ಹೊಸಕೋಟೆ ಬಳಿ ಭೀಕರ ಅಪಘಾತಕ್ಕೆ 7 ಮಂದಿ ಬಲಿ! – ಜಾಲಿ ರೈಡ್ ಹೊರಟ ವಿದ್ಯಾರ್ಥಿಗಳು ದುರಂತ ಅಂತ್ಯ!

ಹೊಸಕೋಟೆ ಬಳಿ ಭೀಕರ ಅಪಘಾತಕ್ಕೆ 7 ಮಂದಿ ಬಲಿ! – ಜಾಲಿ ರೈಡ್ ಹೊರಟ ವಿದ್ಯಾರ್ಥಿಗಳು ದುರಂತ ಅಂತ್ಯ!

ಬೆಂಗಳೂರಿನಲ್ಲಿ ಭೀಕರ ಅಪಘಾತವೊಂದು ಸಂಭವಿಸಿದ್ದು, 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸರಣಿ ಅಪಘಾತ ಹೊಸಕೋಟೆ ತಾಲೂಕಿನ ಎಂ ಸತ್ಯವರ ಗ್ರಾಮದ ಬಳಿ ನಡೆದಿದೆ.

ಇದನ್ನೂ ಓದಿ: ರಾಜ್ಯ ಬಜೆಟ್‌ ಮಂಡನೆಗೆ ಮುಹೂರ್ತ ಫಿಕ್ಸ್!‌ – ಮತ್ತೊಂದು ದಾಖಲೆ ಬರೆಯಲು ಸಿಎಂ ಸಿದ್ಧರಾಮಯ್ಯ ಸಜ್ಜು!

ಶುಕ್ರವಾರ ಬೆಳಗ್ಗಿನ ಜಾವ ಹೊಸಕೋಟೆ-ದಾಬಸ್ ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿದೆ. ಕ್ಯಾಂಟರ್‌, ಬೈಕ್‌ ಮತ್ತು ಕಾರಿನ ನಡುವೆ ಸಂಭವಿಸಿದ ಸರಣಿ ಅಪಘಾತ ಸಂಭವಿಸಿದ್ದು, XUV 700 ಕಾರಿನಲ್ಲಿದ್ದ 6 ಜನ ಹಾಗೂ ಓರ್ವ ಬೈಕ್‌ ಸವಾರ ಸೇರಿ 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹಗಳನ್ನ ಹೊಸಕೋಟೆಯ ಸರ್ಕಾರಿ ಆಸ್ವತ್ರೆಗೆ ರವಾನಿಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಅಪಘಾತಕ್ಕೀಡಾದ XUV 700 ಕಾರು ( ಸಂಖ್ಯೆ KA-03 NW-0138) ಹೊಸಕೋಟೆಯಿಂದ ದೇವನಹಳ್ಳಿ ಮಾರ್ಗವಾಗಿ ಬರುತ್ತಿತ್ತು. ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಹೆಚ್ಚಿನವರು ವಿದ್ಯಾರ್ಥಿಗಳಾಗಿದ್ದು, ಮೃತ ವಿದ್ಯಾರ್ಥಿಗಳ ಗುರುತು ಪತ್ತೆಯಾಗಿದೆ.

ಮೃತ ವಿದ್ಯಾರ್ಥಿಗಳ ವಿವರ

ಅಶ್ವಿನ್ ನಾಯರ್ (17) – ಆರ್‌ವಿ ಪಿಯು ಕಾಲೇಜ್ ವಿದ್ಯಾರ್ಥಿ, ಕೊತ್ತನೂರು ನಿವಾಸಿ

ಅರ್ಹನ್ ಶರೀಫ್ – ಸಿಎಂಆರ್ ಶಾಲೆ ವಿದ್ಯಾರ್ಥಿ, ಹೆಚ್‌ವಿಆರ್ ಲೇಔಟ್ ನಿವಾಸಿ

ಅಯನ್ ಅಲಿ (17) – ಸಿಎಂಆರ್ ಶಾಲೆ ವಿದ್ಯಾರ್ಥಿ

ಭರತ್ (18) – ಸಿಎಂಆರ್ ಕಾಲೇಜ್ ವಿದ್ಯಾರ್ಥಿ, ಫ್ರೇಜರ್ ಟೌನ್ ನಿವಾಸಿ

ಈತನ್ ಜಾರ್ಜ್ (17) – ಆರ್‌ವಿ ಪ್ರಥಮ ಪಿಯು ಕಾಲೇಜ್ ವಿದ್ಯಾರ್ಥಿ, ಹುಳಿಮಾವು ನಿವಾಸಿ

ಬಾಬಿ – ಮೃತಪಟ್ಟ ಮತ್ತೊಬ್ಬ ಯುವಕ

ಗಗನ್ (26) – ಮೃತ ಬೈಕ್ ಸವಾರ, ಸಫಲ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ

Shwetha M

Leave a Reply

Your email address will not be published. Required fields are marked *