡೂ ನಗರಗಳನ್ನ ಡಿವೈಡ್ ಮಾಡಿದೆ. ಆದ್ರೆ ಕೊಲ್ಕತ್ತಾ ಮತ್ತು ಹೌರಾವನ್ನ ಮೆಟ್ರೋ ಮೂಲಕ ಕನೆಕ್ಟ್ ಮಾಡೋದು ಅಷ್ಟೊಂದು ಸುಲಭ ಆಗಿರಲಿಲ್ಲ. ಯಾಕಂದ್ರೆ ನದಿಯ ಕೆಳಗಿನಿಂದಲೇ ಎರಡು ನಗರಗಳ ಮಧ್ಯೆ ಟನಲ್ ನಿರ್ಮಿಸಬೇಕಿತ್ತು. ಈಸ್ಟ್ – ವೆಸ್ಟ್ ಕಾರಿಡಾರ್ ಹೆಸರಲ್ಲಿ ಈ ಮೆಟ್ರೋ ಮಾರ್ಗವನ್ನ ನಿರ್ಮಾಣ ಮಾಡಲಾಗಿದ್ದು, ಇದ್ರ ಮಧ್ಯೆ ಒಟ್ಟು 12 ಸ್ಟೇಷನ್​ಗಳು ಬರ್ತಾವೆ. ಓವರ್​ಆಲ್ 16.5 ಕೊಲೋ ಮೀಟರ್ ಉದ್ದದ ರೈಲ್ವೆ ಮಾರ್ಗ ಇದು. ಆದ್ರೆ ಹೌರಾ ನದಿಯಲ್ಲಿ ಅಂಡರ್​​ ವಾಟರ್ ರೈಲು ನಿರ್ಮಿಸೋದಕ್ಕೆ ಒಂದಷ್ಟು ಚಾಲೆಂಜ್​ಗಳು ಎದುರಾಗಿತ್ತು. 2019ರಲ್ಲಿ ಹೌರಾ ನದಿಗೆ ಎಂಟ್ರಿಯಾಗೋ ಮುನ್ನ ಕೊಲ್ಕತ್ತಾದ ಸೀಲ್ಡಾ ಎಂಬಲ್ಲಿ ಸುರಂಗ ಮಾಡ್ತಿದ್ದ ಸಂದರ್ಭದಲ್ಲಿ  ನೆಲದ ಅಡಿಯಲ್ಲಿ ಶೇಖರವಾಗಿದ್ದ ಗ್ರೌಂಡ್ ವಾಟರ್​ನ್ನ ಈ ಟನಲ್ ಬೋರಿಂಗ್ ಮಷಿನ್ ಕೊರೆದು ಬಿಡುತ್ತೆ. ಇದ್ರಿಂದ ಭಾರಿ ಪ್ರಮಾಣದಲ್ಲಿ ನೀರು ಸೋರಿಕೆಯಾಗುತ್ತೆ. ಹಾಗೆಯೇ ಕೆಲ ಕಟ್ಟಡಗಳು ಕೂಡ ಕುಸಿದಿತ್ತು. ನಂತರ ಆ ಭಾಗದಲ್ಲಿ ಟನಲ್ ನಿರ್ಮಾಣವನ್ನ ಕಂಪ್ಲೀಟ್ ಸ್ಟಾಪ್ ಮಾಡಲಾಗುತ್ತೆ. ನಂತರ ಇನ್ನೊಂದು ಮಾರ್ಗದಲ್ಲಿ ಎಲೆವೇಟೆಡ್ ಕಾರಿಡಾರ್​ನ್ನ ನಿರ್ಮಿಸಿ ಹೌರಾ ನದಿಗೆ ಮೆಟ್ರೋ ಮಾರ್ಗವನ್ನ ಕನೆಕ್ಟ್ ಮಾಡಲಾಗುತ್ತೆ. ಹೌರಾ ನದಿಯಿಂದ ಅಂಡರ್​ ವಾಟರ್ ಟನಲ್​ನ್ನ ನಿರ್ಮಿಸಲಾಗುತ್ತೆ. ನದಿಯ ಸುಮಾರು 30 ಮೀಟರ್​ ಕೆಳ ಭಾಗದಲ್ಲಿ ಮೆಟ್ರೋ ರೈಲಿಗೆ ಟನಲ್​ ನಿರ್ಮಾಣವಾಗಿದೆ. ನದಿಯ ಅಡಿಯಲ್ಲಿ ಸುಮಾರು 520 ಮೀಟರ್​ ದೂರ ಈ ಮೆಟ್ರೋ ಟನಲ್ ಇದೆ. ಇಲ್ಲಿ ಇನ್ನೊಂದು ವಿಚಾರವನ್ನ ಹೇಳಲೇಬೇಕು. ನದಿಯ ಕೆಳಗೆ ಟನಲ್ ನಿರ್ಮಾಣ ಅಂದು ಕೂಡಲೇ ಇಲ್ಲೇನು ನೀರು ಈ ಟನಲ್​​ನ್ನ ಆವರಿಸಿಲ್ಲ. ಮೆಟ್ರೋ ಮಾರ್ಗವನ್ನ ನದಿಯ ಸೀರು ಆವರಿಸಿರೋದಿಲ್ಲ. ನದಿಯ ಕೆಳ ಭಾಗದಲ್ಲಿರೋ ನೆಲದೊಳಗೆ ಈ ಸುರಂಗವನ್ನ ಕೊರೆದಿರೋದು. ನದಿಯ ಮೇಲ್ಬಾಗಕ್ಕೂ ನದಿಯ ಕೆಳಗಿರೋ ನೆಲ ಭಾಗಕ್ಕೂ 13 ಮೀಟರ್​ ಡಿಸ್ಟೆನ್ಸ್ ಇದೆ. ಅಂದ್ರೆ ಇದ್ರ ಮಧ್ಯೆ ಮೆಟ್ರೋ ಟನಲ್ ಇಲ್ಲ. ನದಿಯ ಕೆಳಗಿರೋ ನೆಲದಿಂದ 13 ಮೀಟರ್ ಕೆಳ ಭಾಗದಲ್ಲಿ ಈ ಸುರಂಗವನ್ನ ಕೊರೆಯಲಾಗಿದೆ. ಆ ಟನಲ್​ನೊಳಗೆಯೇ ಸುಮಾರು 80 ಕಿಲೋ ಮೀಟರ್​ ವೇಗದಲ್ಲಿ ಈಗ ಮೆಟ್ರೋ ಸಂಚರಿಸ್ತಾ ಇವೆ. ಕೇವಲ 45 ಸೆಕೆಂಡುಗಳಲ್ಲೇ..ಜಸ್ಟ್ 45 ಸೆಕೆಂಡ್ಸ್​ನಲ್ಲಿ ಹೌರಾ ನದಿಯನ್ನ ಮೆಟ್ರೋ ರೈಲು ಕ್ರಾಸ್ ಆಗುತ್ತೆ.

