ಲಂಕೆ ಗೆದ್ರಷ್ಟೇ WTC ಫೈನಲ್ – ಗಿಲ್ ಮುಂದೆ 9 ಪಂದ್ಯಗಳ ಟಾಸ್ಕ್!
FINAL ಟಿಕೆಟ್ ಲೆಕ್ಕಾಚಾರ ಹೇಗಿದೆ?

ಲಂಕೆ ಗೆದ್ರಷ್ಟೇ WTC ಫೈನಲ್ – ಗಿಲ್ ಮುಂದೆ 9 ಪಂದ್ಯಗಳ ಟಾಸ್ಕ್!FINAL ಟಿಕೆಟ್ ಲೆಕ್ಕಾಚಾರ ಹೇಗಿದೆ?

ಜಿಂಬಾಬ್ವೆ ವಿರುದ್ಧ ಮೂರೂ ಪಂದ್ಯಗಳನ್ನ ಗೆದ್ದು ಕ್ಲೀನ್ ಸ್ವೀಪ್ ಮಾಡಿರೋ ಟೀಂ ಇಂಡಿಯಾಗೆ ಈಗ ಫಿಫ್ಟೀನ್ ಡೇಸ್ ಬ್ರೇಕ್. ಆಗಸ್ಟ್ 15ರವರೆಗೆ ಯಾವುದೇ ಮ್ಯಾಚಸ್ ಇರಲ್ಲ. ನೆಕ್ಸ್​ಟ್ ಟೆಸ್ಟ್ ಸರಣಿಗಾಗಿ ಲಂಕಾಗೆ ಹಾರಬೇಕಿದೆ. ಹಾಗಂತ ಲಂಕಾದಲ್ಲಿ ನಡೆಯೋ ರೆಡ್ ಬಾಲ್ ಫಾರ್ಮೆಟ್ ಸಿರೀಸ್ ಭಾರತಕ್ಕೆ ಬರೀ ಸೋಲು ಗೆಲುವಿನ ಪ್ರಶ್ನೆ ಅಲ್ಲ. ಈ ಸರಣಿ ಡಬ್ಲ್ಯೂಟಿಸಿ ಅಂಡರ್​ನಲ್ಲಿ ಬರೋದ್ರಿಂದ ಅತೀ ದೊಡ್ಡ ಟಾಸ್ಕೇ ಇದೆ.

