ಹೂವಿನ ಬಾಣದ ಹುಡ್ಗಿಗೆ ಸಿನಿಮಾ ಆಫರ್‌.. ವೈರಲ್‌ ಸಾಂಗ್‌ನಿಂದಲೇ ಸಿಕ್ತಾ ಚಾನ್ಸ್‌?  

ಹೂವಿನ ಬಾಣದ ಹುಡ್ಗಿಗೆ ಸಿನಿಮಾ ಆಫರ್‌.. ವೈರಲ್‌ ಸಾಂಗ್‌ನಿಂದಲೇ ಸಿಕ್ತಾ ಚಾನ್ಸ್‌?  

ಕಳೆದೊಂದು ವಾರದಿಂದ ಬಿರುಗಾಳಿ ಸಿನಿಮಾದ ಹೂವಿನ ಬಾಣದಂತೆ ಯಾರಿಗೂ ಕಾಣದಂತೆ ಸಾಂಗ್‌ ಸಖತ್ ಟ್ರೆಂಡಿಗ್‌ನಲ್ಲಿದೆ. ಈ ಸಾಂಗ್‌ ನ ಡಿಫ್ರೆಂಟ್‌ ಆಗಿ ಹಾಡೋ ಮೂಲಕ ಮಂಡ್ಯದ ಹುಡುಗಿ ನಿತ್ಯಾಶ್ರೀ ರಾತ್ರೋ ರಾತ್ರಿ ಫೇಮಸ್‌ ಆಗಿದ್ದಾಳೆ. ಸೋಶಿಯಲ್‌ ಮೀಡಿಯಾ ಓಪನ್‌ ಮಾಡಿದ್ರೂ ಈಕೆಯದ್ದೇ ವಿಡಿಯೋ ಸಿಕ್ತಾ ಇದೆ. ಇನ್ನು ಹಬ್ಬ ಜಾತ್ರೆಗಳಲ್ಲೂ ಈ ವೈರಲ್‌ ಸಾಂಗ್‌ ಪ್ಲೇ ಮಾಡಿ ಯುವಕರು ಕುಣಿತಾ ಇದ್ದಾರೆ.. ಅಷ್ಟೇ ಅಲ್ಲ ಮೈಸೂರು ದಸರಾದಲ್ಲೂ ವೈರಲ್‌ ಹುಡುಗಿಯದ್ದೇ ಹವಾ.. ಅಷ್ಟ ಮಟ್ಟಿಗೆ ಈ ಸಾಂಗ್‌ ಆಕೆ ಜನಪ್ರಿಯತೆ ತಂದುಕೊಟ್ಟಿದೆ.. ತಮಾಷೆಗೆಂದು ಹಾಡಿರೋ ನಿತ್ಯಾಶ್ರೀ ಈಗ ಸೆಲೆಬ್ರಿಟಿಯೇ ಆಗಿದ್ದಾಳೆ. ಈ ಈಕೆಯನ್ನ ಹೊಸ ಅವಕಾಶಗಳು ಕೂಡ ಹುಡುಕಿಕೊಂಡಿದೆ. ಇದೀಗ ನಿತ್ಯಾಶ್ರೀಗೆ ಸಿನಿಮಾದ ಆಫರ್‌ ಬಂದಿದೆ.

ಇದನ್ನೂ ಓದಿ: ಗೌತಮ್ ಪ್ರೀತಿ ಧಿಕ್ಕರಿಸಿದ ಭೂಮಿಕಾ – ಮಗನ ನೋಡಲು ಬಂದ ಗೌತಮ್ ಮತ್ತು ಆನಂದ್ ಮಾಸ್ಟರ್ ಪ್ಲಾನ್ ವರ್ಕ್ ಆಗುತ್ತಾ?

