SU ಫ್ರಮ್ SO ರಹಸ್ಯ ಬಿಚ್ಚಿಟ್ಟ ರಾಜ್.B – ತೆಲುಗಿನಲ್ಲಿ ಡಬ್ಬಿಂಗ್.. ಹಿಂದಿಯಲ್ಲಿ ರಿಮೇಕ್
ಕಾಂತಾರದ ದಾಖಲೆ ಪಕ್ಕಾ ಉಡೀಸ್?

ಸು ಫ್ರಮ್ ಸೋ ಎಲ್ಲಾ ದಾಖಲೆಗಳನ್ನ ಉಡೀಸ್ ಮಾಡ್ತಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕನ್ನಡದಲ್ಲಿ ಭರ್ಜರಿ ಪ್ರದರ್ಶನ ಕಾಣ್ತಿರೋ ಸು ಫ್ರಮ್ ಸೋ ನೋಡಿದ ಬೇರೆ ಇಂಡಸ್ಟ್ರಿಯ ಪ್ರೇಕ್ಷಕರಿಗೆ ಈ ಸಿನಿಮಾದ ಬಗ್ಗೆ ಕ್ರೇಜ್ ಹೆಚ್ಚಾಗಿದೆ. ಕಾಂತಾರದಂತೆ ಮೊದಲಿಗೆ ಕನ್ನಡದಲ್ಲಿ ಮಾತ್ರ ರಿಲೀಸ್ ಆದ ಸು ಫ್ರಮ್ ಸೋ ಈಗ ಬೇರೆ ಬೇರೆ ಬಾಷೆಯಲ್ಲಿ ರಿಲೀಸ್ ಆಗೋಕೆ ರೆಡಿಯಾಗಿದ್ದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸೌಂಡ್ ಮಾಡ್ತಿದೆ.
JP ತುಮಿನಾಡ್ ನಿರ್ದೇಶನದ ‘ಸು ಫ್ರಮ್ ಸೋ’ ಸಿನಿಮಾವು ಬಾಕ್ಸ್ ಆಫೀಸ್ನಲ್ಲಿ ಧೊಳೆಬ್ಬಿಸುತ್ತಾ, ದೊಡ್ಡ ಮಟ್ಟದ ಗಳಿಕೆ ಮಾಡುತ್ತಿದೆ. ಈಗಾಗಲೇ ವಿಶ್ವಾದ್ಯಂತ ಈ ಚಿತ್ರವು 50+ ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.. ಈಗಾಲೆ ಮಲೆಯಾಳಂಗೆ ಡಬ್ ಆಗಿರೋ ‘ಸು ಫ್ರಮ್ ಸೋ’ ಸಿನಿಮಾವು ಇನ್ನೂ ಹಲವು ಬಾಷೆಗೆ ಡಬ್ ಆಗೋಕೆ ರೆಡಿಯಾಗ್ತಿದೆ.
ಸು ಫ್ರಮ್ ಸೋ’ ಸದ್ಯ ಮಲಯಾಳಂ ಭಾಷೆಗೆ ಡಬ್ ಆಗಿದೆ. ಮಾಲಿವುಡ್ ಸ್ಟಾರ್ ಹೀರೋ ದುಲ್ಕರ್ ಸಲ್ಮಾನ್ ಅವರ ಪ್ರೊಡಕ್ಷನ್ ಹೌಸ್ ಮೂಲಕ ರಿಲೀಸ್ ಮಾಡಲಾಗಿದೆ. ಮಲಯಾಳಂ ವರ್ಷನ್ನ ಗಳಿಕೆ ನಾಲ್ಕು ದಿನಗಳಿಗೆ 1 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.. ಇದೀಗ ಅದೇ ಹುಮ್ಮಸ್ಸಿನಲ್ಲಿ ತೆಲುಗಿಗೂ ಡಬ್ ಮಾಡಿದೆ ಚಿತ್ರತಂಡ.
ಆಗಸ್ಟ್ 8ಕ್ಕೆ ತೆಲುಗು ವರ್ಷನ್ ರಿಲೀಸ್
ಹೌದು, ಇದೇ ಆಗಸ್ಟ್ 8ರಂದು ಸು ಫ್ರಮ್ ಸೋ ಸಿನಿಮಾದ ತೆಲುಗು ವರ್ಷನ್ ತೆರೆಗೆ ಬರಲಿದೆ. ಟಾಲಿವುಡ್ ದೊಡ್ಡ ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವೀ ಮೇಕರ್ಸ್ ಟೀಮ್ ‘ಸು ಫ್ರಮ್ ಸೋ’ ಚಿತ್ರದ ತೆಲುಗು ಡಬ್ಬಿಂಗ್ ವರ್ಷನ್ನ ಹಕ್ಕುಗಳನ್ನು ಖರೀದಿ ಮಾಡಿದ್ದು, ಆಗಲೇ ಟ್ರೇಲರ್ ಕೂಡ ರಿಲೀಸ್ ಮಾಡಿದೆ. ದೊಡ್ಡಮಟ್ಟದಲ್ಲೇ ಆಗಸ್ಟ್ 8ರಂದು ರಿಲೀಸ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ.
