ಹೂವಿನ ಬಾಣದಂತೆ ಹಾಡಿಗೆ ಸ್ಟಾರ್ಸ್‌ ಕಮೆಂಟ್‌! – ಮೂವಿ ಸೀನ್‌ಗಳಲ್ಲೂ ನಿತ್ಯಾಶ್ರೀ ಹವಾ!

ಹೂವಿನ ಬಾಣದಂತೆ ಹಾಡಿಗೆ ಸ್ಟಾರ್ಸ್‌ ಕಮೆಂಟ್‌! – ಮೂವಿ ಸೀನ್‌ಗಳಲ್ಲೂ ನಿತ್ಯಾಶ್ರೀ ಹವಾ!

ಸೋಶಿಯಲ್‌ ಮೀಡಿಯಾ ಅನ್ನೋದೇ ಹಾಗೇ. ಜಸ್ಟ್‌ ಒಂದು ರೀಲ್ಸ್‌ ನಿಂದ ಯಾರನ್ನ ಬೇಕಾದ್ರೂ ಫೇಮಸ್‌ ಮಾಡಿ ಬಿಡುತ್ತೆ. ಈಗಾಗಲೇ ಸೋಶಿಯಲ್‌ ಮೀಡಿಯಾ ವೇದಿಕೆ ಮೂಲಕ ಸಾಕಷ್ಟು ಮಂದಿ ಸೇಮಸ್‌ ಆಗಿದ್ದಾರೆ. ರೀಲ್ಸ್‌ ಮಾಡ್ತಾ ಮಾಡ್ತಾ ಸೀರಿಯಲ್‌, ಸಿನಿಮಾದಲ್ಲಿ ಚಾನ್ಸ್‌ ಪಡ್ಕೊಂಡವರೂ ಇದ್ದಾರೆ.. ಕಳೆದ ನಾಲ್ಕೈದು ದಿನಗಳಿಂದ ಹೂವಿನ ಬಾಣದಂತೆ, ಯಾರಿಗೂ ಕಾಣದಂತೆ ಸಾಂಗ್‌ ಜನರ ನಿದ್ದೆಗೆಡಿಸಿದೆ. ಕೂತ್ರೂ ನಿಂತ್ರೂ, ಹೊರಗೆ ಹೋದ್ರೂ ಅದೇ ಸಾಂಗ್‌ ಕೇಳಿ ಬರ್ತಿದೆ.. ಬಿರುಗಾಳಿ ಸಿನಿಮಾದ ಸಾಂಗ್‌ ಹಾಡಿದ ನಿತ್ಯಾಶ್ರೀ ಈಗ ಸೆಲೆಬ್ರಿಟಿಯೇ ಆಗಿಬಿಟ್ಟಿದ್ದಾಳೆ.. ಸಾಕಷ್ಟು ಮಂದಿ ಫ್ಯಾನ್ಸ್‌ ಕೂಡ ಹುಟ್ಟಿಕೊಂಡಿದ್ದಾರೆ. ಸೆಲೆಬ್ರಿಟಿಗಳು ಕೂಡ ನಿತ್ಯಾಶ್ರೀ ಹಾಡಿಗೆ ಫಿದಾ ಆಗಿದ್ದಾರೆ..

ಇದನ್ನೂ ಓದಿ: ರೆಬಲ್ ಸ್ಟಾರ್​ ಅಂಬಿಗೂ ಕರ್ನಾಟಕ ರತ್ನ ನೀಡುವಂತೆ ಆಗ್ರಹ – ಡಿಸಿಎಂ ಡಿಕೆಶಿ ಬಳಿ ಮನವಿ ಮಾಡಿದ ನಟಿ ತಾರಾ

