T-20I, ODI ಆಯ್ತು ಈಗ ಟೆಸ್ಟ್ ಟಾಸ್ಕ್ – WTC ರೇಸ್ ನಲ್ಲಿ ಉಳಿಯುತ್ತಾ ಭಾರತ?
ನಂ.1 ನ್ಯೂಜಿಲೆಂಡ್ ಸೇಡಿನ ಸಮರ

T-20I, ODI ಆಯ್ತು ಈಗ ಟೆಸ್ಟ್ ಟಾಸ್ಕ್ – WTC ರೇಸ್ ನಲ್ಲಿ ಉಳಿಯುತ್ತಾ ಭಾರತ?ನಂ.1 ನ್ಯೂಜಿಲೆಂಡ್ ಸೇಡಿನ ಸಮರ

ಟಿ20ಐ ಸರಣಿ ಮುಗೀತು.. ಏಕದಿನ ಕದನವೂ ಆಯ್ತು. ಈಗ ಟೆಸ್ಟ್ ಫೈಟ್.. ಸುದೀರ್ಘ 12 ಪಂದ್ಯಗಳಿಗಾಗಿ ಕಿವೀಸ್​ ನಾಡಿಗೆ ಕಾಲಿಟ್ಟಿದ್ದ ಭಾರತ ಈಗ 10 ಪಂದ್ಯಗಳನ್ನ ಮುಗಿಸಿದೆ. 5 ಪಂದ್ಯಗಳ ಟಿ-20ಐ ಸರಣಿ ಹಾಗೇ 5 ಪಂದ್ಯಗಳ ಏಕದಿನ ಸಿರೀಸ್​ ಎರಡ್ರಲ್ಲೂ ಸೋಲದೇ ಇದ್ರೂ ಅಸಲಿ ಟಾಸ್ಕ್ ಟೆಸ್ಟ್ ಸರಣಿಯಲ್ಲಿದೆ. 2 ಪಂದ್ಯಗಳ ಈ ಸರಣಿಯನ್ನ ಗೆಲ್ಲಲೇಬೇಕಾದ ಒತ್ತಡ ಭಾರತಕ್ಕಿದೆ.

ಇದನ್ನೂ ಓದಿ : RCB ಫ್ಯಾನ್ಸ್ ಗೆ ಸಿಕ್ತು ಜೋಶ್ – ಹ್ಯಾಟ್ರಿಕ್ ಕಪ್ ಗೆ ಹೇಜಲ್ ವುಡ್ ರೆಡಿ

2025-27ರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸೈಕಲ್​ನಲ್ಲಿ ಭಾರತಕ್ಕೆ ಇನ್ನು 7 ಪಂದ್ಯಗಳಷ್ಟೇ ಬಾಕಿ ಇವೆ. ಈ ಪೈಕಿ ನ್ಯೂಜಿಲೆಂಡ್ ವಿರುದ್ಧ ನವೆಂಬರ್ 19ರಿಂದ 23ರ ವರೆಗೆ ವೆಲ್ಲಿಂಗ್ಟನ್​ನಲ್ಲಿ ಮೊದಲ ಪಂದ್ಯ ಹಾಗೇ ನವೆಂಬರ್ 27ರಿಂದ ಡಿಸೆಂಬರ್ 1ರವರೆಗೆ ಎರಡನೇ ಪಂದ್ಯ ನಡೆಯಲಿದೆ. ಈ ಎರಡೂ ಪಂದ್ಯಗಳೂ ಕೂಡ ಟೀಂ ಇಂಡಿಯಾ ಪಾಲಿಗೆ ಮಸ್ಟ್ ವಿನ್ ಮ್ಯಾಚ್​ಗಳೇ ಆಗಿವೆ. ಅದ್ರಲ್ಲೂ ಡಬ್ಲ್ಯೂಟಿಸಿ ರ್ಯಾಂಕಿಂಗ್​ ನಲ್ಲಿ ನಂಬರ್ 1 ಸ್ಥಾನದಲ್ಲಿರೋ ನ್ಯೂಜಿಲೆಂಡ್ ವಿರುದ್ಧ ಗೆಲ್ಲೋದು ಸುಲಭವೂ ಇಲ್ಲ.

ನಂಬರ್ 1ನಲ್ಲಿ ನ್ಯೂಜಿಲೆಂಡ್.. 4ರಲ್ಲಿ ಭಾರತ!

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಫೈನಲ್​ಗೆ ತಲುಪಲು ಟಾಪ್-2 ತಂಡಗಳಿಗೆ ಮಾತ್ರ ಸಾಧ್ಯ. ಆದರೆ ಭಾರತ ಸದ್ಯ ಶೇ. 51.52ರಷ್ಟು ಗೆಲುವಿನ ಸರಾಸರಿಯೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಮೊದಲ ಮೂರು ಸ್ಥಾನಗಳಲ್ಲಿರುವ ನ್ಯೂಝಿಲೆಂಡ್ (72.22%), ಸೌತ್ ಆಫ್ರಿಕಾ (71.43%) ಮತ್ತು ಆಸ್ಟ್ರೇಲಿಯಾ (69.23%) ತಂಡಗಳು ಫೈನಲ್ ಟಿಕೆಟ್ ಪಡೆಯಲು ಹೆಚ್ಚಿನ ಅವಕಾಶ ಹೊಂದಿದೆ. ಸೋ ಈ ಮೂವರ ಜೊತೆ ರೇಸ್​ನಲ್ಲಿ ಇರ್ಬೇಕು ಅಂದ್ರೆ ಈ ಸರಣಿ ತುಂಬಾನೇ ಮುಖ್ಯವಾಗಲಿದೆ. ಅಲ್ದೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಲು ಭಾರತ  ಇನ್ನುಳಿದ 7 ಪಂದ್ಯಗಳ ಪೈಕಿ ಕನಿಷ್ಠ 6 ಪಂದ್ಯಗಳಲ್ಲಿ ಗೆಲ್ಲುವುದು ಅನಿವಾರ್ಯವಾಗಿದೆ. ಆದ್ರೀಗ ಕಿವೀಸ್ ಸರಣಿಯೇ ದೊಡ್ಡ ಚಾಲೆಂಜಿಂಗ್ ಆಗಿರಲಿದೆ.

