ನೀವು ಸಕ್ಕರೆ ಸೇವಿಸುತ್ತೀರಾ? – ಸಕ್ಕರೆಯಿಂದಲೇ ಬರುತ್ತೆ ಈ ಕಾಯಿಲೆ!‌

ನೀವು ಸಕ್ಕರೆ ಸೇವಿಸುತ್ತೀರಾ? – ಸಕ್ಕರೆಯಿಂದಲೇ ಬರುತ್ತೆ ಈ ಕಾಯಿಲೆ!‌

ಒಂದಾಲ್ಲಾ ಒಂದು ರೀತಿಯಲ್ಲಿ ನಾವು ಸಕ್ಕರೆಯನ್ನು ಸೇವಿಸುತ್ತಾ ಇರುತ್ತೇವೆ. ಕೆಲವರಂತೂ ಸಿಹಿ ತಿನ್ನದೆ ಮಲಗುವುದೇ ಇಲ್ಲ. ಆದರೆ ಅತಿಯಾದರೆ ಅಮೃತ ಕೂಡ ವಿಷ ಅನ್ನೋ ಹಾಗೆ ಸಕ್ಕರೆ ಅತಿಯಗಿ ಸೇವಿಸೋದು ಆರೋಗ್ಯಕ್ಕೆ ಒಳ್ಳೆದಲ್ಲ. ನೀವೂ ಅತಿಯಾಗಿ ಸಕ್ಕರೆ ತಿಂತಾ ಇದ್ರೆ ಈಗ್ಲೇ ಬಿಟ್ಟುಬಿಡಿ. ಇಲ್ಲ ಅಂದ್ರೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್!‌ – ಇನ್ಮುಂದೆ ನಿಲ್ದಾಣಗಳಲ್ಲಿ ಪಾರ್ಕಿಂಗ್‌ ಫ್ರೀ!

ತಜ್ಞರ ಪ್ರಕಾರ, ಪ್ರತಿದಿನ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಸೇವಿಸುವುದರಿಂದ ಬೊಜ್ಜು ಬರುವ ಅಪಾಯ ಹೆಚ್ಚಾಗುತ್ತದೆ. ಅದ್ರ ಜೊತೆಗೆ ಮಧುಮೇಹ ಸಮಸ್ಯೆ ಕೂಡ ಕಾಣಿಸಿಕೊಳ್ಳಬಹುದು. ಇನ್ನು ಹೃದಯದ ಆರೋಗ್ಯಕ್ಕೂ ಸಕ್ಕರೆ ತುಂಬಾ ಡೇಂಜರ್‌. ಇದಿಷ್ಟೇ ಅಲ್ಲದೇ, ಅತಿಯಾದ ಸಕ್ಕರೆ ಸೇವನೆ ಮಾಡೋದ್ರಿಂದ ಲಿವರ್‌ ಕೂಡ ಡ್ಯಾಮೇಜ್‌ ಆಗೋ ಸಾಧ್ಯತೆ ಇದೆ.

ಇನ್ನು ದಿನದಲ್ಲಿ ಎಷ್ಟು ಪ್ರಮಾಣದಲ್ಲಿ ಸಕ್ಕರೆ ಸೇವನೆ ಮಾಡ್ಬೇಕು ಅನ್ನೋ ಗೊಂದಲ ಅನೇಕರಿಗೆ ಇರುತ್ತೆ. ತಜ್ಞರ ಪ್ರಕಾರ, ಸಕ್ಕರೆಯು ಕೊಬ್ಬನ್ನು ಹೊಂದಿರದಿದ್ದರೂ, ಅದನ್ನು ಮಿತವಾಗಿ ಸೇವಿಸಬೇಕು ಎಂದು ಹೇಳ್ತಾರೆ. ಆಹಾರ ಮತ್ತು ಪಾನೀಯಗಳಲ್ಲಿ ಸೇರಿಸಲಾದ ಸಕ್ಕರೆಗಳಿಂದ ದೈನಂದಿನ ಕ್ಯಾಲೊರಿ ಸೇವನೆಯ ಪ್ರಮಾಣವು 5% ಮೀರಬಾರದು. ಮಕ್ಕಳಿಗೂ ಕೂಡ ಸಕ್ಕರೆ ತಿನಿಸು ಕೊಡೋದನ್ನ ಆದಷ್ಟು ಕಡಿಮೆ ಮಾಡಿ.

Shwetha M