ಕಾಲು ಊತ ಪದೇ ಪದೆ ಉಂಟಾಗುತ್ತಾ? – ಕಾಲು ಊತ ಬಂದ್ರೆ ಎಚ್ಚರವಹಿಸಬೇಕು ಏಕೆ?
ನಮ್ಮ ದೇಹದ ಒಳಗಿನ ಆರೋಗ್ಯ ಸಮಸ್ಯೆ ದೇಹದ ಮೇಲ್ಭಾಗದಿಂದ ಗೊತ್ತಾಗುತ್ತದೆ ಎಂದು ಹೇಳುತ್ತಾರೆ. ಉದಾಹರಣೆಗೆ ನಮಗೆ ವಯಸ್ಸಾಗುವುದು ನಮ್ಮ ಚರ್ಮದ ಸುಕ್ಕುಗಳಿಂದ ಕಾಣಿಸುತ್ತದೆ. ಇದೇ ರೀತಿ ಬೇರೆ ಆರೋಗ್ಯ ಸಮಸ್ಯೆಗಳು ಕೂಡ. ಕಾಲುಗಳು ಊತ ಬಂದರೆ ಅದಕ್ಕೆ ಕಾರಣ ಏನಿರಬಹುದು ಅಂತಾ ತಿಳಿದುಕೊಳ್ಳೊಣ.
ಇದನ್ನೂ ಓದಿ: ಟೈಟ್ ಜೀನ್ಸ್ ಧರಿಸಿದ್ರೆ ಶಕ್ತಿ ಕಳೆದುಕೊಳ್ಳುತ್ತವೆ ಕಾಲುಗಳು – ಜೀನ್ಸ್ ಪ್ಯಾಂಟ್ ನಿಂದ ಇಷ್ಟೆಲ್ಲಾ ಅಪಾಯ ಇದ್ಯಾ?
ಕೆಲವರಿಗೆ ಹೆಚ್ಚು ಹೊತ್ತು ಕುಳಿತುಕೊಂಡಿದ್ರೆ ಅಥವಾ ನಿಂತುಕೊಂಡ್ರೆ ಕಾಲುಗಳು ಊತ ಬರುತ್ತೆ. ಇದು ತಾತ್ಕಾಲಿಕ ಕೂಡ. ಇದರ ಬಗ್ಗೆ ಅಷ್ಟೇನೂ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಆದರೆ ಒಂದು ವೇಳೆ ಇದು ಧೀರ್ಘಕಾಲ ಮುಂದುವರೆದರೆ, ಆ ಸಂದರ್ಭದಲ್ಲಿ ನೀವು ಇದು ಬೇರೆ ಯಾವುದೋ ಸಮಸ್ಯೆ ಇರಬೇಕು ಎಂದು ಆಲೋಚನೆ ಮಾಡಲೇಬೇಕು. ನಮ್ಮ ಕಾಲುಗಳಲ್ಲಿ ನೀರು ತುಂಬಿಕೊಂಡಾಗ ಸಾಮಾನ್ಯವಾಗಿ ಕಾಲು ಗಳು ನೋಡಲು ದಪ್ಪ ಕಾಣುತ್ತವೆ. ಆದರೆ ಅದರ ಹಿಂದಿರುವ ಕಾರಣ ಬೇರೆಯೇ ಇದೆ.
ಕಿಡ್ನಿ ಸಮಸ್ಯೆ, ಲಿವರ್ ಸಂಬಂಧಿತ ಸಮಸ್ಯೆ, ಹೃದಯದ ತೊಂದರೆ ಇದ್ರೆ ಕೂಡ ಕಾಲುಗಳು ಊದಿಕೊಳ್ಳುತ್ತವೆ. ಇನ್ನು ಕಾಲುಗಳ ಊತ ಬಂದರೆ, ಅದರಲ್ಲಿ ಯಾವುದೇ ನೋವು ಇರುವುದಿಲ್ಲ. ಒಂದು ರೀತಿ ಕಾಲು ಬಿಗಿತ ಕಾಣುತ್ತದೆ ಅಷ್ಟೇ.ಆದರೆ ಭಾಗದಲ್ಲಿ ಕೆಂಪಾಗುವುದು, ಮುಟ್ಟಿದರೆ ಬಿಸಿ ಕಾಣುವುದು ಇವೆಲ್ಲವೂ ಸಹ ಉರಿಯುತದ ಲಕ್ಷಣಗಳಾಗಿವೆ. ಇದನ್ನು ಕೂಡ ನೀವು ನಿರ್ಲಕ್ಷ್ಯ ಮಾಡಲೇಬಾರದು.
ಇನ್ನು ಹಾರ್ಮೋನ್ ವ್ಯತ್ಯಾಸ ಉಂಟಾದ್ರೆ ಅಥವಾ ರಕ್ತ ಸಂಚಾರ ಹೆಚ್ಚಾಗಿರುವುದರಿಂದ ಕೂಡ ಆಗಿರಬಹುದು. ಹೀಗಾಗಿ ಕಾಲುಗಳು ಊದಿಕೊಂಡ್ರೆ ನಿರ್ಲಕ್ಷ್ಯ ಮಾಡಲೇಬೇಡಿ. ಆರಂಭದಲ್ಲಿಯೇ ಸಮಸ್ಯೆ ಯನ್ನು ಪತ್ತೆ ಹಚ್ಚಿ ಆನಂತರ ಅದಕ್ಕೆ ಸೂಕ್ತವಾದ ಚಿಕಿತ್ಸೆ ಪಡೆದುಕೊಳ್ಳೋದು ಉತ್ತಮ.