ನದಿಯೊಳಗಿರೋ ಈ ಸುರಂಗದ ಗಾತ್ರ 6.1 ಮೀಟರ್​​ನಷ್ಟಿದೆ. ಸೇಮ್​ ಸೈಜ್​​ನ ಒಟ್ಟು ಎರಡು ಟನಲ್​ಗಳನ್ನ ಹೂಗ್ಲಿ ನದಿಯ ಕೆಳಗೆ ನಿರ್ಮಿಸಲಾಗಿದೆ. ಅಂದ್ರೆ ಟೂ ವೇ ಟನಲ್. ಒಂದು ಟನಲ್​​​ನಲ್ಲಿ ರೈಲು ಹೋಗುತ್ತೆ. ಇನ್ನೊಂದು ಟನಲ್​ನಲ್ಲಿ ರೈಲು ಬರುತ್ತೆ. ಆ್ಯಕ್ಚುವಲಿ ಮೂರು ಟನಲ್​ಗಳಿವೆ. ಆದ್ರೆ ಎರಡು ಟನಲ್​ಗಳಲ್ಲಿ ಮಾತ್ರ ರೈಲುಗಳು ಓಡಾಡುತ್ತೆ. ಮತ್ತೊಂದು ಟನಲ್ ಯಾಕೆ ಅನ್ನೋದನ್ನ ಆಮೇಲೆ ಎಕ್ಸ್​​ಪ್ಲೈನ್ ಮಾಡ್ತೀನಿ. ಇನ್ನು  ಜರ್ಮನಿಯಿಂದ ತರಿಸಿದ್ದ ಟನಲ್ ಬೋರಿಂಗ್ ಮಷಿನ್ ಮೂಲವೇ ಎರಡು ಸುರಂಗಗಳನ್ನ ನಿರ್ಮಿಸಲಾಗಿದೆ. ಈ ಪೈಕಿ ಒಂದು ಮಷಿನ್​ನ ಹೆಸರು ಪ್ರೇರಣಾ. ಇನ್ನೊಂದು ರಚನಾ ಹೆಸರಿನ ಮಷಿನ್. ಕೇವಲ 66 ದಿನಗಳಲ್ಲೇ ಎರಡೂ ಟನಲ್​ಗಳ ನಿರ್ಮಾಣ ಕಾರ್ಯ ಕಂಪ್ಲೀಟ್ ಆಗಿತ್ತು. ಆದ್ರೆ ಈ ಸುರಂಗ ನಿರ್ಮಾಣಕ್ಕೆ ಇದ್ದಂತಾ ಇನ್ನೊಂದು ದೊಡ್ಡ ಚಾಲೆಂಜ್ ಏನಂದ್ರೆ ನದಿಯ ವಾಟರ್​ ಲೀಕೇಜ್. ಆಗ್ಲೇ ಹೇಳಿದ ಹಾಗೆ ಮೇಲೆ ನದಿಯಿದೆ. ನದಿಯ ಕೆಳಗಿರುವಂಥಾ ನೆಲದ ಒಳಗೆ ಈ ಸುರಂಗ ಕೊರೆದಿದ್ರು. ನದಿಯ ಕೆಳಗಿನ ನೆಲ ಭಾಗಕ್ಕೂ, ನೆಲದೊಳಗಿರೋ ಸುರಂಗಕ್ಕೂ 13 ಮೀಟರ್ ಡಿಸ್ಟೆನ್ಸ್ ಇದೆ. ಹೀಗಾಗಿ ಸುರಂಗ ಕೊರೆಯುವಾಗ ಮೇಲಿನಿಂದ ಮಣ್ಣು ಕುಸಿಯಿತು ಅಂದ್ರೆ ನದಿಯ ನೀರು ಸೀದಾ ಟನಲ್​ ಮೇಲೆಯೇ ಲೀಕ್ ಆಗ್ತಿತ್ತು. ಹೀಗಾಗಿ ನದಿಯ ಕೆಳಗಿರೋ ಅಂದ್ರೆ ಇಲ್ಲಿ ಟನಲ್​ ಮೇಲ್ಬಾಗದಲ್ಲಿರೋ ಮಣ್ಣನ್ನ ಮೊದಲೇ ಪರೀಕ್ಷೆಗೊಳಪಡಿಸಲಾಗಿತ್ತು. ಸುರಂಗ ಕೊರೆಯುವಷ್ಟು ಮಣ್ಣು ಗಟ್ಟಿಯಾಗಿದ್ಯಾ ಅನ್ನೋದನ್ನ ಚೆಕ್ ಮಾಡಲಾಗಿತ್ತು. ಹಾಗೆಯೇ ಸುರಂಗದ ಮೇಲ್ಬಾದಲ್ಲಿ ಯಾವುದೇ ಕಾರಣಕ್ಕೂ ವಾಟರ್ ಲೀಕೇಜ್ ಆಗದಂತೆ ಕೆಲ ಸ್ಪೆಷಲ್​ ಮೆಟೀರಿಯಲ್​​ಗಳನ್ನ ಕೂಡ ಬಳಸಲಾಗಿದೆ. ಹೀಗಾಗಿ ಈ ಮೆಟ್ರೋ ಟನಲ್​​ನಲ್ಲಿ ಪ್ರಯಾಣಿಸೋಕೆ ಯಾವುದೇ ಭಯ ಬೇಡ ಅಂತಾ ಅಧಿಕಾರಿಗಳು, ತಜ್ಞರು ಸ್ಪಷ್ಟಪಡಿಸಿದ್ದಾರೆ.

