ಹೂವಿನ ಬಾಣದ ಗಾಯಕಿ ಸೆಲೆಬ್ರಿಟಿ.. ವೈರಲ್ ಹುಡ್ಗಿ ಸಾಂಗ್ಗೆ ಸ್ಟಾರ್ಸ್ ರೀಲ್ಸ್ – ಎಲ್ಲೆಲ್ಲೂ ಮಂಡ್ಯ ಹುಡುಗಿ ಹವಾ!

ಹೂವಿನ ಬಾಣದಂತೆ, ಯಾರಿಗೂ ಕಾಣದಂತೆ.. ಸೋಶಿಯಲ್ ಮೀಡಿಯಾದಲ್ಲಿ ಇದೊಂದು ಹಾಡು ಸಖತ್ ಟ್ರೆಂಡ್ನಲ್ಲಿದೆ.. ಎಲ್ಲರ ಬಾಯಲ್ಲೂ ಇದೇ ಹಾಡು ಗುನುಗುಡ್ತಿದೆ.. ತನ್ನದೇ ಸ್ಟೈಲ್ ನಲ್ಲಿ ಬಿರುಗಾಳಿ ಚಿತ್ರದ ಹಾಡು ಹಾಡಿರೋ ಈಕೆ ರಾತ್ರಿ ಬೆಳಗಾಗುವಷ್ಟರಲ್ಲಿ ಸೆಲೆಬ್ರಿಟಿ ಆಗಿದ್ದಾಳೆ. ಸಾಂಗ್ ವೈರಲ್ ಆಗ್ತಿದ್ದಂತೆ ಆಕೆ ಯಾರು? ಎಲ್ಲಿಯವಳು? ಯಾಕೆ ಹೀಗೆ ಹಾಡಿದ್ಲು ಅನ್ನೋ ಪ್ರಶ್ನೆ ಅನೇಕರನ್ನ ಕಾಡ್ತಿದೆ. ಇದೀಗ ಎಲ್ಲರ ಪ್ರಶ್ನೆಗೂ ಉತ್ತರ ಸಿಕ್ಕಿದೆ.
ಇದನ್ನೂ ಓದಿ: ರಷ್ಯಾದ ಕರಾವಳಿಯಲ್ಲಿ ಮತ್ತೆ ಭೂಕಂಪ – ಕಮ್ಚಾಟ್ಕಾನಲ್ಲಿ ಸುನಾಮಿ ಎಚ್ಚರಿಕೆ
ಈಗೇನಿದ್ರೂ ಸೋಶಿಯಲ್ ಮೀಡಿಯಾದ್ದೇ ಕಾರುಬಾರು.. ಯಾವಾಗ ಏನ್ ಟ್ರೆಂಡ್ ಆಗುತ್ತೆ ಅಂತಾ ಹೇಳೋದಿಕ್ಕೆ ಸಾಧ್ಯ ಇಲ್ಲ.. ಸಾಮಾನ್ಯ ಜನರು ಕೂಡ ಒಂದು ಡೈಲಾಗ್, ರೀಲ್ಸ್, ಸಾಂಗ್ಸ್ ಮೂಲಕ ರಾತ್ರೋರಾತ್ರಿ ಫೇಮಸ್ ಆಗಿರೋದನ್ನ ನಾವು ನೋಡಿದ್ದೇವೆ.. ಡೋಲೋ 650 ಮಾತ್ರೆ.. ನಮ್ ಮನಸ್ಸು ಒಳ್ಳೆದು ಮಾಡಿದ್ರೆ ದೇವ್ರು.. ಇವ್ರೆಲ್ಲಾ ಒಂದೇ ಡೈಲಾಗ್ ಮೂಲಕ ಫೇಮಸ್ ಆದವರು.. ಇದೀಗ ಇದೇ ಸಾಲಿಗೆ ಹೂವಿನ ಬಾಣದಂತೆ ಯಾರಿಗೂ ಕಾಣದಂತೆ ಸಾಂಗ್ ಹಾಡಿದ ನಿತ್ಯಾ ಕೂಡ ಸೇರ್ಪಡೆಯಾಗಿದ್ದಾಳೆ. ಬಿರುಗಾಳಿ ಚಿತ್ರದಲ್ಲಿ ಶ್ರೇಯಾ ಘೊಷಾಲ್ ಹಾಡಿರುವ ಹಾಡನ್ನ ಹಾಡಿ ಸಖತ್ ಟ್ರೆಂಡ್ ಸೆಟ್ ಮಾಡಿದ್ದಾಳೆ. ರಿಯಲ್ ಹಾಡನ್ನ ಮರೆಸುವಂತೆ ಮಾಡಿದ್ದಾಳೆ. ಈ ಮುದ್ದಾದ ಹಾಡಿನ ವಿಡಿಯೋ ಸದ್ಯ ನೆಟ್ಟಿಗರ ಮನಸ್ಸನ್ನು ಗೆದ್ದುಕೊಂಡಿದೆ. ಅಷ್ಟೇ ಅಲ್ಲ.. ಈಕೆಯ ಸಾಂಗ್ ಗೆ ಸಾಕಷ್ಟು ಮಂದಿ ರೀಲ್ಸ್ ಮಾಡಿದ್ದಾರೆ. ಇದೀಗ ಆಕೆ ಯಾರು? ಏನ್ ಮಾಡ್ತಿದ್ದಾಳೆ ಅನ್ನೋ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ಹೂವಿನ ಬಾಣದಂತೆ ಯಾರಿಗೂ ಕಾಣದಂತೆ ಈ ಸಾಂಗ್ ನ ಹಾಡಿದ ಯುವತಿ ಹೆಸ್ರು, ಇನ್ಟಾಗ್ರಾಂ ಐಡಿ ಮೊನ್ನೆಯಿಂದ ಭಾರಿ ವೈರಲ್ ಆಗ್ತಿತ್ತು. ಹೀಗಾಗಿ ಆಕೆ ಹೆಸ್ರು ಅಮ್ಮು ಅಂತಾ ಎಲ್ಡ್ರೂ ಅಂದ್ಕೊಂಡಿದರು. ಆದ್ರೀಗ ಆಕೆ ರಿಯಲ್ ಹೆಸ್ರು ನಿತ್ಯಾ ಅನ್ನೋದು ಗೊತ್ತಾಗಿದೆ. ವೈರಲ್ ಆಗಿದ್ದು ಫೇಕ್ ಅಕೌಂಟ್.. ಅಮ್ಮು ಗೌಡ ಎಂಬ ಫೇಕ್ ಐಡಿ ಕ್ರಿಯೇಟ್ ಮಾಡಿ, ಫಾಲೋವರ್ಸ್ ಜಾಸ್ತಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಆಕೆ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದಾರೆ.
ಇನ್ನು ನಿತ್ಯಾ ಮೂಲತಃ ಕೆಆರ್ ಪೇಟೆ, ಮೊಸಳೆಕೊಪ್ಲು ಗ್ರಾಮದವಳು. ಸದ್ಯ ಮಹಾರಾಣಿ ಕಾಮರ್ಸ್ ಕಾಲೇಜಿನಲ್ಲಿ ಬಿಬಿಎ ವಿದ್ಯಾಭ್ಯಾಸ ಮಾಡ್ತಿದ್ದಾರೆ. ಗೌತಮ್ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸೇವಾ ಟ್ರಸ್ಟ್ ನ 30 ದಿನದ ತರಬೇತಿ ಶಿಬಿರದಲ್ಲಿ ಆಕೆ ಭಾಗವಹಿಸಿದ್ದು, ಈ ವೇಳೆ ತಮಾಷೆಗಾಗಿ ಈ ಸಾಂಗ್ ನಿತ್ಯಾ ಹಾಡಿದ್ದಾರೆ. ಆಕೆಯ ಹಾಡನ್ನ ಫ್ರೆಂಡ್ಸ್ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಆದ್ರೆ ಆ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ರಾತ್ರೋರಾತ್ರಿ ಫೇಮಸ್ ಆಗಿದೆ.
ಇನ್ನು ತನ್ನ ಸಾಂಗ್ ವೈರಲ್ ಆಗಿರೋದಿಕ್ಕೆ ನಿತ್ಯಾ ಖುಷಿಪಟ್ಟಿದ್ದಾರೆ. ಇದು ಜಸ್ಟ್ ಫನ್ಗಾಗಿ ಹಾಡಿರೋದು. ಹಾಸ್ಟೆಲ್ ನಲ್ಲಿ ಫ್ರೆಂಡ್ಸ್ ಜೊತೆ ಇದ್ದಾಗ ಅವ್ರು ಖುಷಿ ಪಡ್ಲಿ ಅಂತ ಹೀಗೆ ಹಾಡ್ತಿದ್ದೆ. ವೈರಲ್ ಆಗಿರೋದು ಖುಷಿಯಾಗಿದೆ. ಮನರಂಜನಾ ಕ್ಷೇತ್ರಗಳಲ್ಲಿ ಅವಕಾಶ ಸಿಕ್ಕಿದ್ರೆ ಪ್ರಯತ್ನ ಪಡ್ತಿದ್ರು. 100% ಎಫರ್ಟ್ ಹಾಕ್ತೀನಿ ಅಂತಾ ಹೇಳಿದ್ದಾರೆ.
ಒಟ್ಟಾರೆ ತಮಾಷೆಗಾಗಿ ಬಿರುಗಾಳಿ ಸಿನಿಮಾದ ಹಾಡನ್ನ ಹಾಡಿದ ನಿತ್ಯಾ ಈಗ ಸೋಶಿಯಲ್ ಮೀಡಿಯಾ ಬಳಕೆದಾರರ ಮನಸ್ಸನ್ನ ಗೆದ್ದಿದ್ದಾಳೆ. ರಾತ್ರೋ ರಾತ್ರಿ ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಯಾಗಿದ್ದಾಳೆ. ಆಕೆಯ ಕಾನ್ಫಿಡೆನ್ಸ್ ಲೆವೆಲ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನೋಡಿರಿ

