ವೈಭವ್ ಪಳಗಿಸೋಕೆ BCCI ಖೆಡ್ಡಾ- ಸೂರ್ಯವಂಶಿಗೆ ಟಫ್ ರೂಲ್ಸ್ ಬರೆ

ವೈಭವ್ ಪಳಗಿಸೋಕೆ BCCI ಖೆಡ್ಡಾ- ಸೂರ್ಯವಂಶಿಗೆ ಟಫ್ ರೂಲ್ಸ್ ಬರೆ

ಕ್ರಿಕೆಟ್ ಲೋಕದಲ್ಲಿ ಸದ್ಯಕ್ಕೆ ಸದ್ದು ಮಾಡ್ತಿರೋ ಹೆಸರು ಅಂದ್ರೆ ಅದು ವೈಭವ್ ಸೂರ್ಯವಂಶಿ.. ಸೂರ್ಯವಂಶಿ ಈಗ ಏನ್ ಮಾಡಿದ್ರು ಅದು ನ್ಯೂಸ್ ಆಗುತ್ತೆ. ನಿಂತ್ರು ಸುದ್ದಿ, ಕುಂತ್ರು ಸುದ್ದಿ, ಬ್ಯಾಟಿಂಗ್ ಮಾಡಿದ್ರು ಸುದ್ದಿ.. ಸಿಕ್ಸ್‌, ಫೋರ್ ಹೊಡೆದ್ರು ಸುದ್ದಿ.. ಕ್ಯಾಚ್ ಹಿಡಿದ್ರು ಸುದ್ದಿ.. ಅದರಲ್ಲೂ ಶ್ರೀಲಂಕಾ ವಿರುದ್ಧ ಕಿರಿಕ್ ಆದ್ರೂ ಮೇಲೆ ವೈಭವ್ ವಿಷ್ಯವೇ ಹೆಚ್ಚು ಚರ್ಚೆ ಆಗ್ತಿದೆ. ವೈಭವ್ ಮೊತ್ತೊಬ್ಬ ಪೃಧ್ವಿ ಶಾ ಆಗುವುದ್ದಕ್ಕೆ ಬಿಡಬಾರದು. ಹೀಗಾಗಿ ವೈಭವ್ ಅವರ ಆಕ್ರಮಣಕಾರಿ ಸ್ವಭಾವ ಮುಂದಿನ ದಿನಗಳಲ್ಲಿ ಅವರ ವೃತ್ತಿಜೀವನಕ್ಕೆ ಮುಳ್ಳಾಗಬಹುದು. ಹೀಗಾಗಿ ಈ ಬೇಬಿ ಬಾಸ್‌ನ್ನ ಬಿಸಿಸಿಐ ಈಗಲೇ ತಿದ್ದಬೇಕಿದೆ..

ಇದನ್ನೂ ಓದಿ: ಪವಿತ್ರಾಗೌಡಗೆ ರಾಜಾತಿಥ್ಯ ಸಿಗ್ತಿದೆ ಅಂತಾ ಹೇಳಿದ್ದೇ ತಪ್ಪಾಯ್ತಾ? ಆರೋಪ ಮಾಡಿದ ಮಹಿಳೆ ಮೇಲೇನೇ ಕೇಸ್!

