ಕುದುರೆ ಬಾಲದ ಕೂದಲಿನ ಹಾಸಿಗೆ ಇದು – ಇದರ ಬೆಲೆಯೇ 5.5 ಕೋಟಿ ರೂಪಾಯಿ!

ಕುದುರೆ ಬಾಲದ ಕೂದಲಿನ ಹಾಸಿಗೆ ಇದು – ಇದರ ಬೆಲೆಯೇ 5.5 ಕೋಟಿ ರೂಪಾಯಿ!

ಬಡವರಿಗೆ ಭೂಮಿಯೇ ಹಾಸಿಗೆ ಆಕಾಶವೇ ಹೊದಿಕೆ.. ಆದ್ರೂ ನೆಮ್ಮದಿಯಾಗಿ ನಿದ್ರೆ ಮಾಡ್ತಾರೆ.. ಲಕ್ಷಗಟ್ಟಲೆ ಖರ್ಚು ಮಾಡಿ ಬೆಡ್ ತಗೊಂಡ್ರೂ ಕೆಲವರಿಗೆ ಸರಿಯಾಗಿ ನಿದ್ದೆ ಬರಲ್ಲ. ಆದ್ರೆ ಈ ಬೆಡ್ ಬೆಲೆ ಕೇಳಿದ್ರೆ ಶ್ರೀಮಂತ ತಲೆಯೂ ತಿರುಗುತ್ತೆ.

ದಿನವಿಡೀ ಕೆಲಸ ಮುಗಿಸಿ ಮಲಗುವಾಗ ಬೆಡ್ ಮೆತ್ತಗೆ ಇರ್ಬೇಕು ಅನ್ನೋದು ಎಲ್ಲರ ಆಸೆ. ಆದರೆ ಈ ಹಾಸಿಗೆ ಬೆಲೆಯೇ ಶಾಕ್ ಆಗುವಂತಿದೆ. ಅಮೆರಿಕ ಮೂಲದ ಹ್ಯಾಸ್ಟೆನ್ಸ್ ಹೆಸರಿನ ಕಂಪನಿ ತಯಾರಿಸಿರುವ ಬೆಡ್​ ಬೆಲೆ ಬರೋಬ್ಬರಿ 5ಕೋಟಿ 52 ಲಕ್ಷ ರೂಪಾಯಿ ಅಂತೆ. ಈ ಬೆಡ್ನ ಸ್ಪೆಷಾಲಿಟಿ ಏನಂದ್ರೆ ಇದನ್ನ ತಯಾರಿಸಲು ಕುದುರೆ ಬಾಲದ ಕೂದಲನ್ನು ಬಳಸಲಾಗಿದ್ಯಂತೆ. ಖರೀದಿಸುವವರಿಗೆ 25 ವರ್ಷಗಳ ವಾರಂಟಿ ನೀಡ್ತಾರಂತೆ.. ಹಾಗೇನಾದ್ರೂ ನೀವು ಹಾಸಿಗೆ ಕೊಳ್ಳುವ ಮುನ್ನ ಒಂದು ರಾತ್ರಿ ಮಲಗಿ ಟ್ರಯಲ್ ಕೂಡ ನೋಡಬಹುದು. ಆದ್ರೆ ಒಂದು ರಾತ್ರಿಗೆ  8 ಲಕ್ಷ 74 ಸಾವಿರ ರೂಪಾಯಿಗಳನ್ನು ಪಾವತಿಸಬೇಕು ಅಷ್ಟೇ. ಇದೆಲ್ಲ ಬಿಟ್ಟು ಐದೂವರೆ ಕೋಟಿ ಕೊಟ್ಟು ಒಂದು ಬೆಡ್ ತಗೊಳ್ಳೋ ಬದಲು ಹೊಸದಾಗಿ ಸೈಟ್ ತಗೊಂಡು ಮನೆನೇ ಕಟ್ಟಿಕೊಳ್ಳಬಹುದು.

Shantha Kumari