ಮಹಿಳೆ ಜೇಬಿನಲ್ಲಿದ್ದ ಮೊಬೈಲ್ ಬ್ಲಾ*ಸ್ಟ್ – ಯಾಕೆ ಮೊಬೈಲ್ ಬ್ಲಾ*ಸ್ಟ್ ಆಗುತ್ತೆ ಗೊತ್ತಾ?

ಪ್ರತಿಯೊಬ್ಬರು ಕೂಡ ಮೊಬೈಲ್ ಬಳಸುತ್ತಾರೆ.. ದಿನವಿಡೀ ಫೋನ್‌ಗೆ ಅಂಟಿಕೊಂಡು ಇರ್ತಾರೆ.. ಆದ್ರೆ ತುಂಬಾ ಮೊಬೈಲ್ ಬಳಸೋರು ಹುಷಾರ್. ಬ್ರೆಜಿಲ್‌ನ ಅನಪೊಲಿಸ್‌ನಲ್ಲಿ ಮಹಿಳೆಯೊಬ್ಬರ ಹಿಂದಿನ ಜೇಬಿನಲ್ಲಿ ಇರಿಸಲಾಗಿದ್ದ ಮೊಬೈಲ್ ಫೋನ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಈ ಮೊಬೈಲ್ ಫೋನ್ ಮೊಟೊರೊಲಾ ಕಂಪನಿಯದ್ದಾಗಿದೆ ಎನ್ನಲಾಗಿದ್ದು, ಮಹಿಳೆ ಸೂಪರ್ ಮಾರ್ಕೆಟ್ ನಲ್ಲಿ ದಿನಸಿ ವಸ್ತುಗಳನ್ನು ಖರೀದಿಸಲು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
ಇದನ್ನೂ ಓದಿ: ಕೆಎಲ್ ರಾಹುಲ್ ಫಸ್ಟ್ ಚಾಯ್ಸ್ – CTಗೂ ಕನ್ನಡಿಗನೇ ವಿಕೆಟ್ ಕೀಪರ್
ಇದ್ದಕ್ಕಿದ್ದಂತೆ ಮಹಿಳೆಯ ಪ್ಯಾಂಟ್ ನಿಂದ ಹೊಗೆ ಬರಲು ಪ್ರಾರಂಭಿಸಿದ್ದು ಅದನ್ನು ನೋಡಿ ಆಕೆಯ ಪತಿ ಗಾಬರಿಯಾಗಿದ್ದಾರೆ. ನೋಡ ನೋಡುತ್ತಿದ್ದಂತೆ ಅವನ ಹೆಂಡತಿಯ ಜೇಬಿನಲ್ಲಿದ್ದ ಮೊಬೈಲ್ ಫೋನ್ ಬ್ಲಾಸ್ಟ್ ಆಗಿದೆ. ಈ ಫೋನ್ ನಾನು ಒಂದು ವರ್ಷದ ಹಿಂದೆ ಖರೀದಿಸಿದ್ದ Motorola Moto E32 ಆಗಿತ್ತು. ಈ ಭೀಕರ ಘಟನೆ ಸೂಪರ್ ಮಾರ್ಕೆಟ್ ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಹಿಳೆ ಜೋರಾಗಿ ಕಿರುಚುತ್ತಿರುವುದನ್ನು ಮತ್ತು ಆಕೆಯ ಪತಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿಸಿದ್ದಾರೆ. ಫೋನ್ ಸ್ಫೋಟಗೊಂಡ ಕಾರಣ ಮಹಿಳೆಯ ಬೆನ್ನು, ಕೈಗಳು ಮತ್ತು ಸೊಂಟದ ಕೆಳಭಾಗವು ತೀವ್ರವಾಗಿ ಸುಟ್ಟುಹೋಗಿದೆ ಎಂದು ಹೇಳಲಾಗುತ್ತಿದೆ. ಘಟನೆ ನಡೆದ ತಕ್ಷಣ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಹೀಗಾಗಿ ಹೆಚ್ಚು ಮೊಬೈಲ್ ಬಳಸೋರು ಎಚ್ಚರಿಕೆಯಿಂದ ಇರಿ. ಚಾರ್ಜ್ ಮಾಡುವಾಗ ಅಥವಾ ದೀರ್ಘಕಾಲದ ಬಳಕೆಯ ನಂತರ ಫೋನ್ ಹೆಚ್ಚು ಬಿಸಿಯಾಗಿದ್ದರೆ, ಅದನ್ನು ತಂಪಾದ ಸ್ಥಳದಲ್ಲಿ ಇರಿಸಿ. ಕಡಿಮೆ ಮತ್ತು ಸ್ಥಳೀಯ ಚಾರ್ಜರ್‌ಗಳು ಮತ್ತು ಬ್ಯಾಟರಿಗಳು ಫೋನ್‌ಗೆ ಹಾನಿಯನ್ನುಂಟುಮಾಡಬಹುದು, ಆದ್ದರಿಂದ ಯಾವಾಗಲೂ ಮೂಲ ಚಾರ್ಜರ್ ಅನ್ನು ಬಳಸಿ. ಚಾರ್ಜ್ ಮಾಡುವಾಗ ಮೊಬೈಲ್ ಬಳಸಬೇಡಿ. ನಿಮ್ಮ ಫೋನ್‌ನ ಬ್ಯಾಟರಿ ಊದಿಕೊಳ್ಳುತ್ತಿದ್ದರೆ ಅಥವಾ ಫೋನ್ ನಿಧಾನವಾಗುತ್ತಿದ್ದರೆ, ತಕ್ಷಣ ಅದನ್ನು ಬದಲಾಯಿಸಿ. ರಾತ್ರಿಯಿಡೀ ಫೋನ್ ಅನ್ನು ಚಾರ್ಜ್‌ನಲ್ಲಿ ಇಡಬೇಡಿ