ಸೀರಿಯಲ್, ಯಕ್ಷಗಾನದಲ್ಲೂ ಹೂವಿನ ಬಾಣ.. ನಿತ್ಯಾಗೆ ಕೆಟ್ಟ ಕಮೆಂಟ್ಸ್.. ಜನ್ಯ ಕ್ಲಾಸ್!

ಕನ್ನಡ ಸಿನಿಮಾ ಇಂಡಸ್ಟ್ರಿ.. ಕನ್ನಡಿಗರ ಬಾಯಲ್ಲಿ ಸದ್ಯ ಕೇಳಿ ಬರ್ತಿರೋ ಸಾಂಗ್ ಅಂದ್ರೆ ಅದು ಹೂವಿನ ಬಾಣದಂತೆ.. ಯಾರಿಗೂ ಕಾಣದಂತೆ ಹಾಡು.. ಸುಮಾರು 15 ವರ್ಷಗಳ ನಂತರ ಈ ಸಾಂಗ್ ಫುಲ್ ಟ್ರೆಂಡ್ ಸೆಟ್ ಮಾಡಿದೆ.. ಮಂಡ್ಯದ ಹುಡುಗಿ ನಿತ್ಯಶ್ರೀ ಈ ಹಾಡನ್ನ ಹಾಡಿ ರಾತ್ರೋರಾತ್ರಿ ಫೇಮಸ್ ಆಗಿದ್ದಾಳೆ. ನಿತ್ಯಾಶ್ರೀ ಹಾಡಿರೋ ಸಾಂಗ್ ನ ಮೆಚ್ಚಿಕೊಂಡು ಎಲ್ಲರೂ ರೀಲ್ಸ್, ಡ್ಯಾನ್ಸ್ ಮಾಡ್ತಿದ್ದಾರೆ. ಗಾಯಕರು, ಸಿನಿಮಾ ಸ್ಟಾರ್ಸ್ ಕೂಡ ಈಕೆಯ ಸಾಂಗ್ ನ ಇಷ್ಟಪಟ್ಟಿದ್ದಾರೆ. ಇದೀಗ ಸೀರಿಯಲ್, ಯಕ್ಷಗಾನಕ್ಕೂ ಈ ಸಾಂಗ್ ಬಿರುಗಾಳಿಯಂತೆ ಅಪ್ಪಳಿಸಿದೆ.
ಇದನ್ನೂ ಓದಿ: ದಸರಾ ಹಬ್ಬಕ್ಕೆ ನಂದಿನಿ ಗ್ರಾಹಕರಿಗೆ ಸಿಹಿಸುದ್ದಿ! – ಹಾಲು, ಮೊಸರು ದರ ಇಳಿಕೆ!
ಕಾಲಕ್ಕೆ ತಕ್ಕಂತೆ ಕೋಲ ಅನ್ನೋ ಹಾಗೇ ಈಗ ಜನ ಎಲ್ಲರದ್ರಲ್ಲೂ ಅಪ್‌ಡೇಟ್ ಆಗ್ತಿದ್ದಾರೆ. ಯಾವುದೇ ಕ್ಷೇತ್ರ ಇರ್ಲಿ ಅಲ್ಲಿ ಹೊಸತನ ಬೇಕೇ ಬೇಕು. ಸಿನಿಮಾ, ಸೀರಿಯಲ್ ನಲ್ಲೂ ಜನ ಹೊಸತನವನ್ನ ಬಯಸೋದು ಕಾಮನ್.. ನಿರ್ದೇಶಕರು ಕೂಡ ಇದನ್ನ ಅರ್ಥ ಮಾಡಿಕೊಂಡು ಜನರಿಗೆ ಹೊಸ ಕಂಟೆಂಟ್ ಕೊಡ್ತಾರೆ. ಇತ್ತೀಚೆಗೆ ಹೂವಿನ ಬಾಣದಂತೆ, ಯಾರಿಗೂ ಕಾಣದಂತೆ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೆಟ್ ಮಾಡಿದೆ. ನಿತ್ಯಾ ಈ ಸಾಂಗ್ ನ ಡಿಫ್ರೆಂಡ್ ಆಗಿ ಹಾಡಿದ್ದು, ಜನ ಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಇಷ್ಟ ಪಟ್ಟಿದ್ದಾರೆ. ಅಷ್ಟೇ ಅಲ್ಲ ಇದೇ ಸಾಂಗ್ ಗೆ ರೀಲ್ಸ್ ಮಾಡ್ತಿದ್ದಾರೆ. ಇದೀಗ ಈ ಸಾಂಗ್ ಸೀರಿಯಲ್ ಮಾತ್ರವಲ್ಲದೇ, ಯಕ್ಷಗಾನದಲ್ಲೂ ಸದ್ದು ಮಾಡಿದೆ.
