ರಸ್ತೆಯಲ್ಲಿ ಮಹಿಳೆಗೆ ಸಿಕ್ತು ಕಂತೆ ಕಂತೆ ಹಣ! – 10 ಲಕ್ಷ ದುಡ್ಡು ಏನಾಯ್ತು ಗೊತ್ತಾ?

ರಸ್ತೆಯಲ್ಲಿ ಮಹಿಳೆಗೆ ಸಿಕ್ತು ಕಂತೆ ಕಂತೆ ಹಣ! – 10 ಲಕ್ಷ ದುಡ್ಡು ಏನಾಯ್ತು ಗೊತ್ತಾ?

ಈಗ ಎಲ್ಲರಿಗೂ ದುಡ್ಡಿದ್ದೇ ಚಿಂತೆ. ಹೆಚ್ಚು ಹಣ ಸಂಪಾದಿಸೋದು ಹೇಗೆ ಅಂತ ಯೋಚನೆ ಮಾಡುವವರೇ ಹೆಚ್ಚು. ಇನ್ನೂ ಕೆಲವರು ದಾರಿಯಲ್ಲಿ ಹೋಗುವಾಗ ಒಂದು ಹಣದ ಚೀಲ ಸಿಕ್ಕಿದ್ರೆ ಲೈಫ್‌ ಸೆಟಲ್‌ ಅಂತ ಅಂದುಕೊಳ್ತಾರೆ. ಇದೀಗ ಇಲ್ಲೊಂದು ಮಹಿಳೆಗೆ ಬ್ಯಾಗ್‌ವೊಂದು ಸಿಕ್ಕಿದೆ. ಇದನ್ನ ಓಪನ್‌ ಮಾಡಿ ನೋಡಿದ್ರೆ ಕಂತೆ ಕಂತೆ ಹಣ ಇದೆ.

ಇದನ್ನೂ ಓದಿ: ಕೃಷ್ಣನೂರಲ್ಲಿ ಮೋದಿ ಹವಾ! – ಕನಕನ ಕಿಂಡಿ ಸ್ವರ್ಣ ಲೇಪನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಧಾನಿ

ಅಚ್ಚರಿಯಾದ್ರೂ ಸತ್ಯ. ಈ ಘಟನೆ ಪುಣೆಯ ಸದಾಶಿವ ಪೇಠದಲ್ಲಿ ನಡೆದಿದೆ. ಅಂಜು ಮಾನೆ ಎಂಬ ನೈರ್ಮಲ್ಯ ಕಾರ್ಯಕರ್ತೆ ಪುಣೆಯ ಸದಾಶಿವ ಪೇಠದಲ್ಲಿ ಕೆಲಸ ಮಾಡುತ್ತಿದ್ದಾರೆ. ಎಂದಿನಂತೆ ಆಕೆ ಕೆಲಸಕ್ಕೆ ತೆರಳಿದ್ದರು. ಈ ವೇಳೆ ಅವರ ಕಣ್ಣಿಗೆ ಬ್ಯಾಗ್‌ವೊಂದು ಸಿಕ್ಕಿದೆ. ಕೂಡಲೇ ಹತ್ತಿರ ಬಂದು ಬ್ಯಾಗ್‌ ಒಳಗೆ ಏನಿದೆ ಎಂದು ನೋಡಿದ್ದಾರೆ. ಬ್ಯಾಗ್‌ ಓಪನ್‌ ಮಾಡಿದಾಗ ಆಕೆ ಶಾಕ್‌ ಆಗಿದ್ದಾರೆ.

ಹೌದು, ಅಂಕು ಅವರು ಬ್ಯಾಗ್‌ ಓಪನ್‌ ಮಾಡಿದಾಗ ಅದ್ರಲ್ಲಿ ಔಷಧಿಗಳ ಜತೆಗೆ ಕಂತೆ ಕಂತೆ ಹಣ ಇತ್ತು. ಆ ಬ್ಯಾಗ್‌ನಲ್ಲಿ 10 ಲಕ್ಷ ರೂ. ಹಣ ಇತ್ತು ಎಂದು ಗೊತ್ತಾಗಿದೆ. ಕೂಡಲೇ ಅಂಜು ಅವರು ಈ ಹಣವನ್ನ ಸಂಬಂಧಪಟ್ಟವರಿಗೆ ವಾಪಸ್ ನೀಡಿದ್ದಾರೆ. ಬಳಿಕ ಈ ಘಟನೆ ಬಗ್ಗೆ ಅಂಜು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ. ನಾನು ಪ್ರತಿದಿನ ಈ ಬೀದಿಯಲ್ಲೇ ಕೆಲಸ ಮಾಡುವುದು, ಮನೆಯೊಂದರ ಬಳಿ ಈ ಬ್ಯಾಗ್​​ ಸಿಕ್ಕಿದೆ. ತಕ್ಷಣ ನನಗೆ ತಿಳಿದ ಮನೆಯವರ ಬಳಿ, ಇದು ನಿಮ್ಮ ಬ್ಯಾಗಾ ಎಂದು ಕೇಳಿದೆ. ಅದರಲ್ಲಿ ಒಬ್ಬರು ಈ ಬ್ಯಾಗ್​​​​ ನನ್ನದು ಎಂದು ಹೇಳಿದ್ದಾರೆ. ಇದು ಅವರದೇ ಬ್ಯಾಗ್​​ ಎಂದು ದೃಢಪಡಿಸಿದ ನಂತರ ಅವರಿಗೆ ಬ್ಯಾಗ್​​​ನ್ನು ವಾಪಸ್ ನೀಡಿದ್ದೇನೆ ಎಂದು ಹೇಳಿದ್ದಾರೆ.

ಇದೀಗ ಅಂಜು ಅವರ ಪ್ರಾಮಾಣಿಕತೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹ ವ್ಯಕ್ತಿಗಳಿಂದ ಈ ಸಮಾಜದಲ್ಲಿ ಬದಲಾವಣೆಯಾಗಲು ಸಾಧ್ಯ ಎಂದು ಸೋಶಿಯಲ್​​​ ಮೀಡಿಯಾದಲ್ಲಿ ಹೇಳಿದ್ದಾರೆ. ಬ್ಯಾಗ್​​ ವಾಪಸ್ ನೀಡಿದಕ್ಕೆ ಆ ಬ್ಯಾಗ್​​ನ ಮಾಲೀಕ ಅವರಿಗೆ ಸೀರೆ ಹಾಗು ಒಂದಿಷ್ಟು ಹಣವನ್ನು ನೀಡಿದ್ದಾರೆ.

Shwetha M