ಈ ಟನಲ್ ನಿರ್ಮಾಣ ವಿಚಾರವಾಗಿ ಇನ್ನೊಂದು ಸಂಗತಿಯನ್ನ ಕೂಡ ಹೇಳಲೇಬೇಕಾಗುತ್ತೆ. ಹೌರಾ ನದಿಗೆ ಟನಲ್ ಎಂಟ್ರಿಯಾಗೋ ಭಾಗದಲ್ಲಿ, ಅಂದ್ರೆ ನದಿ ಸಮೀಪ ಹಳೇ ಕಾಲದ ಸಾಕಷ್ಟು ಐತಿಹಾಸಿಕ ಕಟ್ಟಡಗಳಿವೆ. ಸುರಂಗ ನಿರ್ಮಾಣದಿಂದ ಈ ಕಟ್ಟಡಗಳಿಗೆ ಯಾವುದೇ ಹಾನಿಯಾಗದಂತೆಯೂ ಸಾಕಷ್ಟು ಎಚ್ಚರಿಕೆ ವಹಿಸಲಾಗಿತ್ತು. ಹೀಗಾಗಿ ಟನಲ್ ನಿರ್ಮಾಣಕ್ಕೆ ಸುಮಾರು ವರ್ಷಕ್ಕೂ ಅಧಿಕ ಸಮಯ ಬೇಕಾಯ್ತು. 8,574 ಕೋಟಿ ರೂಪಾಯಿ ವೆಚ್ಚದಲ್ಲಿ ಅಂಡರ್​​ವಾಟರ್ ಮೆಟ್ರೋ ಮಾರ್ಗ ನಿರ್ಮಾಣಗೊಂಡಿದೆ. ಈ ಹಿಂದೆ ಕೊಲ್ಕತ್ತಾದ ಸಿಯಾಲ್ದಾದಿಂದ ಹೌರಾಗೆ ರಸ್ತೆ ಮಾರ್ಗವಾಗಿ ಸುಮಾರು ಒಂದು ಗಂಟೆ ಬೇಕಾಗ್ತಿತ್ತು. ಈಗ ಅಂಡರ್​​ವಾಟರ್​ ಮೆಟ್ರೋ ಮೂಲಕ ಕೇವಲ ಕಾಲು ಗಂಟೆಯಲ್ಲೇ ಪ್ರಯಾಣಿಸಬಹುದು. ಆ್ಯಕ್ಚುವಲಿ 2004ರಲ್ಲೇ ಈ ಅಂಡರ್​​ವಾಟರ್ ಮೆಟ್ರೋ ಟನಲ್​ಗೆ ಪ್ಲ್ಯಾನ್ ಮಾಡಲಾಗಿತ್ತು. ಆದ್ರೆ ಮೀನುಗಾರರಿಗೆ ಸಮಸ್ಯೆಯಾಗುತ್ತೆ, ಹೀಗೆ ವಿವಿಧ ಕಾರಣಗಳಿಂದಾಗಿ ಪ್ರಾಜೆಕ್ಟ್ ಡಿಲೇ ಆಗಿತ್ತು. 20 ವರ್ಷಗಳ ಬಳಿಕ ಕೊನೆಯೂ ಯೋಜನೆ ಕಂಪ್ಲೀಟ್ ಆಗಿದ್ದು, ಕೊಲ್ಕತ್ತಾ ಮತ್ತು ಹೌರಾದ ಜನರಿಗೆ ಸಾಕಷ್ಟು ನೆರವಾಗ್ತಿದೆ.

