ಕೊರೊನಾ ತಮ್ಮ ಬಂತಾ? – ವೈರಸ್ ತವರು ಚೀನಾದಲ್ಲಿ ಆರ್ಭಟ!
ಮತ್ತೆ ಜಗತ್ತೇ ಲಾಕ್ಡೌನ್!?

ಐದು ವರ್ಷಗಳ ಹಿಂದೆ ಕಾಣಿಸಿಕೊಂಡ ಕೋವಿಡ್-19 ಮಹಾಮಾರಿ ಇಡೀ ವಿಶ್ವವನ್ನು ತಲ್ಲಣಗೊಳಿಸಿತ್ತು. ಈ ಮಹಾಮಾರಿಯ ಆರಂಭ ಚೀನಾದಿಂದಲೇ ಆಗಿದ್ದು, ನಂತರ ಇಡೀ ವಿಶ್ವಕ್ಕೆ ಹಬ್ಬಿತ್ತು. ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಇಡೀ ವಿಶ್ವ ಒಗ್ಗಟ್ಟನ್ನು ಪ್ರದರ್ಶಿಸಿತ್ತು. ಅಲ್ಲದೇ ಲಾಕ್‌ಡೌನ್‌ನಂತಹ ಕ್ರಮಗಳ ಮೂಲಕ ಈ ಮಹಾಮಾರಿ ತಡೆಗೆ ಕ್ರಮ ಕೈಗೊಳ್ಳಾಗಿತ್ತು. ಕೋವಿಡ್ ವೈರಾಣು ಜಗತ್ತನ್ನು ಕಾಡಿದ 5 ವರ್ಷಗಳ ನಂತರ ಈಗ ಚೀನಾದಲ್ಲಿ ಮತ್ತೊಂದು ನಿಗೂಢ ವೈರಾಣು ಎದುರಾಗಿದ್ದು ಆತಂಕ ಹೆಚ್ಚಿಸಿದೆ. ಕೋವಿಡ್ -19 ವೈರಸ್ ಜನಕ ಚೀನಾ ಎಂದು ವಿಶ್ವವೆ ಒಪ್ಪಿಕೊಂಡಿದೆ. ಕೆಲವರು ಇದನ್ನು ಚೀನಾ ಪ್ರಪಂಚದ ಮೇಲೆ ನಡೆಸಿದ ಬಯೋ ವಾರ್ ಎಂದು ಬಣ್ಣಿಸಿದ್ದರು. ಆದರೆ ಈ ವೈರಸ್ ಹೊಡೆತಕ್ಕೆ ಇಡೀ ಪ್ರಪಂಚ ಯುದ್ದಭೂಮಿಯಾಗಿ ಬದಲಾಗಿದ್ದಂತು ಸತ್ಯ..ಕೋಟ್ಯಾಂತರ ಕುಟುಂಬಗಳು ಬೀದಿಪಾಲಾದವು. ಇನ್ನು ಆರ್ಥಿಕತೆಯ ವಿಷಯವನ್ನು ಕೇಳುವುದೇ ಬೇಡ, ವಿಶ್ವದ ದೊಡ್ಡಣ ಎಂದೆನಿಸಿಕೊಳ್ಳುವ ಅಮೇರಿಕಾ ಕೂಡ ಈ ವೈರಸ್ ಎದುರು ಮಂಡಿ ಊರುವಂತಾಯಿತು. ಈ ವೈರಸ್ ಭಾದೆಯಿಂದ ಜನರು ನಿಧಾನವಾಗಿ ಹೊರಗೆ ಬರುವ ವೇಳೆಗೆ ಮತ್ತೊಂದು ಆಘಾತಕಾರಿ ವರದಿ ಹೊರಗೆ ಬಂದಿದ್ದು. 5 ವರ್ಷದ ಬಳಿಕ ಚೀನಾದಲ್ಲಿ ಮತ್ತೊಂದು ಮಾರಕ ವೈರಸ್ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಚೀನಾದಲ್ಲಿ ಬಂತು ಕೊರೊನಾ ತಮ್ಮ
