ಜಾಹ್ನವಿ ಬಳಸಿದ ಗಾಂಚಲಿ ಪದದಿಂದ ದೊಡ್ಮನೆ ರಣರಂಗ – ಇದು ಜಾಹ್ನವಿ ಪ್ರಕಾರ ಒಳ್ಳೇ ಪದವಂತೆ!

ಬಿಗ್‌ಬಾಸ್ ಮನೆಯಲ್ಲಿ ನಿರೂಪಕಿ ಜಾಹ್ನವಿ ನಾಲಿಗೆ ಹರಿಬಿಟ್ಟಿದ್ದಾರೆ. ಜಗಳ ಆಡುವಾಗ ಮಾತಿನ ಭರದಲ್ಲಿ ಜಾಹ್ನವಿ ಅವರು ಜಂಟಿಗಳ ಮೇಲೆ ಗಾಂಚಲಿ ಎಂಬ ಪದ ಪ್ರಯೋಗ ಮಾಡಿದ್ದಾರೆ. ಈ ಪದ ಬಳಸಿದ್ದಕ್ಕೆ ಜಂಟಿಗಳು ಸಿಟ್ಟಾಗಿದ್ದಾರೆ. ಆದರೆ, ಜಾಹ್ನವಿ ಮಾತ್ರ ಗಾಂಚಲಿ ಅಂತಾ ಪದೇ ಪದೇ ಹೇಳುವ ಮೂಲಕ ಕಿರಿಕಿರಿ ಮಾಡಿದ್ದಾರೆ.
ಇದನ್ನೂ ಓದಿ:ಅಶ್ವಿನಿ ಗೌಡ Vs ಅಶ್ವಿನಿ ಎಸ್ಎನ್ ಬಿಗ್ ಫೈಟ್! – ರಣರಂಗವಾಯ್ತು ಬಿಗ್‌ಬಾಸ್ ಮನೆ
ಜಾಹ್ನವಿ ಬಳಸಿದ ಗಾಂಚಲಿ ಪದದಿಂದ ಬಿಗ್‌ಬಾಸ್ ಸ್ಪರ್ಧಿಗಳು ಸಿಟ್ಟಾಗಿದ್ದಾರೆ. ಗಾಂಚಲಿ ಅಂತ ಬೈಯ್ಯಬೇಡಿ ಎಂದು ಜಂಟಿಗಳೆಲ್ಲರೂ ಜಾಹ್ನವಿ ವಿರುದ್ಧ ರೇಗಾಡಿದ್ದಾರೆ. ಅದರಿಂದ ಬಿಗ್ ಬಾಸ್ ಮನೆಯ ಕೆಲಸಗಳೆಲ್ಲವೂ ನಿಂತಲ್ಲೇ ನಿಂತಿವೆ. ಗಾಂಚಲಿ ಎಂಬುದು ಕೆಟ್ಟ ಪದ ಎಂದು ಮಂಜು ಭಾಷಿಣಿ ಹೇಳಿದರು. ಆದರೆ ಅದು ಒಂದು ಸಾಮಾನ್ಯ ಪದ ಎಂದು ಜಾಹ್ನವಿ ಅವರು ವಾದಿಸಿದರು.
ಅಷ್ಟೇ ಅಲ್ಲ, ಅಶ್ವಿನಿ ಅವರು ಜಾಹ್ನವಿ ಬಳಿ ಈ ಪದ ಪ್ರಯೋಗ ಮಾಡಬೇಡಿ ಎಂದು ಹೇಳಿದರು. ಆದರೆ, ಜಾಹ್ನವಿ ಮಾತ್ರ ನಾನು ಮಾತೋಡೋದೇ ಹೀಗೆ ಅನ್ನೋ ರೀತಿ ಪದೇ ಪದೇ ಅದೇ ಪದವನ್ನು ಹೇಳುತ್ತಾ ಹೋದರು. ಇದು ಜಂಟಿಗಳಿಗೆ ತುಂಬಾ ಕಿರಿಕಿರಿ ಮಾಡಿತು. ಈ ವಿಚಾರದಲ್ಲಿ ಬಿಗ್ ಬಾಸ್ ಮನೆಯಲ್ಲಿ ಕೊನೆಗೂ ಒಮ್ಮತ ಮೂಡಲಿಲ್ಲ. ಈ ಪದ ಬಳಕೆ ಮಾಡಿದ್ದು ತಪ್ಪು ಎಂದು ಮಂಜು ಭಾಷಿಣಿ, ಯಾಶಿಕಾ, ಗಿಲ್ಲಿ, ಕಾವ್ಯಾ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಇದೆಲ್ಲವನ್ನು ದೂರದಿಂದ ನೋಡುತ್ತಿದ್ದ ರಕ್ಷಿತಾ ಶೆಟ್ಟಿ ಮಧ್ಯ ಪ್ರವೇಶ ಮಾಡಿ ಪ್ರಶ್ನೆಯೊಂದನ್ನು ಮಾಡುತ್ತಾರೆ. ಎಲ್ಲರ ಮಧ್ಯೆ ಬಂದ ರಕ್ಷಿತಾ, ಜಾನ್ವಿ ಅವರಿಗೆ ನೀವು ಬಳಸಿದ ಪದದ ಅರ್ಥ ಹೇಳಿ ಎಂದು ಕೇಳುತ್ತಾರೆ. ಅದಕ್ಕೆ ಜಾನ್ವಿ ಅಹಂಕಾರ ಎಂದು ಉತ್ತರ ನೀಡುತ್ತಾರೆ.

ನೋಡಿರಿ

