ಕೆಂಪು ಸಮುದ್ರದಲ್ಲಿ ತಾರಕಕ್ಕೇರಿದ ಸಂಘರ್ಷ – ಭಾರತದ ಮೇಲೂ ಪರಿಣಾಮ ಬೀರಿದ್ದು ಹೇಗೆ? ಯಾಕೆ?

ಕೆಂಪು ಸಮುದ್ರದಲ್ಲಿ ತಾರಕಕ್ಕೇರಿದ ಸಂಘರ್ಷ – ಭಾರತದ ಮೇಲೂ ಪರಿಣಾಮ ಬೀರಿದ್ದು ಹೇಗೆ? ಯಾಕೆ?

ಕೆಂಪು ಸಮುದ್ರದಲ್ಲಾಗುತ್ತಿರುವ ಸಂಘರ್ಷ ಭಾರತದ ಮೇಲೆ ಯಾವ ರೀತಿ ಎಫೆಕ್ಟ್ ಆಗುತ್ತೆ? ಹೇಗೆಲ್ಲಾ ಪರಿಣಾಮ ಬೀರಬಹುದು? ಕೆಂಪು ಸಮುದ್ರದಲ್ಲಿ ಬಂಡುಕೋರರ ಅಟ್ಟಹಾಸಕ್ಕೆ ಜನ ಜೀವನದ ಮೇಲೂ ಪರಿಣಾಮಗಳು ಬೀರುತ್ತಿದೆ. ಹೇಗೆ ಎಂಬ ಬಗ್ಗೆ ವಿವರಣೆ ಇಲ್ಲಿದೆ.

ಇದನ್ನೂ ಓದಿ: ಭಾರತಕ್ಕೆ ಬರುತ್ತಿದ್ದ ಹಡಗು ಕೆಂಪು ಸಮುದ್ರದಲ್ಲಿ ಹೌತಿಗಳಿಂದ ಹೈಜಾಕ್ – ಇಸ್ರೇಲ್ ಮೇಲಿನ ಸಿಟ್ಟಿಗೆ ಜಲಮಾರ್ಗ ಬಂದ್?

