ಉದ್ಯಮಿಯನ್ನು ಬುಟ್ಟಿಗೆ ಬೀಳಿಸಲು ಹೆಂಡ್ತಿಯನ್ನೇ ಛೂ ಬಿಟ್ಟಿದ್ದ ಪಾಪಿ – ಹನಿಟ್ರ್ಯಾಪ್ ಮಾಡಿ ಹಣ ಪೀಕಲು ದಂಪತಿಯ ಖತರ್ನಾಕ್ ಪ್ಲ್ಯಾನ್

ಉದ್ಯಮಿಯನ್ನು ಬುಟ್ಟಿಗೆ ಬೀಳಿಸಲು ಹೆಂಡ್ತಿಯನ್ನೇ ಛೂ ಬಿಟ್ಟಿದ್ದ ಪಾಪಿ – ಹನಿಟ್ರ್ಯಾಪ್ ಮಾಡಿ ಹಣ ಪೀಕಲು ದಂಪತಿಯ ಖತರ್ನಾಕ್ ಪ್ಲ್ಯಾನ್

ಆ ಗ್ಯಾಂಗ್ ಪಕ್ಕಾ ಪ್ಲ್ಯಾನ್ ಮಾಡಿಕೊಂಡು ಫೀಲ್ಡಿಗೆ ಇಳಿಯುತ್ತಿತ್ತು. ಉದ್ಯಮಿಗಳನ್ನೇ ಟಾರ್ಗೆಟ್ ಮಾಡಿ ಸ್ಕೆಚ್ ಹಾಕುತ್ತಿದ್ರು. ತಾವು ಸ್ಕೆಚ್ ಹಾಕಿದ ಮಿಕ ಏನಾದ್ರೂ ಹಳ್ಳಕ್ಕೆ ಬಿದ್ರೆ ಲಕ್ಷ ಲಕ್ಷ ಹಣ ಪೀಕುತ್ತಿದ್ದರು. ಆದರೆ ಈಗ ಗ್ರಹಚಾರ ಕೆಟ್ಟು ಪೊಲೀಸರ ಕೈಗೆ ತಗ್ಲಾಕ್ಕೊಂಡಿದ್ದಾರೆ. ತನಿಖೆ ವೇಳೆ ಬೆಚ್ಚಿ ಬೀಳಿಸೋ ಸತ್ಯ ಹೊರಬಿದ್ದಿದೆ. ಹಾಗೇ ಗಂಡ ಹೆಂಡತಿಯ ಖತರ್ನಾಕ್ ಪ್ಲ್ಯಾನ್ ಕೂಡ ಬಯಲಾಗಿದೆ.

ಪತ್ನಿಯನ್ನು ಬಿಟ್ಟು ಉದ್ಯಮಿಯನ್ನು ಹನಿಟ್ರ್ಯಾಪ್ ಮಾಡಲು ಯತ್ನಿಸಿದ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂದ ಬೆಂಗಳೂರು ಸಿಸಿಬಿ ದೂರು ದಾಖಲಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರನ್ನು ಖಲೀಮ್, ಸಭಾ, ಓಬೆದ್ ರಕೀಮ್, ಅತೀಕ್ ಎಂದು ಗುರುತಿಸಲಾಗಿದೆ. ಬಂಧಿತರ ಪೈಕಿ ಖಲೀಮ್ ಮತ್ತು ಸಭಾ ದಂಪತಿಯಾಗಿದ್ದು, ತನ್ನ ಪತ್ನಿಯನ್ನೇ ಹನಿಟ್ರ್ಯಾಪ್‌ ಮಾಡಲು ಖಲೀಮ್ ತೊಡಗಿಸಿಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ. ಈ ಗ್ಯಾಂಗ್ ಅತೀವುಲ್ಲಾ ಎಂಬ ಉದ್ಯಮಿಯನ್ನ ಹನಿಟ್ರ್ಯಾಪ್ ಮಾಡಿ ಹಣ ಪೀಕಲು ಯತ್ನಿಸಿದ್ದು, ಆರೋಪಿ ಖಲೀಮ್ ತನ್ನ ಪತ್ನಿ ಸಭಾಳನ್ನು ವಿಧವೆ ಎಂದು ಹೇಳಿ ನೋಡಿಕೊಳ್ಳುವಂತೆ ಉದ್ಯಮಿ ಅತೀವುಲ್ಲಾ ಜೊತೆ ಬಿಟ್ಟು ಹನಿಟ್ರ್ಯಾಪ್ ನಡೆಸಿದ್ದಾನೆ. ಇವರ ಜೊತೆ ಈ ದಂಧೆಯಲ್ಲಿ ಓಬೆದ್ ರಕೀಮ್, ಅತೀಕ್ ಕೂಡ ಸೇರಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಒಂದೂವರೆ ವರ್ಷದ ಹಿಂದೆಯೇ ನಡೆದಿತ್ತು ಸ್ಕೆಚ್ – ಸಂಸತ್ ದಾಳಿ ತನಿಖೆಯಲ್ಲಿ ಬಯಲಾಯ್ತು ರಹಸ್ಯ