ಸಿನಿಮಾ ಆಗ್ಲೀ, ಸೀರಿಯಲ್ ಆಗ್ಲಿ.. ಡಿಫ್ರೆಂಟ್ ಆಗಿರೋ ಕಂಟೆಂಟ್ ಇದ್ರೆ ಮಾತ್ರ ಜನ ನೋಡ್ತಾರೆ. ಈಗಾಗಲೇ ಟ್ರೆಂಡಿಂಗ್ ನಲ್ಲಿರೋ, ವೈರಲ್ ಆಗಿರೋ ಡೈಲಾಗ್ಸ್, ಸಾಂಗ್ಸ್ ನ ಸೀರಿಯಲ್ ಗಳಲ್ಲಿ ಬಳಸಿಕೊಂಡಿದ್ದನ್ನ ನಾವು ನೋಡಿದ್ದೇವೆ. ಇದೀಗ ಜೀ ಕನ್ನಡದಲ್ಲಿ ಪ್ರಸಾರ ಆಗೋ ಅಣ್ಣಯ್ಯ ಸೀರಿಯಲ್ ನಲ್ಲೂ ನಿತ್ಯಾ ಸಾಂಗ್ ನ ಬಳಸಿಕೊಳ್ಳಲಾಗಿದೆ. ಶಿವಣ್ಣನಿಗೆ ಪಾರು ಮೊಬೈಲ್ ಕೊಡಿಸಿದ್ದಾಳೆ. ಶಿವು ಅಂಗಡಿಯಲ್ಲಿ ಕುಳಿತು ವ್ಯಾಪಾರ ಮಾಡೋದು ಬಿಟ್ಟು ರೀಲ್ಸ್ ನೋಡ್ಕೊಂಡು ಕೂತಿದ್ದಾನೆ. ಬಳಿಕ ಹೂವಿನ ಬಾಣದಂತೆ.. ಯಾರಿಗೂ ಕಾಣದಂತೆ ಅಂತಾ ಸಾಂಗ್ ಹೇಳಿದ್ದಾನೆ. ಶಿವಣ್ಣನ ಸಾಂಗ್ ಕೇಳಿ ಪಾರು ಯಾಕಾದ್ರೂ ಫೋನ್ ಕೊಡ್ಸಿದೆ ಅಂತ ಬೈಕೊಂಡಿದ್ದಾಳೆ.