ಚೀನಾ HMPV ಎಂಬ ವೈರಸ್ ಈಗ ದೊಡ್ಡ ತಲೆನೋವಾಗುವ ಎಲ್ಲಾ ಲಕ್ಷಣ ತೋರಿಸಿದೆ. ಚೀನಾ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿರುವ ಪೋಸ್ಟ್‌ಗಳು ಈ ವೈರಸ್ ವೇಗವಾಗಿ ಹರಡುತ್ತಿರುವುದನ್ನು ಖಚಿತಪಡಿಸಿದೆ. ಆಸ್ಪತ್ರೆಗಳು ಭರ್ತಿಯಾಗಿದ್ದರೆ ಸ್ಮಶಾನಗಳಲ್ಲಿ ಕೂಡ ಹೆಣಗಳ ಸಂಖ್ಯೆ ಹೆಚ್ಚಿರುವುದನ್ನು ಅನೇಕ ಪೋಸ್ಟ್ ಗಳು ತಿಳಿಸಿವೆ. ಈ ವೈರಸ್ 14 ವರ್ಷದ ಒಳಗಿನ ಮಕ್ಕಳಿಗೆ ಹೆಚ್ಚು ಹಾನಿಕಾರಕ ಎಂದು ತಿಳಿದು ಬಂದಿದೆ. ಈ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಚೀನಾ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸಿದೆ ಎಂದು ತಿಳಿದು ಬಂದಿದ್ದರು. ಇದರ ಬಗ್ಗೆ ಚೀನಾ ಇನ್ನು ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆ ಈ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮಾಹಿತಿಯನ್ನು ಸುಳ್ಳು ಅಂತಾ ಹೇಳುವುದಕ್ಕೂ ಸಾಧ್ಯವಿಲ್ಲ. ಹೊಸ ವೈರಸ್‌ನಿಂದ ಪಾರಾಗಲು ಸ್ಕ್ರೀನಿಂಗ್ ಮತ್ತು ಪ್ರತ್ಯೇಕತೆಯ ಪ್ರೋಟೋಕಾಲ್‌ಗಳ ಮೊರೆ ಹೋಗಿದೆ.
HMPV ವೈರಸ್‌ನ ಲಕ್ಷಣಗಳು
*ಕೆಮ್ಮು, ಜ್ವರ, ಮೂಗು ಕಟ್ಟುವುದು, ಶೀತ ಈ ವೈರಸ್‌ನ ಸಾಮಾನ್ಯ ಲಕ್ಷಣ
*ಈ ವೈರಸ್ ದೇಹ ಹೊಕ್ಕಿದ ಮೇಲೆ ಉಸಿರಾಟಕ್ಕೆ ತೊಂದರೆಯಾಗುತ್ತೆ
*ಕೆಮ್ಮು ಮತ್ತು ಸೀನುವಿಕೆಯ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತೆ
*ಈ ವೈರಸ್ ಮಕ್ಕಳು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರೋರ ಮೇಲೆ ಅಟ್ಯಾಕ್
*ಈ ವೈರಸ್‌ನ ಸೋಂಕಿನ ಅವಧಿ ಮೂರರಿಂದ ಐದು ದಿನಗಳು
* ಸೋಂಕಿಗೆ ಒಳಗಾದ ಮೂರರಿಂದ ಆರು ದಿನಗಳ ನಂತರ ರೋಗಲಕ್ಷಣ ಕಂಡು ಬರುತ್ತೆ
VOICE: ಇನ್ನು ಈ ರೋಗವನ್ನ ಹೇಗೆ ತಡೆಯೋದು ಅನ್ನೋದನ್ನ ನೋಡೋಣ ಬನ್ನಿ..
HMPV ಸೋಂಕನ್ನು ತಡೆಯುವುದು ಹೇಗೆ?