ಸು ಫ್ರಮ್ ಸೋ ಹಿಂದಿಗೆ ರಿಮೇಕ್
ಮಲಯಾಳಂ ಮತ್ತು ತೆಲುಗಿಗೆ ಡಬ್ ಆಗಿರುವ ‘ಸು ಫ್ರಮ್ ಸೋ’ ಸಿನಿಮಾವು ಹಿಂದಿಗೆ ಮಾತ್ರ ರಿಮೇಕ್ ಆಗಲಿದೆ. ಈ ಬಗ್ಗೆ ಸ್ವತಃ ರಾಜ್ ಬಿ ಶೆಟ್ಟಿ ಅವರೇ ಹೇಳಿದ್ದಾರೆ..ಸಂದರ್ಶನವೊಂದರಲ್ಲಿ ಹಿಂದಿ ರಿಮೇಕ್ ಕುರಿತು ಮಾತನಾಡಿರುವ ರಾಜ್ ಬಿ ಶೆಟ್ಟಿ, “ನಮಗೆ ಈ ಸಿನಿಮಾದ ಹಿಂದಿ ರಿಮೇಕ್ ಆಫರ್ ಬಂದಿದೆ. ನಾನಂತೂ ಆ ಬಗ್ಗೆ ಕುತೂಹಲದಿಂದ ಇದ್ದೇನೆ. ಈ ಚಿತ್ರದ ಕಥೆ ದಕ್ಷಿಣ ಕನ್ನಡದಲ್ಲಿ ನಡೆಯುತ್ತದೆ, ಇದೊಂದು ರೂಟೇಡ್ ಕಥೆ. ನಾವು ಅದನ್ನು ನೋಡಿದ್ದೇವೆ. ಅದರಲ್ಲಿ ಸುಂದರವಾದದನ್ನು ಕಂಡಿದ್ದೇವೆ, ಅದೃಷ್ಟವಶಾತ್ ಜನರು ಕೂಡ ಈಗ ಕಂಡಿದ್ದಾರೆ. ಇದನ್ನು ಬೇರೆಯವರು ರಿಮೇಕ್ ಮಾಡುತ್ತಾರೆ ಎಂದರೆ, ನಮಗೂ ಅದು ಕಲಿಕೆಯ ಹಂತ.. ಅವರು ಹೇಗೆ ಸಿನಿಮಾ ಮಾಡುತ್ತಾರೆ ಅಂತ ನನಗೆ ತುಂಬಾ ಕುತೂಹಲ ಇದೆ ಎಂದು ಹೇಳಿದ್ದಾರೆ. ಸೇಮ್ ಕಾಂತಾರ ಕೂಡ ಹೀಗೆ ಆಗಿತ್ತು.. ಮೊದಲಿಗೆ ಕನ್ನಡದಲ್ಲಿ ಮಾತ್ರ ರಿಲೀಸ್ ಹಿಟ್ ಆದ ಮೇಲೆ ಪ್ಯಾನ್ ಇಂಡಿಯಾ ಸಿನಿಮಾ ಆಗಿತ್ತು.. ಅದೇ ಹಾದಿಯಲ್ಲಿ ಸು ಫ್ರಮ್ ಸೋ ಸಕ್ಸಸ್ ಕಾಣುತ್ತಿದೆ. ಬೇರೆ ದೇಶದಲ್ಲೂ ಕೂಡ ಸು ಫ್ರಮ್ ಸೋ ಚೆನ್ನಾಗಿ ಗಳಿಸುತ್ತಿದೆ..
ಒಟ್ನಲ್ಲಿ ಬಿಡುಗಡೆಯಾಗಿ 12 ದಿನ ಕಳೆದರೂ ಕೂಡ ‘ಸು ಫ್ರಮ್ ಸೋ’ ಸಿನಿಮಾ ಎಲ್ಲ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರು ಮತ್ತೆ ಮತ್ತೆ ಈ ಸಿನಿಮಾವನ್ನು ನೋಡುತ್ತಿದ್ದಾರೆ. 3ನೇ ವೀಕೆಂಡ್ನಲ್ಲಿ ಮತ್ತೆ ಭರ್ಜರಿ ಕಲೆಕ್ಷನ್ ಆಗುವ ಸಾಧ್ಯತೆ ದಟ್ಟವಾಗಿದೆ. ಹೊಸ ಸಿನಿಮಾಗಳ ಪೈಪೋಟಿ ನಡುವೆಯೂ ‘ಸು ಫ್ರಮ್ ಸೋ’ ಸಿನಿಮಾ ಅಬ್ಬರಿಸುತ್ತಿದೆ.

ನೋಡಿರಿ

