ತಾಯಿಗೆ ಕಣ್ಣು ಕಾಣಲ್ಲ.. ಪಾರ್ಟ್ ಟೈಮ್ ಕೆಲಸ ಮಾಡುತ್ತಾ ಮನೆಗೆ ಆಧಾರವಾಗಿದ್ದ!– ಭೀಕರ ಅಪಘಾತಕ್ಕೆ ಗಗನ್ ಬಲಿ!

ತಾಯಿಗೆ ಕಣ್ಣು ಕಾಣಲ್ಲ.. ಪಾರ್ಟ್ ಟೈಮ್ ಕೆಲಸ ಮಾಡುತ್ತಾ ಮನೆಗೆ ಆಧಾರವಾಗಿದ್ದ!– ಭೀಕರ ಅಪಘಾತಕ್ಕೆ ಗಗನ್ ಬಲಿ!

ಹೊಸಕೋಟೆಯಲ್ಲಿ ನಡೆದ ಭೀಕರ ಅಪಘಾತ ಸಂಭವಿಸಿದೆ. ಬಾಳಿ ಬದುಕಬೇಕಿದ್ದ ಮಕ್ಕಳು ದುರಂತ ಅಂತ್ಯ ಕಂಡಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ತನ್ನದಲ್ಲದ ತಪ್ಪಿಗೆ ಬೈಕ್‌ ಸವಾರ ಗಗನ ದುರಂತ ಅಂತ್ಯ ಕಂಡಿದ್ದಾನೆ. ಆತನ ಕರುಣಾಜನಕ ಕತೆ ಇಲ್ಲಿದೆ.

ಇದನ್ನೂ ಓದಿ:ಶಾಲೆಯಲ್ಲಿ ವಿದ್ಯಾರ್ಥಿನಿ ಬೆರಳುಗಳೇ ಕಟ್! – ಮಗಳ ಬಗ್ಗೆ ಪ್ರಶ್ನಿಸಿದ್ದಕ್ಕೆ 2 ಸಾವಿರ ಕೊಟ್ಟು ಕಳುಹಿಸಿದ ಶಿಕ್ಷಕರು! 

ತಂದೆ ತಾಯಿಗೆ ಗಗನ್‌ ಒಬ್ಬನೇ ಮಗ. ತಾಯಿಗೆ ಕಣ್ಣು ಕಾಣುತ್ತಿಲ್ಲ. ಒಬ್ಬನೇ ಮಗ ಆಗಿದ್ದರಿಂದ ಈತನೇ ಮನೆಗೆ ಆಧಾರ ಸ್ತಂಭ ಆಗಿದೆ. ಓದುತ್ತಾ ಪಾರ್ಟ್‌ ಟೈಮ್‌ ಕೆಲಸ ಮಾಡಿಕೊಂಡು ಮನೆಯವರನ್ನು ನೋಡಿಕೊಳ್ಳುತ್ತಿದ್ದ. ಇದೀಗ ಗಗನ ಭೀಕರ ಅಪಘಾತದಲ್ಲಿ ಅಸುನೀಗಿದ್ದಾನೆ. ಮಗನನ್ನು ಕಳೆದುಕೊಂಡ ಹೆತ್ತವರು ಕಣ್ಣೀರು ಹಾಕುತ್ತಿದ್ದಾರೆ.

ಬೆಳಗ್ಗಿನ ಜಾವ ನಡೆದಿದ್ದೇನು?

ದೇವನಹಳ್ಳಿ ತಾಲೂಕಿನ ದೇವನಾಯಕನಹಳ್ಳಿಯ 26 ವರ್ಷದ ಗಗನ್ ಕೆಲಸ ಮುಗಿಸಿ ಮನೆಗೆ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ಗಗನ್ ಓದಿಕೊಂಡೇ ಹಾಪ್ ಕಾಮ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಗಗನ್, ಸಂಜೆ 5 ಗಂಟೆಗೆ ಹೋಗಿ ಬೆಳಗ್ಗಿನ ಜಾವ 3 ಗಂಟೆಗೆ ಮನೆಗೆ ಬರ್ತಿದ್ದ. ನಿನ್ನೆ ರಾತ್ರಿ ಪಾಳಿಯಾಗಿದ್ದರಿಂದ ಕೆಲಸ

ಏನಿದು ಘಟನೆ?

ಹೊಸಕೋಟೆಯಿಂದ ದೇವನಹಳ್ಳಿ ಕಡೆ ಅತಿವೇಗವಾಗಿ ಬರ್ತಿದ್ದ ಎಕ್ಸ್ಯುವಿ ಕಾರು, ಬೈಕ್‌ಗೆ ಡಿಕ್ಕಿಯಾಗಿ ನಂತರ ಡಿವೈಡರ್‌ಗೆ ಗುದ್ದಿ ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ 26 ವರ್ಷದ ಗಗನ್ ಹಾಗೂ ಕಾರಿನಲ್ಲಿದ್ದವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಅಶ್ವಿನ್, ಅಯಾನ್ ಅಲಿ, ಭರತ್, ಅರ್ಹಾನ್, ಇತನ್ ಜಾರ್ಜ್ ಎಂದು ಗುರುತಿಸಲಾಗಿದೆ. ಆರ್ ವಿ ಹಾಗೂ ಸಿಎಮ್ ಆರ್ ಕಾಲೇಜು ವಿದ್ಯಾರ್ಥಿಗಳು ಎಂದು ಹೇಳಲಾಗ್ತಿದೆ. ಎಲ್ಲರು ಕೊತ್ತನೂರಿನ ನಿವಾಸಿಗಳಾಗಿದ್ದಾರೆ. ಘಟನೆ ಸಂಬಂಧ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

Shwetha M

Leave a Reply

Your email address will not be published. Required fields are marked *