ರೋಹಿತ್ ಶರ್ಮಾ ಚೆನ್ನೈ ಸೂಪರ್ ಕಿಂಗ್ಸ್‌ ಕ್ಯಾಪ್ಟನ್ ಆಗಲಿ..!- ಐಪಿಎಲ್ ವಿಚಾರದಲ್ಲಿ ಹಿಟ್‌ಮ್ಯಾನ್ ಫುಲ್ ಸೈಲೆಂಟ್

ರೋಹಿತ್ ಶರ್ಮಾ ಚೆನ್ನೈ ಸೂಪರ್ ಕಿಂಗ್ಸ್‌ ಕ್ಯಾಪ್ಟನ್ ಆಗಲಿ..!- ಐಪಿಎಲ್ ವಿಚಾರದಲ್ಲಿ ಹಿಟ್‌ಮ್ಯಾನ್  ಫುಲ್ ಸೈಲೆಂಟ್

ಐಪಿಎಲ್​ ಆರಂಭವಾಗೋಕೆ ಇನ್ನು ಬೆರಳೆಣಿಕೆಯ ದಿನಗಳಷ್ಟೇ ಬಾಕಿಯಿರೋದು. ಈ ನಡುವೆ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಹೊಸ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯಾ ಅಂಡರ್​ನಲ್ಲಿ ಆಡ್ತಾರಾ? ಇಲ್ವಾ? ಅನ್ನೋದೆ ಈಗ ಭಾರಿ ಕುತೂಹಲ ಕೆರಳಿಸಿದೆ. ಬೇರೆ ಫ್ರಾಂಚೈಸಿಯನ್ನ ಸೇರಿಕೊಳ್ಳೋಕೆ ರೋಹಿತ್​ ಶರ್ಮಾಗೆ ಇನ್ನೂ ಕೂಡ ಅವಕಾಶ ಇದೆ. ಟ್ರೇಡಿಂಗ್ ಡೋರ್ ಓಪನ್ ಆಗಿಯೇ ಇದೆ. ಹೀಗಾಗಿ ಎನಿಥಿಂಗ್ ಈಸ್ ಪಾಸಿಬಲ್. ಲಾಸ್ಟ್ ಮೂಮೆಂಟ್​​ನಲ್ಲಿ ಏನು ಬೇಕಾದ್ರೂ ಚೇಂಜೆಸ್​​ಗಳಾಗಬಹುದು.

ಇದನ್ನೂ ಓದಿ: ನಿವೃತ್ತಿ ಬಗ್ಗೆ ರೋಹಿತ್ ಶರ್ಮಾ ಮಾತಾಡಿದ್ಯಾಕೆ?- ಹಿಟ್‌ಮ್ಯಾನ್ ದಿಢೀರ್ ಈ ನಿರ್ಧಾರಕ್ಕೆ ಬಂದಿದ್ಯಾಕೆ?

ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ಸಿಯಿಂದ ರೋಹಿತ್​ ಶರ್ಮಾರನ್ನ ಕೆಳಗೆ ಇಳಿಸಿ ಹಾರ್ದಿಕ್ ಪಾಂಡ್ಯಾಗೆ ಪಟ್ಟ ಕಟ್ಟಿದ ಬಳಿಕ ಆಗಿರೋ ಹಲ್​ಚಲ್ ಅಷ್ಟಿಷ್ಟಲ್ಲ. ರೋಹಿತ್ ಕ್ಯಾಪ್ಟನ್ಸಿಯನ್ನ ಕಿತ್ತುಕೊಂಡಿದ್ದಕ್ಕೆ ಫ್ಯಾನ್ಸ್ ಅಂತೂ ತುಂಬಾನೆ ಅಸಮಾಧಾನ ವ್ಯಕ್ತಪಡಿಸಿದ್ರು. ರೋಹಿತ್ ಕ್ಯಾಪ್ಟನ್ ಆಗಿದ್ರಷ್ಟೇ ನಾವು ಮುಂಬೈ ಇಂಡಿಯನ್ಸ್​​ಗೆ ಸಪೋರ್ಟ್ ಮಾಡೋದಾಗಿ ಹೇಳಿದ್ರು. ಮಿಲಿಯನ್​​ಗಟ್ಟಲೆ ಮಂದಿ ಮುಂಬೈ ಇಂಡಿಯನ್ಸ್ ಸೋಷಿಯಲ್ ಮೀಡಿಯಾ ಪೇಜ್​ನ್ನ ಅನ್​ಫಾಲೋ ಮಾಡಿದ್ರು. ಕೇವಲ ಫ್ಯಾನ್ಸ್ ಅಷ್ಟೇ ಅಲ್ಲ, ಈವನ್ ಮುಂಬೈ ಇಂಡಿಯನ್ಸ್ ಪ್ಲೇಯರ್ಸ್​ಗಳಾದ ಜಸ್ಪ್ರಿತ್ ಬುಮ್ರಾ, ಸೂರ್ಯಕುಮಾರ್ ಯಾದವ್ ಕೂಡ ಕ್ರಿಪ್ಟಿಕ್ ಆಗಿ ಪೋಸ್ಟ್​ಗಳನ್ನ ಹಾಕ್ಕೊಂಡಿದ್ರು. ಏನೇ ಹೇಳಿ, ಮೋಸ್ಟ್ ಆಫ್ ದಿ ಮುಂಬೈ ಇಂಡಿಯನ್ಸ್ ಫ್ಯಾನ್ಸ್​ಗೆ ಮತ್ತು ಪ್ಲೇಯರ್ಸ್​​ಗಳಿಗೂ ಹಾರ್ದಿಕ್​ ಪಾಂಡ್ಯಾ ಟೀಮ್​​ನ್ನ ಲೀಡ್ ಮಾಡ್ತಾ ಇರೋದು. ಹಾರ್ದಿಕ್ ಅಂಡರ್​​ನಲ್ಲಿ ರೋಹಿತ್ ಆಡೋದು ಇಷ್ಟವಿಲ್ಲ. ತಮ್ಮ ವಿಚಾರದಲ್ಲಿ ಇಷ್ಟೆಲ್ಲಾ ಬೆಳವಣಿಗೆಗಳಾದ್ರೂ ರೋಹಿತ್ ಶರ್ಮಾ ಮಾತ್ರ ಇದುವರೆಗೂ ಈ ಬಗ್ಗೆ ತುಟಿ ಪಿಟಿಕ್ ಅಂದಿಲ್ಲ. ತಮ್ಮನ್ನ ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿರೋ ಬಗ್ಗೆಯಾಗಲಿ, ಹಾರ್ದಿಕ್ ಪಾಂಡ್ಯಾರನ್ನ ಕ್ಯಾಪ್ಟನ್​ ಮಾಡಿರೋ ವಿಚಾರದಲ್ಲಾಗಲಿ, ಐಪಿಎಲ್​​ನಲ್ಲಿ ತಮ್ಮ ನೆಕ್ಸ್ಟ್ ಜರ್ನಿ ಏನು? ಮುಂಬೈ ಇಂಡಿಯನ್ಸ್​ನಲ್ಲಿ ಕಂಟಿನ್ಯೂ ಆಗೋದಾ? ಇಲ್ಲಾ ಬೇರೆ ಫ್ರಾಂಚೈಸಿ ಸೇರಿಕೊಳ್ಳೋದಾ? ಯಾವೆಲ್ಲಾ ಫ್ರಾಂಚೈಸಿಗಳು ತಮ್ಮನ್ನ ಕಾಂಟ್ಯಾಕ್ಟ್ ಮಾಡಿವೆ? ಈ ಯಾವುದೇ ಸಂಗತಿಗಳ ಬಗ್ಗೆಯೂ ರೋಹಿತ್ ಶರ್ಮಾ ಸಿಂಗಲ್ ಸ್ಟೇಟ್​​ಮೆಂಟ್ ಕೂಡ ಕೊಟ್ಟಿಲ್ಲ. ಐಪಿಎಲ್​ ವಿಚಾರದಲ್ಲಿ ಹಿಟ್​ಮ್ಯಾನ್ ಫುಲ್ ಸೈಲೆಂಟ್ ಆಗಿದ್ದಾರೆ. ಓಕೆ ಇದುವರೆಗೆ ರೋಹಿತ್ ಟೀಂ ಇಂಡಿಯಾ ಪರ ಬೇರೆ ಬೇರೆ ಸೀರಿಸ್​ಗಳಲ್ಲಿ ಆಡ್ತಾ ಇದ್ರು. ಮುಂಬೈ ಇಂಡಿಯನ್ಸ್ ಕ್ಯಾಪ್ಟನ್​ಶಿಪ್​​ ಹೋದ್ರೂ ಇಂಡಿಯನ್​ ಟೀಮ್​​​ನ್ನ ಲೀಡ್ ಮಾಡ್ತಾ ಇರೋದು ರೋಹಿತ್​ ಶರ್ಮಾರೆ ಅಲ್ವಾ. ಹೀಗಾಗಿ ಟೀಂ ಇಂಡಿಯಾ ಪರ ಆಡ್ತಾ ಇರೋವಾಗ ಅದ್ರ ಮೇಲಷ್ಟೇ ರೋಹಿತ್ ಫೋಕಸ್ ಮಾಡಬೇಕಿತ್ತು. ಹೀಗಾಗಿ ಮುಂಬೈ ಇಂಡಿಯನ್ಸ್​ನಲ್ಲಾದ ಚೇಂಜೆಸ್​​ಗಳ ಬಗ್ಗೆ ರೋಹಿತ್ ಏನೂ ಕಾಮೆಂಟ್​ ಮಾಡೋಕೆ ಹೋಗಿರಲಿಲ್ಲ. ಈವನ್ ಮೀಡಿಯಾದ ಮಂದಿ ಕೂಡ ಈ ವಿಚಾರದಲ್ಲಿ ರೋಹಿತ್​ರನ್ನ ಕ್ವಶ್ಚನ್ ಮಾಡೋಕೆ ಹೋಗಿರಲಿಲ್ಲ. ಆದ್ರೀಗ ಟೀಂ ಇಂಡಿಯಾದ ಸೀರಿಸ್​​ಗಳು ಮುಗಿದಿದೆ. ರೋಹಿತ್ ಲೀಡರ್​ಶಿಪ್​​ನಲ್ಲಿ ಭಾರತ ಇಂಗ್ಲೆಂಡ್ ವಿರುದ್ಧದ ಸೀರಿಸ್​ನ್ನ ಕೂಡ ಗೆದ್ದಿದೆ. ಇನ್ನೇನಿದ್ರೂ ಟಿ20 ವರ್ಲ್ಡ್​ಕಪ್ ಇರೋದು. ಅದಕ್ಕೂ ಮುನ್ನ ಐಪಿಎಲ್​​ ನಡೀತಾ ಇದೆ. ಹೀಗಾಗಿ ಈಗ ರೋಹಿತ್ ಶರ್ಮಾ ಮೇಲೆಯೇ ಎಲ್ಲರ ಫೋಕಸ್ ಶಿಫ್ಟ್ ಆಗಿದೆ.

