ಇತಿಹಾಸ ಬರೆದ ನಾಟು ನಾಟು – ಭಾರತಕ್ಕೆ ಎರಡು ಆಸ್ಕರ್ ಪ್ರಶಸ್ತಿಯ ಗರಿ

ಇತಿಹಾಸ ಬರೆದ ನಾಟು ನಾಟು – ಭಾರತಕ್ಕೆ ಎರಡು ಆಸ್ಕರ್ ಪ್ರಶಸ್ತಿಯ ಗರಿ

ಭಾರತೀಯರ ಆಸ್ಕರ್ ಕನಸು ನನಸಾಗಿದೆ. ಭಾರತ ಸಿನಿಮಾ ಇತಿಹಾಸದಲ್ಲೇ  RRR ಸಿನಿಮಾ ಹೊಸ ದಾಖಲೆಯನ್ನು  ಬರೆದಿದೆ. ಅತ್ಯುತ್ತಮ ಹಾಡು ವಿಭಾಗದಲ್ಲಿ ನಾಟು ನಾಟು ಹಾಡಿಗೆ ಆಸ್ಕರ್ ಅವಾರ್ಡ್ ಲಭ್ಯವಾಗಿದೆ. ‘ನಾಟು ನಾಟು..’, ‘ಲಿಫ್ಟ್​ ಮಿ ಅಪ್​’, ‘ದಿಸ್ ಈಸ್ ಲೈಫ್​’, ಹೋಲ್ಡ್ ಮೈ ಹ್ಯಾಂಡ್, ಅಪ್ಲೌಸ್ ಮೊದಲಾದ​ ಹಾಡುಗಳು  ರೇಸ್​​ನಲ್ಲಿದ್ದವು. ಈ ಪೈಕಿ ‘ನಾಟು ನಾಟು..’ ಹಾಡು ಆಸ್ಕರ್ ಗೆದ್ದಿದೆ.

ನಾಟು ನಾಟು ಹಾಡಿಗೆ ಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆಯೇ ಸಭಾಂಗಣದ ತುಂಬಾ ಚಪ್ಪಾಳೆಯ ಸದ್ದು ಜೋರಾಗಿತ್ತು. ಭಾರತದಲ್ಲೂ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ: ಕಿರುತೆರೆ ಇತಿಹಾಸದಲ್ಲೇ ಹೊಸ ಸಾಹಸ – ಇಬ್ಭಾಗವಾಯ್ತು ‘ಭಾಗ್ಯಲಕ್ಷ್ಮೀ’ ಧಾರಾವಾಹಿ..!

ಈ ಹಿಂದೆ ಸ್ಲಮ್ ಡಾಗ್ ಮಿಲಿಯನೇರ್ ಸಿನಿಮಾಗೆ ಆಸ್ಕರ್ ಬಂದಿತ್ತಾದರೂ ಅದು ಹಾಲಿವುಡ್‌ ನಿರ್ದೇಶಕ ಡ್ಯಾನಿ ಬೋಯ್ಲ್ ನಿರ್ದೇಶನದ ಚಿತ್ರವಾಗಿತ್ತು. ಇದೀಗ RRR ಚಿತ್ರದ ನಾಟು ನಾಟು ಹಾಡು ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಗೆದ್ದುಕೊಂಡಿದೆ.  ಆಸ್ಕರ್ ಪ್ರಶಸ್ತಿ ಪಡೆದ ಭಾರತದ ಮೊದಲ ಸಿನಿಮಾ ಎಂದು ಇತಿಹಾಸ ಸೃಷ್ಟಿಸಿದೆ. ಚಿತ್ರ ಸಾಹಿತಿ ಎಂ ಎಂ ಕೀರವಾಣಿ  ಮೂಲಕ ಆಸ್ಕರ್ ಪ್ರಶಸ್ತಿಯ ಗರಿ ಭಾರತದ ಮುಡಿಗೇರಿದೆ. ಟ್ವಿಟರ್ ನಲ್ಲಿ ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ RRR ಚಿತ್ರ ತಂಡ ಆಸ್ಕರ್ ಪ್ರಶಸ್ತಿಯನ್ನು ಜಗತ್ತಿನಾದ್ಯಂತ ಇರುವ ಅಭಿಮಾನಿಗಳಿಗೆ ಅರ್ಪಿಸಿದೆ.

ಇನ್ನು ಬೆಸ್ಟ್ ಕಿರು ಸಾಕ್ಷ್ಯಚಿತ್ರ ವಿಭಾಗದಲ್ಲಿ ‘ದಿ ಎಲಿಫೆಂಟ್ ವಿಸ್ಪರರ್ಸ್ ’ ಡಾಕ್ಯುಮೆಂಟರಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿದ್ದು, ಡಾಕ್ಯುಮೆಂಟರಿಯನ್ನು ಕಾರ್ತಿಕಿ ಗೊನ್ಸಾಲ್ವೆಸ್  ನಿರ್ದೇಶಿಸಿದ್ದಾರೆ. ಡಾಕ್ಯುಮೆಂಟರಿ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದ ಭಾರತದ ಮೊದಲ ಸಾಕ್ಷ್ಯಚಿತ್ರ ಎಂಬ ಹೆಗ್ಗಳಿಕೆಗೆ  ‘ದಿ ಎಲಿಫೆಂಟ್ ವಿಸ್ಪರರ್ಸ್’ ಪಾತ್ರವಾಗಿದೆ.

suddiyaana