ಹಿಟ್‌ಮ್ಯಾನ್ ಸಿಟ್ಟು ಕ್ಯಾಮರಾ ಮೇಲೆ..! –ಕ್ಯಾಪ್ಟನ್ ಸಿಟ್ಟು ಕಂಡು ಕ್ಯಾಮರಾಮೆನ್ ಮಾಡಿದ್ದೇನು?

ಹಿಟ್‌ಮ್ಯಾನ್ ಸಿಟ್ಟು ಕ್ಯಾಮರಾ ಮೇಲೆ..! –ಕ್ಯಾಪ್ಟನ್ ಸಿಟ್ಟು ಕಂಡು ಕ್ಯಾಮರಾಮೆನ್ ಮಾಡಿದ್ದೇನು?

ರಾಂಚಿಯಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಮೊದಲನೇ ದಿನದಾಟದ ವೇಳೆ ರೋಹಿತ್ ಶರ್ಮಾ ಕ್ಯಾಮೆರಾ ಮೆನ್ ಮೇಲೆ ಸಿಟ್ಟಾದ ಘಟನೆ ನಡೆದಿದೆ. ಪದೇ ಪದೇ ತಮ್ಮನ್ನು ದೊಡ್ಡ ಪರದೆಯಲ್ಲಿ ತೋರಿಸುತ್ತಿದ್ದ ಕ್ಯಾಮೆರಾ ಕಂಡು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಚೊಚ್ಚಲ ಪಂದ್ಯದಲ್ಲಿ ಆಕಾಶ್ ದೀಪ್ ಶೈನಿಂಗ್ –ಇಂಗ್ಲೆಂಡ್‌ನ ಸೆಂಚೂರಿ ಸ್ಟಾರ್ ಜೋ ರೂಟ್ ಬೊಂಬಾಟ್ ಬ್ಯಾಟಿಂಗ್

ಕ್ಯಾಪ್ಟನ್ ರೋಹಿತ್ ಮ್ಯಾಚ್ ನಡುವೆ ಎಲ್ಲಾ ಬಿಟ್ಟು ಕ್ಯಾಮರಾ ಮನ್ ಮೇಲೆಯೇ ಸಿಟ್ಟಾಗಿದ್ರು. ರವೀಂದ್ರ ಜಡೇಜಾ ಬೌಲಿಂಗ್ ಸಂದರ್ಭದಲ್ಲಿ ಡಿಆರ್​ಎಸ್ ತೆಗೆದುಕೊಂಡಾಗ ಪ್ಲೇಯರ್ಸ್​​ ಫೈನಲ್​ ಡಿಸೀಶನ್​​ಗಾಗಿ ಸ್ಕ್ರೀನ್ ನೋಡುತ್ತಾ ವೇಯ್ಟ್ ಮಾಡ್ತಿದ್ರು. ಈ ವೇಳೆ ಕ್ಯಾಮರಾಮನ್ ರೋಹಿತ್ ಶರ್ಮಾಗೆ ಫೋಕಸ್ ಮಾಡಿದ್ದಾನೆ. ರಿಪ್ಲೇ ತೋರಿಸೋ ಬದಲು ಸ್ಕ್ರೀನ್​ನಲ್ಲಿ ತಮ್ಮನ್ನ ತೋರಿಸಿದ್ದಕ್ಕಾಗಿ ರೋಹಿತ್ ಭಾಯ್ ರೊಚ್ಚಿಗೆದ್ದು ಬಿಡ್ತಾರೆ. ನನ್ನನ್ನ ಯಾಕೆ ತೋರಿಸ್ತೀಯಾ ಅಂತಾ ಸಿಗ್ನಲ್ ಮಾಡ್ತಾರೆ. ಸೇಮ್ ಇನ್ಸಿಡೆಂಟ್ ಈ ಹಿಂದೆಯೂ ಆಗಿತ್ತು. ಟಿಪಿಕಲ್ ರೋಹಿತ್ ಶರ್ಮಾ ಆ್ಯಟಿಟ್ಯೂಡ್ ಅದು. ಈ ಮಧ್ಯೆ ಯಶಸ್ವಿ ಜೈಸ್ವಾಲ್ ಬಳಿಕ ರೋಹಿತ್​ ಶರ್ಮಾ ಬಗ್ಗೆ ಕೇಳಿದಾಗ ಡರ್​ ಲಗ್ತಾ ಉನ್​ಸೇ.. ಅಂದ್ರೆ ರೋಹಿತ್ ಬಗ್ಗೆ ಭಯ ಆಗುತ್ತೆ ಅಂತಾ ತಮಾಷೆಗೆ ರಿಪ್ಲೈ ಮಾಡಿದ್ದಾರೆ. ಎನಿವೇ, ಮೊದಲ ದಿನದಾಟದಲ್ಲಿ ಟೀಂ ಇಂಡಿಯಾ ಒಂದು ರೇಂಜಿಗೆ ಮೆಲುಗೈ ಸಾಧಿಸಿದ್ರೆ. ಬಟ್ ಇದು ಸ್ಪಿನ್ ಫ್ರೆಂಡ್ಲಿ ಪಿಚ್ ಆಗಿದ್ದು, ಬಾಲ್​ ತುಂಬಾನೆ ಟರ್ನ್ ಆಗ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಟರ್ನ್ ಪಡೀಬಹುದು. ಸ್ಪಿನ್ನರ್ಸ್​​ಗಳು ಮೇಜರ್ ರೋಲ್ ನಿಭಾಯಿಸಲಿದ್ದಾರೆ.

Sulekha