ಗೆಲ್ಲಲೇಬೇಕು ಭಾರತ!

ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಭಾರತಕ್ಕಿಂತ ಮುಂದು

ಕಿವೀಸ್ ನಾಡಿನಲ್ಲೇ ಕಿವೀಸ್ ತಂಡವನ್ನ ಟೆಸ್ಟ್ ನಲ್ಲಿ ಸೋಲಿಸುವುದು ಕಷ್ಟ

ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಜೇಕಬ್ ಡಫಿ, ಟಿಕ್ನರ್ ಅವರ ಬೌಲಿಂಗ್

ಟಾಮ್ ಲಾಥಮ್, ಡೆವೊನ್ ಕಾನ್ವೇ, ವಿಲ್ ಯಂಗ್, ಡ್ಯಾರಿಲ್ ಮಿಚೆಲ್

ರಚಿನ್ ರವೀಂದ್ರರಂತಹ ಆಟಗಾರರು ಭಾರತದ ಬೌಲರ್‌ ಗಳಿಗೆ ಸವಾಲು

ಟಿ-20ಐ, ಏಕದಿನ ಸರಣಿಯಂತೆಯೇ ಕಿವೀಸ್ ಪ್ಲೇಯರ್ಸ್ ಬೌನ್ಸ್ ಬ್ಯಾಕ್

ಸೋ ನ್ಯೂಜಿಲೆಂಡ್​ನ ನ್ಯೂಜಿಲೆಂಡ್​ನಲ್ಲೇ ಸೋಲಿಸೋದು ಅಷ್ಟು ಸುಲಭ ಇಲ್ಲ. ಭಾರತದಲ್ಲಿ ನಡೆದ ಹಿಂದಿನ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ 3-0 ಕ್ಲೀನ್ ಸ್ವೀಪ್ ಮಾಡಿತ್ತು. ಹಾಗೇ ನ್ಯೂಜಿಲೆಂಡ್ ನೆಲದಲ್ಲಿ ಭಾರತದ ಟೆಸ್ಟ್ ಪ್ರದರ್ಶನವನ್ನು ಗಮನಿಸಿದರೆ, ಭಾರತಕ್ಕೆ ಅಲ್ಲಿ ಸರಣಿ ಗೆಲ್ಲುವುದು ಸುಲಭವಾಗಿಲ್ಲ.  ನ್ಯೂಜಿಲೆಂಡ್‌ನಲ್ಲಿ ಭಾರತ ಇದುವರೆಗೆ 25 ಟೆಸ್ಟ್ ಪಂದ್ಯಗಳನ್ನಾಡಿದ್ದು, ಕೇವಲ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿ, 10 ಪಂದ್ಯಗಳಲ್ಲಿ ಸೋಲು ಕಂಡಿದೆ ಹಾಗೂ 10 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.  ಭಾರತ ತಂಡ ನ್ಯೂಜಿಲೆಂಡ್‌ನಲ್ಲಿ ಕೊನೆಯ ಬಾರಿಗೆ ಟೆಸ್ಟ್ ಪಂದ್ಯವಾಡಿದ್ದು 2020ರ ಫೆಬ್ರವರಿಯಲ್ಲಿ. ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಎರಡೂ ಪಂದ್ಯಗಳನ್ನು ಸೋತಿತ್ತು. ನ್ಯೂಜಿಲೆಂಡ್ ನೆಲದಲ್ಲಿ ಭಾರತ ಕೊನೆಯ ಟೆಸ್ಟ್ ಗೆಲುವು ದಾಖಲಿಸಿದ್ದು 2009ರ ಮಾರ್ಚ್ 18ರಂದು ಹ್ಯಾಮಿಲ್ಟನ್‌ನಲ್ಲಿ, ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು. ಅಂದರೆ ಬರೋಬ್ಬರಿ 17 ವರ್ಷಗಳಿಂದ ಭಾರತಕ್ಕೆ ನ್ಯೂಜಿಲೆಂಡ್‌ನಲ್ಲಿ ಟೆಸ್ಟ್ ಗೆಲುವು ಸಿಕ್ಕಿಲ್ಲ. ಹೀಗಾಗಿ ಈ ಸಲ ಕಿವೀಸ್ ನಾಡಿನಲ್ಲಿ ಶುಭ್​ಮನ್ ಗಿಲ್ ಕ್ಯಾಪ್ಟನ್ಸಿಯಲ್ಲಿ ಭಾರತದ ಪ್ರದರ್ಶನ ಹೇಗಿರುತ್ತೆ ಅನ್ನೋದೇ ಕುತೂಹಲ.

Shantha Kumari

Leave a Reply

Your email address will not be published. Required fields are marked *