ರೋಹಿತ್ ಶರ್ಮಾ ಮೇಲೆ ಬೇರೆ ಬೇರೆ ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಆದ್ರೆ ರೋಹಿತ್ ನೆಕ್ಟ್ಸ್ ಸ್ಟೆಪ್ ಏನಿರಬಹುದು ಅನ್ನೋ ಬಗ್ಗೆ ಯಾರಿಗೂ ಸಣ್ಣ ಹಿಂಟ್ ಕೂಡ ಸಿಗ್ತಾ ಇಲ್ಲ. ಮುಂಬೈ ಇಂಡಿಯನ್ಸ್​​ನಲ್ಲಾಗಿರೋ ಡೆವಲಪ್​ಮೆಂಟ್​ಗಳನ್ನ ನೋಡೋವಾಗ ಆ ಟೀಂನಲ್ಲೇ ಕಂಟಿನ್ಯೂ ಆಗೋಕೆ ಬೇಕಾದ ಅಟ್ಮಾಸ್ಪಿಯರ್​ ರೋಹಿತ್ ಶರ್ಮಾಗೆ ಇರುವಂತೆ ಕಾಣ್ತಾ ಇಲ್ಲ. ಕೆಲ ದಿನಗಳ ಹಿಂದೆ ಮುಂಬೈ ಇಂಡಿಯನ್​​ ಕೋಚ್ ಮಾರ್ಕ್ ಬೌಚರ್ ಒಂದು ಸ್ಟೇಟ್​ಮೆಂಟ್ ಕೊಟ್ಟಿದ್ರು. ಕ್ಯಾಪ್ಟನ್ಸಿ ಅನ್ನೋದು ರೋಹಿತ್ ಬ್ಯಾಟಿಂಗ್ ಮೇಲೆ ಎಫೆಕ್ಟ್ ಆಗ್ತಿದೆ. ಕ್ಯಾಪ್ಟನ್ಸಿ ಒತ್ತಡದಿಂದಾಗಿ ರೋಹಿತ್​ಗೆ ಎಫೆಕ್ಟಿವ್ ಆಗಿ ಪರ್ಫಾಮ್ ಮಾಡೋಕೆ ಆಗ್ತಿಲ್ಲ ಎಂದಿದ್ರು. ಆದ್ರೆ ಮಾರ್ಕ್ ಬೌಚರ್ ಮಾತನ್ನ ಒಪ್ಪಿಕೊಳ್ಳೋಕೆ ಸಾಧ್ಯವೇ ಇಲ್ಲ. ಟೀಂ ಇಂಡಿಯಾದ ಕ್ಯಾಪ್ಟನ್ ಆಗಿ ರೋಹಿತ್ ಯಾವ ರೀತಿ ಬ್ಯಾಟಿಂಗ್ ಮಾಡ್ತಾ ಇದ್ದಾರೆ ಅನ್ನೋದನ್ನ ನೀವೇ ನೋಡಿದ್ದೀರಾ. ನನ್ನ ಕೆರಿಯರ್​ನ್ನ ಪೀಕ್​ನಲ್ಲಿದ್ದೇನೆ, ಬೆಸ್ಟ್ ಪರ್ಫಾಮೆನ್ಸ್ ನೀಡ್ತಾ ಇದ್ದೇನೆ ಅಂತಾ ರೋಹಿತ್ ಶರ್ಮಾರೇ ಹೇಳಿದ್ದಾರೆ. ಹೀಗಾಗಿ ಮಾರ್ಕ್ ಬೌಚರ್ ಸ್ಟೇಟ್​ಮೆಂಟ್​ನ್ನ ರೋಹಿತ್ ಪತ್ನಿಯೇ ರಿಜೆಕ್ಟ್ ಮಾಡಿದ್ರು. ಯಾರೇ ಆದ್ರೂ ರಿಜೆಕ್ಟ್ ಮಾಡ್ತಾರೆ ಬಿಡಿ.