ವೈಭವ್ ಇನ್ನೂ ಬಿಸಿ ರಕ್ತದ ಹುಡುಗ.. ಇವರಪ್ಪ ಇವರಿಗೆ ಒಳ್ಳೆಯ ಕ್ರಿಕೆಟ್ ತರಬೇತಿ ನೀಡಿದ್ದಾರೆ.. ಭಾರತಕ್ಕೆ ಕ್ರಿಕೆಟ್‌ಗೆ ಒಳ್ಳೆಯ ಶಕ್ತಿಯನ್ನ ನೀಡಿದ್ದಾರೆ. ಐಪಿಎಲ್‌ನಲ್ಲಿ ವೈಭವ್ ಚೆನ್ನಾಗಿ ಆಡಿ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಟೀಂ ಇಂಡಿಯಾ ಟಿ20ಐನಲ್ಲಿ ಜಸ್ಟ್‌15 ವರ್ಷಕ್ಕೆ ಅವಕಾಶ ಪಡೆದಿದ್ದಾರೆ.. ವೈಭವ್‌ಗೆ ಎಲ್ಲಿ ಹೇಗೆ ಆಡಬೇಕು ಅನ್ನೋದು ಗೊತ್ತು.. ಹಿರಿಯರಿಗೆ ಹೇಗೆ ಗೌರವ ಕೊಡಬೇಕು ಅನ್ನೋದು ಕೂಡ ಗೊತ್ತು.. ವೈಭವ್ ದೊಡ್ಡವರು ಸಿಕ್ಕಿದ್ರೆ ಕಾಲಿಗೆ ಬಿದ್ದು ನಮಸ್ಕಾರ ಮಾಡುವುದ್ದನ್ನ ನಾವು ಆನೇಕೆ ಬಾರಿ ನೋಡಿದ್ದೇವೆ.. ಆದ್ರೆ ಈಗ ಅವರಿಗೆ ಬೇಕಿರುವುದು ಒಂದೇ ಒಂದು..ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯ.. ಅದರ ಕೊರತೆ ವೈಭವ್‌ಗೆ ಇದೆ. ಯಾಕಂದ್ರೆ ಈಗ ಕ್ರಿಕೆಟ್ ಅಂದ್ರೆ ಸೋಲು ಗೆಲುವು ಮಾತ್ರ ಅಲ್ಲ.. ಈಗ ಕ್ರಕೆಟ್ ಅಂದ್ರೆ ಕಿರಿಕ್ ಎನ್ನುವಂತಾಗಿದೆ. ಮೈದಾನದಲ್ಲೇ ಸಹ ಆಟಗಾರರ ಮೇಲೆ ಹಲ್ಲೆ ಮಾಡುವುದ್ದಕ್ಕೆ ಹೋಗುವುದು, ಕೆಟ್ಟ ಮಾತಿನಿಂದ ಟ್ರಿಗರ್ ಮಾಡುವುದು, ಗುರಾಯಿಸುವುದು, ವಿಕೆಟ್ ತೆಗೆದ ನಂತ್ರ ಚಮಕ್ ಕೊಡುವುದು ನಡೆಯುತ್ತಿದೆ. ಆಕ್ರೋಶದ ಕಿಡಿ, ಈಗ ದೇಶವನ್ನು ಪ್ರತಿನಿಧಿಸುವ ಅಂತರರಾಷ್ಟ್ರೀಯ ಪಂದ್ಯಗಳಲ್ಲೂ ಜ್ವಾಲೆಯಾಗಿ ಉರಿಯುತ್ತಿದೆ.  ಇದ್ದನ್ನ ನಾವು ಶ್ರೀಲಂಕಾ Aವಿರುದ್ಧ ಪಂದ್ಯದಲ್ಲಿ ಸೂರ್ಯವಂಶಿಯಲ್ಲಿ ನೋಡಿದ್ದೇವೆ.. ಈಗ ವೈಭವ್ ಶಾಂತ ಸ್ವರೂಪನಾಗಿ ಆಡಬೇಕು.. ಅವನಿಗೆ ಯಾರೇ ಏನೇ ಹೇಳಿದ್ರು ಹೊಡೆಯುವುದ್ದಕ್ಕೆ ಹೋಗದೇ, ಕೇವಲ ಬ್ಯಾಟಿಂಗ್ ಮೂಲಕ ಉತ್ತರಕೊಡಬೇಕಾದ ಮನೋಭಾವ ಬರಬೇಕು.. ಆ ನಿಟ್ಟಿನಲ್ಲಿ ಬಿಸಿಸಿಐ ಕ್ರಮಕೈಗೊಳ್ಳಬೇಕು..