*ಮನೆಗೆ ಬಂದಾಗ ಸಾಬೂನಿನಿಂದ ಕೈ ತೊಳೆಯಿರಿ
*ತೊಳೆಯದ ಕೈಗಳಿಂದ ಕಣ್ಣು, ಮೂಗು ಅಥವಾ ಬಾಯಿ ಮುಟ್ಟಬೇಡಿ
*ಸೋಂಕಿತರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು
*ನೀವು ವೈರಸ್‌ನ ಲಕ್ಷಣಗಳನ್ನು ಅನುಭವಿಸುತ್ತಿದ್ದರೆ ಪ್ರತ್ಯೇಕತೆಯನ್ನು ಕಾಪಾಡಿಕೊಳ್ಳಿ.
*ಸೀನುವಾಗ ಕೈ ಮತ್ತು ಬಾಯಿಯನ್ನು ಮುಚ್ಚಿಕೊಳ್ಳಬೇಕು, ಮಾಸ್ಕ್ ಧರಿಸಬೇಕು
*ಸೋಂಕಿತರು ಬಳಸಿದ ಯಾವುದೇ ವಸ್ತುಗಳನ್ನ ಬಳಸಬಾರದು, ಸ್ಪಚ್ಛತೆ ಕಾಪಾಡಿಕೊಳ್ಳಿ
*ಅನಾರೋಗ್ಯದ ಸಂದರ್ಭದಲ್ಲಿ ಮನೆಯಲ್ಲೇ ಇರಬೇಕು
ಎಲ್ಲಾ ರೋಗಗಳು ಒಟ್ಟಿಗೆ ಅಟ್ಯಾಕ್
ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋಗಳಲ್ಲಿ ಆಸ್ಪತ್ರೆಗಳಲ್ಲಿ ಜನಸಂದಣಿ ಕಂಡುಬರುತ್ತಿದೆ. HMPV, ಮೈಕೋಪ್ಲಾಸ್ಮಾ ನ್ಯುಮೋನಿಯಾ ಮತ್ತು Covid-19 ಸೇರಿದಂತೆ ಅನೇಕ ವೈರಸ್‌ಗಳು ಚೀನಾದಲ್ಲಿ ಏಕಕಾಲದಲ್ಲಿ ಹರಡುತ್ತಿವೆ ಎಂದು ಹೇಳುತ್ತಿದ್ದಾರೆ. ಚೀನಾ ಸಂಪೂರ್ಣ ಎಚ್ಚರಿಕೆ ಕ್ರಮದಲ್ಲಿದೆ. ಆದಾಗ್ಯೂ, ಈ ವೈರಸ್ ಬಗ್ಗೆ ಇನ್ನೂ ಸರಿಯಾಗಿ ತಿಳಿಯುತ್ತಿಲ್ಲ ಎನ್ನಲಾಗಿದೆ.
ನಿಜವಾಗುತ್ತಾ ನಾಸ್ಟ್ರಾಡಾಮಸ್ ಭವಿಷ್ಯ?
2020ರಲ್ಲಿ ಕೋವಿಡ್ 19 ಸಾಂಕ್ರಾಮಿಕದ ಬಗ್ಗೆ ನಾಸ್ಟ್ರಾಡಾಮಸ್ ನುಡಿದಿದ್ದ ಭವಿಷ್ಯ ನಿಜವಾಗಿದೆ. 2025ರ ಬಗ್ಗೆ ಕೂಡ , ಪ್ಲೇಗ್ ರೀತಿಯ ಸಾಂಕ್ರಾಮಿಕ ರೋಗ ಕಾಣಸಿಕೊಳ್ಳಲಿದೆ ಎಂದು ಸಾಕಷ್ಟ ವರ್ಷಗಳ ಹಿಂದೆ ನಾಸ್ಟ್ರಾಡಾಮಸ್ ಹೇಳಿದ್ದಾರೆ. ಈಗ ಚೀನಾದಲ್ಲಿ ಹುಟ್ಟಿಕೊಂಡ ವೈರಸ್‌ನಿಂದ ಅದು ನಿಜವಾಗುತ್ತಾ ಅನ್ನೋ ಆತಂಕ ಶುರುವಾಗಿದೆ.