ಇಲ್ಲಿ ಐಪಿಎಲ್​​ ವಿಚಾರವಾಗಿ ರೋಹಿತ್ ಶರ್ಮಾ ಏನನ್ನೂ ಮಾತನಾಡದೆ ಇದ್ರೂ ಅವರ ಸಪೋರ್ಟರ್ಸ್, ಮಾಜಿ ಕ್ರಿಕೆಟರ್​​ಗಳು, ಮುಂಬೈ ಇಂಡಿಯನ್ಸ್​ನಲ್ಲೇ ಆಡಿದವರು ಹಿಟ್​ಮ್ಯಾನ್​​ ಬಗ್ಗೆ ಕೆಲ ಮಹತ್ವದ ಹೇಳಿಕೆಗಳನ್ನ ನೀಡಿದ್ದಾರೆ. ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ಮಾಜಿ ಆಟಗಾರ ಅಂಬಟಿ ರಾಯುಡು ಅಂತೂ ಕಂಪ್ಲೀಟ್ ಆಗಿ ರೋಹಿತ್ ಬೆನ್ನಿಗೆ ನಿಂತಿದ್ದಾರೆ. ಈ ವರ್ಷ ಕೂಡ ರೋಹಿತ್ ಶರ್ಮಾರನ್ನೇ ಕ್ಯಾಪ್ಟನ್ ಆಗಿ ಕಂಟಿನ್ಯೂ ಮಾಡಬೇಕಿತ್ತು. ನೆಕ್ಸ್ಟ್ ಈಯರ್​ ಐಪಿಎಲ್​​ಗೆ ಹಾರ್ದಿಕ್​ಗೆ ಕ್ಯಾಪ್ಟನ್ಸಿ ನೀಡಬಹುದಿತ್ತು. ಯಾಕಂದ್ರೆ ರೋಹಿತ್ ಶರ್ಮಾ ಈಗಲೂ ಕೂಡ ಇಂಡಿಯನ್ ಟಿ20 ಟೀಮ್​ನ ಕ್ಯಾಪ್ಟನ್ ಆಗಿದ್ದಾರೆ. ನಾಯಕತ್ವ ಬದಲಾವಣೆಯಲ್ಲಿ ಮುಂಬೈ ಇಂಡಿಯನ್ಸ್​​ ಮ್ಯಾನೇಜ್ಮೆಂಟ್ ಅವಸರದ ನಿರ್ಧಾರ ಕೈಗೊಂಡಿದೆ. ಗುಜರಾತ್ ಟೈಟಾನ್ಸ್​ನ್ನ ಲೀಡ್​ ಮಾಡಿದ ರೀತಿ ಮುಂಬೈ ಇಂಡಿಯನ್ಸ್​ನ್ನ ಲೀಡ್ ಮಾಡೋಕೆ ಸಾಧ್ಯವಿಲ್ಲ. ಗುಜರಾತ್​​ ಟೈಟಾನ್ಸ್​ನದ್ದು ಡಿಫರೆಂಟ್ ಸೆಟ್​ಅಪ್ ಆಗಿತ್ತು. ಆದ್ರೆ ಮುಂಬೈ ಇಂಡಿಯನ್ಸ್​ನಲ್ಲಿ ಸಾಕಷ್ಟು ಮಂದಿ ಸ್ಟಾರ್ ಪ್ಲೇಯರ್ಸ್ ಇದ್ದಾರೆ. ಕ್ಯಾಪ್ಟನ್ ಆದವನ ಮೇಲೆ ಹೆಚ್ಚಿನ ಪ್ರೆಷರ್ ಇರುತ್ತೆ. ಎಲ್ಲರಿಗೂ ಅದನ್ನ ಹ್ಯಾಂಡಲ್​ ಮಾಡೋಕೆ ಸಾಧ್ಯವಿಲ್ಲ ಅಂತಾ ಅಂಬಟಿ ರಾಯುಡು ಹೇಳಿದ್ದಾರೆ.

