ಬಾಂಗ್ಲಾದಲ್ಲಿ ಮತ್ತೆ ಹಿಂದೂಗಳ ಮೇಲೆ ದಾ*ಳಿ – ಅಮಾಯಕ ಆಟೋ ಚಾಲಕನ ಪ್ರಾಣ ತೆಗೆದ ಪಾಪಿಗಳು

ಬಾಂಗ್ಲಾದಲ್ಲಿ ಮತ್ತೆ ಹಿಂದೂಗಳ ಮೇಲೆ ದಾ*ಳಿ – ಅಮಾಯಕ ಆಟೋ ಚಾಲಕನ ಪ್ರಾಣ ತೆಗೆದ ಪಾಪಿಗಳು

ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ದಾಳಿ ಮುಂದುವರೆಯುತ್ತಿದೆ. ಸಮೀರ್ ದಾಸ್ ಎಂಬ 28 ವರ್ಷದ ಹಿಂದೂ ಆಟೋ ಚಾಲಕನ ಮೇಲೆ ಹಲ್ಲೆ ಮಾಡಿ, ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜ.12ರಂದು ಬೆಳಕಿಗೆ ಬಂದಿದೆ. ಸಮೀರ್ ಕುಮಾರ್ ದಾಸ್ ಫೆನಿ ಜಿಲ್ಲೆಯ ನಿವಾಸಿ. ಆಟೋ ಓಡಿಸಿ ಜೀವನ ನಡೆಸುತ್ತಿದ್ದರು. ಜ.11ರಾತ್ರಿ ಭಾನುವಾರ ಎಂದಿನಂತೆ ಅವರು ಕೆಲಸಕ್ಕೆ ತೆರಳಿದ್ದರು. ಆದರೆ, ಅಂದು ಅವರು ಮನೆಗೆ ವಾಪಸ್‌ ಆಗಲೇ ಇಲ್ಲ. ಗೊಂದಲ, ಆತಂಕಕ್ಕೆ ಒಳಗಾದ ಕುಟುಂಬಸ್ಥರು, ಪೊಲೀಸರಿಗೆ ದೂರು ಕೊಟ್ಟರು. ಸೋಮವಾರ ಮುಂಜಾನೆ ದಕ್ಷಿಣ ಕರಿಂಪುರದ ಮುಹುರಿ ಬಾರಿ ಬಳಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಮೀರ್‌ ಕುಮಾರ್‌ದಾಸ್‌ಅವರ ದೇಹ ಸಿಕ್ಕಿದೆ.

ಇದನ್ನೂ ಓದಿ: ರಾಹುಲ್‌ ಗಾಂಧಿ ಜೊತೆ ಸಿಎಂ, ಡಿಸಿಎಂ ಲಂಚ್‌ ಮೀಟಿಂಗ್‌! – ಸಂಪುಟ ಪುನರ್ ರಚನೆಗೆ ಸಿಗುತ್ತಾ ಗ್ರೀನ್ ಸಿಗ್ನಲ್?

ಚಿತ್ತಗಾಂಗ್‌ನ ದಗನ್‌ಭೂಯಾನ್ ಎಂಬಲ್ಲಿ ಭಾನುವಾರ ರಾತ್ರಿ ದುಷ್ಕರ್ಮಿಗಳು ಸಮೀರ್ ದಾಸ್ ಅವರನ್ನು ಸುತ್ತುವರಿದು, ನಾಡಬಂದೂಕು ಹಾಗೂ ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿ, ಬರ್ಬರವಾಗಿ ಕೊಂದಿದ್ದಾರೆ. ಹತ್ಯೆಯ ನಂತರ, ಆರೋಪಿಗಳು ಅವರ ಬ್ಯಾಟರಿ ಚಾಲಿತ ಆಟೋ ರಿಕ್ಷಾವನ್ನು ಕಸಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ನೀಡಿದ ದಗನ್‌ಭುಯಾನ್ ಪೊಲೀಸ್ ಠಾಣೆಯ ಅಧಿಕಾರಿ ಮೊಹಮ್ಮದ್ ಫಯಾಜುಲ್ ಅಜೀಮ್, ಕೊಲೆಗೆ ನಿಖರ ಕಾರಣ ಏನೆಂದು ಪತ್ತೆ ಹಚ್ಚುತ್ತಿದ್ದೇವೆ. ಕೇವಲ ಆಟೋ ದರೋಡೆ ಮಾಡಲು ಕೊಲೆ ಮಾಡಲಾಗಿದೆಯೇ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಉದ್ದೇಶವಿದೆಯೇ ಎಂಬ ಆಯಾಮದಲ್ಲಿ ತನಿಖೆ ನಡೆಯುತ್ತಿದೆ ಎಂದಿದ್ದಾರೆ. ಮೃತರ ಕುಟುಂಬ ಈಗಾಗಲೇ ನ್ಯಾಯಕ್ಕಾಗಿ ದೂರು ದಾಖಲಿಸಿದೆ.

Kishor KV