ಆದ್ರೂ ಇಂಥಾ ಅಂಡರ್​​ವಾಟರ್ ಟನಲ್​ಗಳಲ್ಲಿ ಸಂಚಾರ ಮಾಡೋದು ಎಷ್ಟು ಸೇಫ್ ಅನ್ನೋ ಪ್ರಶ್ನೆ ಕಾಡುತ್ತೆ. ಏನಾದ್ರೂ ಟೆಕ್ನಿಕಪ್ ಪ್ರಾಬ್ಲಂ ಆದ್ರೆ ಕಥೆಯೇನು? ಪ್ರಯಾಣಿಕರು ಸುರಂಗದೊಳಗೆ ಟ್ರ್ಯಾಪ್ ಆದ್ರೆ ಏನು ಕಥೆ? ಎಷ್ಟೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡು ಬೆಂಕಿ ಅವಘಡವಾದ್ರೆ. ಅಥವಾ ವಾಟರ್​ ಲೀಕೇಜ್ ಆದ್ರೆ ಏನ್ಮಾಡೋಕೆ ಅನ್ನೋ ಪ್ರಶ್ನೆ ನಿಮ್ಮಲ್ಲೂ ಬಂದಿರಬಹುದು. ಇದಕ್ಕೆ ಸಂಬಂಧಿಸಿಯೂ ಒಂದಷ್ಟು ಮಾಹಿತಿ ಕೊಡ್ತೀನಿ. ಈ ಅಂಡರ್​ವಾಟರ್ ರೈಲ್ವೆ ಸಿಸ್ಟಮ್​ ಭಾರತಕ್ಕೆ ಹೊಸತಾಗಿರಬಹುದು. ಆದ್ರೆ ಜಗತ್ತಿನ ಹಲವು ದೇಶಗಳಲ್ಲಿ ನದಿಗಳಿಗೆ ಮಾತ್ರವಲ್ಲ ಸಮುದ್ರದಲ್ಲೂ ಅಂಡರ್​ ವಾಟರ್​​ ರೈಲ್ವೆ ಸಿಸ್ಟಮ್ ಇದೆ. ಆಗಲೇ ಹೇಳಿದ ಟನಲ್​ ನಿರ್ಮಾಣಕ್ಕೂ ಮುನ್ನ ಆ ಜಾಗದ ಭೌಗೋಳಿಕ ಸ್ಥಿತಿಯನ್ನ ಸಂಪೂರ್ಣವಾಗಿ ಅಧ್ಯಯನ ಮಾಡಲಾಗುತ್ತೆ. ಇಲ್ಲಿ ಟನಲ್ ನಿರ್ಮಿಸೋದು ಸೇಫ್ ಅಂದಮೇಲಷ್ಟೇ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಾಗುತ್ತೆ. ಟನಲ್​ ಮತ್ತು ಮೆಟ್ರೋ ರೈಲಿನ ಭಾರವನ್ನ ತಡೆದುಕೊಳ್ಳುವಷ್ಟು ಸ್ಟ್ರಾಂಗ್​ ಇದ್ರೆ ಮಾತ್ರ ನೀರಿನಾಳದಲ್ಲಿ ಟನಲ್ ನಿರ್ಮಿಸಲಾಗುತ್ತೆ. ಒಂದು ಟನಲ್ ರೈಲು ಹೋಗೋದಿಕ್ಕೆ.. ಇನ್ನೋದು ಟನಲ್ ರೈಲು ಬರೋದಿಕ್ಕೆ ಹೀಗೆ ಎರಡು