ಇದಿಷ್ಟೇ ಅಲ್ಲ, ಅಂಬಟಿ ರಾಯುಡು ಪ್ರಕಾರ ರೋಹಿತ್​ ಶರ್ಮಾ ಚೆನ್ನೈ ಸೂಪರ್​​ ಕಿಂಗ್ಸ್​​ನ ಕ್ಯಾಪ್ಟನ್ ಆಗಬೇಕಂತೆ. ಹಾಗೆಯೇ ರೋಹಿತ್​ ಸಿಎಸ್​​ಕೆಯನ್ನ ಸೇರಿಕೊಳ್ಳುವ ಸಾಧ್ಯತೆ ಇದೆ ಅಂತಾನೂ ಅಂಬಟಿ ರಾಯುಡು ಹೇಳಿದ್ದಾರೆ. ರೋಹಿತ್ ಶರ್ಮಾ ಇನ್ನೂ 5-6 ವರ್ಷಗಳ ಕಾಲ ಐಪಿಎಲ್​ ಆಡಬಹುದು. ಧೋನಿ ರಿಟೈರ್ ಆದ್ಮೇಲೆ ಸಿಎಸ್​​ಕೆಯನ್ನ ರೋಹಿತ್​ ಶರ್ಮಾಗೆ ಲೀಡ್ ಮಾಡಬಹುದು ಅಂತಾ ಅಂಬಟಿ ರಾಯುಡು ಸ್ಟೇಟ್​ಮೆಂಟ್ ಕೊಟ್ಟಿದ್ದಾರೆ. ಆ್ಯಕ್ಚುವಲಿ ಇಲ್ಲಿ ಅಂಬಟಿ ರಾಯುಡು ಹೇಳಿರೋದು ಸರಿಯಾಗಿಯೇ ಇದೆ. ಸಿಎಸ್​​ಕೆನಲ್ಲಿ ಧೋನಿ ಕ್ಯಾಪ್ಟನ್ಸಿಯನ್ನ ರಿಪ್ಲೇಸ್ ಮಾಡೋಕೆ ರೋಹಿತ್​ ಶರ್ಮಾ ಬೆಸ್ಟ್ ಆಪ್ಷನ್. ಯಾಕೆ ಅನ್ನೋದನ್ನ ಕೂಡ ಹೇಳ್ತೀನಿ. ಜಿಯೋ ಸಿನಿಮಾದಲ್ಲಿ ಕ್ಯಾಪ್ಟನ್ ರೋಹಿತ್ಸ್ ಲೀಗಸಿ ಅನ್ನೋ ಒಂದು ಡಾಕ್ಯುಮೆಂಟರಿ ಏರ್​​ ಆಗಿದೆ. ಅದ್ರಲ್ಲಿ ಫಾರ್ಮರ್​ ಕ್ರಿಕೆಟರ್ಸ್​​ ಕೂಡ ರೋಹಿತ್ ಕ್ಯಾಪ್ಟನ್ಸಿ ಬಗ್ಗೆ ಮಾತನಾಡಿದ್ದಾರೆ. ಈ ಪೈಕಿ ಧೋನಿಯ ಕ್ಯಾಪ್ಟನ್ಸಿಯಲ್ಲಿದ್ದ ಸೂಕ್ಷ್ಮ ಸಂಗತಿಗಳನ್ನ ರೋಹಿತ್ ಶರ್ಮಾ ಪಿಕ್ ಮಾಡಿದ್ದು, ಹಾಗೆಯೇ ಅದನ್ನ ತಮ್ಮ ಸ್ಟೈಲ್​​ಗೆ ತಕ್ಕಂತೆ ಕನ್ವರ್ಟ್ ಮಾಡಿಕೊಂಡು ಫಿಲ್ಡ್​​ನಲ್ಲಿ ಅಪ್ಲೈ ಮಾಡಿದ್ದಾರೆ. ಧೋನಿ ಯಾವತ್ತೂ ಭಾವೆನೆಗಳನ್ನ ಎಕ್ಸ್​​ಪ್ರೆಸ್ ಮಾಡ್ತಾ ಇರಲಿಲ್ಲ. ಆದ್ರೆ ರೋಹಿತ್ ತಮ್ಮ ಫೀಲಿಂಗ್​​ನ್ನ ಎಕ್ಸ್​​ಪ್ರೆಸ್ ಮಾಡ್ತಾರೆ. ಅಷ್ಟೇ ವ್ಯತ್ಯಾಸ ಅಂತಾ ರಾಬಿನ್ ಉತ್ತಪ್ಪ ಹೇಳಿದ್ದಾರೆ.

