ಒಂದು ದೇಶದಲ್ಲಿ ಎರಡೆರಡು ಕಾನೂನು ನಡೆಸಲು ಸಾಧ್ಯವಿಲ್ಲ – ಪ್ರಧಾನಿ ಮೋದಿ

ಒಂದು ದೇಶದಲ್ಲಿ ಎರಡೆರಡು ಕಾನೂನು ನಡೆಸಲು ಸಾಧ್ಯವಿಲ್ಲ – ಪ್ರಧಾನಿ ಮೋದಿ

ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಅವಶ್ಯಕತೆ ಇದೆ. ಹೇಗೆ ಒಂದು ಮನೆಯಲ್ಲಿ ಒಬ್ಬೊಬ್ಬರಿಗೆ ಒಂದು ಕಾನೂನು ಮಾಡೋಕೆ ಸಾಧ್ಯವಿಲ್ಲವೋ ಅದೇ ರೀತಿ ಒಂದು ದೇಶವನ್ನ ಎರಡೆರಡು ಕಾನೂನುಗಳಿಂದ ನಡೆಸೋಕೆ ಸಾಧ್ಯವಿಲ್ಲ ಅಂತಾ ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ‘ದೇಶದ ಜನರಿಗೆ ಮೆದುಳೇ ಇಲ್ಲ ಅಂತಾ ಭಾವಿಸಿದ್ದೀರಾ’ ?- ಆದಿಪುರುಷ್ ಚಿತ್ರ ತಂಡಕ್ಕೆ ಕೋರ್ಟ್ ತರಾಟೆ..!

ಎಲ್ಲರಿಗೂ ಸಮಾನ ಹಕ್ಕುಗಳು ಇರಬೇಕು ಅಂತಾ ಸಂವಿಧಾನದಲ್ಲಿ ಉಲ್ಲೇಖವಾಗಿದೆ. ಸುಪ್ರೀಂಕೋರ್ಟ್​ ಕೂಡ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಬೇಕು ಅಂತಾ ಹೇಳಿದೆ. ಆದ್ರೆ, ಏಕರೂಪ ನಾಗರಿಕ ಸಂಹಿತೆ ವಿರೋಧಿಸಿ ಜನರನ್ನ ಪ್ರಚೋದಿಸುವ ಪ್ರಯತ್ನಗಳು ನಡೆಯುತ್ತಿವೆ. ದೇಶದಲ್ಲಿ ವೋಟ್​ ಬ್ಯಾಂಕ್ ರಾಜಕೀಯ ನಡೆಯುತ್ತಿದೆ ಅಂತಾ ಪ್ರಧಾನಿ ಮೋದಿ ವಿಪಕ್ಷಗಳ ವಿರುದ್ಧ ಕಿಡಿ ಕಾರಿದ್ದಾರೆ.

ತ್ರಿಪಲ್ ತಲಾಖ್​ ಇಸ್ಲಾಂನಿಂದ ಬೇರ್ಪಡಿಸಲಾಗದ ಹಕ್ಕುಗಳು ಅನ್ನೋದಾದ್ರೆ, ಮುಸ್ಲಿಂ ರಾಷ್ಟ್ರಗಳಾದ ಈಜಿಪ್ಟ್, ಇಂಡೋನೇಷ್ಯಾ, ಕತಾರ್, ಜೋರ್ಡಾನ್, ಸಿರಿಯಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ತ್ರಿಪಲ್ ತಲಾಖ್​​ನ್ನ ಪ್ರಾಕ್ಟೀಸ್ ಮಾಡುತ್ತಿಲ್ಲ ಯಾಕೆ ಅಂತಾ ಮೋದಿ ಪ್ರಶ್ನಿಸಿದ್ದಾರೆ.

ಶೇಕಡಾ 90ರಷ್ಟು ಸುನ್ನಿ ಮುಸ್ಲಿಮರನ್ನ ಹೊಂದಿರುವ ಈಜಿಪ್ಟ್​ನಲ್ಲಿ 80 ವರ್ಷಗಳ ಹಿಂದೆಯೇ ತ್ರಿಪಲ್ ತಲಾಖ್​ನ್ನ ಬ್ಯಾನ್ ಮಾಡಲಾಗಿದೆ. ತ್ರಿಪಲ್ ತಲಾಖ್ ಪರ ಬ್ಯಾಟ್ ಬೀಸುವವರು ವೋಟ್​ ಬ್ಯಾಂಕ್​ಗೋಸ್ಕರ ಮುಸ್ಲಿಂ ಮಹಿಳೆಯರ ಮೇಲೆ ಅನ್ಯಾಯವೆಸಗುತ್ತಿದ್ದಾರೆ ಅಂತಾ ಪ್ರಧಾನಿ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

suddiyaana