ಬಿರುಗಾಳಿ ಸಿನಿಮಾದ ಹೂವಿನ ಬಾಣದಂತೆ, ಯಾರಿಗೂ ಕಾಣದಂತೆ ಸಾಂಗ್‌ ಸಖತ್‌ ಟೆಂಡ್‌ನಲ್ಲಿದೆ. ಎಲ್ಲರ ಬಾಯಲ್ಲೂ ಇದೇ ಹಾಡು ಕೇಳಿಬರ್ತಿದೆ.. ಮಂಡ್ಯದ ಹುಡುಗಿ ನಿತ್ಯಾಶ್ರೀ ತನ್ನದೇ ಸ್ಟೈಲ್‌ ನಲ್ಲಿ ಹಾಡಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಎಲ್ಲರೂ ಈಕೆಯ ವಾಯ್ಸ್‌ ಗೆ ರೀಲ್ಸ್‌ ಮಾಡ್ತಿದ್ದಾರೆ. ಟ್ರೋಲ್‌ ಕೂಡ ಮಾಡ್ತಿದ್ದಾರೆ. ಸ್ಟಾರ್ಸ್‌ ಕೂಡ ಈಕೆ ಹಾಡೋ ಸ್ಟೈಲ್‌ ಗೆ ಇಂಪ್ರೆಸ್‌ ಆಗಿದ್ದಾರೆ. ಈ ಸಾಂಗ್‌ ವೈರಲ್‌ ಆಗ್ತಿದ್ದಂತೆ ಫೇಮಸ್‌ ಗಾಯಕರು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಕನ್ನಡ, ಹಿಂದಿ ಸಿನಿಮಾಗಳಲ್ಲಿ ಹಾಡಿರುವ ಫೇಮಸ್‌ ಸಿಂಗರ್‌ ನಿಹಾಲ್‌ ತಾವ್ರೋ, ದ್ವಾಪರ  ಸಾಂಗ್‌ ಹಾಡಿರೋ ಜಸ್ಕರಣ್‌ ಸಿಂಗ್‌ ಸೇರಿದಂತೆ ಅನೇಕರು ಈ ಹುಡುಗಿ ಹಾಡಿಗೆ ಕಮೆಂಟ್‌ ಮಾಡಿದ್ರು. ಇದೀಗ ಅರ್ಜುನ್ ಜನ್ಯ ಕೂಡ ವೈರಲ್ ಹುಡ್ಗಿ ನಿತ್ಯಾಳ ಬಗ್ಗೆ ಪ್ರೋಗ್ರಾಂವೊಂದ್ರಲ್ಲಿ ಮಾತಾಡಿದ್ರು. ನಾನು 15 ವರ್ಷ ಹಿಂದೆ ಒಂದು ಸಾಂಗ್ ಮಾಡಿದ್ದೆ. ಅದನ್ನ ಹೆಣ್ಮಕ್ಳು ಎಲ್ಡ್ರೂ ಇಷ್ಟ ಪಟ್ಟಿದ್ದಾರೆ ಅಂತಾ ಹೇಳಿ,‌ನಿತ್ಯಾ ಸ್ಟೈಲ್‌‌ ನಲ್ಲೇ ಹಾಡೋದಿಕ್ಕೆ ಶುರು ಮಾಡಿದ್ದಾರೆ.. ಆಗ ವೇದಿಕೆ ಮುಂದೆ ಕುಳಿತಿದ್ದವರೆಲ್ಲ‌ ಜೋರಾಗಿ ಚಪ್ಪಾಳೆ ತಟ್ಟಿದ್ದಾರೆ.

ಇನ್ನು ಅರ್ಜುನ್ ಜನ್ಯ ಹೂವಿನ ಬಾಣದಂತೆ ಸಾಂಗ್ ಹಾಡಿರೋ ನಿತ್ಯಾ ಬಗ್ಗೆಯೂ ಮಾತಾಡಿದ್ರು. ಆಕೆ ತುಂಬಾ ಕ್ಯೂಟ್ ಆಗಿ ಹಾಡ್ತಿದ್ದಾಳೆ. ಆಕೆ ಹಾಡಿರೋ ವಿಡಿಯೋ  ಬಂದಾಗ ಖು‍‍ಷಿ ಆಯ್ತು ಅಂದಿದ್ದಾರೆ. ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು. ಆದ್ರೂ ಜನ್ಯಾಜಿ ಆ ಹುಡುಗಿ ತರ ನಿಮ್ಗೆ ಹಾಡೋದಿಕ್ಕೆ ಆಗ್ಲಿಲ್ಲ ಅಂತಾ ಕಾಲೆಳೆದಿದ್ದಾರೆ.

ಇನ್ನು, ಹೂವಿನ ಬಾಣದಂತೆ ಸಾಂಗ್  ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗ್ತಿದ್ದಂತೆ ಅನೇಕರು ನಿತ್ಯಾ ಸ್ಟೈಲ್ ನಲ್ಲೇ ಹಾಡೋದಿಕ್ಕೆ ಶುರು ಮಾಡಿದ್ದಾರೆ. ನಾನಿನ್ನ ಬಿಡಲಾರೆ ಸೀರಿಯಲ್ ಬಾಲನಟಿ ಮಹಿತಾ ಕೂಡ ನಿತ್ಯಾ ಸ್ಟೈಲ್ ನಲ್ಲಿ ಹಾಡಿದ್ದಾಳೆ. ಹೋಮ್ ವರ್ಕ್ ಮಾಡ್ತಾ ಹಾಡ್ತಿರೋವಾಗ ಆಕೆ ತಾಯಿ ವಿಡಿಯೋ ಮಾಡಿದ್ದಾರೆ.