ಇನ್ನು ನಿತ್ಯಾ ಸಾಂಗ್ ಹವಾ ಜೋರಾಗೇ ಇದೆ.. ಈಗ ವೈರಲ್ ಸಾಂಗ್ ಯಕ್ಷಗಾನ ಕ್ಷೇತ್ರದಲ್ಲೂ ಸದ್ದು ಮಾಡ್ತಿದೆ. ಯಕ್ಷಗಾನ ಕಲಾವಿದರು ಸ್ಟೇಜ್‌ನಲ್ಲಿ ಈ ಸಾಂಗ್ ನ ಪ್ರಸ್ತಾಪ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಯಕ್ಷಗಾನದ ತುಣುಕುಗಳು ವೈರಲ್ ಆಗ್ತಿದೆ. ಯಕ್ಷಗಾನ ಪ್ರಸಂಗವೊಂದ್ರಲ್ಲಿ ಕಲಾವಿದರಾದ ಉದಯ ಹೆಗಡೆ ಕಡಬಾಳ, ಪಾತ್ರವೊಂದನ್ನು ನಿರ್ವಹಿಸುತ್ತ ವೈರಲ್ ಹುಡುಗಿ ನಿತ್ಯಾ ಬಗ್ಗೆ ಮಾತನಾಡಿದ್ದಾರೆ.. ನನಗೆ ರೂಪದಿಂದಲೇ ತೊಂದರೆ ಕೊಡುತ್ತಿದ್ದಾಳೆ ಅವಳು.. ಯಾವ ರೀತಿ ಅಂದ್ರೆ ಹೂವಿನ ಬಾಣದಂತೆ..ಯಾರಿಗೂ ಕಾಣದಂತೆ ಅಂತಾ ಸಾಂಗ್ ಹೇಳಿದ್ದಾರೆ. ಇದನ್ನ ನೋಡಿದ ಪ್ರೇಕ್ಷಕರು ಜೋರಾಗಿ ಚಪ್ಪಾಳೆ ತಟ್ಟಿದ್ದಾರೆ.
ಇನ್ನು ತುಳು ಯಕ್ಷಗಾನದಲ್ಲೂ ಹೂವಿನ ಬಾಣದಂತೆ ಯಾರಿಗೂ ಕಾಣದಂತೆ ಸಾಂಗ್ ಸದ್ದು ಮಾಡಿದೆ. ಈ ವಿಡಿಯೋ ವೈರಲ್ ಆಗಿದೆ. ವೈರಲ್ ಆದ ಯಕ್ಷಗಾನದ ವಿಡಿಯೋದಲ್ಲಿ.. ಈ ಹೆಣ್ಣು ಮಕ್ಕಳ ಜೊತೆ ಮಾತಾಡ್ಲಿಕ್ಕೆ ಗೊತ್ತಿಲ್ಲ.. ಹೆಣ್ಣು ಮಕ್ಕಳ ಮುಂದೆ ಹೋಗಿ ನಿಂತು ಎಂದು ಹೇಳುತ್ತಾ.. ಹೂವಿನ ಬಾಣದಂತೆ, ಯಾರಿಗೂ ಕಾಣದಂತೆ ಎಂದು ಜೋರಾಗಿ ಹಾಡಿದ್ದಾರೆ. ಹೀಗೆ ಹಾಡಿ ಓ ಓ ಅಂತಾ ಕಿರುಚಾಡಿದ್ದಾರೆ.. ಇದನ್ನ ನೋಡಿ ಪ್ರೇಕ್ಷಕರು ನಕ್ಕು ನಕ್ಕು ಸುಸ್ತಾಗಿದ್ದಾರೆ.
ಇನ್ನು ನಿತ್ಯಾಶ್ರೀ ಹೂವಿನ ಬಾಣದಂತೆ ಸಾಂಗ್ ಹಾಡಿರೋದನ್ನ ಬಿರುಗಾಳಿ ಸಿನಿಮಾದ ಹೀರೋ ನಟ ಚೇತನ್ ಮೆಚ್ಚಿದ್ದಾರೆ. ಈ ಸಾಂಗ್ ನ ಜನ ಬಹಳ ಇಷ್ಟ ಪಟ್ಟಿದ್ದಾರೆ. ಆ ವಿದ್ಯಾರ್ಥಿನಿ ಇದೇ ತರ ಕಾನ್ಫಿಡೆನ್ಸ್ ಆಗಿ ಹಾಡ್ಲಿ.. ಜನ ಈಕೆ ಹಾಡಿದ್ದನ್ನ ನೋಡಿ ಇಷ್ಟಪಟ್ಟಿದ್ದನ್ನ ನೋಡಿ ಖುಷಿಯಾಯ್ತು ಎಂದಿದ್ದಾರೆ.
