ಬೆಂಗಳೂರಿನಲ್ಲಿ ಡೆಡ್ಲಿ ಚೀನಿ ವೈರಸ್!! – ಮಕ್ಕಳೇ ಟಾರ್ಗೆಟ್ ಯಾಕೆ?
ವೈರಸ್ ಬಂದ್ರೆ ಏನ್ ಮಾಡ್ಬೇಕು? ಯಾರಿಗೆ ಡೇಂಜರ್?
ಬೆಂಗಳೂರಿನಲ್ಲಿ HMPV ವೈರೆಸ್, ಭಯ ಬೇಡ
ಕೋವಿಡ್ ಬಳಿಕ ಚೀನಾದಲ್ಲಿ ಸದ್ದು ಮಾಡಿದ್ದ ಎಚ್‌ಎಂಪಿವಿ ವೈರಸ್ ಇದೀಗ ಭಾರತದಲ್ಲಿ ಮೊದಲ ಪ್ರಕರಣ ಅದು, ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಪತ್ತೆ ಆಗಿದೆ. 8 ತಿಂಗಳ ಮಗುವಿಗೆ ಎಚ್‌ಎಂಪಿವಿ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದ್ದು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ. ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗುವಿನಲ್ಲಿ ಪತ್ತೆಯಾಗಿದೆ. ಮಗುವಿಗೆ ಜ್ವರ ಬಂದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಈ ವೇಳೆ ರಕ್ತ ಪರೀಕ್ಷೆ ಮಾಡಿಸಿದಾಗ ಎಚ್‌ಎಂವಿಪಿ ವೈರಸ್ ಇರುವುದು ದೃಢಪಟ್ಟಿದೆ. ಒಟ್ಟು ಬೆಂಗಳೂರಿನಲ್ಲಿ ಇಬ್ಬರು ಮಕ್ಕಳಲ್ಲಿ ಈ ವೈರಸ್ ಪತ್ತೆಯಾಗಿತ್ತು. ಈಗ ಇಬ್ಬರು ಮಕ್ಕಳು ಡಿಸ್ಚಾರ್ಜ್ ಆಗಿದ್ದಾರೆಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಅಂದ್ರೆ ಇಲ್ಲಿ ಮಕ್ಕಳಿಗೆ ಯಾವುದೇ ರೀತಿಯ ತೊಂದ್ರೆ ನೀಡಿಲ್ಲ.
ಇದನ್ನೂ ಓದಿ : ಚೈತ್ರಾಳನ್ನ ಮತ್ತೆ ಟಾರ್ಗೆಟ್ ಮಾಡಿದ ಖಳನಾಯಕ ರಜತ್ – ಈ ವಾರ ಫ್ರೈರ್‌ಬ್ರ್ಯಾಂಡ್ ಮನೆಗೆ ಹೋಗೋದು ಫಿಕ್ಸ್?
ಹೆಚ್‌ಎಂಪಿವಿ ವೈರಸ್ ಹೇಗಿರುತ್ತೆ ಅನ್ನೋದ್ರ ಬಗ್ಗೆ ವೈದ್ಯರಿಗೂ ಗೊತ್ತಿಲ್ಲ. ರಾಜ್ಯದಲ್ಲಿ ಪತ್ತೆಯಾಗಿರೋ ವೈರಸ್‌ಗೂ ಮತ್ತೆ ಚೀನಾದಲ್ಲಿರೋ ವೈರಸ್ ಒಂದೆನಾ ಅನ್ನೋದಾ ಅನ್ನೋದ್ರ ಬಗ್ಗೆ ಸರಿಯಾದ ಡೇಟಾ ಇಲ್ಲ.. ಟ್ರಾವೆಲ್ ಹಿಸ್ಟರಿ ಇಲ್ಲದ ಮಕ್ಕಳಿಗೆ ಪತ್ತೆಯಾಗಿರೋದ್ರಿಂದ, ಅದು ಇಲ್ಲಿರೋ ವೈರಸ್ ಅಂತ ಹೇಳಲಾಗುತ್ತಿದೆ. ಹೀಗಾಗಿ ಈ ಬಗ್ಗೆ ಸುಖಾಸುಮ್ಮನೆ ಪ್ಯಾನಿಕ್ ಆಗಬೇಡಿ.