ಇದನ್ನೂ ಓದಿ : ಟೆಸ್ಟ್ ತಂಡಕ್ಕೆ KL ಉಪನಾಯಕ- ಜಡ್ಡು ಕಂಬ್ಯಾಕ್, ರಾಣಾ OUT

ಭಾರತ ಮತ್ತು ಶ್ರೀಲಂಕಾ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 15ರಿಂದ ಆರಂಭವಾಗಲಿದೆ. ಲಂಕಾದಲ್ಲೇ ನಡೆಯಲಿರೋ ಈ ಸಿರೀಸ್​ಗೆ ಭಾರತ ಈಗಾಗ್ಲೇ 15 ಸದಸ್ಯರ ಟೀಂ ಕೂಡ ಅನೌನ್ಸ್ ಮಾಡಿದೆ. ಕ್ಯಾಪ್ಟನ್ ಆಗಿ ಶುಭ್​ಮನ್ ಗಿಲ್ ಲೀಡ್ ಮಾಡಿದ್ರೆ ವೈಸ್ ಕ್ಯಾಪ್ಟನ್ ಆಗಿ ಕೆಎಲ್ ರಾಹುಲ್ ಇರ್ತಾರೆ. ಮಧ್ಯಪ್ರದೇಶದ ಸ್ಪಿನ್ನರ್ ಸರಂಶ್ ಜೈನ್‌ ಫಾರ್ ದಿ ಫಸ್ಟ್ ಟೈಂ ತಂಡಕ್ಕೆ ಆಯ್ಕೆಯಾಗಿದ್ದಾರೆ. ಜಸ್ಪ್ರೀತ್ ಬುಮ್ರಾ ಮತ್ತು ಸಾಯಿ ಸುದರ್ಶನ್ ಟೀಮ್​ಗೆ ಸೆಲೆಕ್ಟ್ ಆಗಿದ್ರೂ ಪಂದ್ಯ ಆಡ್ತಾರಾ ಇಲ್ವಾ ಅನ್ನೋದು ಇನ್ನೂ ಕನ್ಫರ್ಮ್ ಆಗಿಲ್ಲ. ಯಾಕಂದ್ರೆ ಬಿಸಿಸಿಐನ ಸೆಂಟ್ರ್ ಆಫ್ ಎಕ್ಸಲೆನ್ಸ್​ನಲ್ಲಿ ಫಿಟ್​ನೆಸ್ ಕ್ಲಿಯರೆನ್ಸ್ ಸಿಕ್ರೆ ಮಾತ್ರನೇ ಅವಕಾಶ ಇರುವಂಥದ್ದು. ಇನ್ನು ಸ್ಟಾರ್ ಆಲ್​ರೌಂಡರ್ ರವೀಂದ್ರ ಜಡೇಜಾ ಕಂ ಬ್ಯಾಕ್ ಮಾಡಿದ್ದಾರೆ. ಸೋ ಅಲ್ಲಿಗೆ ಟೀಂ ಇಂಡಿಯಾ ಸ್ಕ್ವಾಡ್ ಏನೋ ಚೆನ್ನಾಗಿದೆ. ಬಟ್ ಎಂಡ್ ಆಫ್ ದಿ ಡೇ ಲಂಕಾವನ್ನ ಎರಡೂ ಪಂದ್ಯಗಳಲ್ಲೂ ಸೋಲಿಸಲೇಬೇಕಾದ ಪ್ರೆಶರ್ ಭಾರತ ಮೇಲಿದೆ. ಯಾಕಂದ್ರೆ ಭಾರತ ಇಲ್ಲಿ ಲಂಕಾ ದಹನಕ್ಕಾಗಿ ಆಡದಿದ್ರೂ 2027ರ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಟಿಕೆಟ್​ಗಾಗಿ ಗೆಲ್ಲಲೇಬೇಕು. ಈಗಾಗ್ಲೇ ಟೆಸ್ಟ್ ಮಾದರಿಯಲ್ಲಿ ಆಗಿರೋ ಸಾಲು ಸಾಲು ಸೋಲುಗಳು ಅಂಕಪಟ್ಟಿಯಲ್ಲಿ ದೊಡ್ಡ ಡ್ಯಾಮೇಜ್​ನೇ ಮಾಡಿದೆ.. ಸದ್ಯ ಟಾಪ್-5ನಲ್ಲಿರೋ ಭಾರತ ಟಾಪ್-2 ರೇಸ್​ಗೆ ಬರ್ಬೇಕು ಅಂದ್ರೆ ಇನ್ಮುಂದಿನ ಪ್ರತೀ ಮ್ಯಾಚಲ್ಲೂ ಡು ಆರ್ ಡೈ ಮಾದರಿಯಲ್ಲಿ ಆಡ್ಬೇಕು.

ಡಬ್ಲ್ಯೂಟಿಸಿ ಅಂಕಪಟ್ಟಿ!

                        ತಂಡ                            ಪಾಯಿಂಟ್ಸ್                            ಪರ್ಸೆಂಟೇಜ್
    1. ಆಸ್ಟ್ರೇಲಿಯಾ                       84                                           87.50
    2. ಸೌತ್ ಆಫ್ರಿಕಾ                       36                                          75.00
    3. ನ್ಯೂಜಿಲೆಂಡ್                       52                                         72.22
    4. ಬಾಂಗ್ಲಾದೇಶ                        28                                           58.33
    5. ಭಾರತ                                   52                                            48.15

ಸೋ ಇಲ್ಲಿ ಟಾಪ್-2ನಲ್ಲಿ ಇದ್ದವ್ರು ಮಾತ್ರನೇ ವಿಶ್ವಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಟಿಕೆಟ್ ಗಿಟ್ಟಿಸಿಕೊಳ್ಳೋಕೆ ಆಗೋದು. 6ನೇ ಸ್ಥಾನದಲ್ಲಿರೋ ಶ್ರೀಲಂಕಾ, 7ನೇ ಸ್ಥಾನದಲ್ಲಿರೋ ಇಂಗ್ಲೆಂಡ್ ಹಾಗೇ, 8ನೇ ಸ್ಥಾನದಲ್ಲಿರೋ ವೆಸ್ಟ್ ಇಂಡೀಸ್ ಹಾಗೇ 9ನೇ ಸ್ಥಾನದಲ್ಲಿರೋ ಪಾಕಿಸ್ತಾನ ತಂಡಗಳು ರೇಸ್​ನಿಂದ ಹೊರಬಿದ್ದಿವೆ. ಮುಂದಿನ ಎಲ್ಲಾ ಪಂದ್ಯಗಳನ್ನ ಗೆದ್ರೂ ಈ ನಾಲ್ಕು ತಂಡಗಳು ಟಾಪ್-2ಗೆ ಬರೋಕೆ ಆಗಲ್ಲ. ಆದ್ರೆ ಭಾರತ ಈಗ ರೇಸ್​ನಲ್ಲಿದೆ 5ನೇ ಸ್ಥಾನದಲ್ಲಿದೆ. ಭಾರತಕ್ಕೆ ಅವಕಾಶ ಇದೆ. 2027ರ ಜೂನ್ 9 ರಿಂದ 13ರವರೆಗೆ ಇಂಗ್ಲೆಂಡ್​ನ ಓವಲ್ ಮೈದಾನದಲ್ಲಿ ನಡೆಯಲಿರೋ ಫೈನಲ್​ನಲ್ಲಿ ಟಾಪ್​-2ಗೆ ಬರೋಕೆ ಚಾನ್ಸ್ ಇದೆ.

