ಕಾದಾಟವೋ ಕಲೆಯೋ – ಹಾರ್ನ್​ಬಿಲ್​ ಗಳ ಅದ್ಬುತ ದೃಶ್ಯ ಸೆರೆ

ಕಾದಾಟವೋ ಕಲೆಯೋ – ಹಾರ್ನ್​ಬಿಲ್​ ಗಳ ಅದ್ಬುತ ದೃಶ್ಯ ಸೆರೆ

ಪ್ರವಾಸಿಗರು ಸಫಾರಿಗೆ ತೆರಳಿದ ವೇಳೆ ಕ್ಯಾಮರಾ ಕಣ್ಣಿಗೆ ಸಾಕಷ್ಟು ದೃಶ್ಯಗಳು ಕಾಣಸಿಗುತ್ತವೆ. ಪ್ರಾಣಿ – ಪಕ್ಷಿಗಳ ತುಂಟಾಟ, ಬೇಟೆಯಾಡುವುದು, ಪ್ರಾಣಿಗಳ ಕಾಳಗ ಹೀಗೆ ಸಾಕಷ್ಟು ದೃಶ್ಯಗಳು ಕಾಣಸಿಗುತ್ತದೆ. ಅಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಪ್ರತೀ ವರ್ಷವೂ ತಮಿಳುನಾಡಿನ ನೆಲ್ಲಿಯಂಪತಿ ಮತ್ತು ವಾಲ್ಪಾರೈನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೂರಾರು ಹಾರ್ನ್​ಬಿಲ್​ಗಳು ವಲಸೆ ಬರುತ್ತವೆ. ಅವು ರೆಕ್ಕೆ ಬಿಚ್ಚಿ ಹಾರುವುದನ್ನು ನೋಡುವುದೇ ಚೆಂದ. ಬಹುವರ್ಣಗಳಲ್ಲಿ ವಿನ್ಯಾಸಗೊಂಡಿರುವ ಅವುಗಳ ಗರಿಗಳನ್ನಂತೂ ನೋಡುವುದೇ ಕಣ್ಣಿಗೆ ಹಬ್ಬ. ಆದ್ರೆ ವೈರಲ್ ಆದ ವಿಡಿಯೋದಲ್ಲಿ ಹಾರ್ನ್​ಬಿಲ್​ಗಳು ಆಕಾಶದಲ್ಲಿ ಆಕ್ರಮಣಕಾರಿಯಾಗಿ ದಾಳಿಯಲ್ಲಿ ತೊಡಗಿಕೊಂಡಿವೆ.

ಇದನ್ನೂ ಓದಿ: ಆಹಾರ ಹುಡುಕುತ್ತಾ ಬಂದ ಕರಡಿಗೆ ಕಾದಿತ್ತುಒಂದು ಶಾಕ್​! – ವಿಡಿಯೋ ವೈರಲ್…

ಐಎಎಸ್​ ಅಧಿಕಾರಿ ಸುಪ್ರಿಯಾ ಸಾಹು ತಮಿಳುನಾಡಿನಲ್ಲಿ ಪರಿಸರ ಹವಾಮಾನ ಬದಲಾವಣೆ ಮತ್ತು ಅರಣ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಗಾಗ ವನ್ಯಜೀವಿಗಳ ಕುರಿತು ಟ್ವೀಟ್ ಮಾಡುತ್ತಿರುತ್ತಾರೆ. ಈ ಸಲ ಅವರು ಟ್ವೀಟ್ ಮಾಡಿದ ಈ ವಿಡಿಯೋದಲ್ಲಿ ಹಾರ್ನ್​ಬಿಲ್​ಗಳು ಆಕಾಶದಲ್ಲಿ ಕಾದಾಟಕ್ಕಿಳಿದಿವೆ. ಕೊಕ್ಕಿಗೆ ಕೊಕ್ಕು ಕೊಟ್ಟು ದಾಳಿ ಮಾಡಿವೆ. ಈ ದೃಶ್ಯ ಆಕ್ರಮಣಶೀಲತೆಗಿಂತ ಇದು ಕಲಾತ್ಮಕವಾಗಿ ಕಾಣುತ್ತಿದೆ. ಆಕಾಶದಲ್ಲಿ ಇವೆರಡೂ ನರ್ತಿಸುವಂತೆ ತೋರುತ್ತಿದೆ.

ಈ ವಿಡಿಯೋ ಅನ್ನು 47,200 ಜನರು ನೋಡಿದ್ದಾರೆ. ಸಾವಿರಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. “ಬಹಳ ಅದ್ಭುತವಾಗಿದೆ ಈ ದೃಶ್ಯ. ಕಾದಾಟವೋ ಕಲೆಯೋ ಎರಡಕ್ಕೂ ಲಯವಂತೂ ಬೇಕೇಬೇಕು ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.

suddiyaana