ಆರೋಪಿ ಖಲೀಮ್ ತನ್ನ ಪತ್ನಿ ಸಭಾಳನ್ನ ವಿಧವೆ ಅಂತಾ ಅತೀವುಲ್ಲಾಗೆ ಪರಿಚಯ ಮಾಡಿಸಿಕೊಟ್ಟು ಆಕೆಯನ್ನು ನೋಡಿಕೊಳ್ಳುವಂತೆ ಹೇಳಿದ್ದ. ನಂತರ ಸಭಾ ಮತ್ತು ಅತೀವುಲ್ಲಾ ನಡುವೆ ಕೆಲವು ಬಾರಿ ದೈಹಿಕ ಸಂಪರ್ಕ ನಡೆದಿತ್ತು. ಕೆಲ ದಿನಗಳ ನಂತರ ಸಭಾ ಅತೀವುಲ್ಲಾನನ್ನು ‘ಆರ್ ಆರ್ ನಗರದಲ್ಲಿ ರೂಮ್ ಬುಕ್ ಮಾಡಲು ಆಧಾರ್ ಕಾರ್ಡ್ ಜೊತೆ ಬಾ‌’ ಎಂದು ಕರೆದಿದ್ದಾಳೆ. ಡಿಸೆಂಬರ್ 14ರಂದು ಆರ್ ಆರ್ ನಗರದ ಲಾಡ್ಜ್‌ಗೆ ಬರುವಂತೆ ಅತೀವುಲ್ಲಾಗೆ ಸಭಾಳೇ ಕರೆ ಮಾಡಿ ಆಹ್ವಾನಿಸಿದ್ದರಿಂದ ಅಲ್ಲಿಗೆ ಬಂದಿದ್ದ ಅತೀವುಲ್ಲಾ ರೂಮ್ ಬುಕ್ ಮಾಡಿದ ಕೆಲವೇ ಹೊತ್ತಿನಲ್ಲಿ ಸ್ಥಳಕ್ಕೆ ಬಂದಿದ್ದ ಆರೋಪಿಗಳಾದ ಖಲೀಂ, ಉಬೇದ್, ರಕೀಂ ಹಾಗೂ ಅತೀಕ್ ಈ ವಿಚಾರವನ್ನು ನಿನ್ನ ಮನೆಯವರಿಗೆ ತಿಳಿಸ್ತೀವಿ ಎಂದು ಗಲಾಟೆ ಆರಂಭಿಸಿದ್ದಾರೆ. ಅಲ್ಲದೇ ಈ ವಿಷಯವನ್ನು ಎಲ್ಲರಿಗೂ ತಿಳಿಸಿ ನಿನ್ನ ಮರ್ಯಾದೆ ತೆಗೆಯುತ್ತೇವೆ. ಸುಮ್ಮನಿರಬೇಕೆಂದರೆ ಆರು ಲಕ್ಷ ಹಣ ನೀಡಬೇಕು ಎಂದು ಬೆದರಿಕೆ ಹಾಕಿದ್ದಾರೆ. ಈ ವೇಳೆ ಹಣ ಕೊಡ್ತೀನಿ ಎಂದ ಅತೀವುಲ್ಲಾ ಅಲ್ಲೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಈ ವೇಳೆ ಹೋಟೆಲ್‌ಗೆ ದಾಳಿ ಮಾಡಿದ ಸಿಸಿಬಿ ಪೊಲೀಸರು, ರೆಡ್ ಹ್ಯಾಂಡ್ ಆಗಿ ಹನಿಟ್ರ್ಯಾಪ್ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಗ್ಯಾಂಗ್ ಇದೇ ರೀತಿ ಹಲವರಿಗೆ ಸುಲಿಗೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆರ್​ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Shantha Kumari