ಹಾಲಿವುಡ್ ಸ್ಟಂಟ್ ಡೈರೆಕ್ಟರ್ ಭೇಟಿಯಾದ ನಟ ಯಶ್‌! – ಹಾಲಿವುಡ್ ಸಿನಿಮಾದಲ್ಲಿ ನಟಿಸಲಿದ್ದಾರಾ ರಾಕಿಭಾಯ್?‌

ಹಾಲಿವುಡ್ ಸ್ಟಂಟ್ ಡೈರೆಕ್ಟರ್ ಭೇಟಿಯಾದ ನಟ ಯಶ್‌! – ಹಾಲಿವುಡ್ ಸಿನಿಮಾದಲ್ಲಿ ನಟಿಸಲಿದ್ದಾರಾ ರಾಕಿಭಾಯ್?‌

ಬೆಂಗಳೂರು: ನಟ ರಾಕಿಂಗ್‌ ಸ್ಟಾರ್‌ ಅವರ ʼಯಶ್‌ 19ʼ ಚಿತ್ರದ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಬೆನ್ನಲ್ಲೇ ಯಶ್‌ ಅವರು ಖ್ಯಾತ ಹಾಲಿವುಡ್‌ ಸ್ಟಂಟ್‌ ಡೈರೆಕ್ಟರ್‌ ಜೆ.ಜೆ.ಪೆರ್ರಿ  ಅವರನ್ನು ಭೇಟಿ ಆಗಿದ್ದಾರೆ. ಇವರಿಬ್ಬರು ಭೇಟಿಯಾದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಯಶ್‌ ಹಾಲಿವುಡ್‌ ಸಿನಿಮಾದಲ್ಲಿ ನಟಿಸಲಿದ್ದಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

ಯಶ್‌ ʼಕೆಜಿಎಫ್‌ʼ ಸರಣಿ ಮೂಲಕ ಗ್ಲೋಬಲ್‌ ಸ್ಟಾರ್‌ ಆಗಿ ದೇಶ – ವಿದೇಶದಲ್ಲಿ ಮಿಂಚುತ್ತಿದ್ದಾರೆ. ತಮ್ಮ ಮುಂದಿನ ಸಿನಿಮಾ ‘ಯಶ್19’ ಸಿನಿಮಾವಾಗಿ ಅನೌನ್ಸ್ ಆಗಲಿದೆ ಎನ್ನಲಾಗುತ್ತಿದೆ. ಈ ಬೆನ್ನಲ್ಲೇ ರಾಕಿಭಾಯ್‌ ಗೀತು ಮೋಹನ್ ದಾಸ್ ಅವರ ಗೋವಾ ಡ್ರಗ್ಸ್ ಕಥೆಯನ್ನೊಳಗೊಂಡಿರುವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯಶ್‌ ಅವರು ಹಾಲಿವುಡ್ನ ಖ್ಯಾತ ನಿರ್ದೇಶಕ ಜೆ.ಜೆ.ಪೆರ್ರಿ ಅವರನ್ನು ಭೇಟಿ ಆಗಿ ಆತ್ಮೀಯವಾಗಿ ಕೆಲ ಕ್ಷಣಗಳನ್ನು ಕಳೆದಿದ್ದಾರೆ.

ಇದನ್ನೂ ಓದಿ: ಸ್ಟಾರ್ ಕ್ರಿಕೆಟರ್ ಜೊತೆ ನಟಿ ಪೂಜಾ ಹೆಗ್ಡೆ ಲವ್ – ಸದ್ಯದಲ್ಲೇ ಮದುವೆಯಾಗುತ್ತಿದ್ದಾರೆ ಅಂತಾ ಬಾಲಿವುಡ್‌ನಲ್ಲಿ ಪುಕಾರು

ಭೇಟಿ ಕುರಿತ ಫೋಟೋವನ್ನು ಜೆ.ಜೆ.ಪೆರ್ರಿ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಯಶ್‌ ನನ್ನು ಬ್ರದರ್‌ ಎಂದು ಅವರು ಕರೆದಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್‌ ಭಾರಿ ವೈರಲ್‌ ಆಗಿದ್ದು, ಲಂಡನ್ ನಲ್ಲಿ ಜೆ.ಜೆ.ಪೆರ್ರಿ ಅವರನ್ನು ಯಶ್ ಭೇಟಿ ಆಗಿದ್ದು, ಅಭಿಮಾನಿಗಳ ವಲಯದಲ್ಲಿ ಇದು ಸಿನಿಮಾ ವಿಚಾರದ ಭೇಟಿ ಎಂದೇ ಚರ್ಚೆ ಆಗುತ್ತಿದೆ. ಯಶ್ ಹಾಲಿವುಡ್ ನಲ್ಲಿ ಜೆ.ಜೆ.ಪೆರ್ರಿ ಅವರ ಸಿನಿಮಾವೊಂದರಲ್ಲಿ ಯಶ್ ಪಾತ್ರವೊಂದನ್ನು ಮಾಡಲಿದ್ದಾರೆ ಎನ್ನುವ ಮಾತೊಂದು ಕೇಳಿ ಬರುತ್ತಿದೆ. ಆದರೆ ಇದು ಅಧಿಕೃತವಾಗಿಲ್ಲ.

ಇತ್ತೀಚೆಗೆ ಯಶ್ ಖ್ಯಾತ ಎಫ್‌ 1  ಕಾರ್ ರೇಸರ್‌ ಲೇವಿಸ್‌ ಹ್ಯಾಮಿಲ್ಟನ್‌ ಅವರನ್ನು ಭೇಟಿ ಆಗಿದ್ದರು. ಆ ಫೋಟೋ ಕೂಡ ಭಾರೀ ವೈರಲ್‌ ಆಗಿತ್ತು. ಮುಂದಿನ ತಿಂಗಳು ಯಶ್‌ ಅವರ ಸಿನಿಮಾದ ಅಪ್ಡೇಟ್‌ ಹೊರಬೀಳುವ ಸಾಧ್ಯತೆಯಿದೆ.

Shwetha M