ಮಣಿಪುರದಲ್ಲಿ 20 ವರ್ಷಗಳ ಬಳಿಕ ಹಿಂದಿ ಸಿನಿಮಾ ಪ್ರದರ್ಶನ – ಇಷ್ಟು ವರ್ಷ ನಿಷೇಧ ಹೇರಿದ್ದೇಕೆ ಗೊತ್ತಾ?

ಕಳೆದ ಮೂರು, ನಾಲ್ಕು ತಿಂಗಳಿನಿಂದ ಮಣಿಪುರ ಹಿಂಸಾಚಾರ ಹಾಗೂ ಕಲಹದಿಂದಲೇ ಸುದ್ದಿಯಾಗಿತ್ತು.ಇದೀಗ ಮಣಿಪುರದಲ್ಲಿ ಬರೋಬ್ಬರಿ 20 ವರ್ಷಗಳ ಬಳಿಕ ಹಿಂದಿ ಚಲನಚಿತ್ರವೊಂದು ಮಂಗಳವಾರ ಸಂಜೆ ಪ್ರದರ್ಶನಗೊಳ್ಳುತ್ತಿದೆ.
ಬುಡಕಟ್ಟು ಸಂಘಟನೆ ಹ್ಮಾರ್ ಸ್ಟೂಡೆಂಟ್ಸ್ ಅಸೋಸಿಯೇಷನ್ (ಹೆಚ್‌ಎಸ್‌ಎ) ಸ್ವಾತಂತ್ರ್ಯ ದಿನದಂದು ಮಣಿಪುರದ ಚುರಾಚಂದ್‌ಪುರ ಜಿಲ್ಲೆಯ ರೆಂಗ್‌ಕೈ (ಲಂಕಾ) ನಲ್ಲಿ ಹಿಂದಿ ಚಲನಚಿತ್ರವೊಂದನ್ನು ಪ್ರದರ್ಶಿಸಲು ನಿರ್ಧರಿಸಿದೆ. ಆದರೆ ಯಾವ ಸಿನಿಮಾ ಪ್ರದರ್ಶನಗೊಳ್ಳಲಿದೆ ಎಂಬ ವಿಚಾರವನ್ನು ಬಹಿರಂಗಗೊಳಿಸಿಲ್ಲ.
ಇದನ್ನೂ ಓದಿ: ಕೇದಾರನಾಥದಲ್ಲಿ ಗುಡ್ಡಗಳು ಛಿದ್ರ.. ಬೃಹತ್ ಬಂಡೆಗಳು ಕುಸಿತ – ಶಿವನ ದರ್ಶನಕ್ಕೆ ತೆರಳಿದ್ದ 40 ಕನ್ನಡಿಗರಿಗೆ ಸಂಕಷ್ಟ
ಮಣಿಪುರದಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸಲಾದ ಕೊನೆಯ ಹಿಂದಿ ಚಲನಚಿತ್ರವೆಂದರೆ 1998 ರಲ್ಲಿ ಶಾರುಖ್ ಖಾನ್ ಮತ್ತು ಕಾಜೋಲ್ ಅಭಿನಯದ ಕುಚ್ ಕುಚ್ ಹೋತಾ ಹೈ. ಇದಾದ ಬಳಿಕ ಯಾವುದೇ ಹಿಂದಿ ಸಿನಿಮಾ ಮಣಿಪುರದಲ್ಲಿ ಪ್ರದರ್ಶನಗೊಂಡಿಲ್ಲ ಎಂದು ಹೆಚ್‌ಎಸ್‌ಎ ಮಾಹಿತಿ ನೀಡಿದೆ.
“ಸ್ವಾತಂತ್ರ್ಯ ದಿನಾಚರಣೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿದ ದೇಶವಿರೋಧಿ ಭಯೋತ್ಪಾದಕ ಗುಂಪುಗಳಿಂದ ನಾವು ನಮ್ಮ ಸ್ವಾತಂತ್ರ್ಯವನ್ನು ಘೋಷಿಸುತ್ತೇವೆ. ಮಣಿಪುರದಲ್ಲಿ ಹಿಂದಿ ಚಲನಚಿತ್ರಗಳ ಪ್ರದರ್ಶನದ ಮೇಲೆ ನಿಷೇಧವನ್ನು ಸೆಪ್ಟೆಂಬರ್ 2000 ರಲ್ಲಿ ಬಂಡಾಯ ಸಂಘಟನೆ ರೆವಲ್ಯೂಷನರಿ ಪೀಪಲ್ಸ್ ಫ್ರಂಟ್ ವಿಧಿಸಿತು. ಸೆಪ್ಟೆಂಬರ್ 12 ರಂದು ನಿಷೇಧ ಹೇರಿದ ಒಂದು ವಾರದೊಳಗೆ ಬಂಡುಕೋರರು ರಾಜ್ಯದ ಕ್ಯಾಸೆಟ್ ಅಂಗಡಿಗಳ ಮೇಲೆ ದಾಳಿ ಮಾಡಿ ಸಂಗ್ರಹಿಸಿದ ಹಿಂದಿ ಭಾಷೆಯ 6,000 ರಿಂದ 8,000 ವಿಡಿಯೋ ಮತ್ತು ಆಡಿಯೊ ಕ್ಯಾಸೆಟ್‌ಗಳು ಮತ್ತು ಕಾಂಪ್ಯಾಕ್ಟ್ ಡಿಸ್ಕ್‌ಗಳನ್ನು ಸುಟ್ಟುಹಾಕಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಶಾನ್ಯ ರಾಜ್ಯದಲ್ಲಿ ನಿಷೇಧಕ್ಕೆ RPF ಯಾವುದೇ ಕಾರಣವನ್ನು ನೀಡದಿದ್ದರೂ, ಕೇಬಲ್ ಆಪರೇಟರ್‌ಗಳು ಉಗ್ರಗಾಮಿ ಗುಂಪು ರಾಜ್ಯದ ಭಾಷೆ ಮತ್ತು ಸಂಸ್ಕೃತಿಯ ಮೇಲೆ ಬಾಲಿವುಡ್‌ನಿಂದ ನಕಾರಾತ್ಮಕ ಪರಿಣಾಮ ಬೀರುವ ಭಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.