ಭಾರತಕ್ಕೆ ಡಬ್ಲ್ಯೂಟಿಸಿ ಫೈನಲ್ ಹೇಗೆ?

ಒಟ್ಟು 18 ಪಂದ್ಯಗಳ ಪೈಕಿ 9 ಪಂದ್ಯಗಳನ್ನ ಆಡಿರುವ ಟೀಂ ಇಂಡಿಯಾ

9ರಲ್ಲಿ 4 ಗೆಲುವು, 4 ಸೋಲು ಹಾಗೂ 1 ಡ್ರಾ ಸಾಧಿಸಿರುವ ಭಾರತ

2027ರ ಡಬ್ಲ್ಯೂಟಿಸಿ ರೇಸ್ ನಲ್ಲಿ ಭಾರತಕ್ಕೆ ಇನ್ನು 9 ಪಂದ್ಯಗಳು ಬಾಕಿ

ಶ್ರೀಲಂಕಾ ವಿರುದ್ಧ 2, ನ್ಯೂಜಿಲೆಂಡ್ ವಿರುದ್ಧ 2, ಆಸೀಸ್ ವಿರುದ್ಧ 5 ಪಂದ್ಯ

ನೇರವಾಗಿ ಅರ್ಹತೆ ಪಡೆಯಲು 7 ರಿಂದ 8 ಪಂದ್ಯಗಳನ್ನ ಗೆಲ್ಲಲೇಬೇಕು

7 ಪಂದ್ಯ ಗೆದ್ರೆ ಒಟ್ಟು ಪರ್ಸಂಟೇಜ್ ಶೇ. 62.96, ಇತರರ ಮೇಲೆ ಡಿಪೆಂಡ್

8 ಪಂದ್ಯ ಗೆದ್ರೆ ಪರ್ಸೆಂಟೇಜ್ ಶೇ. 68.52ಕ್ಕೆ ಏರಿಕೆ.. ನೇರವಾಗಿ ಫೈನಲ್

9 ಪಂದ್ಯಗಳಲ್ಲಿ 2ಕ್ಕಿಂತ ಹೆಚ್ಚಿನ ಪಂದ್ಯಗಳನ್ನ ಸೋತ್ರೆ ಫೈನಲ್ ಟಿಕೆಟ್ ಮಿಸ್

ಹೀಗೆ ಭಾರತಕ್ಕೆ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಆಡಲು ಫಿಫ್ಟಿ ಫಿಫ್ಟಿ ಚಾನ್ಸ್ ಇದೆ. ಪ್ರತೀ ಪಂದ್ಯವನ್ನೂ ಗೆದ್ರೆ ಡೈರೆಕ್ಟ್ ಫಿನಾಲೆ ಟಿಕೆಟ್.. ಒಂದೆರಡು ಸೋತ್ರೆ ಅವ್ರಿವ್ರ ಮೇಲೆ ಡಿಪೆಂಡ್, ಮೂರು ಅಥವಾ ನಾಲ್ಕು ಪಂದ್ಯಗಳನ್ನ ಸೋತ್ರೆ ಈ ಸಲವೂ ಡಬ್ಲ್ಯೂಟಿಸಿ ಚಾಂಪಿಯನ್ಸ್ ಆಗೋದು ಕನಸಾಗೇ ಉಳಿಯಲಿದೆ. ಐಸಿಸಿ ಆಯೋಜನೆ ಮಾಡುವ ನಾಲ್ಕು ವಿಶ್ವಕಪ್​ಗಳಲ್ಲಿ ಭಾರತ ಟಿ-20ಐ, ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿಗಳನ್ನ ಗೆದ್ದಿದೆ. ಆದ್ರೆ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಪ್ರಶಸ್ತಿ ಗೆಲ್ಲೋದು ಇನ್ನೂ ಕನಸಾಗೇ ಉಳಿದಿದೆ. ಈ ಸಲ ಫೈನಲ್​ ಆಡೋದೂ ಕೂಡ ಡೌಟೇ ಇದೆ.

Shantha Kumari

Leave a Reply

Your email address will not be published. Required fields are marked *