ವೈಭವ್‌ನ ಪಳಗಿಸೋದು ಹೇಗೆ?

 ವೈಭವ್ ಸೂರ್ಯವಂಶಿಗೆ ವಿಶೇಷ ತರಬೇತಿ ನೀಡುವ ಅಗತ್ಯವಿದೆ. ಇದಕ್ಕಾಗಿ ವಿ.ವಿ.ಎಸ್. ಲಕ್ಷ್ಮಣ್ ನೇತೃತ್ವದ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಯುವ ಆಟಗಾರರಿಗಾಗಿ ವಿಶೇಷ ಮಾನಸಿಕ ಪ್ರೊಫೈಲಿಂಗ್ ಶಿಬಿರಗಳನ್ನು ನಡೆಸಬೇಕು. ಈ ಮೂಲಕ ಯುವ ಕ್ರಿಕೆಟಿಗರಿಗೆ ಮಾನಸಿಕ ತರಬೇತಿ ನೀಡಿ, ಒತ್ತಡ ನಿರ್ವಹಿಸುವ ಕಲೆಯನ್ನು ಹೇಳಿಕೊಡಬೇಕಾದ ಅನಿವಾರ್ಯತೆ ಇದೆ.

ಅಭ್ಯಾಸ ಪಂದ್ಯಗಳ ಸಮಯದಲ್ಲಿ ಉದ್ದೇಶಪೂರ್ವಕವಾಗಿ ಕೆಣಕುವ ಅಥವಾ ಸ್ಲೆಡ್ಜಿಂಗ್ ಮಾಡುವ ಸನ್ನಿವೇಶಗಳನ್ನು ಸೃಷ್ಟಿಸಿ, ವೈಭವ್ ತಮ್ಮ ಭಾವನೆಗಳನ್ನು ಹೇಗೆ ನಿಯಂತ್ರಿಸಿಕೊಳ್ಳುತ್ತಾರೆ ಎಂಬುದನ್ನು ಪರೀಕ್ಷಿಸಬೇಕು.

ಹಿರಿಯ ಮನಶ್ಶಾಸ್ತ್ರಜ್ಞರ ಪ್ರಕಾರ, ಪಂದ್ಯದ ಅತ್ಯಂತ ಕಠಿಣ ಕ್ಷಣಗಳಲ್ಲಿ ಮನಸ್ಸನ್ನು ಶಾಂತವಾಗಿಡಲು ಆಳವಾದ ಉಸಿರಾಟ ಅಥವಾ ನಿರ್ದಿಷ್ಟ ದೈಹಿಕ ತಂತ್ರಗಳನ್ನು ವೈಭವ್‌ಗೆ ಕಲಿಸಿಕೊಡುವುದು ಅತ್ಯಗತ್ಯ.

1992ರಲ್ಲಿ 19 ವರ್ಷದ ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾದಲ್ಲಿ ತಮಗೆ ಸ್ಲೆಡ್ಜಿಂಗ್ ಮಾಡಿದ ಬೌಲರ್‌ಗೆ ಕೇವಲ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದರು. ಇಂತಹ ಹಿರಿಯ ಕ್ರಿಕೆಟಿಗರನ್ನು ವೈಭವ್‌ ಸೂರ್ಯವಂಶಿ ಮೆಂಟರ್‌ಗಳಾಗಿ ಪರಿಗಣಿಸಬೇಕು. ಅಲ್ಲದೆ ಅವರನ್ನು ಭೇಟಿಯಾಗಿ ಮಾರ್ಗದರ್ಶನ ಪಡೆಯುವುದು ಕೂಡ ಉತ್ತಮ.