ಮಕ್ಕಳಿಗೆ, ಹಿರಿಯರಿಗೆ ಈ ವೈರಸ್ ಕಾಡುತ್ತೆ
ಈ ವೈರಸ್ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಹೆಚ್ಚಾಗಿ ಅಟ್ಯಾಕ್ ಮಾಡುತ್ತೆ. ಈ ವೈರಸ್ ಬಂದಾಗ ನಿರಂತರ ಕೆಮ್ಮು, ಸೀನುವುದು ಹೆಚ್ಚಾಗುತ್ತದೆ. ವೈದ್ಯರ ಬಳಿ ಹೋಗದೇ ನಿರ್ಲಕ್ಷಿಸಿದಲ್ಲಿ ಒಂದೇ ದಿನಕ್ಕೆ ಜ್ವರ, ನೆಗಡಿ, ಮೂಗು ಕಟ್ಟುವುದು, ಉಬ್ಬಸ ಉಂಟಾಗುತ್ತದೆ. ಇದು ನಿಮ್ಮನ್ನು ಮಲಗಲು ಬಿಡದಂತೆ ಬಾಧಿಸಲೂಬಹುದು. ಇದು ಶ್ಲಾಸಕೋಶಕ್ಕೆ ಸಂಬಂಧಿ ಸಮಸ್ಯೆ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಹಾಗೇಯೇ ಬಿಟ್ಟರೆ ನ್ಯುಮೋನಿಯಾಗೆ ಪರಿವರ್ತನೆಗೊಳ್ಳುವ ಸಂಭವವು ಇರುತ್ತದೆ. ಇದು ನವಜಾತ ಶಿಶುಗಳಿಗೆ,ಚಿಕ್ಕ ಮಕ್ಕಳು, ಹಿರಿಯ ವಯಸ್ಕರಿಗೆ, ಉಸಿರಾಟದ ಸಮಸ್ಯೆ , ಹೃದಯ ಸಮಸ್ಯೆ ಹೊಂದಿದವರಿಗೆ, ಶ್ವಾಸಕೋಶ ಸಂಬಂಧ ಕಾಯಿಲೆಗಳು ಇದ್ದರೆ, ಮತ್ತಷ್ಟು ಅನರೋಗ್ಯ ಎದುರಾಗುವ ಸಾಧ್ಯತೆ ಇದೆ. ಇನ್ನೂ ವೈರಸ್ ಬಂದಾಗ ಏನು ಮಾಡಬೇಕು ಅನ್ನೋದನ್ನ ನೋಡೋಣ ಬನ್ನಿ..
HMPV ವೈರಸ್ ಬಂದಾಗ ಏನು ಮಾಡಬೇಕು
ಆರೋಗ್ಯದಲ್ಲಿ ವ್ಯತ್ಯಾಸಗಳು ಕಂಡು ಬಂದರೆ ನೀವೆ ಸ್ವಯಂ ಚಿಕಿತ್ಸೆಗೆ ಮುಂದಾಗಬೇಡಿ
ರೋಗದ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಹತ್ತಿರ ಆಸ್ಪತ್ರೆಗಳನ್ನು ಸಂಪರ್ಕಿಸಬೇಕು
ಸ್ವಯಂ ಆಗಿ ನೀವೆ ಮಾತ್ರೆ, ಔಷಧಿ ಪಡೆಯದೇ ವೈದ್ಯರ ಸಲಹೆ ಮೇರೆಗೆ ಸೇವಿಸಬೇಕು
ಶುಚಿ ಕರವಸ್ತ್ರ, ಬಟ್ಟೆ ಬಳಸುವುದ ಜೊತೆಗೆ ಸ್ವತಃ ನೀವು ಶುಚಿಯಾಗಿರಬೇಕು
