ಹಿಮಾಚಲ ಪ್ರದೇಶ ಫಲಿತಾಂಶ- ಸತತ ಆರನೇ ಬಾರಿ ಗೆದ್ದ ಮುಖ್ಯಮಂತ್ರಿ ಜೈರಾಮ್ ಠಾಕೂರ್

ಹಿಮಾಚಲ ಪ್ರದೇಶ ಫಲಿತಾಂಶ- ಸತತ ಆರನೇ ಬಾರಿ ಗೆದ್ದ ಮುಖ್ಯಮಂತ್ರಿ ಜೈರಾಮ್ ಠಾಕೂರ್

ಡೆಹ್ರಡೂನ್: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಇದೀಗ ಮೊದಲ ಕ್ಷೇತ್ರದ ಫಲಿತಾಂಶ ಹೊರಬಿದ್ದಿದ್ದು, ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರು ಭರ್ಜರಿ ಜಯ ಸಾಧಿಸಿದ್ದಾರೆ.

ಸೆರಾಜ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಜೈರಾಮ್ ಠಾಕೂರ್ ಅವರು ಕಾಂಗ್ರೆಸ್ ನ ಚೇತ್ರಾಮ್ ಠಾಕೂರ್ ಮತ್ತು ಆಮ್ ಆದ್ಮಿಯ ಗೀತಾ ನಂದಾ ಠಾಕೂರ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದಾರೆ.

ಇದನ್ನೂ ಓದಿ: ಮಿನಿ ಸಮರ : ಹಿಮಾಚಲದಲ್ಲಿ ಕಾಂಗ್ರೆಸ್ ಲೀಡ್ – ಖಾತೆ ತೆರೆಯದ ಆಪ್

ವರದಿಯ ಪ್ರಕಾರ, ಜೈರಾಮ್ ಠಾಕೂರ್ ಅವರು ತಮ್ಮ ಸಾಂಪ್ರದಾಯಿಕ ವಿಧಾನಸಭಾ ಕ್ಷೇತ್ರ ಸೆರಾಜ್‌ ನಿಂದ ಸತತ ಆರನೇ ಬಾರಿಗೆ 20,000 ಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದಾರೆ.

ಹಿಮಾಚಲ ಪ್ರದೇಶದ ಸುಂದರನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ರಾಕೇಶ್ ಕುಮಾರ್ ಗೆಲುವು ಸಾಧಿಸಿದ್ದಾರೆ.

suddiyaana