ಸಿಕ್ಸರ್ ಗಳ ಮೂಲಕ ಕ್ಯಾಪ್ಟನ್ ಅಬ್ಬರ – ವಿಶ್ವಕಪ್ 2023ರ ಹಿಟ್ ಮ್ಯಾನ್ ರೋಹಿತ್ ಶರ್ಮಾ!  

ಸಿಕ್ಸರ್ ಗಳ ಮೂಲಕ ಕ್ಯಾಪ್ಟನ್ ಅಬ್ಬರ – ವಿಶ್ವಕಪ್ 2023ರ ಹಿಟ್ ಮ್ಯಾನ್ ರೋಹಿತ್ ಶರ್ಮಾ!  

2023ರ ವಿಶ್ವಕಪ್ ಫೈನಲ್ ಮ್ಯಾಚ್ ವೀಕ್ಷಿಸಲು ಇಡೀ ಜಗತ್ತೇ ಕಾತರದಿಂದ ಕಾಯುತ್ತಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಪ್ರತಿಯೊಬ್ಬರೂ ಕುತೂಹಲದಿಂದ ಕಾಯುತ್ತಿದ್ದಾರೆ. ಅದರಲ್ಲೂ ಭಾರತದ ಪಾಲಿಗೆ ಕ್ರಿಕೆಟ್ ಎಂಬುದು ಕೇವಲ ಆಟವಲ್ಲ. ಬದಲಿಗೆ ಭಾವನೆಯಾಗಿದೆ. ವಿಶೇಷವಾಗಿ ವಿಶ್ವಕಪ್ ಎಲ್ಲರನ್ನೂ ರೋಮಾಂಚನಗೊಳಿಸಿದೆ. ಅದರಲ್ಲೂ ರೋಹಿತ್ ಶರ್ಮಾ ಕ್ಯಾಪ್ಟನ್ಸಿಯಲ್ಲಿ ಟೀಂ ಇಂಡಿಯಾ ಅಜೇಯವಾಗಿ ಫೈನಲ್ ಪ್ರವೇಶಿದಿದೆ.

ಇದನ್ನೂ ಓದಿ : ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯ- ನರೇಂದ್ರ ಮೋದಿ ಸ್ಟೇಡಿಯಂನ ಪಿಚ್ ಹೇಗಿದೆ?

ಖ್ಯಾತ ಕ್ರಿಕೆಟಿಗ ಮತ್ತು ಪ್ರಸ್ತುತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾರನ್ನು ಅತ್ಯುತ್ತಮ ಗೇಮಿಂಗ್ ಕೌಶಲ್ಯದಿಂದಾಗಿ ಲಕ್ಷಾಂತರ ಜನರು ಪ್ರೀತಿಸುತ್ತಾರೆ. 36 ವರ್ಷದ ಕ್ರಿಕೆಟಿಗ ತಂಡವನ್ನು ಹಲವು ಐತಿಹಾಸಿಕ ಗೆಲುವಿನತ್ತ ಮುನ್ನಡೆಸಿದ್ದಾರೆ. ನಾಯಕ ರೋಹಿತ್ ಶರ್ಮಾ ಬಿರುಸಿನ ಆರಂಭ ನೀಡುತ್ತಿದ್ದು, ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಅಲ್ಲದೆ ವಾಂಖೆಡೆ ಕ್ರೀಡಾಂಗಣದಲ್ಲಿ ನವೆಂಬರ್‌ 15 ರಂದು ನಡೆದ ನ್ಯೂಜಿಲೆಂಡ್‌ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಅಧಿಕಾರಯುತ ಆಟವಾಡಿದ ರೋಹಿತ್‌ ಶರ್ಮಾ, ತಲಾ 4 ಫೋರ್‌ ಮತ್ತು ಸಿಕ್ಸರ್‌ಗಳೊಂದಿಗೆ 29 ಎಸೆತಗಳಲ್ಲಿ 47 ರನ್‌ ಸಿಡಿಸಿ ಔಟಾದರು. ಇದೇ ವೇಳೆ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಇತಿಹಾಸದಲ್ಲಿ ಒಟ್ಟು 50 ಸಿಕ್ಸರ್‌ಗಳನ್ನು ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದಾರೆ.ಹಿಟ್‌ ಮ್ಯಾನ್‌ ಖ್ಯಾತಿಯ ಅನುಭವಿ ಆರಂಭಿಕ ಬ್ಯಾಟರ್‌ 36 ವರ್ಷದ ರೋಹಿತ್‌ ಶರ್ಮಾ, ವಿಶ್ವಕಪ್‌ ಟೂರ್ನಿಗಳಲ್ಲಿ ಆಡಿದ ಕೇವಲ 27 ಇನಿಂಗ್ಸ್‌ಗಳಲ್ಲಿ ಒಟ್ಟು 50 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ಮೂಲಕ ವೆಸ್ಟ್‌ ಇಂಡೀಸ್‌ ದಿಗ್ಗಜ ಹಾಗೂ ಸ್ವಘೋಷಿತ ಯೂನಿವರ್ಸ್‌ ಬಾಸ್‌ ಕ್ರಿಸ್‌ ಗೇಲ್‌ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

ಖ್ಯಾತ ಕ್ರಿಕೆಟಿಗ ಮತ್ತು ಪ್ರಸ್ತುತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾರನ್ನು ಅತ್ಯುತ್ತಮ ಗೇಮಿಂಗ್ ಕೌಶಲ್ಯದಿಂದಾಗಿ ಲಕ್ಷಾಂತರ ಜನರು ಪ್ರೀತಿಸುತ್ತಾರೆ. 36 ವರ್ಷದ ಕ್ರಿಕೆಟಿಗ ತಂಡವನ್ನು ಹಲವು ಐತಿಹಾಸಿಕ ಗೆಲುವಿನತ್ತ ಮುನ್ನಡೆಸಿದ್ದಾರೆ. 2023ರಲ್ಲಿ BCCI ದ ಗ್ರೇಡ್ A+ ಒಪ್ಪಂದವನ್ನು ಪಡೆದುಕೊಂಡ ಭಾರತದ ನಾಲ್ಕು ಕ್ರಿಕೆಟಿಗರಲ್ಲಿ ಒಬ್ಬರು. ಮತ್ತು ಇದು ಅವರಿಗೆ ವಾರ್ಷಿಕ ರೂ. 7 ಕೋಟಿ. ಕ್ರಿಕೆಟಿಗ ಹಲವಾರು ಅಂತಾರಾಷ್ಟ್ರೀಯ ದಾಖಲೆಗಳನ್ನು ಹೊಂದಿದ್ದಾರೆ.

 

Shantha Kumari