ಪಶುವೈದ್ಯೆ ಸಮೀಕ್ಷಾ ರೆಡ್ಡಿ ಸಾವಿಗೆ ಕಾರಣವಾಗಿದ್ದ ನೀರಾನೆ ಸಾವು! – ಹಂಸಿಣಿ ಸಾವಿಗೆ ಕಾರಣವೇನು?

ಪಶುವೈದ್ಯೆ ಸಮೀಕ್ಷಾ ರೆಡ್ಡಿ ಸಾವಿಗೆ ಕಾರಣವಾಗಿದ್ದ ನೀರಾನೆ ಸಾವು! – ಹಂಸಿಣಿ ಸಾವಿಗೆ ಕಾರಣವೇನು?

ಶಿವಮೊಗ್ಗದಲ್ಲಿ ಪಶುವೈದ್ಯೆ ಸಮೀಕ್ಷಾ ರೆಡ್ಡಿಯನ್ನು ಹಂಸಿನಿ ನೀರಾನೆ ಬಲಿ ಪಡೆದಿದ್ದ ಸುದ್ದಿ ರಾಜ್ಯದಾದ್ಯಂತ ಭಾರಿ ಸದ್ದು ಮಾಡಿತ್ತು. ವೈದ್ಯೆ ಸಾವಿನ ಬೆನ್ನಲ್ಲೆ ಹಂಸಿನಿ ನೀರಾನೆಯ ಮರಿಯೂ ಗರ್ಭದಲ್ಲೇ ಸಾವನ್ನಪ್ಪಿತ್ತು. ಇದೀಗ ನೀರಾನೆ ಹಂಸಿನಿಯೂ ಮೃತಪಟ್ಟಿದೆ.

ಇದನ್ನೂ ಓದಿ: ಆದಿಚುಂಚನಗಿರಿಯಲ್ಲಿ ಭೈರವೈಕ್ಯ ಮಂದಿರ ಪ್ರಧಾನಿ ಮೋದಿಯವರಿಂದ ಲೋಕಾರ್ಪಣೆ!

ಶಿವಮೊಗ್ಗದ ತಾವರೆಕೊಪ್ಪ ಸಫಾರಿಯಲ್ಲಿ 12 ವರ್ಷದ ಹಂಸಿನಿ ನೀರಾನೆ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ನೀರಾನೆಗೆ ಚಿಕಿತ್ಸೆ ನೀಡಲು ತೆರಳಿದ್ದ ಪಶುವೈದ್ಯೆಯನ್ನು ಹಂಸಿನಿ ಬಲಿ ಪಡೆದಿತ್ತು. ಈ ದುರ್ಘಟನೆ ನಡೆದ ಕೆಲವೇ ದಿನಗಳಲ್ಲಿ ಹಂಸಿನಿ ತನ್ನ ಮರಿಯನ್ನೂ ಕಳೆದುಕೊಂಡಿದೆ. ಅಷ್ಟೇ ಅಲ್ಲ ಅನಾರೋಗ್ಯದಿಂದ ಬಳಲುತ್ತಿದ್ದ ಹಂಸಿನಿಯೂ ಏ.14ರಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದೆ.

ಅಷ್ಟಕ್ಕೂ ಹಂಸಿನಿಗೆ ಏನಾಗಿತ್ತು?

12 ವರ್ಷದ ಈ ಹಂಸಿನಿ ನೀರಾನೆ ಈ ಹಿಂದೆ ಎರಡು ಬಾರಿ ಮರಿಗಳಿಗೆ ಜನ್ಮ ನೀಡಿತ್ತು. ಆದರೆ, ಆ ಎರಡೂ ಮರಿಗಳು ಹುಟ್ಟಿದ ಕೆಲವೇ ದಿನಗಳಲ್ಲಿ ಸಾವನ್ನಪ್ಪಿದ್ದವು. ಈ ಬಾರಿ ಹಂಸಿನಿ 3ನೇ ಬಾರಿಗೆ ಗರ್ಭ ಧರಿಸಿದ್ದಳು. ಹೀಗಾಗಿ ಈ ಬಾರಿ ಮೃಗಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಹಂಸಿನಿ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದರು. ಆದರೂ ಸಹ ಈ ಬಾರಿಯೂ ಮರಿ ಕಣ್ಣು ಬಿಡುವ ಮೊದಲೇ ಗರ್ಭದಲ್ಲಿ ಸಾವನ್ನಪ್ಪಿತ್ತು. ಇದೀಗ ಕೊನೆಗೆ ತಾಯಿ ಹಂಸಿನಿ ಸಹ ಮೃತಪಟ್ಟಿದೆ. ಗರ್ಭಾಶಯದಲ್ಲಿ ತೀವ್ರ ಸೋಂಕು ಉಂಟಾಗಿದ್ದರಿಂದ ಹಂಸಿನಿ ನೀರಾನೆ ಮೃತಪಟ್ಟಿದೆ ಎಂದು ವನ್ಯಜೀವಿ ಪಶುವೈದ್ಯರ ತಂಡ ತಿಳಿಸಿದೆ.

Shwetha M