ಹಳೇ ಸ್ಥಿತಿಗೆ ಹೋಗುತ್ತಿದ್ಯಾ ಶೇರು ಮಾರ್ಕೆಟ್?
2019 ಮತ್ತು 20 ರಲ್ಲಿ ಹೇಗೆ ಶೇರುಮಾರುಕಟ್ಟೆ ಇತ್ತೋ, ಅದೇ ರೀತಿಯಲ್ಲಿ 2020 ಮತ್ತು 2025ರಲ್ಲಿದೆ.2020 ರಲ್ಲಿ ಶೇರು ಮಾರ್ಕೆಟ್ ಕಂಪ್ಲೀಟ್ ಕ್ರ್ಯಾಶ್ ಆಗಿತ್ತು, ಈಗ ಅದೇ ರೀತಿಯಲ್ಲಿ ಶೇರ್ ಮಾರ್ಕೆಟ್ ಇದೆ. 2024 ರಲ್ಲಿ ಸಾಕಷ್ಟು ಏಳುಬೀಳುಗಳನ್ನ ನೋಡ್ತಿರೋ ಹೂಡಿಕೆ ದಾರರು, ಅಪ್ಪಿತಪ್ಪಿ ಈ ರೋಗ್ ವಿಶ್ವದೆಲ್ಲಡೇ ಹರಡಿದ್ರೆ, 2025 ರಲ್ಲಿ ಕಂಪ್ಲೀಟ್ ನೆಲ ಕಚ್ಚಲಿದೆ ಅನ್ನೋ ಮಾತು ಕೇಳಿ ಬರ್ತಿದೆ.
ವೈರಸ್ ಬಗ್ಗೆ ಚೀನಾ ನಿರ್ಲಕ್ಷ್ಯ
ಡಚ್ ಸಂಶೋಧಕರು ಈ ವೈರಸ್ ಅನ್ನು 2001 ರಲ್ಲಿ ಪತ್ತೆ ಹಚ್ಚಿದ್ದರು. ಈ ವೈರಸ್ ಸುಮಾರು ಆರು ದಶಕಗಳಿಂದ ಉಳಿದುಕೊಂಡಿದೆ. ವೈರಸ್ ಹರಡುವುದನ್ನು ಆರೋಗ್ಯ ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅದರಿಂದ ದೂರವಿರಲು ಕೋವಿಡ್ ಮಾದರಿಯ ಕ್ರಮಗಳನ್ನೇ ಅನುಸರಿಸುತ್ತಿದ್ದಾರೆ. ಈ ವರೈಸ್‌ಗೆ ಯಾವುದೇ ಲಸಿಕೆಗಳು ಕೂಡ ಇಲ್ಲ. ಕೊರೊನಾ ಸಂದರ್ಭದಲ್ಲಿನ ಅನುಭವಗಳನ್ನು ಗಮನದಲ್ಲಿಟ್ಟುಕೊಂಡು ಚೀನಾ ಈ ಕ್ರಮಕ್ಕೆ ಮುಂದಾಗಿದೆ. ಆದ್ರೆ ಇಲ್ಲಿ ತನಕ ಯಾವುದೇ ಅಧಿಕೃತ ಮಾಹಿತಿಯನ್ನ ಚೀನಾ ನೀಡಿಲ್ಲ.. ಹೀಗಾಗಿ ಕೊರೊನಾದಂತೆ ಮೊದಲು ಮುಚ್ಚಿಟ್ಟುಕೊಂಡು ದೊಡ್ಡದಾದ ಮೇಲೆ ಈ ಬಗ್ಗೆ ಹೇಳುತ್ತಾ ಅನ್ನೋ ಬಗ್ಗೆ ಕೂಡ ಚರ್ಚೆ ಆಗುತ್ತಿದೆ.. ಇಡೀ ವಿಶ್ವಕ್ಕೆ ಹರಡಿದ ಮೇಲೆ ಒದ್ದಾಡುವ ಬದಲು, ಈಗಲೇ ಈ ವೈರಸ್‌ನ್ನ ಕಟ್ಟಿಹಾಕಿದ್ರೆ ಒಳ್ಳೆಯದು..