ಇಸ್ರೇಲ್ ಯುದ್ಧದಲ್ಲಿ ಹೇಗೆಲ್ಲಾ ನಡೆದಿದೆ ಗೊತ್ತಾ ಮಹಿಳೆಯರ ಲೈಂಗಿಕ ದೌರ್ಜನ್ಯ? – ಬೆಚ್ಚಿಬೀಳಿಸುತ್ತಿದೆ ತನಿಖಾ ವರದಿ!

ಇಸ್ರೇಲ್ ಯುದ್ಧದಲ್ಲಿ ಹೇಗೆಲ್ಲಾ ನಡೆದಿದೆ ಗೊತ್ತಾ ಮಹಿಳೆಯರ ಲೈಂಗಿಕ ದೌರ್ಜನ್ಯ? – ಬೆಚ್ಚಿಬೀಳಿಸುತ್ತಿದೆ ತನಿಖಾ ವರದಿ!

ಇಸ್ರೇಲ್ ಹಾಗೂ ಹಮಾಸ್ ನಡುವಿನ ಯುದ್ಧದಲ್ಲಿ ಆಗುತ್ತಿರುವ ಅನಾಹುತಗಳು ಒಂದೆರಡಲ್ಲ. ಅದರಲ್ಲೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ನಾಗರಿಕ ಸಮಾಜವೇ ತಲೆತಗ್ಗಿಸುವ ರೀತಿಯಲ್ಲಿ ನಡೆದಿವೆ.  ಲೈಂಗಿಕ ದೌರ್ಜನ್ಯದ ಭೀಕರತೆ ಈಗ ಒಂದೊಂದಾಗಿ ಹೊರಬರುತ್ತಿದೆ. ದಕ್ಷಿಣ ಇಸ್ರೇಲ್‌ನಲ್ಲಿ ಅಕ್ಟೋಬರ್ 7 ರಂದು ಹಮಾಸ್ ನಡೆಸಿದ ದಾಳಿಯ ನಂತರ, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಭೀಕರತೆಯನ್ನು ಅಮೆರಿಕದ ಪ್ರತಿಷ್ಠಿತ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ತಿಂಗಳುಗಳ ಕಾಲ ತನಿಖೆ ನಡೆಸಿದ ನ್ಯೂಯಾರ್ಕ್ ಟೈಮ್ಸ್ , ಭಯೋತ್ಪಾದಕರು ಗುರಿಯಾಗಿಸಿಕೊಂಡ ಅನೇಕ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯ ಮತ್ತು ದೇಹಗಳನ್ನು ವಿರೂಪಗೊಳಿಸಿರುವ ಬಗ್ಗೆ ವರದಿ ಪ್ರಕಟಿಸಿದೆ.

ಇದನ್ನೂ ಓದಿ: 500 ರೂಪಾಯಿಗೆ ಸಿಗುತ್ತಾ ಗ್ಯಾಸ್ ಸಿಲಿಂಡರ್? – ಇ-ಕೆವೈಸಿ ಮಾಡಿಸದಿದ್ರೆ ಏನಾಗುತ್ತೆ?

ಸಂತ್ರಸ್ತರಲ್ಲಿ ಒಬ್ಬರಾದ ಮಧ್ಯ ಇಸ್ರೇಲ್‌ನ ಎರಡು ಮಕ್ಕಳ ತಾಯಿಯಾದ ಗಾಲ್ ಅಬ್ದುಶ್, ಹತ್ಯಾಕಾಂಡದ ಸ್ಥಳವಾಗಿ ಮಾರ್ಪಟ್ಟಿದ್ದ ಪ್ರದೇಶದಿಂದ ನಾಪತ್ತೆಯಾಗಿದ್ದರು. ಕಾಣೆಯಾದ ತನ್ನ ಸ್ನೇಹಿತನನ್ನು ಹುಡುಕುತ್ತಿರುವ ಮಹಿಳೆಯೊಬ್ಬರು ಚಿತ್ರೀಕರಿಸಿದ ವೈರಲ್ ವಿಡಿಯೊದಲ್ಲಿ ಗಾಲ್ ಅಬ್ದುಶ್ ರಸ್ತೆಯ ಮೇಲೆ ಬಿದ್ದಿರುವ ದೃಶ್ಯ ಸೆರೆಯಾಗಿದೆ. ಆಕೆಯ ಮೇಲೆ ತುಂಡುಬಟ್ಟೆ ಮಾತ್ರವೆ ಇದ್ದು, ಆಕೆಯ ಮುಖ ಗುರುತಿಸಲಾಗದಷ್ಟು ಸುಟ್ಟುಹೋಗಿತ್ತು.

