ಬಿಗ್ ಬಜೆಟ್ ಸಿನಿಮಾಗೆ ರೆಡಿಯಾದ ಹೊಂಬಾಳೆ ಬ್ಯಾನರ್ – ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾಗೆ ಬಂಡವಾಳ

ಬಿಗ್ ಬಜೆಟ್ ಸಿನಿಮಾಗೆ ರೆಡಿಯಾದ ಹೊಂಬಾಳೆ ಬ್ಯಾನರ್ –  ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾಗೆ ಬಂಡವಾಳ

ಹೊಂಬಾಳೆ ಫಿಲ್ಮ್ಸ್‌ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ಹೊಂಬಾಳೆ ಫಿಲ್ಮ್ಸ್ ಕೂಡಾ ಮಾಡಿದ್ದೆಲ್ಲಾ ಸ್ಟಾರ್ ಸಿನಿಮಾಗಳನ್ನೇ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ರಿಂದ ಶುರುವಾದ ಹೊಂಬಾಳೆ ಜರ್ನಿ, ಯಶ್, ಪ್ರಭಾಸ್, ರಿಷಬ್ ಶೆಟ್ಟಿ, ಫಹಾದ್ ಫಾಸಿಲ್‌ನಂತಹ ಬಿಗ್ ಸ್ಟಾರ್‌ಗಳನ್ನ ನಂಬಿ ದುಡ್ಡು ಸುರಿದಿದೆ. ಅದಕ್ಕೂ ಮಿಗಿಲಾಗಿ ಗಳಿಕೆ ಹಣವನ್ನು ಬಾಚಿದೆ. ಈಗ ಮತ್ತೊಂದು ಬಿಗ್ ಬಜೆಟ್ ಸಿನಿಮಾಗೆ ಹೊಂಬಾಳೆ ಬ್ಯಾನರ್ ಸಿದ್ದವಾಗಿದೆ. ಅದು ಕೂಡಾ ಸ್ಯಾಂಡಲ್‌ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮೂಲಕ..

ಇದನ್ನೂ ಓದಿ: ‘ಇದು ಎಐ ಜಗತ್ತಲ್ಲ. ಇದು ಯುಐ ಜಗತ್ತು’ – ‘UI’ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪ್ಪಿ ಕರಾಮತ್ತು..!

ಹೊಂಬಾಳೆ ಬ್ಯಾನರ್ ಈ ಬಾರಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾರನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳುತ್ತಿದೆ. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಟ್ರೆಂಡಿಂಗ್‌ನಲ್ಲಿರೋ ಕನ್ನಡದ ಮಾಸ್ ಹೀರೋ ಧ್ರುವ ಸರ್ಜಾ. ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌ ಕೂಡ ಕೆಜಿಎಫ್, ಕಾಂತಾರ, ಸಲಾರ್‌ನಂತಹ ಪ್ಯಾನ್ ಇಂಡಿಯಾ ಹ್ಯಾಟ್ರಿಕ್ ಸಿನಿಮಾ ಕೊಟ್ಟಿರೋ ನಿರ್ಮಾಣ ಸಂಸ್ಥೆ. ಈಗ ಧ್ರುವ ಸರ್ಜಾಗೆ ಗಾಳ ಹಾಕಿರೋ ಹೊಂಬಾಳೆ ಬಂಡವಾಳ ಹೂಡೋಕೆ ರೆಡಿಯಾಗಿದೆಯಂತೆ. ಮಫ್ತಿ ಸಿನಿಮಾ ಖ್ಯಾತಿಯ ನರ್ಥನ್ ಧ್ರುವ ಸರ್ಜಾಗೆ ಆಕ್ಷನ್ ಕಟ್ ಹೇಳ್ತಾರಂತೆ.

ಭಾರತೀಯ ಚಿತ್ರರಂಗಲ್ಲಿ ಬಿಗ್ ಬಜೆಟ್ ಸಿನಿಮಾಗಳನ್ನ ಕೊಡುತ್ತಿರೋ ಹೊಂಬಾಳೆ ಇಂದು ಹೆಮ್ಮರವಾಗಿ ಬೆಳೆದಿದೆ. ಹೊಂಬಾಳೆ ಸಾರಥಿ ವಿಜಯ್ ಕಿರಗಂದೂರು ಐದು ವರ್ಷದಲ್ಲಿ 3 ಸಾವಿರ ಕೋಟಿಯನ್ನ ಸಿನಿ ರಂಗದ ಮೇಲೆ ಹೂಡುತ್ತಿದ್ದೇವೆ ಅಂತ ಹೇಳಿದ್ರು. ಇದೀಗ ಧ್ರುವ ಸರ್ಜಾ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ.

Sulekha