ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಸಂಚಲನ – ಹೈಕಮಾಂಡ್‌ಗೆ ದೂರು ನೀಡಲು ಮುಂದಾದ ಸಿಎಂ ಆಪ್ತರು

ರಾಜ್ಯದಲ್ಲೀಗ ರಾಜಕಾರಣಿಗಳ ಹನಿಟ್ರ್ಯಾಪ್ ಪ್ರಕರಣ ಭಾರಿ ಸದ್ದು ಮಾಡುತ್ತಿದೆ. ಗುರುವಾರ ಸಹಕಾರ ಸಚಿವ ಕೆಎನ್ ರಾಜಣ್ಣ ವಿಧಾನಸಭೆಯಲ್ಲಿ ಸ್ಫೋಟಕ ಹೇಳಿಕೆ ನೀಡಿದ್ದರು. ಇದೀಗ ನಾಯಕರು ದೆಹಲಿಗೆ ತೆರಳಿ ದೂರು ನೀಡಲು ಮುಂದಾಗಿದ್ದಾರೆ.
ಇದನ್ನೂ ಓದಿ: ಭಾರತ ಅತೀ ಹೆಚ್ಚು ಸುಂಕ ವಿಧಿಸುತ್ತೆ.. ಈ ಕ್ರಮವನ್ನ ನಾನು ಒಪ್ಪಲ್ಲವೆಂದ ಟ್ರಂಪ್
ವಿಧಾನಸಭಾ ಅಧಿವೇಶನ ಮುಗಿದ ಬಳಿಕ ಸಿಎಂ ಸಿದ್ದರಾಮಯ್ಯ ಆಪ್ತ ಸಚಿವರು ದೆಹಲಿ ಚಲೋ ನಡೆಸಿ ಹೈಕಮಾಂಡ್ ನಾಯಕರ ಬಳಿ ದೂರು ನೀಡುವ ಸಾಧ್ಯತೆಯಿದೆ. ಈ ಬಾರಿ ಯಾವುದೇ ಕಾರಣಕ್ಕೆ ಬಿಡಬಾರದು ಎಂದು ಸಚಿವರು ಹಠಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ರಾಜಣ್ಣ ಅವರು ಹನಿಟ್ರ್ಯಾಪ್ ಮಾಡಿದವರ ಹೆಸರನ್ನು ಬಹಿರಂಗ ಪಡಿಸಿದರೆ ಈ ಪ್ರಕರಣ ಮತ್ತಷ್ಟು ತಿರುವು ಪಡೆಯಲಿದೆ.
ಇನ್ನು ತಮ್ಮ ವಿರುದ್ಧ ಹನಿಟ್ರ್ಯಾಪ್ ರಹಸ್ಯ ಬಹಿರಂಗಪಡಿಸಿದ ಬೆನ್ನಲ್ಲೇ ಸಚಿವ ರಾಜಣ್ಣ ಪುತ್ರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ವಿಧಾನಸಭೆ ಮೊಗಸಾಲೆಯಲ್ಲಿ ಸಿಎಂ ಕೊಠಡಿಯಲ್ಲಿ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ ಹನಿಟ್ರ್ಯಾಪ್ ಯತ್ನ ನಡೆದಿರುವ ಬಗ್ಗೆ ದೂರು ನೀಡಿದ್ದಾರೆ.