ಇನ್ನು ಅರ್ಜುನ್ ಜನ್ಯ ಇತ್ತೀಚೆಗೆ ನಿತ್ಯಾಶ್ರೀ ಸಾಂಗ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಆಕೆಯ ಸ್ಟೈಲ್‌ನಲ್ಲೇ ಹಾಡಿದ್ರು.. ಇದಕ್ಕೆ ಪರ ವಿರೋಧ ಚರ್ಚೆ ಕೂಡ ಆಗಿತ್ತು. ಕೆಟ್ಟ ಕಾಮೆಂಟ್ಸ್‌ನಿಂದಾಗಿ ನಿತ್ಯಾಶ್ರೀ ನೊಂದಿದ್ದಾಳೆ. ಇತ್ತೀಚೆಗೆ ನಾನು ಕೆಟ್ಟದಾಗಿ ಹಾಡಿ ಸಾಂಗ್ ಗೆ ಅವಮಾನ ಮಾಡಿದ್ದೇನೆ. ಇನ್ನುಮುಂದೆ ಹೀಗೆ ಹಾಡಲ್ಲ.. ಕ್ಷಮಿಸಿ ಎಂದು ಹೇಳಿದ್ಲು. ಇದೀಗ ಈ ಬಗ್ಗೆ ಅರ್ಜುನ್ ಜನ್ಯ ಮಾತನಾಡಿದ್ದಾರೆ. ಕೆಟ್ಟದಾಗಿ ಕಮೆಂಟ್ ಮಾಡುವವರಿಗೆ ವಾರ್ನ್ ಮಾಡಿದ್ದಾರೆ. ಅದು ಅವರು ಹೇಗೆ ಕನ್ವರ್ಟ್ ಮಾಡಿ ಏನು ಮಾಡಿದ್ದಾರೆ ನನಗೆ ಗೊತ್ತಿಲ್ಲ. ಆದರೆ ಆ ಮಗು ನನಗೆ ತುಂಬಾ ಇನ್ನೊಸೆಂಟ್ ಆಗಿ ಕಾಣಿಸಿತು. ಅವರನ್ನೆಲ್ಲಾ ಜಡ್ಜ್ ಮಾಡೋದು ಬೇಕಿಲ್ಲ. ಆ ಮಗುನ ಅವಳ ಪಾಡಿಗೆ ಬಿಟ್ಟು ಬಿಡಬೇಕು.. ನಮ್ಮ ಮನೆಗೆ ಬಂದು ನನ್ನ ಫ್ರೆಂಡ್ಸ್‌ಗೆ ಯಾರಿಗಾದರೂ ಕೇಳಿದ್ರೆ, ಅವರು ಸಂಗೀತಗಾರರು ಅಲ್ಲದೇ ಇದ್ರೆ, ಅವರಿಗೆ ಹಾಡಿ ಅಂತಂದರೆ ಇನ್ನೊಸೆಂಟ್ ಆಗಿ ಏನೋ ಒಂದು ಹಾಡುತ್ತಾರೆ. ಅದು ಎಲ್ಲರ ಮನೆಯಲ್ಲೂ ಇದೆ. ಅವರಿಗೆ ಗೊತ್ತಿರುವಂತೆ ಅವರು ಹಾಡುತ್ತಾರೆ. ಅದನ್ನಿಟ್ಟುಕೊಂಡು ನಾವು ಅವರನ್ನ ಜಡ್ಜ್ ಮಾಡ್ಬೇಕಾಗಿಲ್ಲ ಎಂದಿದ್ದಾರೆ.
ಒಟ್ಟಿನಲ್ಲಿ ತಮಾಷೆಗಾಗಿ ಹಾಡಿರೋ ಈ ಹಾಡು ಎಲ್ಲರನ್ನ ರಂಜಿಸಿದೆ. ವೈರಲ್ ಹುಡುಗಿ ನಿತ್ಯಾಗೆ ರಂಗ ಭೂಮಿ ಕಲಾವಿದರು, ಸಿಂಗರ್ಸ್ ಕೂಡ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. ನೀವೂ ಈಕೆಯ ಸಾಂಗ್ ಗೆ ರೀಲ್ಸ್ ಮಾಡಿದ್ರಾ ಅಂತಾ ಕಾಮೆಂಟ್ ಮಾಡಿ.

ನೋಡಿರಿ