ಇದು ಸೋಶಿಯಲ್ ಮೀಡಿಯಾ ಯುಗ.. ಈಗಿನ ಯುವಕ, ಯುವತಿಯರು ಸೋಶಿಯಲ್ ಮೀಡಿಯಾ ಸ್ಕ್ರೋಲ್‌ ಮಾಡೋದ್ರಲ್ಲೇ ಹೆಚ್ಚು ಖುಷಿಪಡ್ತಿದ್ದಾರೆ. ಕೈಯಲ್ಲೊಂದು ಫೋನ್..‌ ಅದ್ರಲ್ಲಿ ಇಂಟರ್‌ನೆಟ್‌ ಇದ್ರೆ ಸಾಕು. ಸೋಶಿಯಲ್‌ ಮೀಡಿಯಾಲ್ಲಿ ಪೋಸ್ಟ್‌ ರೀಲ್ಸ್‌ ಹಾಕೋದ್ರಲ್ಲೇ ಬ್ಯುಸಿಯಾಗಿರ್ತಾರೆ. ಹೀಗೆ ರೀಲ್ಸ್‌ ಮಾಡ್ತಾ ಫೇಮಸ್‌ ಆದವ್ರು ಈಗ ಸೀರಿಯಲ್‌, ಸಿನಿಮಾದಲ್ಲಿ ಚಾನ್ಸ್‌ ಪಡ್ಕೊಂಡು ಸ್ಟಾರ್‌ ಆಗಿ ಬೆಳಿತಾ ಇದ್ದಾರೆ. ಇತ್ತೀಚೆಗೆ ಬಿರುಗಾಳಿ ಸಿನಿಮಾದ ಮೆಲೋಡಿ ಸಾಂಗ್‌ ನ ತಮಾಷೆಗಾಗಿ ನಿತ್ಯಾಶ್ರೀ ಹಾಡಿರೋದು ನಿಮ್ಗೆ ಗೊತ್ತೇ ಇದೆ. ತನ್ನದೇ ಸ್ಟೈಲ್‌ ನಲ್ಲಿ ಹಾಡಿ ಸೋಶಿಯಲ್‌ ಮೀಡಿಯಾ ಸ್ಟಾರ್‌ ಆಗಿದ್ದಾಳೆ. ಫೇಮಸ್‌ ಗಾಯಕರು ಕೂಡ ಈಕೆಯ ಸಾಂಗ್‌ ಮೆಚ್ಚುಗೆ ವ್ಯಕ್ತಪಡಿಸಿದ್ರೆ, ಅರ್ಜುನ್‌ ಜನ್ಯ ನಿತ್ಯಾ ಸ್ಟೈಲ್‌ ನಲ್ಲೇ ಹೂವಿನ ಬಾಣದಂತೆ ಯಾರಿಗೂ ಕಾಣದಂತೆ ಸಾಂಗ್‌ ನ ಹಾಡಿದ್ರು. ಮುದ್ದಾಗಿ ಹಾಡಿರೋ ಹುಡ್ಗಿಗೆ ಒಳ್ಳೆದಾಗ್ಲಿ ಅಂತಾ ಹಾಡಿದ್ರು.. ಅಷ್ಟೇ ಅಲ್ಲ ಕೆಲ ಸಿನಿಮಾ, ಸೀರಿಯಲ್‌ ನಟ, ನಟಿಯರು ಕೂಡ ಈಕೆಯ ಸಾಂಗ್‌ ಗೆ ರೀಲ್ಸ್‌ ಮಾಡ್ತಿದ್ದಾರೆ. ಇದೀಗ ವೈರಲ್‌ ಹುಡ್ಗಿಯನ್ನ ಹೊಸ ಅವಕಾಶ ಹುಡುಕಿಕೊಂಡು ಬಂದಿದೆ.

