ತಮಿಳುನಾಡಿನಲ್ಲಿ ಶಬರಿಮಲೆ ಯಾತ್ರಿಗಳ ಮೇಲೆ ಹಲ್ಲೆ ಕೇಸ್! – ಕನ್ನಡಿಗರ ರಕ್ಷಣೆ ನಮ್ಮ ಕರ್ತವ್ಯ ಎಂದ ಗೃಹಸಚಿವ!

ಶಬರಿಮಲೆ ಯಾತ್ರಿಗಳ ಟಿಟಿ ಗಾಡಿಗೆ ಕರ್ನಾಟಕದ ಬಾವುಟ ಕಟ್ಟಿದ್ದಕ್ಕೆ ತಮಿಳುನಾಡಿನದಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ ಸ್ಥಳೀಯ ತಮಿಳು ರಾಜಕೀಯ ಪಕ್ಷದ ಕಾರ್ಯಕರ್ತರು ಹಲ್ಲೆ ಮಾಡಿದ್ದು, ತಮಿಳುನಾಡು ಗಡಿದಾಟುವವರೆಗೂ ಕರ್ನಾಟಕ ಧ್ವಜ ಹಾಕುವಂತಿಲ್ಲ ಎಂದು ಧಮ್ಕಿ ಹಾಕಿದ್ದಾರೆ ಎನ್ನಲಾಗ್ತಿದೆ. ಇದೀಗ ಕನ್ನಡಿಗರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಯುವ ಕರ್ನಾಟಕ ರೂಪೇಶ್ ರಾಜಣ್ಣ, ಕರವೇ ರಾಜ್ಯಾಧ್ಯಕ್ಷ ಶಿವರಾಮೇಗೌಡ ಅವರು ಗೃಹ ಸಚಿವ ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: ನಮ್ಮ ಮೆಟ್ರೋ ದರ 5% ಏರಿಕೆ – ಸಿಎಂ, ಡಿಸಿಎಂಗೆ ಪತ್ರ ಬರೆದ ಸಂಸದ ತೇಜಸ್ವಿ ಸೂರ್ಯ
ಕರ್ನಾಟಕದ ಶಬರಿಮಲೆ ಯಾತ್ರಿಗಳ ಮೇಲೆ ತಮಿಳುನಾಡಿನವರು ದರ್ಪ ತೋರಿದ್ದಾರೆ ಎಂದು ಕನ್ನಡ ಸಂಘಟನೆಗಳು ಆಕ್ರೋಶ ಹೊರಹಾಕಿದೆ. ಹಲ್ಲೆ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಯುವ ಕರ್ನಾಟಕ ರೂಪೇಶ್ ರಾಜಣ್ಣ, ಕರವೇ ರಾಜ್ಯಾಧ್ಯಕ್ಷ ಶಿವರಾಮೇಗೌಡ ಅವರು ಗೃಹ ಸಚಿವ ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೇ ಕನ್ನಡಿಗರ ಮೇಲೆ ಹಲ್ಲೆ ಖಂಡಿಸಿದ ಕನ್ನಡ ಪರ ಸಂಘಟನೆಗಳು, ಹಲ್ಲೆ ಮಾಡಿದವರನ್ನ ತಮಿಳುನಾಡು ಪೊಲೀಸ್ರು ಅರೆಸ್ಟ್ ಮಾಡದಿದ್ದರೆ ತಮಿಳುನಾಡಿಗೆ ನುಗ್ಗಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಗೃಹ ಸಚಿವ, ಈಗ ತಾನೇ ಯುವ ಕರ್ನಾಟಕ ವೇದಿಕೆಯವರು ಮನವಿ ಕೊಟ್ಟಿದ್ದಾರೆ. ಪೊಲೀಸ್ ಹಿರಿಯ ಅಧಿಕಾರಿಗಳ ಸಭೆ ಇದೆ. ಸಭೆಯಲ್ಲಿ ಮುಖ್ಯಮಂತ್ರಿಗಳು ಪಾಲ್ಗೊಳ್ಳುತ್ತಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ಮಾಡ್ತೇನೆ. ಕನ್ನಡಿಗರ ರಕ್ಷಣೆ ನಮ್ಮ ಕರ್ತವ್ಯ, ಅದನ್ನು ನಾವು ಮಾಡ್ತೇವೆ ಎಂದು ಗೃಹ ಸಚಿವರು ಹೇಳಿದ್ದಾರೆ.

ನೋಡಿರಿ