ಇನ್ನು ರೋಹಿತ್​ ಶರ್ಮಾಗೆ ಕೂಡ ಚೆನ್ನೈ ಸೂಪರ್ ಕಿಂಗ್ಸ್​ ಜಾಯಿನ್ ಆಗೋಕೆ ಇಂಟ್ರೆಸ್ಟ್ ಇರುವಂತೆ ಕಾಣ್ತಿದೆ. ಯಾಕಂದ್ರೆ, ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ಸಿಯಿಂದ ರೋಹಿತ್ ಶರ್ಮಾರನ್ನ ಕೆಳಗಿಳಿಸಿದ ದಿನ ಚೆನ್ನೈ ಸೂಪರ್​​ ಕಿಂಗ್ಸ್​​ ತನ್ನ ಸೋಷಿಯಲ್ ಮೀಡಿಯಾ ಅಕೌಂಟ್​ನಲ್ಲಿ ರೋಹಿತ್​​ ಕ್ಯಾಪ್ಟನ್ಸಿಗೆ ಟ್ರಿಬ್ಯೂಟ್ ಮಾಡಿ ಒಂದು ವಿಡಿಯೋ ಪೋಸ್ಟ್ ಮಾಡಿತ್ತು. ಅದ್ರಲ್ಲಿ ಧೋನಿ ಮತ್ತು ರೋಹಿತ್​ ಜೊತೆಗಿರೋದನ್ನ ಕೂಡ ತೋರಿಸಲಾಗಿತ್ತು. ಆ ಪೋಸ್ಟ್​​ಗೆ ರೋಹಿತ್ ಪತ್ನಿ ರಿತಿಕಾ ಯೆಲ್ಲೋ ಸಿಂಬಲ್ ಹಾಕಿ ಕಾಮೆಂಟ್ ಮಾಡಿದ್ರು. ಈ ಮೂಲಕ ಸಣ್ಣ ಹಿಂಟ್ ಕೂಡ ಕೊಟ್ಟಿದ್ರು. ಹೀಗಾಗಿ ಈ ಬಾರಿ ಅಲ್ಲದಿದ್ರೂ 2025ರ ವೇಳೆಗೆ ರೋಹಿತ್​ ಶರ್ಮಾ ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಪ್ಟನ್ ಆದ್ರೂ ಆಶ್ಚರ್ಯ ಇಲ್ಲ. ಈ ಬಾರಿ ರೋಹಿತ್​​​ ಆಲ್​ಮೋಸ್ಟ್​ ಮುಂಬೈ ಇಂಡಿಯನ್ಸ್​ನಲ್ಲೇ ಆಡಬಹುದು. ಟ್ರೇಡಿಂಗ್​ಗೆ ಡೋರ್​ ಓಪನ್​ ಇದ್ರೂ, ಈ ಬಾರಿ ಅದಾಗೋ ಸಾಧ್ಯತೆ ತೀರಾ ಕಡಿಮೆ ಇದೆ. ಈ ಬಾರಿಯ ಐಪಿಎಲ್​​ನಲ್ಲಿ ರೋಹಿತ್​ ಶರ್ಮಾ ಮತ್ತು ಇಶಾನ್​ ಕಿಶನ್ ಮುಂಬೈ ಇಂಡಿಯನ್ಸ್ ಪರ ಓಪನಿಂಗ್ ಮಾಡ್ತಾರೆ ಅಂತಾ ಹೇಳಲಾಗ್ತಿದೆ.

ಇವೆಲ್ಲದ್ರ ಮಧ್ಯೆ ಸೂರ್ಯಕುಮಾರ್ ಯಾದವ್ ವಿಚಾರವಾಗಿಯೂ ಒಂದು ಅಪ್​ಡೇಟ್ ಬಂದಿದೆ. ಐಪಿಎಲ್​​ನ ಫಸ್ಟ್ ಎರಡು ಮ್ಯಾಚ್​​ಗಳನ್ನ ಸೂರ್ಯಕುಮಾರ್ ಮಿಸ್ ಮಾಡಿಕೊಳ್ತಾ ಇದ್ದಾರೆ. ಇಂಜ್ಯೂರಿಯಿಂದ ರಿಕವರಿ ಆಗ್ತಾ ಇರೋ ಸೂರ್ಯ ಈಗ ಎನ್​ಸಿಎನಲ್ಲಿ ಟ್ರೈನಿಂಗ್ ಪಡೀತಾ ಇದ್ದಾರೆ. ಫಿಟ್ನೆಸ್ ಮೇಲೆ ವರ್ಕೌಟ್ ಮಾಡ್ತಿದ್ದಾರೆ.

Sulekha