ಹೂವಿನ ಬಾಣದಂತೆ ಯಾರಿಗೂ ಕಾಣದಂತೆ ಸಾಂಗ್‌ ಹಾಡಿರೋ ನಿತ್ಯಾಶ್ರೀ ಕಲಾವಿದೆಯೂ ಹೌದು.. ಈಗಾಗಲೇ ಆಕೆಯ ಡ್ಯಾನ್ಸ್‌ ಪರ್ಫಾಮೆನ್ಸ್‌ ವಿಡಿಯೋ ವೈರಲ್‌ ಆಗಿತ್ತು.. ಇದನ್ನ ನೋಡಿ ಜನ ಮೆಚ್ಚಿಕೊಂಡಿದ್ರು. ಇತ್ತೀಚೆಗೆ ಸಂದರ್ಶನವೊಂದ್ರಲ್ಲಿ ನಟನೆಯಲ್ಲೂ ಆಸಕ್ತಿ ಇದೆ.. ಚಾನ್ಸ್‌ ಸಿಕ್ಕಿದ್ರೆ ನಟನಾ ಕ್ಷೇತ್ರಕ್ಕೂ ಬರ್ತೇನೆ.. ರಾಕಿಂಗ್‌ ಸ್ಟಾರ್‌ ಯಶ್‌ ಜೊತೆ ಕೂಡ ಆಕ್ಟ್‌ ಮಾಡ್ಬೇಕು ಅನ್ನೋ ಆಸೆಯನ್ನ ಬಿಚ್ಚಿಟ್ಟಿದ್ಲು.. ಇದೀಗ ಆಕೆಗೆ ಸಿನಿಮಾ ಆಫರ್‌ ಬಂದಿದೆ. ಮನೆಗೆ ಡೈರೆಕ್ಟರ್ ಹೋಗಿದ್ರು. ಸಿನಿಮಾದಲ್ಲಿ ಆಕ್ಟ್‌ ಮಾಡುವಂತೆ ಕೇಳಿದ್ದಾರೆ. ಇದಕ್ಕೆ ತಂದೆ ಒಪ್ಪಿದ್ದಾರೆ.. ಏನಾಗುತ್ತೆ ನೋಡೋಣ ಎಂದಿದ್ದಾಳೆ.

ಇನ್ನು ನಿತ್ಯಾಶ್ರೀ ಹವಾ ಜೋರಾಗಿದೆ. ಒಂದ್ಕಡೆ ಸಂದರ್ಶನ ಕೊಡೋದ್ರಲ್ಲಿ ಬ್ಯೂಸಿಯಾದ್ರೆ, ಇನ್ನೊಂದ್ಕಡೆ ಹಬ್ಬ, ಕಾರ್ಯಕ್ರಮಗಳಲ್ಲೂ ಫುಲ್‌ ಮಿಂಚುತ್ತಿದ್ದಾಳೆ. ಮೈಸೂರು ಯುವ ದಸರಾ ಸಂಭ್ರಮದಲ್ಲಿ ನಿತ್ಯಾಶ್ರೀ ಫುಲ್‌ ಡ್ಯಾನ್ಸ್‌ ಮಾಡಿದ್ದಾಳೆ. ಆಕೆಯ ಜೊತೆ ಫ್ರೆಂಡ್ಸ್‌ ಕೂಡ ಕುಣಿದಿದ್ದಾರೆ. ಸದ್ಯ ಈ ವಿಡಿಯೋ ಕೂಡ ವೈರಲ್‌ ಆಗ್ತಿದೆ.

ಇನ್ನು ಹೂವಿನ ಬಾಣದಂತೆ ಯಾರಿಗೂ ಕಾಣದಂತೆ ಸಾಂಗ್‌ ನ ಫನ್ನಿಯಾಗಿ ಹಾಡಿರೋದಿಕ್ಕೆ ಪಾಸಿಟಿವ್‌, ನೆಗೆಟಿವ್‌ ಕಾಮೆಂಟ್ಸ್‌ ಬರ್ತಾ ಇದೆ.  ಇದೀಗ ನೆಗೆಟಿವ್‌ ಕಾಮೆಂಟ್ಸ್‌ನಿಂದಾಗಿ ನೊಂದಿದ್ದಾಳೆ. ತುಂಬಾ ಜನರಿಂದ ಬೈಸಿಕೊಂಡಿದ್ದೇನೆ. ನಾನು ಹೀಗೆ ಹಾಡ್ಬಾರ್ದಿತ್ತು. ಕೆಟ್ಟದಾಗಿ ಹಾಡಿ ಅವಮಾನ ಮಾಡಿದ್ದೇನೆ. ಅರ್ಜುನ್‌ ಜನ್ಯ ಸರ್‌ ಗೆ ಸಾರಿ ಎಂದು ಹೇಳುತ್ತಾ ಕಣ್ಣಿರು ಹಾಕುತ್ತಾ ಕ್ಷಮೆ ಕೇಳಿದ್ದಾಳೆ.