ಇಂಡಿಯಾ ‘ಎ’ ತಂಡದ ಸ್ಪಿನ್ ಕೋಚ್ ಸಾಯಿರಾಜ್ ಬಹುತುಳೆ ಅವರಂತಹ ಹಿರಿಯರು, ರಾಜಸ್ಥಾನ್ ರಾಯಲ್ಸ್ ದಿನಗಳಿಂದಲೂ ವೈಭವ್ ಅವರನ್ನು ಹತ್ತಿರದಿಂದ ನೋಡಿದ್ದಾರೆ. ಅವರು ಮೈದಾನದಲ್ಲಿ ಮತ್ತು ಮೈದಾನದ ಹೊರಗೆ ವೈಭವ್‌ಗೆ ಧೈರ್ಯ ತುಂಬುವ ಕೆಲಸ ಮಾಡಬೇಕು.

ಸೂರ್ಯವಂಶಿಯ ವಯಸ್ಸು ಕೇವಲ 15 ವರ್ಷ. ತನ್ನ ಬಾಲ್ಯದಲ್ಲಿ ಹೆಚ್ಚಿನ ಸಮಯವನ್ನು ಮೈದಾನದಲ್ಲೇ ಕಳೆದಿದ್ದಾರೆ. ಇದಾಗ್ಯೂ ಅವರಿಗೆ ಐಸಿಸಿ ನಿಯಮಗಳ ಬಗ್ಗೆ ಸಂಪೂರ್ಣ ಅರಿವು ಇರುವ ಸಾಧ್ಯತೆಗಳಿಲ್ಲ. ಹೀಗಾಗಿ ಕೋಚ್ ಹಾಗೂ ಇತರೆ ಸಿಬ್ಬಂದಿಗಳು ಕಠಿಣ ನಿಯಮಗಳ ಬಗ್ಗೆ ವೈಭವ್ ಸೂರ್ಯವಂಶಿಗೆ ಅರಿವು ಮೂಡಿಸಬೇಕಾದ ಅನಿವಾರ್ಯತೆ ಇದೆ.

ಐಸಿಸಿ ನಿಯಮಗಳ ಪ್ರಕಾರ ಮೈದಾನದಲ್ಲಿ ದೈಹಿಕ ಸಂಪರ್ಕ ಅಥವಾ ತಳ್ಳಾಟಕ್ಕೆ ಕಠಿಣ ನಿಷೇಧವಿದೆ. ಹೀಗಾಗಿ ಶ್ರೀಲಂಕಾ ವಿರುದ್ಧ ನಡೆದ ಘಟನೆಗೆ 50 ಪರ್ಸೆಂಟ್ ಫೈನ್ ವೈಭವ್‌ಗೆ ಹಾಕಲಾಗಿದೆ.  ವೈಭವ್ ಸೂರ್ಯವಂಶಿ ಅವರಲ್ಲಿ ಅದ್ಭುತ ಬ್ಯಾಟಿಂಗ್ ಪ್ರತಿಭೆಯಿದೆ ಎಂಬುದು ನಿಜ. ಆದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉಳಿಯಲು ಕೇವಲ ರನ್ ಗಳಿಸಿದರೆ ಸಾಲದು, ಎದುರಾಳಿಗಳ ಮಾನಸಿಕ ದಾಳಿಯನ್ನು ನಗುಮೊಗದಿಂದಲೇ ಎದುರಿಸಿ ಬ್ಯಾಟ್ ಮೂಲಕವೇ ಉತ್ತರಿಸುವ ‘ಚಾಣಾಕ್ಷತೆ’ ಬೇಕು. ಬಿಸಿಸಿಐ ಈಗಿನಿಂದಲೇ ಇವರನ್ನು ಸರಿಯಾದ ಹಾದಿಗೆ ತಂದರೆ, ಭಾರತಕ್ಕೆ ಮತ್ತೊಬ್ಬ ಶ್ರೇಷ್ಠ ಆಟಗಾರ ಆಗುವುದ್ದರಲ್ಲಿ ನೋ ಡೌಟ್‌..

 

Kishor KV

Leave a Reply

Your email address will not be published. Required fields are marked *