ಇಸ್ರೇಲಿ ಪೊಲೀಸ್ ಅಧಿಕಾರಿಗಳು, ವಿಡಿಯೊ ಸಾಕ್ಷ್ಯವನ್ನು ಆಧರಿಸಿ, ಗಾಲ್ ಅಬ್ದುಶ್ ಅತ್ಯಾಚಾರಕ್ಕೊಳಗಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಆಕೆಯ ಮೇಲೆ ನಡೆದಿರುವ ದೌರ್ಜನ್ಯ ಇಸ್ರೇಲಿ ಮಹಿಳೆಯರ ಮೇಲೆ ಉಂಟಾದ ಭಯಾನಕತೆಯ ಸಂಕೇತವಾಗಿದೆ ಎಂದು ಇಸ್ರೇಲ್ ನಲ್ಲಿ ಆಕ್ರೋಶ ವ್ಯಕ್ತವಾಗುತ್ತದೆ. ಇನ್ನು ನ್ಯೂಯಾರ್ಕ್ ಟೈಮ್ಸ್ ತನಿಖೆಯು ಇಸ್ರೇಲಿ ಮಹಿಳೆಯರು ಮತ್ತು ಹುಡುಗಿಯರು ಲೈಂಗಿಕವಾಗಿ ದೌರ್ಜನ್ಯಕ್ಕೊಳಗಾದ ಅಥವಾ ವಿರೂಪಗೊಳಿಸಲಾದ ಕನಿಷ್ಠ ಏಳು ಸ್ಥಳಗಳನ್ನು ಗುರುತಿಸಿದೆ. ನ್ಯೂಯಾರ್ಕ್ ಟೈಮ್ಸ್ ಸಂದರ್ಶನ ಮಾಡಿದ 150 ಜನರಲ್ಲಿ ಸಾಕ್ಷಿಗಳು, ವೈದ್ಯಕೀಯ ಸಿಬ್ಬಂದಿ, ಸೈನಿಕರು ಮತ್ತು ಸಲಹೆಗಾರರು ಅಕ್ಟೋಬರ್ 7 ರಂದು ವ್ಯಾಪಕವಾಗಿ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.

ರೇವ್, ಗಾಜಾ ಗಡಿಯಲ್ಲಿರುವ ಸೇನಾ ನೆಲೆಗಳು ಮತ್ತು ಕಿಬ್ಬುತ್ಜಿಮ್​​​ನಲ್ಲಿ  ಭಯೋತ್ಪಾದನೆ ನಡೆದಿದ್ದು ಗಾಲ್ ಅಬ್ದುಶ್​​ನ ಶವ ಪತ್ತೆಯಾದ ಹೆದ್ದಾರಿ ಮಾರ್ಗ 232 ರ ಉದ್ದಕ್ಕೂ ವಿವಿಧ ಸ್ಥಳಗಳಲ್ಲಿ ಮಹಿಳೆಯರ ಅತ್ಯಾಚಾರ ಮತ್ತು ಹತ್ಯೆಯ ಗ್ರಾಫಿಕ್ ದೃಶ್ಯಗಳನ್ನು ಸಾಕ್ಷಿಗಳು ವಿವರಿಸಿದ್ದಾರೆ.

ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಸ್ವಯಂಸೇವಕ ವೈದ್ಯರು ಮತ್ತು ಸೈನಿಕರು ಗಾಲ್ ಅಬ್ದುಶ್​​ನಂತೆಯೇ  30 ಕ್ಕೂ ಹೆಚ್ಚು ಮಹಿಳೆಯರು ಮತ್ತು ಹುಡುಗಿಯರ ದೇಹಗಳನ್ನು ಪತ್ತೆ ಮಾಡಲಾಗಿದೆಯಂತೆ. ಹೆಣ್ಮಕ್ಕಳ ಮೇಲೆ ಪೈಶಾಚಿಕ ರೀತಿಯಲ್ಲಿ ಅತ್ಯಾಚಾರವೆಸಗಿ ಕೊಂದು ಹಾಕಿದ ಫೋಟೊಗಳು ಸಿಕ್ಕಿವೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಹೇಳುತ್ತದೆ. ಇಸ್ರೇಲಿ ಮಿಲಿಟರಿ ಒದಗಿಸಿದ ಮತ್ತೊಂದು ವಿಡಿಯೊದಲ್ಲಿ ಗಾಜಾ ಬಳಿಯ ನೆಲೆಯಲ್ಲಿ ಇಬ್ಬರು ಸತ್ತ ಸೈನಿಕರನ್ನು ತೋರಿಸಲಾಗಿದ್ದು, ಅವರ ಜನನಾಂಗ ಭಾಗದಲ್ಲಿ ನೇರವಾಗಿ ಗುಂಡು ಹಾರಿಸಲಾಗಿದೆ ಎಂಬುದನ್ನು ವಿಡಿಯೋ ದೃಢಪಡಿಸಿದೆ.ಇದರ ನಡುವೆ, ಹಮಾಸ್ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ನಿರಾಕರಿಸಿದೆ. ಇದು ಇಸ್ರೇಲಿಯರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ಇಸ್ರೇಲಿ ಪೊಲೀಸರು, ಅಕ್ಟೋಬರ್ 7 ರಲ್ಲಿನ ಘಟನೆಗಳನ್ನು ಒಪ್ಪಿಕೊಂಡಿದ್ದು ಆರಂಭದಲ್ಲಿ ಮಹಿಳೆಯರ ದೇಹದಿಂದ ಫೋರೆನ್ಸಿಕ್ ಪುರಾವೆಗಳನ್ನು ಸಂಗ್ರಹಿಸಲು ಗಮನಹರಿಸಲಿಲ್ಲ ಎಂದು ವರದಿ ಬಹಿರಂಗಪಡಿಸಿದೆ. ಅವ್ಯವಸ್ಥೆ, ದುಃಖ ಮತ್ತು ಧಾರ್ಮಿಕ ಕರ್ತವ್ಯಗಳು ಅವಸರದ ಶವ ಸಂಸ್ಕಾರಕ್ಕೆ ಕಾರಣವಾಯಿತು, ಅನೇಕ ದೇಹಗಳು ಪರೀಕ್ಷಿಸದೆ ಉಳಿದಿವೆ. ಘರ್ಷಣೆಯ ಸಮಯದಲ್ಲಿ ವ್ಯಾಪಕವಾದ ಲೈಂಗಿಕ ಹಿಂಸೆಯ ಪ್ರಕರಣಗಳಲ್ಲಿ ವಿಶಿಷ್ಟವಾದ ವಿಧಿವಿಜ್ಞಾನ ಸಾಕ್ಷ್ಯವನ್ನು ಸಂಗ್ರಹಿಸುವಲ್ಲಿ ತನಿಖೆಯು ಅಡಚಣೆಗಳನ್ನು ಎದುರಿಸಿತು ಎಂದು ವರದಿಯಲ್ಲಿ ಹೇಳಲಾಗಿದೆ.

Shwetha M