ಇನ್ನು ನಿತ್ಯಾಶ್ರೀ ಹಾಡು ಸೋಶಿಯಲ್‌ ಮೀಡಿಯಾದಲ್ಲಿ ಮಾತ್ರವಲ್ಲ.. ಯಕ್ಷಗಾನ ಕ್ಷೇತ್ರದಲ್ಲೂ ಸದ್ದು ಮಾಡ್ತಿದೆ. ಹೂವಿನ ಬಾಣದಂತೆ ಯಾರಿಗೂ ಕಾಣದಂತೆ ಹಾಡು ಈಗ ಯಕ್ಷಗಾನದ ರಂಗಸ್ಥಳದಲ್ಲೂ ಸದ್ದು ಮಾಡಿದೆ. ಯಕ್ಷಗಾನದ ಪ್ರಸಂಗವೊಂದ್ರಲ್ಲಿ ಕಲಾವಿದರಾದ ಉದಯ ಹೆಗಡೆ ಕಡಬಾಳ, ಪಾತ್ರವೊಂದನ್ನು ನಿರ್ವಹಿಸುತ್ತ ಈ ಸಾಂಗ್‌ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.. ನನಗೆ ರೂಪದಿಂದಲೇ ತೊಂದರೆ ಕೊಡುತ್ತಿದ್ದಾಳೆ ಅವಳು.. ಯಾವ ರೀತಿ ಅಂದ್ರೆ ಹೂವಿನ ಬಾಣದಂತೆ..ಯಾರಿಗೂ ಕಾಣದಂತೆ ಎಂದು ಹಾಡನ್ನು ಹಾಡಿದ್ದಾರೆ. ಈ ಹಾಡು ತಮ್ಮ ನೆಚ್ಚಿನ ಕಲಾವಿದನ ಬಾಯಲ್ಲಿ ಬಂದದ್ದೇ ತಡ  ಪ್ರೇಕ್ಷಕರು ಗೊಳ್ ಎಂದು ನಕ್ಕು ನಲಿದಿದ್ದಾರೆ. ಇದ್ರ ವಿಡಿಯೋ ಫುಲ್‌ ವೈರಲ್‌ ಆಗಿದೆ.

ಒಟ್ಟಾರೆ, ಒಂದು ಸಾಂಗ್‌ ನಿಂದ ರಾತ್ರೋ ರಾತ್ರಿ ಫೇಮಸ್‌ ಆದ ನಿತ್ಯಾಶ್ರೀ ಈಗ ಸೋಶಿಯಲ್‌ ಮೀಡಿಯಾ ಸ್ಟಾರ್‌ ಆಗಿದ್ದಾರೆ. ಈಕೆಯ ಸಾಂಗ್‌ ನ ಸೆಲೆಬ್ರಿಟಿಗಳು ಮೆಚ್ಚಿಕೊಂಡಿದ್ದಲ್ಲದೇ, ಸಿನಿಮಾದಲ್ಲು ಆಫರ್‌ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಹೊಸ ಹೊಸ ಅವಕಾಶಗಳು ಆಕೆಯನ್ನ ಹುಡುಕಿಕೊಂಡು ಬರಲಿ. ಪಾಸಿಟಿವ್‌ ವಿಚಾರಗಳಿಂದ ಸುದ್ದಿಯಾಗಲಿ ಅನ್ನೋದಷ್ಟೇ ಎಲ್ಲರ ಆಶಯ.

Shwetha M