ಭಾರತ ಆಮದು ಮಾಡಿಕೊಳ್ತಿರೋ ಬಹುತೇಕ ನ್ಯಾಚ್ಯುರಲ್ ಗ್ಯಾಸ್ ನಮ್ಮಲ್ಲಿಗೆ ತಲುಪೋದು ಕೆಂಪು ಸಮುದ್ರದ ಮೂಲಕ. ಆಫ್ರಿಕಾದ ರಾಷ್ಟ್ರಗಳ ಜೊತೆಗೂ ಕೆಂಪು ಸಮುದ್ರದ ಮೂಲಕವೇ ಭಾರತ ವಹಿವಾಟು ನಡೆಸ್ತಿದೆ. ಇನ್ನು ಮಧ್ಯಪ್ರಾಚ್ಯ ರಾಷ್ಟ್ರಗಳ ವಿಚಾರದಲ್ಲಂತೂ ಕೇಳೋದೆ ಬೇಡ. ಕೆಂಪು ಸಮುದ್ರಕ್ಕೆ ಎಂಟ್ರಿಯಾಗದೆ ಮಿಡ್ಲ್​ ಈಸ್ಟ್ ಜೊತೆಗೆ ವ್ಯವಹಾರ ಸಾಧ್ಯವೇ ಇಲ್ಲ. ತೈಲ ಆಮದು ಮಾಡಿಕೊಳ್ಳೋಕೂ ಕೆಂಪು ಸಮುದ್ರ ನಮಗೆ ಬೇಕೇ ಬೇಕು. ಯುರೋಪ್ ರಾಷ್ಟ್ರಗಳ ಜೊತೆಗಿನ ರಫ್ತು ಮತ್ತು ಆಮದಿಗೂ ಕೆಂಪು ಸಮುದ್ರವೇ ಅನಿವಾರ್ಯ. ಆದ್ರೀಗ ಹೌತಿಗಳ ಅಟ್ಟಹಾಸದಿಂದ ಕೆಂಪು ಸಮುದ್ರದಲ್ಲಿ ಕಮರ್ಷಿಯಲ್ ಶಿಪ್​​ಗಳ ಸಂಚಾರವೇ ಆಲ್​ಮೋಸ್ಟ್ ಸ್ಥಗಿತವಾಗಿದೆ. ಇನ್ನು ಪರ್ಯಾಯ ಮಾರ್ಗವಾಗಿ ಆಫ್ರಿಕಾ ರಾಷ್ಟ್ರಗಳನ್ನ ಸುತ್ತು ಹಾಕಿಕೊಂಡು ಕೇಪ್ ಆಫ್ ಗುಡ್ ಹೋಪ್ ಮೂಲಕ ಸಾಗೋದಾದ್ರೆ ಹಡಗಿನಲ್ಲಿ ಅದನ್ನ ಕ್ರಮಿಸೋಕೆ ಎರಡು ವಾರ ಬೇಕಾಗುತ್ತೆ. ಇದ್ರಿಂದ ನಷ್ಟ ಅನುಭವಿಸೋದು ನಾವೇ. ಹೀಗಾಗಿ ಕೆಂಪು ಸಮುದ್ರದಲ್ಲಿ ಸಂಘರ್ಷ ಹೀಗೆ ಮುಂದುವರಿದ್ರೆ ಮುಂದಿನ ದಿನಗಳಲ್ಲಿ ಗ್ಯಾಸ್ ಮತ್ತು ತೈಲ ಬೆಲೆ ಏರಿಕೆಯಾಗುವ ಎಲ್ಲಾ ಸಾಧ್ಯತೆಯೂ ಇದೆ. ಜೊತೆಗೆ ಭಾರತದಿಂದ ಅತೀ ಹೆಚ್ಚು ಪ್ರಮಾಣದಲ್ಲಿ ಬಾಸುಮತಿ ರೈಸ್ ರಫ್ತಾಗುತ್ತಿದ್ದು, ಅದನ್ನ ಕೂಡ ಸಾಗಿಸೋದು ಕೆಂಪು ಸಮುದ್ರದ ಮೂಲಕವೇ. ಇಡೀ ಜಗತ್ತಿಗೆ 4 ಮಿಲಿಯನ್​ ಟನ್​ನಷ್ಟು ಅಕ್ಕಿ ನಮ್ಮಲ್ಲಿಂದ ರಫ್ತಾಗುತ್ತೆ. ಆದ್ರೆ ಇತ್ತೀಚೆಗೆ ಭಾರತ ಕೂಡ ಅಕ್ಕಿ ರಫ್ತಿನ ಪ್ರಮಾಣವನ್ನ ಕಡಿಮೆ ಮಾಡಿತ್ತು. ಆದ್ರೀಗ ಕೆಂಪು ಸಮುದ್ರದಲ್ಲಿ ಸಂಘರ್ಷವಾಗ್ತಿರೋದ್ರಿಂದ ಯುರೋಪ್​ ರಾಷ್ಟ್ರಗಳಿಗೆ ಅಕ್ಕಿ ರಫ್ತು ಮಾಡೋದಕ್ಕೂ ಸಮಸ್ಯೆಯಾಗಿದೆ. ಸುಮಾರು 5000 ಟನ್​ ಅಕ್ಕಿ ರಫ್ತಿನ ಒಪ್ಪಂದಕ್ಕೆ ಈಗಾಗ್ಲೇ ಭಾರತ ಸಹಿ ಹಾಕಿದ್ದು, ಈಗ ಅದನ್ನ ಸಾಗಿಸೋದೆ ದೊಡ್ಡ ಚಾಲೆಂಜ್ ಆಗಿದೆ.