ಇನ್ನು ನಮ್ ಜನ ಸೋಶಿಯಲ್ ಮೀಡಿಯಾದಲ್ಲಿ ಹೊಸ ಕಂಟೆಂಟ್ ಬಂದ್ರೆ ಬಿಡ್ತಾರಾ? ಸಿಕ್ಕಿದ್ದೇ ಚಾನ್ಸ್ ಅಂತಾ ಟ್ರೋಲ್ ಮಾಡೋದಿಕ್ಕೆ ಶುರು ಮಾಡ್ತಾರೆ.. ಇದೀಗ ನಿತ್ಯಾ ವಿಡಿಯೋನಾ  ಕೆಲ ಮೂವಿ ಸೀನ್ ಗೆ ಎಡಿಟ್ ಮಾಡಿ ಟ್ರೋಲ್ ಮಾಡ್ತಿದ್ದಾರೆ.. ಹೆಣ್ಣು ನೋಡೋ ಶಾಸ್ತ್ರದ ವೇಳೆ ಹುಡ್ಗಿಗೆ ಹಾಡು ಬರುತ್ತಾ ಅಂತ ಕೇಳಿದಾಗ, ಇದೇ ಸಾಂಗ್ ನ ಎಡಿಟ್ ಮಾಡಲಾಗಿದೆ.

ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವ್ರ ಸಿನಿಮಾದ ಒಂದು ಸೀನ್ ಗೂ ನಿತ್ಯಾ ಸಾಂಗ್ ನ ಎಡಿಟ್ ಮಾಡಲಾಗಿದೆ. ಗಣೇಶ್ ಹುಡ್ಗಿ ಜೊತೆ ಮಾತಾಡ್ತಿರೋವಾಗ ಈ ಸಾಂಗ್ ನ ಪಕ್ಕದಲ್ಲಿ ನಿಂತಿದ್ದಾತ ಪ್ಲೇ ಮಾಡಿದ್ದಾರೆ‌. ಆಗ ಗಣೇಶ್ ಆತನಿಗೆ ಸರಿಯಾಗೇ ಬಾರ್ಸಿದ್ದಾರೆ. ಈ ಮೂಲಕ ಟ್ರೋಲ್ ಪೇಜ್ ಗಳು ಈ ಸಾಂಗ್ ಹವಾ ಎಲ್ಲೆಲ್ಲೂ ಇದೆ ಅಂತಾ ತೋರ್ಸಿದ್ದಾರೆ..

ಇನ್ನು ಶ್ರೇಯಾ ಘೋಷಾಲ್‌ ಹಾಡಿರೋ ಹಾಡಿಗೂ ಕೆಲವರು ನಿತ್ಯಾಶ್ರೀ ಹಾಡಿರೋ ವಿಡಿಯೋನಾ ಎಡಿಟ್‌ ಮಾಡಿದ್ದಾರೆ. ಶ್ರೇಯಾ ಘೋಷಾಲ್‌ ಸ್ಟೇಜ್‌ ನಲ್ಲಿ ಹಾಡಿದ್ದಾರೆ. ಬಳಿಕ ಆಡಿಯನ್ಸ್‌ ಬಳಿ ಹಾಡುವಂತೆ ಹೇಳಿದ್ದಾರೆ. ಆಗ ನಿತ್ಯಾ ವಿಡಿಯೋನ ಪ್ಲೇ ಮಾಡಿದ್ದಾರೆ.

ಜಸ್ಟ್‌ ಫನ್‌ಗಾಗಿ ಬಿರುಗಾಳಿ ಚಿತ್ರದ ಹೂವಿನ ಬಾಣದಂತೆ ಸಾಂಗ್‌ ಹಾಡಿರೋ ನಿತ್ಯಾಶ್ರೀ ಈಗ ಫುಲ್‌ ಫೇಮಸ್‌ ಆಗಿದ್ದಾಳೆ. ಕನ್ನಡದ ಹಾಡನ್ನು ಹಾಡಿ ರಾತ್ರೋರಾತ್ರಿ ಸ್ಟಾರ್ ಆಗಿದ್ದಾಳೆ. ಇದೀಗ ಈಕೆಯ ಹಾಡನ್ನ ಸ್ಟಾರ್ಸ್ ಕೂಡ ಮೆಚ್ಚಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಹೊಸ ಅವಕಾಶ ಹುಡುಕಿಕೊಂಡು ಬರುತ್ತಾ ಅಂತಾ ಕಾದು ನೋಡ್ಬೇಕು..

Shwetha M