ಮಕ್ಕಳಲ್ಲಿ, ಮಹಿಳೆ, ವೃದ್ಧರಲ್ಲಿ ಸಮಸ್ಯೆ ಆದ್ರೆ ಆತಂಕ ಪಡದೇ ವೈದ್ಯರ ಸಂಪರ್ಕ
ಕೆಮ್ಮು, ನೆಗಡಿ, ಜ್ವರ, ಉಬ್ಬಸ, ಉಸಿರಾಟದಂತಹ ತೊಂದರೆ ಕಾಣಸಿಕೊಂಡ್ರೆ ಎಚ್ಚರ
ಸಾಕಷ್ಟು ನೀರನ್ನ ಕುಡಿಬೇಕು, ಪೌಷ್ಠಿಕ ಆಹಾರವನ್ನ ಸೇವಿಸಬೇಕು, ಅಂತರ ಕಾಯ್ದುಕೊಳ್ಳಿ
ಮನೆಯಲ್ಲಿರೋ ಮಕ್ಕಳು ಮತ್ತು ಹಿರಿಯರ ಬಗ್ಗೆ ಹೆಚ್ಚಿನ ಜಾಗೃತಿವಹಿಸಿ
ಈ ವೈರಸ್ ದಾಳಿಗೆ ನಿರ್ದಿಷ್ಟ ಚಿಕಿತ್ಸೆಯ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆಯಾಗಲಿ, ಭಾರತದ ಆರೋಗ್ಯ ಇಲಾಖೆಯು ಇನ್ನೂ ಸೂಚಿಸಿಲ್ಲ. ಇದಕ್ಕೆ ಸಂಬಂಧ ಪಟ್ಟ, ಯಾವುದೇ ಮೆಡಿಸಿನ್ ತೆಗೆದುಕೊಳ್ಳುವ ಮುನ್ನ ವೈದ್ಯರ ಜೊತೆ ಚರ್ಚಿಸಿ, ನಂತ್ರ ತೆಗೆದುಕೊಳ್ಳುವುದು ಸೂಕ್ತ. ಹೆಚ್‌ಎಂಪಿವಿಗೆ ವಯಸ್ಸಿನ ಮಿತಿ ಇಲ್ಲದಿದ್ದರೂ ಚಿಕ್ಕ ಮಕ್ಕಳು, ವಯಸ್ಸಾದವರು ಮತ್ತು ಇಮ್ಯುನಿಟಿ ಪವರ್ ಕಡಿಮೆ ಇರೋರಿಗೆ ಈ ಸೋಂಕು ಅಪಾಯಕಾರಿಯಾಗಿದ್ದು, ಇವರಲ್ಲಿಯೇ ಬೇಗ ಕಾಣಿಸಿಕೊಳ್ಳುತ್ತದೆ. ಎಚ್‌ಎಂಪಿವಿ ಮತ್ತು ಕೋವಿಡ್ ತರನಾದ ರೋಗಲಕ್ಷಣಗಳನ್ನು ಹೊಂದಿವೆ ಮತ್ತು ಒಂದೇ ರೀತಿಯ ಮಾದರಿಯಲ್ಲಿ ಹರಡುತ್ತವೆ ಎನ್ನಲಾಗಿದೆ.ಚಳಿಗಾಲದಲ್ಲಿ ಹೆಚ್‌ಎಂಪಿವಿ ವೈರಸ್ ಬೇಗ ಹರಡುತ್ತೆ ಅಂತ ಹೇಳಲಾಗಿದೆ. ಒಟ್ನಲ್ಲಿ ಕೊರೊನಾ ಬಂದಾಗ ಯಾವುದೇ ಮುಂಜಾಗ್ರತೆ ಕ್ರಮ ಇರಲಿಲ್ಲ. ಆದ್ರೆ ಈಗ ಎಲ್ಲಾ ರೀತಿಯ ಮುಂಜಾಗ್ರತೆ ಕ್ರಮವನ್ನ ತೆಗೆದುಕೊಳ್ಳಲಾಗುತ್ತಿದ್ದು, ಆರೋಗ್ಯ ಇಲಾಖೆ ಸೂಕ್ತಕ್ರಮದ ಬಗ್ಗೆ ಸಭೆಯನ್ನ ನಡೆಸುತ್ತಿದೆ. ಮಾಸ್ಕ್ ಸ್ಯಾನಿಟೈಸರ್ ಬಳಸಿ ನಿಮ್ಮ ಕೈಯಲ್ಲಿ ನಿಮ್ಮ ಆರೋಗ್ಯವಿದೆ ಎಚ್ಚರ.