ಇದೀಗ ಭಾರತ ಸರ್ಕಾರ ನಮ್ಮ ಕಮರ್ಶಿಯಲ್ ಶಿಪ್​ಗಳ ರಕ್ಷಣೆಗಾಗಿ ಅರೆಬಿಯನ್ ಸಮುದ್ರದಲ್ಲಿ ಮೂರು ಯುದ್ಧ ನೌಕೆಗಳನ್ನ ನಿಯೋಜಿಸಿದೆ. ಆದ್ರೆ ಎಕ್ಸ್​ಪೋರ್ಟ್​ ಮಾಡುವವರು ಬೆಲೆ ಹೆಚ್ಚಳ ಮಾಡ್ತಾ ಇದ್ದಾರೆ. ಇನ್ನೂ ಕೆಲ ಖಾಸಗಿ ಕಂಪನಿಗಳು ಶಿಪ್​ ಪೂರೈಕೆ ಮಾಡೋಕೆ ಒಪ್ತಾ ಇಲ್ಲ. ಅರೆಬಿಯನ್ ಸಮುದ್ರದ ಮೂಲಕ ಸಂಚರಿಸಲ್ಲ ಅಂತಿದ್ದಾರೆ. ಹಡಗಿನ ಮೇಲೆ ಅಟ್ಯಾಕ್ ಆದ್ರೆ ಏನ್ಮಾಡೋದು ಅನ್ನೋದು ಅವರ ಚಿಂತೆ. ಜಾಗತಿಕ ಮಟ್ಟದಲ್ಲಿ 10 ಶಿಪ್​​ ಕಂಪನಿಗಳ ಪೈಕಿ 8 ಶಿಪ್​​ಗಳ ಮಾಲೀಕರು ತಮ್ಮ ಹಡಗುಗಳ ಸಂಚಾರವನ್ನ ಸದ್ಯಕ್ಕೆ ಬಂದ್ ಮಾಡಿದ್ದಾರೆ. ಹೀಗಾಗಿ ಪ್ರಮುಖ ಸಪ್ಲೈ ಚೈನೇ ಬ್ರೇಕ್ ಆಗಿದೆ. ಹೀಗಾಗಿಯೇ ಕೆಲವೇ ಕೆಲವು ಶಿಪ್​ಗಳಷ್ಟೇ ಆಪರೇಟ್ ಆಗ್ತಿವೆ. ಅವರು ರಿಸ್ಕ್ ತೆಗೆದುಕೊಂಡು ಹೋಗೋಕೆ ರೇಟ್ ಜಾಸ್ತಿ ಮಾಡಿದ್ದಾರೆ. ಆ ಶಿಪ್​​ಗಳಲ್ಲಿ ಸಾಗಿಸಬೇಕು ಅನ್ನೋದಾದ್ರೆ ಖರ್ಚು ಕೂಡ ಹೆಚ್ಚಾಗುತ್ತೆ. ಇನ್ನೂ ಕೆಲ ಶಿಪ್ ಓನರ್​ಗಳು ಕೆಂಪು ಸಮುದ್ರ ಬಿಟ್ಟು ಬೇರೆ ರೂಟ್​ನಲ್ಲಿ ಹೋಗೋಕೆ ನಿರ್ಧರಿಸಿದ್ದಾರೆ. ಆಗ ಹಡಗಿಗೂ ಹೆಚ್ಚು ಇಂಧನ ಬೇಕಾಗುತ್ತೆ, ಡಿಸ್ಟಿನೇಶನ್ ರೀಚ್ ಆಗೋಕೆ ಹೆಚ್ಚಿನ ಸಮಯ ಕೂಡ ಬೇಕಾಗುತ್ತೆ. ಈಗಿನ ಮಾಹಿತಿ ಪ್ರಕಾರ 300 ಹಡಗುಗಳು ಆಲ್ಟರ್​​ನೇಟಿವ್ ರೂಟ್​ಗಳಲ್ಲಿ ಸಾಗ್ತಾ ಇವೆ. ಅಂದ್ರೆ ಇವೆಲ್ಲವೂ ಆಫ್ರಿಕಾ ಮೂಲಕ ಅಂದ್ರೆ ಕೇಪ್ ಆಫ್ ಗುಡ್ ಹೋಪ್ ದಾಟಿ ಸುಮಾರು 3500 ನಾಟಿಕಲ್ ಮೈಲಿ ದೂರ ಪ್ರಯಾಣಿಸಿ ಯುರೋಪ್​ ರಾಷ್ಟ್ರಗಳತ್ತ ಸಂಚರಿಸ್ತಾ ಇವೆ. ಭಾರತದಿಂದ ಯುರೋಪ್​​ಗೆ ಶಿಪ್ ಸಾಗೋದಾದ್ರೆ ಇಂಧನಕ್ಕೆ 1 ಮಿಲಿಯನ್ ಡಾಲರ್​ ಹೆಚ್ಚುವರಿ ಖರ್ಚು ಬೀಳುತ್ತೆ. ಈ ಎಲ್ಲಾ ಬೆಳವಣಿಗೆಗಳಿಂದ ಹಣದುಬ್ಬರ ಕೂಡ ಹೆಚ್ಚಾಗುತ್ತೆ. ನಮ್ಮ ಸರ್ಕಾರದ ಮೇಲೂ ಹೊರೆ ಬೀಳುತ್ತೆ. ಆಗ ಸರ್ಕಾರ ಕೂಡ ಬೆಲೆ ಏರಿಕೆ ಮಾಡುತ್ತೆ. ಇದ್ರ ನೇರ ಪರಿಣಾಮ ನಮ್ಮ, ನಿಮ್ಮೆಲ್ಲರ ಮೇಲೆ ಬೀಳುತ್ತೆ. ಇವಿಷ್ಟು ಕೆಂಪು ಸಮುದ್ರದಲ್ಲಿ ಹೌತಿ ಬಂಡೋಕೋರರ ಅಟ್ಟಹಾಸದಿಂದ ಆಗಿರೋ ಶಾಕಿಂಗ್ ಬೆಳವಣಿಗೆಗಳು.

 

Sulekha