ಟನ್​ಗಳಿರುತ್ತೆ. ಇವೆರಡರ ಮಧ್ಯದಲ್ಲಿ ಇನ್ನೊಂದು ಟನಲ್ ಕೂಡ ಇರುತ್ತೆ. ಅದನ್ನ ಸರ್ವಿಸ್ ಟನಲ್ ಅಥವಾ ಪೈಲಟ್ ಟನಲ್ ಅಂತಾ ಕರೀತಾರೆ. ಈ ಸರ್ವಿಸ್ ಟನಲ್ ಮೂಲಕ ರೈಲುಗಳು ಸಂಚರಿಸೋ ಎರಡೂ ಟನಲ್​ಗಳನ್ನ ಕನೆಕ್ಟ್ ಮಾಡಲಾಗಿರುತ್ತೆ. ಅಂದ್ರೆ ಜನರು ಓಡಾಡೋಕೆ ಪ್ಯಾಸೇಜ್ ಇರುತ್ತೆ. ಟನಲ್​ಗಳು ಕಿಲೋ ಮೀಟರ್​ಗಳ ಉದ್ದ ಇದೆ ಅನ್ನೋದಾದ್ರೆ, ಕೊಲ್ಕತ್ತಾದ ಟನಲ್ 520 ಮೀಟರ್ ಉದ್ದ ಇದ್ಯಷ್ಟೇ. ಜಗತ್ತಿನಲ್ಲಿ ಇನ್ನೂ ಕೆಲ ಟನಲ್​ಗಳು ಕಿಲೋಮೀಟರ್​ಗಟ್ಟಲೆ ಉದ್ದ ಇವೆ. ಹೀಗಾಗಿ ಪ್ರತಿ 200 ಮೀಟರ್​​ ಅಥವಾ 400 ಮೀಟರ್​​ಗೊಮ್ಮೆ ಮೂರೂ ಟನಲ್​ಗಳನ್ನ ಕನೆಕ್ಟ್ ಮಾಡೋ ಪ್ಯಾಸೇಜ್ ನಿರ್ಮಿಸಲಾಗಿರುತ್ತೆ. ಇದ್ರಿಂದಾಗಿ ಎರಡೂ ಕಾರ್ನರ್​ಗಳಲ್ಲಿ ವೇಗವಾಗಿ ಹೋಗುವ ರೈಲುಗಳಿಂದ ಉಂಟಾಗುವ ಏರ್​​ಪ್ರೆಶರ್ ಈ ಪ್ಯಾಸೇಜ್​ಗಳ ಮೂಲಕ ಪಾಸ್ ಆಗುತ್ತೆ. ಆಗ ಟನಲ್​​ನೊಳಗೆ ಏರ್​ಪ್ರೆಶರ್ ಉಂಟಾಗೋದಿಲ್ಲ. ಇನ್ನು ಮಧ್ಯದಲ್ಲಿರೋ ಸರ್ವಿಸ್ ಟನಲ್​​​ ಮೂಲಕ ಫ್ರೆಶ್ ಏರ್​ ಎಂಟ್ರಿಯಾಗುತ್ತೆ. ಹಾಗೆಯೇ ಸಪ್ಲಿಮೆಂಟರಿ ವೆಂಟಿಲೇಶನ್ ಸ್ಟಿಸ್ಟಮ್ ಕೂಡ ಈ ಸರ್ವಿಸ್​​ ಟನಲ್​ನಲ್ಲಿರುತ್ತೆ.  ಎಮರ್ಜೆನ್ಸಿ ಸಂದರ್ಭದಲ್ಲಿ, ರೈಲಿನಿಂದ ಜನರನ್ನ ರಕ್ಷಿಸೋಕೆ ಈ ಸರ್ವಿಸ್ ಟನಲ್​​ನ್ನ ಬಳಸಲಾಗುತ್ತೆ. ಆ ಟನಲ್​​ನಲ್ಲಿ ಎಮರ್ಜೆನ್ಸಿ ಮತ್ತು ಮೇಂಟೇನೆನ್ಸ್​​ಗೆ ಅಂತಾನೆ ಸ್ಪೆಷಲ್ ವೆಹಿಕಲ್​ಗಳನ್ನ ನಿಯೋಜಿಸಲಾಗಿರುತ್ತೆ. ಅಗ್ನಿಶಾಮಕ ದಳ ಕೂಡ ಇರುತ್ತೆ. ಸರ್ವಿಸ್ ಟನಲ್​ನಲ್ಲಿ ನೀರನ್ನ ಕೂಡ ಸಂಗ್ರಹಿಸಿಟ್ಟಿರ್ತಾರೆ. ರೈಲ್ವೆ ಟನಲ್​ಗಳಿಗೆ ಬೆಂಕಿ ಹೊತ್ತಿಕೊಂಡ್ರೆ ಪಂಪಿಂಗ್​ ಮೂಲಕ ಬೆಂಕಿ ನಂದಿಸಲಾಗುತ್ತೆ. ಹಾಗೆಯೇ ಮೇಲಿನಿಂದ ವಾಟರ್ ಲೀಕೇಜ್ ಆದ್ರೂ ಪಂಪ್ ಮೂಲಕ ನೀರನ್ನ ಟನಲ್​ನಿಂದ ಹೊರಕ್ಕೆ ಹಾಕೋ ವ್ಯವಸ್ಥೆಯೂ ಇರುತ್ತೆ. ಇದಿಷ್ಟೇ ಅಲ್ಲ, ​​​ಮೂರೂ ಟನಲ್​ಗಳಲ್ಲಿ ಸ್ಪೆಷಲ್ ಕೂಲಿಂಗ್ ಸಿಸ್ಟಮ್ ಕೂಡ ಇರುತ್ತೆ. ಜೊತೆಗೆ ಅಗ್ನಿ ಅವಘಡವನ್ನ ಡಿಟೆಕ್ಟ್ ಮಾಡುವಂತಾ, ಕೂಡಲೇ ಮೆಸೇಜ್ ಪಾಸ್ ಮಾಡುವಂತಾ ಫೈರ್ ಸೆನ್ಸಾರ್ ಸಿಸ್ಟಮ್​​ನ್ನ ಕೂಡ ಫಿಕ್ಸ್ ಮಾಡಿರ್ತಾರೆ. ಒಂದು ವೇಳೆ ರೈಲುಗಳ ಸಂಚಾರ ಮಾಡೋ ಟನಲ್​ಗಳಲ್ಲಿ ಬೆಂಕಿ ಹೊತ್ತಿಕೊಳ್ತು ಅಂದ್ರೂ ರೆಸ್ಕ್ಯೂ ಮಾಡೋ ಸರ್ವಿಸ್ ಟನಲ್​ಗೆ ಯಾವುದೇ ಸಮಸ್ಯೆಯಾಗಲ್ಲ. ರೈಲುಗಳ ಟನಲ್​ನಿಂದ ಸರ್ವಿಸ್​ ಟನಲ್​ಗೆ ಬೆಂಕಿಯಷ್ಟೇ ಅಲ್ಲ, ಹೊಗೆಯೂ ಎಂಟ್ರಿಯಾಗದಂತೆ ವಿಶೇಷ ತಂತ್ರಜ್ಞಾನವನ್ನ ಅಳವಡಿಸಿರ್ತಾರೆ. ಹೀಗೆ ತುಂಬಾ ಕೇರ್​ಫುಲ್ ಆಗಿಯೇ ಅಂಡರ್​ ವಾಟರ್​ ರೈಲ್ವೆ ಸಿಸ್ಟಮ್​​ನ್ನ ನಿರ್ಮಿಸಲಾಗುತ್ತೆ. ಹೀಗಾಗಿ ನೀವು ಕೂಡ ಕೊಲ್ಕತ್ತಾಗೆ ಹೋದ್ರೆ ಯಾವುದೇ ಭಯ ಇಲ್ಲದೆ ಈ ಅಂಡರ್​ ವಾಟರ್​ ಮೆಟ್ರೋ ಟ್ರೈನ್​ನಲ್ಲಿ ಪ್ರಯಾಣಿಸಬಹುದು.

Sulekha