ಪಾಯಿಂಟ್ಸ್ ಟೇಬಲ್‌ನಲ್ಲಿ 3ನೇ ಸ್ಥಾನಕ್ಕೆ ಜಾರಿದ ಬೆಂಗಳೂರು ಟೀಂ! – ಪ್ಲೇಆಫ್‌ನಲ್ಲಿ RCBಗೆ ಎದುರಾಳಿ ಯಾರು?

ಟೇಬಲ್ ಟಾಪರ್ ಆಗ್ಬೇಕು ಅಂತಾ ಟಾರ್ಗೆಟ್ ಇಟ್ಕೊಂಡು ಹೈದ್ರಾಬಾದ್ ವಿರುದ್ಧ ಕಣಕ್ಕಿಳಿದಿದ್ದ ಆರ್‌ಸಿಬಿ ಸೋತಿದೆ. ಇದೀಗ ಆರ್‌ಸಿಬಿ ಮ್ಯಾಚ್ ಸೋಲ್ತಿದ್ದಂತೆ ಪಾಯಿಂಟ್ಸ್ ಟೇಬಲ್ನಲ್ಲೂ ಬದಲಾವಣೆಯಾಗಿದೆ. ಎರಡನೇ ಸ್ಥಾನದಲ್ಲಿದ್ದ ಬೆಂಗಳೂರು ಟೀಮ್ ಈಗ ಮೂರನೇ ಸ್ಥಾನಕ್ಕೆ ಜಾರಿದೆ.
ಇದನ್ನೂ ಓದಿ: ಟಾಸ್ ಗೆದ್ದು ಮ್ಯಾಚ್ ಬಿಟ್ಟ RCB.. SRH ವಿಕ್ಟರಿಗೆ ಏನೆಲ್ಲಾ ಡ್ಯಾಮೇಜ್? – ರೆಡ್ ಆರ್ಮಿ ಸೋಲಿಗೆ 8 ಕಾರಣ!
ಈಗಾಗ್ಲೇ ಪ್ಲೇಆಫ್ಗೆ ಆರ್‌ಸಿಬಿ ಕ್ವಾಲಿಫೈ ಆಗಿದ್ರೂ ಹೈದ್ರಾಬಾದ್ ವಿರುದ್ಧದ ಮ್ಯಾಚ್ ಯಾಕೆ ಮುಖ್ಯ ಆಗಿತ್ತು ಅನ್ನೋದಕ್ಕೆ ಇದೇ ಕಾರಣ. ಮ್ಯಾಚ್ಗೂ ಮುನ್ನ ಆರ್‌ಸಿಬಿ ಪಾಯಿಂಟ್ಸ್ ಟೇಬಲ್‌ನಲ್ಲಿ ಸೆಕೆಂಡ್ ಪ್ಲೇಸ್ನಲ್ಲಿತ್ತು. ಗೆದ್ದಿದ್ರೆ ಗುಜರಾತ್ ಹಿಂದಿಕ್ಕಿ ಟೇಬಲ್ ಟಾಪರ್ ಆಗ್ತಿದ್ರು. ಬಟ್ ಈಗ ಮೂರನೇ ಸ್ಥಾನಕ್ಕೆ ಕುಸಿದಿದೆ.
ಗುಜರಾತ್ 18 ಅಂಕ ಗಳಿಸಿದ್ರೆ ಪಂಜಾಬ್ ಮತ್ತು ಬೆಂಗಳೂರು ತಲಾ 17 ಅಂಕ ಗಳಿಸಿವೆ. ಬಟ್ ನೆಟ್ ರನ್ ರೇಟ್ ಕುಸಿದಿರೋ ಕಾರಣಕ್ಕೆ ಆರ್‌ಸಿಬಿ ಮೂರನೇ ಸ್ಥಾನಕ್ಕೆ ಜಾರಿದೆ. ಇನ್ನೊಂದು ಟ್ವಿಸ್ಟ್ ಅಂದ್ರೆ ಪಂಜಾಬ್ಗೆ ಇನ್ನೂ ಎರಡು ಪಂದ್ಯಗಳು ಬಾಕಿ ಇವೆ. ಅವ್ರೇನಾದ್ರೂ ಎರಡೂ ಪಂದ್ಯ ಗೆದ್ರೆ ಸ್ಟ್ರೈಟ್ ಅವೇ ಕ್ವಾಲಿಫೈರ್ 1ಗೆ ಕ್ವಾಲಿಫೈ ಆಗ್ತಾರೆ. ಇನ್ನೊಂದು ಸ್ಥಾನ ಯಾರಿಗೆ ಅನ್ನೋದು ಮುಂದಿನ ಪಂದ್ಯಗಳಲ್ಲಿ ಗೊತ್ತಾಗುತ್ತೆ.
ಒಟ್ನಲ್ಲಿ ಮಸ್ಟ್ ವಿನ್ ಮ್ಯಾಚ್ನಂತೆಯೇ ಹೈದ್ರಾಬಾದ್ ವಿರುದ್ಧ ಕಣಕ್ಕಿಳಿದ ಆರ್‌ಸಿಬಿ ಅವೇ ಪಿಚ್ನಲ್ಲಿ ಈ ಸೀಸನ್ನಲ್ಲಿ ಫಸ್ಟ್ ಮ್ಯಾಚ್ ಸೋತಿದೆ. ಶಾಕಿಂಗ್ ವಿಚಾರ ಅಂದ್ರೆ ಇದೇ ಮೈದಾನದಲ್ಲಿ ಮೇ 27ಕ್ಕೆ ಲಕ್ನೋ ವಿರುದ್ಧ ಪಂದ್ಯ ಆಡ್ಬೇಕಿದೆ. ಈ ಮ್ಯಾಚ್ ಆರ್‌ಸಿಬಿ ಪಾಲಿಗೆ ಡು ಆರ್ ಡೈನಂತೆಯೇ ಇರುತ್ತೆ.