ಬಾಲಿವುಡ್ ಬಿಚ್ಚಮ್ಮನಿಗೆ ಹೋಟೆಲ್ ಒಳಗೆ ನೋ ಎಂಟ್ರಿ – ಉರ್ಫಿಗೆ ಫುಲ್ ಉರಿ ಉರಿ..!

ಬಾಲಿವುಡ್ ಬಿಚ್ಚಮ್ಮನಿಗೆ ಹೋಟೆಲ್ ಒಳಗೆ ನೋ ಎಂಟ್ರಿ – ಉರ್ಫಿಗೆ ಫುಲ್ ಉರಿ ಉರಿ..!

ಉರ್ಫಿ ಜಾವೇದ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ನೆಟ್ಟಗೆ ಡ್ರೆಸ್ ಹಾಕಿಕೊಳ್ಳಲು ಇವಳಿಗೆ ಬರುವುದೇ ಇಲ್ವೇನೋ. ಇಲ್ಲ.. ಬಟ್ಟೆ ಅಂದ್ರೇನೇ ಅಲರ್ಜಿಯೋ.. ಚಿತ್ರ ವಿಚಿತ್ರ ರೀತಿಯಲ್ಲಿ ಬಟ್ಟೆ ಹಾಕಿಕೊಂಡು ಎದುರಿಗೆ ಬರುವ ಉರ್ಫಿ ಗಾಸಿಪ್ ಪ್ರಿಯರ ಫೆವರೇಟ್ ನಟಿಯೂ ಹೌದು. ಹಾಗಂತಾ ತಾನು ಮಾಡಿದ್ದೇ ಸರಿ. ತಾನು ಹಾಕಿಕೊಳ್ಳುವ ತುಂಡು ಬಟ್ಟೆ ಎಲ್ಲರಿಗೂ ಇಷ್ಟವಾಗುತ್ತೆ ಅನ್ನೋ ರೀತಿ ತಿರುಗಾಡಿದರೆ ಟೀಕೆಗಳ ಜೊತೆ ಕೆಲವೊಂದು ಕಡೆ ಆಕ್ರೋಶವೂ ವ್ಯಕ್ತವಾಗುತ್ತದೆ. ಇದೀಗ ಉರ್ಫಿ ನೆಪಮಾತ್ರಕ್ಕೆ ತುಂಡು ಬಟ್ಟೆ ಹಾಕಿಕೊಂಡು ಹೋಟೆಲ್ ವೊಂದಕ್ಕೆ ಹೋಗಿದ್ದಾಳೆ. ಇವಳನ್ನು ನೋಡಿದ ಹೋಟೆಲ್ ಸಿಬ್ಬಂದಿ ಒಳಗೆ ಬಿಡಲೇ ಇಲ್ಲ.

ಇದನ್ನೂ ಓದಿ: ತುಂಡುಡುಗೆಯಲ್ಲಿ ಕೊಡಗಿನ ಬೆಡಗಿ ಹಾಟ್ ಹಾಟ್..! – ರಶ್ಮಿಕಾ ಶಾರ್ಟ್ ಡ್ರೆಸ್‌ಗೆ ಫ್ಯಾನ್ಸ್ ಶಾಕ್..!

ಸಿಕ್ಕಾಪಟ್ಟೆ ಬೋಲ್ಡ್, ಅಲ್ಲಲ್ಲ.. ಓವರ್ ಆಗಿಯೇ ಬೋಲ್ಡ್ ಆಗಿರುವ ಉರ್ಫಿ ಜಾವೇದ್ ಇತ್ತೀಚೆಗೆ ಹೋಟೆಲ್ ಒಂದಕ್ಕೆ ಹೋಗಿದ್ದಳು. ಉರ್ಫಿ ಜಾವೇದ್ ಅವರನ್ನು ನೋಡಿ ಹೋಟೆಲ್ ಸಿಬ್ಬಂದಿ ಹೌಹಾರಿದ್ದಾರೆ. ಹೋಟೆಲ್ ಸಿಬ್ಬಂದಿಯೇ ಹೌಹಾರಿದ್ದಾರೆ ಅಂದರೆ ಉರ್ಫಿ ಅದೆಂಥಾ ಡ್ರೆಸ್ ಹಾಕಿದ್ದಾಳೋ.. ಇಲ್ಲ ಮೈಮೇಲೇ ಬಟ್ಟೆ ಇದ್ದು ಇರದಂಗೆ ಬಂದಿದ್ದಾಳೋ ಏನೋ.. ಇಂಥ ಬಟ್ಟೆ ಹಾಕಿಕೊಂಡು ಬಂದರೆ ಹೋಟೆಲ್ ಒಳಗೆ ಬರುವಂತಿಲ್ಲ ಎಂದು ಸಿಬ್ಬಂದಿ ಪ್ರವೇಶ ನಿರಾಕರಿಸಿದ್ದಾರೆ. ಇದರಿಂದ ಉರ್ಫಿಗೆ ಬೇಸರ ಆಗಿದೆ ‘ನನ್ನ ಬಟ್ಟೆಯ ಆಯ್ಕೆಯನ್ನು ನೀವು ಒಪ್ಪದಿದ್ದರೆ ಪರವಾಗಿಲ್ಲ. ಆದರೆ ಅದೇ ಕಾರಣದಿಂದ ನನ್ನನ್ನು ಬೇರೆ ರೀತಿ ನಡೆಸಿಕೊಳ್ಳುವುದು ಸರಿಯಲ್ಲ’ ಎಂದು ಉರ್ಫಿ ಜಾವೇದ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

suddiyaana