ಲಾಡ್ಜ್ಗೆ ಬನ್ನಿ ಅಂತ ಕರಿತಾಳೆ.. ಸ್ನಾನಕ್ಕೆಂದು ಬಟ್ಟೆ ಬಿಚ್ಚಿಸ್ತಾಳೆ! – ಅಯ್ಯಯ್ಯೋ.. ಆಮೇಲೆ ನಡೆಯೋದೆ ಬೇರೆ!

ಸುಂದರವಾಗಿರೋ, ಬಣ್ಣದ ಬಣ್ಣದ ಮಾತುಗಳನ್ನಾಡೋ ಹುಡುಗಿಯರನ್ನ ನಂಬೋ ಮುನ್ನ ಎಚ್ಚರ.. ಅವ್ರ ಅಂದಕ್ಕೆ ಮರುಳಾಗಿ ಕರೆದಲ್ಲಿಗೆ ಹೋದರವ ಬಾಳು ನರಕ ಆಗೋದು ಗ್ಯಾರೆಂಟಿ. ಇದೀಗ ಇಲ್ಲೊಂದು ಕಡೆ ಶ್ರೀಮಂತರನ್ನ ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್ ಮಾಡ್ತಿದ್ದ ಲೇಡಿ ಪೊಲೀಸರ ಅತಿಥಿಯಾಗಿದ್ದಾಳೆ.
ಇದನ್ನೂ ಓದಿ: ಮಗಳ ಮದುವೆ ಮಾಡಿಸಲು ಆಗಿಲ್ಲ ಎಂದು ಆತ್ಮಹ*ತ್ಯೆಗೆ ಶರಣಾದ ತಂದೆ! – ಅಪ್ಪನ ಸಾವಿನ ಬೆನ್ನಲ್ಲೇ ಮಗಳು ದುರಂತ ಅಂತ್ಯ!
ಸೋಶಿಯಲ್ ಮೀಡಿಯಾ ಮೂಲಕ ಶ್ರೀಮಂತರನ್ನು ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್ ಮಾಡ್ತಿದ್ದ ಖತರ್ನಾಕ್ ಲೇಡಿಯನ್ನ ಬೆಳಗಾವಿಯ ಟಿಳಕವಾಡಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಇನ್ನು ಈಕೆಗೆ ಸಹಾಯ ಮಾಡ್ತಿದ್ದ ಆಪ್ತ ಎಸ್ಕೇಪ್ ಆಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಏನಿದು ಘಟನೆ?
ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರ ಮೂಲದ ದೀಪಾ ಅವಟಗಿ (33) ಬಂಧಿತ ಮಹಿಳೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ನಿವಾಸಿಯಾಗಿರುವ ಶಿವಾನಂದ್ ಮಠಪತಿ ದೀಪಾ ಫ್ರೆಂಡ್. ಫ್ಯಾಶನ್ ಡಿಸೈನರ್ ಆಗಿರುವ ದೀಪಾ ಹಾಗೂ ಶಿವಾನಂದ್ಗೆ ಶ್ರೀಮಂತರೇ ಟಾರ್ಗೆಟ್. ಯಾರೊಂದಿಗೆ ಮಾತನಾಡಬೇಕು, ಯಾರನ್ನ ಟಾರ್ಗೆಟ್ ಮಾಡಬೇಕು ಎನ್ನೋ ಮಾಹಿತಿಯನ್ನ ದೀಪಾಗೆ ಶಿವಾನಂದ್ ಮಾಹಿತಿ ನೀಡುತ್ತಿದ್ದ. ದೀಪಾ, ಅವರನ್ನು ಫೇಸ್ಬುಕ್, ಇನ್ಸ್ಟಾಗ್ರಾಂ ಮೂಲಕ ಪರಿಚಯ ಮಾಡಿಕೊಳ್ಳುತ್ತಿದ್ದಳು. ಕೆಲ ದಿನಗಳ ಬಳಿಕ ಸಲುಗೆಯಿಂದ ಚಾಟ್ ಮಾಡಲು ಆರಂಭಿಸುತ್ತಿದ್ದಳು. ಸೋಶಿಯಲ್ ಮೀಡಿಯಾದಲ್ಲಿ ಆಪ್ತತೆ ಬೆಳೆಯುತ್ತಿದ್ದಂತೆ ಶ್ರೀಮಂತರನ್ನು ಲಾಡ್ಜ್ಗೆ ಕರೆಸಿಕೊಳ್ಳುತ್ತಿದ್ದಳು. ಲಾಡ್ಜ್ಗೆ ಬರುತ್ತಿದ್ದಂತೆ ವ್ಯಕ್ತಿಗಳಿಗೆ ಸ್ನಾನ ಮಾಡುವಂತೆ ಸಲಹೆ ನೀಡುತ್ತಿದ್ದಳು. ಸ್ನಾನಕ್ಕೆ ಹೋಗುತ್ತಿದ್ದಂತೆ ಶ್ರೀಮಂತರ ಮೊಬೈಲ್, ಹಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದಳು. ಉದ್ಯಮಿ ಕಡೆಯವರು ಸಂಪರ್ಕಿಸಿದಾಗ ದೀಪಾ ಆ್ಯಂಡ್ ಗ್ಯಾಂಗ್ ಹಣಕ್ಕೆ ಡಿಮ್ಯಾಂಡ್ ಮಾಡಿತ್ತು. ಹಣ ಕೊಡದಿದ್ದರೆ ರೂಂಗೆ ಕರೆದು ಅಸಭ್ಯವಾಗಿ ವರ್ತಿಸಿರುವ ಬಗ್ಗೆ ದೂರು ನೀಡುವ ಬೆದರಿಕೆ ಹಾಕಿದ್ದರು. ಬಳಿಕ ಬಂದ ಹಣದಲ್ಲಿ ಗೆಳೆಯ ಶಿವಾನಂದ್ ಜೊತೆಯಲ್ಲಿ ದೀಪಾ ಲೈಫ್ ಎಂಜಾಯ್ ಮಾಡುತ್ತಿದ್ದಳು.
ದೀಪಾ ಸಿಕ್ಕಿಬಿದ್ದಿದ್ದು ಹೇಗೆ?
ಇತ್ತೀಚೆಗೆ ಉದ್ಯಮಿಯೊಬ್ಬರನ್ನ ದೀಪಾ ಪರಿಚಯ ಮಾಡಿಕೊಂಡಿದ್ದಳು. ಉದ್ಯಮಿಯನ್ನು ಲಾಡ್ಜ್ಗೆ ಕರೆಸಿಕೊಂಡಿದ್ದ ದೀಪಾ, ರೂಮ್ಗೆ ಬರುತ್ತಿದ್ದಂತೆ ಫ್ರೆಶ್ ಆಗುವಂತೆ ಹೇಳಿದ್ದಳು. ಉದ್ಯಮಿ ಬಾತ್ರೂಮ್ಗೆ ಹೋಗುತ್ತಿದ್ದಂತೆ ಆತನ ವಸ್ತುಗಳನ್ನು ತೆಗೆದಕೊಂಡು ರೂಮ್ ಬಾಗಿಲು ಹಾಕಿಕೊಂಡು ಎಸ್ಕೇಪ್ ಆಗಿದ್ದಳು. ಈ ಸಂಬಂಧ ಉದ್ಯಮಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಆಧರಿಸಿ ಬೆಳಗಾವಿಯ ಹೋಟೆಲ್ನಲ್ಲಿ ದೀಪಾಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆಯೂ ದೀಪಾ ವಿರುದ್ಧ ದೂರು ದಾಖಲಾಗಿದ್ದವು.
ಬಂಧಿತೆ ಆರೋಪಿ ದೀಪಾ ಬಳಿಯಿಂದ ಒಂದು ಫಾರ್ಚುನ್ ಕಾರ್, ಒಂದು ಮಾರುತಿ ಸುಜುಕಿ ಎಸ್ ಕ್ರಾಸ್ ಕಾರ್, 11 ಮೊಬೈಲ್, 1 ಟ್ಯಾಬ್, 1 ಡೊಂಗಲ್, 3 ಕಾರ್ ಕೀ, 14 ಸಾವಿರ ನಗದು ಹಣ ಸೇರಿದಂತೆ ಒಟ್ಟು 32 ಲಕ್ಷ 86 ಸಾವಿರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಶಿವಾನಂದ್ ಬಂಧನಕ್ಕಾಗಿ ಹುಡುಕಾಟ ನಡೆಸಲಾಗುತ್ತಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇನ್ಸ್ಪೆಕ್ಟರ್ ಪರಶುರಾಮ್ ಪೂಜೇರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಖತರ್ನಾಕ್ ಮಹಿಳೆಯನ್ನು ಬಂಧಿಸಿದ್ದಾರೆ.

ನೋಡಿರಿ

